ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ಅಜ್ಞಾತವಾಸ' ಮುಗಿಸಿ ವಿಶ್ವಕಪ್ ತಂಡಕ್ಕೆ ಮರಳಿದ ಸ್ಮಿತ್, ವಾರ್ನರ್

Steve Smith and David Warner return to Australia World Cup squad

ಸಿಡ್ನಿ, ಏಪ್ರಿಲ್ 15 : ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಮುಂಚೆಯೇ ನಿಷೇಧಕ್ಕೊಳಗಾಗಿದ್ದ ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ಸ್ಮಿತ್ ಮತ್ತು ಮಾಜಿ ಉಪನಾಯಕ ಡೆವಿಡ್ ವಾರ್ನರ್ ಅವರ 'ಅಜ್ಞಾತವಾಸ' ಕೊನೆಗೊಂಡಿದ್ದು, ಇಬ್ಬರನ್ನೂ ಆಸ್ಟ್ರೇಲಿಯಾ ವಿಶ್ವಕಪ್ ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ.

2018ರ ಮಾರ್ಚ್ ನಲ್ಲಿ ದಕ್ಷಿಣ ಆಫ್ರಿಕಾದ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಬಾಲ್ ವಿರೂಪಗೊಳಿಸಿದ ಆರೋಪದ ಮೇಲೆ ಸ್ಮಿತ್ ಮತ್ತು ವಾರ್ನರ್ ಅವರನ್ನು ಹನ್ನೆರಡು ತಿಂಗಳುಗಳ ಕಾಲ ಬ್ಯಾನ್ ಮಾಡಲಾಗಿತ್ತು ಮತ್ತು ಅವರಿಂದ ನಾಯಕತ್ವವನ್ನೂ ಕಿತ್ತುಕೊಳ್ಳಲಾಗಿತ್ತು.

ವಿಶ್ವಕಪ್ 2019: ಟೀಂ ಇಂಡಿಯಾ ಸಂಭಾವ್ಯ 15 ಆಟಗಾರರು ವಿಶ್ವಕಪ್ 2019: ಟೀಂ ಇಂಡಿಯಾ ಸಂಭಾವ್ಯ 15 ಆಟಗಾರರು

ಅವರಿಬ್ಬರ ನಿಷೇಧವನ್ನು ಕಳೆದ ತಿಂಗಳು ತೆರವುಗೊಳಿಸಲಾಯಿತು. ಮಿಡ್ಲ್ ಈಸ್ಟ್ ನಲ್ಲಿ ಪಾಕಿಸ್ತಾನದ ವಿರುದ್ಧದ ಏಕದಿನ ಸರಣಿಯಲ್ಲಿ ಇವರಿಬ್ಬರೂ ಕಾಣಿಸಿಕೊಳ್ಳಲಿಲ್ಲವಾದರೂ, ಇಂಗ್ಲೆಂಡ್ ನಲ್ಲಿ ಜೂನ್ ನಲ್ಲಿ ಆರಂಭವಾಗಲಿರುವ ವಿಶ್ವಕಪ್ ನಲ್ಲಿ ಖಂಡಿತ ಆಡಲಿದ್ದಾರೆ. ಇವರಿಬ್ಬರ ಸೇರ್ಪಡೆಯಿಂದಾಗಿ ಆಸ್ಟ್ರೇಲಿಯಾಗೆ ಭಾರೀ ಬಲ ಬಂದಂತಾಗಿದೆ.

ಆದರೆ, ಆರೋನ್ ಫಿಂಚ್ ನಾಯಕತ್ವದ 15 ಆಟಗಾರರ ಆಸೀಸ್ ತಂಡದಲ್ಲಿ ಉತ್ತಮ ಫಾರ್ಮ್ ನಲ್ಲಿರುವ ಪೀಟರ್ ಹ್ಯಾಂಡ್ಸ್ ಕೂಂಬ್, ವೇಗದ ಬೌಲರ್ ಜೋಶ್ ಹೇಜೆಲ್ ವುಡ್, ಡಿಆರ್ಸಿ ಶಾರ್ಟ್, ಕೇನ್ ರಿಚರ್ಡ್ ಸನ್, ಆಶ್ಟನ್ ಟರ್ನರ್, ಮ್ಯಾಥ್ಯೂ ವೇಡ್ ಮುಂತಾದವರು ಸ್ಥಾನ ಪಡೆದಿಲ್ಲ.

ಐಸಿಸಿ ವಿಶ್ವಕಪ್ ಕ್ರಿಕೆಟ್ 2019 ವೇಳಾಪಟ್ಟಿ ಪ್ರಕಟಐಸಿಸಿ ವಿಶ್ವಕಪ್ ಕ್ರಿಕೆಟ್ 2019 ವೇಳಾಪಟ್ಟಿ ಪ್ರಕಟ

ಭಾರತದ ವಿರುದ್ಧ ಏಕದಿನ ಸರಣಿಯಲ್ಲಿ ಅದ್ಭುತ ಸೆಂಚುರಿ ಬಾರಿಸಿ, 13 ಪಂದ್ಯಗಳಲ್ಲಿ 43ರ ಸರಾಸರಿ ಹೊಂದಿರುವ ವಿಕ್ಟೋರಿಯಾ ಪರ ಆಡುವ ಆಟಗಾರ ಹ್ಯಾಂಡ್ಸ್ ಕೂಂಬ್, ಸ್ಟೀವ್ ಸ್ಮಿತ್ ಮತ್ತು ಡೆವಿಡ್ ವಾರ್ನರ್ ಅವರ ಸೇರ್ಪಡೆಯಿಂದ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ. ಮಿಷೆಲ್ ಸ್ಟಾರ್ಕ್ ಅವರು ಫಿಟ್ ಆಗಿದ್ದರೆ ಮಾತ್ರ ಸ್ಥಾನ ಪಡೆಯಲಿದ್ದಾರೆ.

"ಸ್ಟೀವ್ ಸ್ಮಿತ್ ಮತ್ತು ಡೆವಿಡ್ ವಾರ್ನರ್ ಅವರು ವಿಶ್ವ ದರ್ಜೆಯ ಕ್ರಿಕೆಟ್ ಪಟುಗಳಾಗಿದ್ದು, ಆಸ್ಟ್ರೇಲಿಯಾದ ತಂಡಕ್ಕೆ ಮರಳಿದ್ದು ಭಾರೀ ಖುಷಿ ಕೊಟ್ಟಿದೆ. ಇಬ್ಬರೂ ಐಪಿಎಲ್ ನಲ್ಲಿ ಉತ್ತಮ ಫಾರ್ಮ್ ಕಂಡುಕೊಂಡಿದ್ದು ವಿಶ್ವಕಪ್ ನಲ್ಲಿ ಆಸ್ಟ್ರೇಲಿಯಾಗೆ ಸಹಾಯಕವಾಗಲಿದೆ" ಎಂದು ಆಸ್ಟ್ರೇಲಿಯಾದ ಆಯ್ಕೆ ಮಂಡಳಿ ಅಧ್ಯಕ್ಷ ಟ್ರೆವರ್

ಆಸ್ಟ್ರೇಲಿಯಾದ ತಂಡ ಹೀಗಿದೆ : ಆರೋನ್ ಫಿಂಚ್ (ನಾಯಕ), ಜೇಸನ್ ಬೆಹೆರೆನ್‌ಡಾರ್ಫ್, ಅಲೆಕ್ಸ್ ಕ್ಯಾರೆ, ನೇಥನ್ ಕೂಲ್ಟರ್-ನೈಲ್, ಪ್ಯಾಟ್ ಕಮಿನ್ಸ್, ಉಸ್ಮಾನ್ ಖವಾಜಾ, ನೇಥನ್ ಲಿನ್, ಶಾನ್ ಮಾರ್ಶ್, ಗ್ಲೆನ್ ಮ್ಯಾಕ್ಸ್ ವೆಲ್, ಜೇ ರಿಚರ್ಡ್ ಸನ್, ಸ್ಟೀವ್ ಸ್ಮಿತ್, ಮಿಷೆಲ್ ಸ್ಟಾರ್ಕ್, ಮಾರ್ಕಸ್ ಸ್ಟಾಯ್ನಿಸ್, ಡೆವಿಡ್ ವಾರ್ನರ್, ಆಡಂ ಝಂಪಾ.

Story first published: Monday, April 15, 2019, 12:35 [IST]
Other articles published on Apr 15, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X