ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮತ್ತೊಂದು ನಿಶೇಧದಿಂದ ಮುಕ್ತಿ: 2 ವರ್ಷದ ಬಳಿಕ ಮತ್ತೆ ಆಸಿಸ್‌ಗೆ ಸ್ಟೀವ್ ಸ್ಮಿತ್ ನಾಯಕ?

Steve Smith Again Eligible For Captaincy After 2 Year Ban Ends

ಅದು ಕ್ರಿಕೆಟ್ ಲೋಕ ಬೆಚ್ಚಿಬಿದ್ದಿದ್ದ ಪ್ರಕರಣ. ಸೋಲನ್ನು ಸಹಿಸದ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಗೆಲುವಿಗಾಗಿ ಕೆಟ್ಟ ತಂತ್ರವನ್ನು ಅನುಸರಿಸಿತ್ತು. ಗೆಲುವಿಗಾಗಿ ಆಸ್ಟ್ರೇಲಿಯಾ ತಂಡ ಅಡ್ಡದಾರಿಯನ್ನು ಹಿಡಿದಿತ್ತು. ಕೆಟ್ಟಾಟವನ್ನು ಆಡಿದ ಆಸಿಸ್ ಆಟಗಾರರ ನೈಜ ಬಣ್ಣ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿತ್ತು.

ಯಸ್, ನಾವ್ ಹೇಳುತ್ತಿರೊದು ಸ್ಯಾಂಡ್‌ಪೇಪರ್ ಸ್ಕ್ಯಾಂಡಲ್ ಬಗ್ಗೆ. ಈ ಪ್ರಕರಣದಲ್ಲಿ ಆರೋಪ ಸಾಭೀತಾದ ಬಳಿಕ ಆಸಿಸ್ ಕ್ರಿಕೆಟ್‌ನ ಅಂದಿನ ನಾಯಕ ಸ್ಟೀವ್ ಸ್ಮಿತ್, ಉಪನಾಯಕ ಡೇವಿಡ್ ವಾರ್ನರ್ ಮತ್ತು ಬೆನ್‌ಕ್ರಾಫ್ಟ್‌ಗೆ ಕ್ರಿಕೆಟ್‌ನ ಚಟುವಟಿಕೆಗಳಿಂದ ನಿಶೇಧವನ್ನು ವಿಧಿಸಲಾತ್ತು.

ಕೊರೊನಾ: ಆಗ ಕ್ರಿಕೆಟರ್, ಬಾಕ್ಸರ್, ಕಬಡ್ಡಿ ಪ್ಲೇಯರ್-ಈಗ ಪೊಲೀಸ್ ಆಫೀಸರ್!ಕೊರೊನಾ: ಆಗ ಕ್ರಿಕೆಟರ್, ಬಾಕ್ಸರ್, ಕಬಡ್ಡಿ ಪ್ಲೇಯರ್-ಈಗ ಪೊಲೀಸ್ ಆಫೀಸರ್!

ನಿಶೇಧವನ್ನು ಮುಗಿಸಿ ಈ ಆಟಗಾರರು ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿದ್ದಾರೆ. ಈಗ ಆಸಿಸ್ ಮಾಜಿ ನಾಯಕ ಸ್ಟೀವ್ ಸ್ಮಿತ್ ತಮ್ಮ ಮೇಲಿದ್ದ ಮತ್ತೊಂದು ನಿಶೇಧದಿಂದಲೂ ಮುಕ್ತಿ ಪಡೆದುಕೊಂಡಿದ್ದಾರೆ.

ಒಂದು ವರ್ಷ ಸಂಪೂರ್ಣ ನಿಶೇಧ

ಒಂದು ವರ್ಷ ಸಂಪೂರ್ಣ ನಿಶೇಧ

ಆಸ್ಟ್ರೇಲಿಯಾ ಕ್ರಿಕೆಟ್‌ ತಂಡದ ನಾಯಕರಾಗಿದ್ದ ಸ್ಟೀವ್ ಸ್ಮಿತ್ ಮತ್ತು ಉಪನಾಯಕ ಡೇವಿಡ್ ವಾರ್ನರ್‌ಗೆ ಈ ಪ್ರಕರಣದಲ್ಲಿ ಒಂದು ವರ್ಷಗಳ ನಿಶೇಧವನ್ನು ವಿಧಿಸಲಾಗಿತ್ತು. ಬೆನ್‌ಕ್ರಾಫ್ಟ್ 9 ತಿಂಗಳು ನಿಶೇಧಕ್ಕೆ ಗುರಿಯಾಗಿದ್ದರು. ಕ್ರಿಕೆಟ್‌ನ ಎಲ್ಲಾ ಚಟುವಟಿಕೆಯಿಂದಲೂ ದೂರವಿದ್ದ ಸ್ಮಿತ್ ಮತ್ತು ವಾರ್ನರ್ ಕಳೆದ ವರ್ಷ ಅಂದರೆ 2019ರಲ್ಲಿ ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಾಪಸ್ಸಾದರು.

ಸ್ಮಿತ್‌ ಮೇಲಿತ್ತು ಮತ್ತೊಂದು ನಿಶೇಧ

ಸ್ಮಿತ್‌ ಮೇಲಿತ್ತು ಮತ್ತೊಂದು ನಿಶೇಧ

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಸ್ಮಿತ್ ಮರಳಿದ್ದರೂ ಕೂಡ ಒಂದು ನಿಶೇಧ ಸ್ಮಿತ್ ಮೇಲಿತ್ತು. ಅದು ಆಸಿಸ್ ಕ್ರಿಕೆಟ್‌ ತಂಡದ ನಾಯಕತ್ವದ ಮೇಲಿನ ನಿಶೇಧ. ಎರಡು ವರ್ಷಗಳ ಕಾಲ ಸ್ಟೀವ್ ಸ್ಮಿತ್ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕರಾಗುವಂತಿಲ್ಲ ಎಂಬ ನಿಶೇಧಕ್ಕೂ ಅವರು ಗುರಿಯಾಗಿದ್ದರು.

ಮುಕ್ತಿ ಪಡೆದ ಸ್ಟೀವ್ ಸ್ಮಿತ್

ಮುಕ್ತಿ ಪಡೆದ ಸ್ಟೀವ್ ಸ್ಮಿತ್

ಈಗ ಸ್ಟೀವ್ ಸ್ಮಿತ್ ಈ ನಿಶೇಧದಿಂದಲೂ ಮುಕ್ತಿಯನ್ನು ಪಡೆದುಕೊಂಡಿದ್ದಾರೆ. ಭಾನುವಾರ ಸ್ಟೀವ್ ಸ್ಮಿತ್ ನಾಯಕತ್ವದ ಮೇಲಿನ ನಿಶೇಧವನ್ನು ಸಂಪೂರ್ಣಗೊಳಿಸಿದ್ದಾರೆ. ಹೀಗಾಗಿ ಕ್ರಿಕೆಟ್ ಆಸ್ಟ್ರೇಲಿಯಾ ಬಯಸಿದಲ್ಲಿ ಸ್ಟೀವ್ ಸ್ಮಿತ್ ಮತ್ತೆ ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸುವ ಅವಕಾಶವನ್ನು ಪಡೆದುಕೊಂಡಿದ್ದಾರೆ.

ಎಲ್ಲಾ ಚಟುವಟಿಕೆಗಳೂ ಸ್ಥಬ್ಧ

ಎಲ್ಲಾ ಚಟುವಟಿಕೆಗಳೂ ಸ್ಥಬ್ಧ

ಸದ್ಯ ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಎಲ್ಲಾ ಕ್ರೀಡಾ ಚಟುವಟಿಗೆಗಳೂ ಸ್ಥಬ್ಧವಾಗಿದೆ. ಹೀಗಾಗಿ ಕ್ರಿಕೆಟ್‌ನಲ್ಲೂ ಯಾವುದೇ ಟೂರ್ನಿಗಳು ನಡೆಯುತ್ತಿಲ್ಲ. ಈ ಹಿನ್ನೆಲೆಯಲ್ಲಿ ಐಪಿಎಲ್ ಸೇರಿದಂತೆ ಎಲ್ಲಾ ಟೂರ್ನಿಗಳೂ ಅನಿಶ್ಚಿತತೆಯಲ್ಲಿವೆ.

ಬಾಂಗ್ಲಾ ಇಂಗ್ಲೆಂಡ್ ಪ್ರವಾಸವೂ ಅನುಮಾನ

ಬಾಂಗ್ಲಾ ಇಂಗ್ಲೆಂಡ್ ಪ್ರವಾಸವೂ ಅನುಮಾನ

ಆಸ್ಟ್ರೇಲಿಯಾ ಕ್ರಿಕೆಟ್‌ ತಂಡ ವರ್ಷದ ಮಧ್ಯದಲ್ಲಿ ಬಾಂಗ್ಲಾದೇಶ ಪ್ರವಾಸ ಮತ್ತು ಇಂಗ್ಲೆಂಡ್ ಪ್ರವಾಸವನ್ನು ಕೈಗೊಳ್ಳಬೇಕಾಗಿತ್ತು. ಆದರೆ ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಅದು ಕೂಡ ಅನುಮಾನವೇ ಆಗಿದೆ. ಮುಂಬರುವ ಆಸ್ಟ್ರೇಲಿಯಾದ ಸರಣಿಯಲ್ಲಿ ಸ್ಟೀವ್ ಸ್ಮಿತ್ ಮತ್ತೆ ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸುತ್ತಾರ ಎಂಬುದು ಸಧ್ಯ ಕುತೂಹಲ ಮೂಡಿಸಿದೆ.

Story first published: Sunday, March 29, 2020, 11:58 [IST]
Other articles published on Mar 29, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X