ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪಂದ್ಯ ನ್ಯೂಜಿಲೆಂಡ್ vs ಪಾಕಿಸ್ತಾನ, ಟ್ರೋಲ್ ಆಗಿದ್ದು ಮಾತ್ರ ಸ್ಟೀವ್ ಸ್ಮಿತ್!

Steve Smith and Joe Burns trolled by new zealand fan

ನ್ಯೂಜಿಲೆಂಡ್ ಹಾಗೂ ಪಾಕಿಸ್ತಾನ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಮುಖಾಮುಖಿಯಾಗಿದೆ. ಮೊದಲ ಪಂದ್ಯವನ್ನು ಭರ್ಜರಿಯಾಗಿ ಗೆದ್ದುಕೊಂಡಿರುವ ನ್ಯೂಜಿಲೆಂಡ್ ತಂಡ ಎರಡನೇ ಪಂದ್ಯದಲ್ಲೂ ನಾಯಕ ಕೇನ್ ವಿಲಿಯಮ್ಸನ್ ಭರ್ಜರಿ ಶತಕದ ನೆರವಿನಿಂದ ಉತ್ತಮ ಸ್ಥಾನದಲ್ಲಿದೆ. ಈ ಪಂದ್ಯದಲ್ಲಿ ಅತ್ಯಂತ ಕುತೂಹಲಕಾರಿ ಸಂಗತಿಯೊಂದು ಪ್ರೇಕ್ಷಕರ ಗ್ಯಾಲರಿಯಿಂದ ಗಮನಸೆಳೆಯಿತು.

ನ್ಯೂಜಿಲೆಂಡ್ vs ಪಾಕಿಸ್ತಾನ ಟೆಸ್ಟ್ ಪಂದ್ಯವನ್ನು ವೀಕ್ಷಿಸಲು ಬಂದಿದ್ದ ಪ್ರೇಕ್ಷಕಿಯೊಬ್ಬರು ಈ ಸಂದರ್ಭದಲ್ಲಿ ಆಸ್ಟ್ರೇಲಿಯಾ ತಂಡದ ಇಬ್ಬರು ಆಟಗಾರರನ್ನು ತಮಾಷೆಯಾಗಿ ಕಾಲೆಳೆದಿದ್ದಾರೆ. ಬೋರ್ಡ್ ಹಿಡಿದು ಆಸಿಸ್ ಆಟಗಾರರನ್ನು ಟ್ರೋಲ್ ಮಾಡುತ್ತಿರುವ ವಿಚಾರ ನೇರಪ್ರಸಾರದಲ್ಲೂ ಪ್ರಸಾರವಾಗಿದ್ದು ಕೋಟ್ಯಂತರ ಅಭಿಮಾನಿಗಳನ್ನು ತಲುಪುವಂತಾಗಿದೆ. ಹೀಗಾಗಿ ಇದು ಸಾಮಾಜಿಕ ಜಾಲತಾಣದಲ್ಲೂ ಈಗ ಸಾಕಷ್ಟು ವೈರಲ್ ಆಗಿದೆ.

ಬ್ರಿಸ್ಬೇನ್‌ನ ಕಠಿಣ ಕ್ವಾರಂಟೈನ್‌ಗೆ ಭಾರತ ಒಪ್ಪಿಕೊಂಡಿದೆ: ಕ್ರಿಕೆಟ್ ಆಸ್ಟ್ರೇಲಿಯಾ ಮುಖ್ಯಸ್ಥಬ್ರಿಸ್ಬೇನ್‌ನ ಕಠಿಣ ಕ್ವಾರಂಟೈನ್‌ಗೆ ಭಾರತ ಒಪ್ಪಿಕೊಂಡಿದೆ: ಕ್ರಿಕೆಟ್ ಆಸ್ಟ್ರೇಲಿಯಾ ಮುಖ್ಯಸ್ಥ

ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಯಾವ ರೀತಿ ಕೀವಿಸ್ ತಂಡದ ಅಭಿಮಾನಿ ಆಸಿಸ್ ತಂಡದ ಇಬ್ಬರು ಆಟಗಾರರನ್ನು ಟ್ರೋಲ್ ಮಾಡಿದ್ದಾರೆ? ಮುಂದೆ ಓದಿ..

ಟ್ರೋಲ್ ಆದ ಸ್ಟೀವ್ ಸ್ಮಿತ್

ಟ್ರೋಲ್ ಆದ ಸ್ಟೀವ್ ಸ್ಮಿತ್

ಪಾಕ್ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಿನ ಪಂದ್ಯವನ್ನು ವೀಕ್ಷಿಸಲು ಬಂದ ಮಹಿಳೆ ಈ ರೀತಿ ಟ್ರೋಲ್ ಮಾಡಿದ್ದು ಬೇರೆ ಯಾರನ್ನೂ ಅಲ್ಲ. ಪ್ರಸಕ್ತ ಟೆಸ್ಟ್ ಕ್ರಿಕೆಟ್‌ನ ಶ್ರೇಷ್ಠ ಆಟಗಾರ ಎಂದು ಕರೆಸಿಕೊಳ್ಳುವ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಹಾಗೂ ಆಸಿಸ್ ತಂಡದ ಆರಂಭಿಕ ಆಟಗಾರ ಜೋ ಬರ್ನ್ಸ್‌ ಬಗ್ಗೆ.

ಭಾರತದ ವಿರುದ್ಧ ನೀರಸ ಪ್ರದರ್ಶನ

ಭಾರತದ ವಿರುದ್ಧ ನೀರಸ ಪ್ರದರ್ಶನ

ಭಾರತದ ವಿರುದ್ಧದ ಪಂದ್ಯಗಳಲ್ಲಿ ಸದಾ ಅಬ್ಬರಿಸುವ ಸ್ಟೀವ್ ಸ್ಮಿತ್ ಟೀಮ್ ಇಂಡಿಯಾ ವಿರುದ್ಧದ ಮೊದಲ ಎರಡು ಟೆಸ್ಟ್ ಪಂದ್ಯಗಳಲ್ಲಿ ಹೀನಾಯ ಪ್ರದರ್ಶನವನ್ನು ನೀಡಿದ್ದಾರೆ. ಸ್ಟೀವ್ ಸ್ಮಿತ್ ನಾಲ್ಕು ಇನ್ನಿಂಗ್ಸ್‌ಗಳಲ್ಲಿ ಎರಡಂಕಿ ಸಾಧನೆ ಮಾಡುವಲ್ಲಿಯೂ ವಿಫಲರಾಗಿದ್ದಾರೆ. ಮತ್ತೊಂದೆಡೆ ಆಸಿಸ್ ತಂಡದ ಆರಂಭಿಕ ಆಟಗಾರ ಜೋ ಬರ್ನ್ಸ್‌ ಕೂಡ ನೀರಸ ಪ್ರದರ್ಶನವನ್ನು ನೀಡುವ ಮೂಲಕ ಆಸಿಸ್ ತಂಡದ ಅಭಿಮಾನಿಗಳಿಗೆ ಆಘಾತವನ್ನು ನೀಡಿದ್ದಾರೆ.

ಕ್ರಿಕೆಟ್ ಬ್ಯಾಟ್‌ಗಳು ಮಾರಾಟಕ್ಕಿದೆ

ಇದನ್ನು ದೃಷ್ಟಿಯಲ್ಲಿಟ್ಟುಕೊಂಡ ನ್ಯೂಜಿಲೆಂಡ್ ಕ್ರಿಕೆಟ್ ಅಭಿಮಾನಿ ಮೈದಾನದಲ್ಲಿ ಟ್ರೋಲ್ ಮಾಡಿದ್ದಾರೆ. ಕೈಯ್ಯಲ್ಲಿ ಹಿಡಿದಿರುವ ಬೋರ್ಡ್‌ನಲ್ಲಿ "ಕ್ರಿಕೆಟ್ ಬ್ಯಾಟ್‌ಗಳು ಮಾರಾಟಕ್ಕಿವೆ. ಕಡಿಮೆ ಬಳಕೆಯಾಗಿದೆ. ಕರೆ ಮಾಡಿ: ಸ್ಟೀವ್ ಸ್ಮಿತ್ ಹಾಗೂ ಜೋ ಬರ್ನ್ಸ್‌. ಕ್ರಿಕೆಟ್ ಆಸ್ಟ್ರೇಲಿಯಾ" ಎಂದು ಆ ಮಹಿಳೆ ಟ್ರೋಲ್ ಮಾಡಿದ್ದಾರೆ. ಇದು ಕ್ರಿಕೆಟ್ ವಲಯದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.

4 ಇನ್ನಿಂಗ್ಸ್‌ನಲ್ಲಿ 10 ರನ್

4 ಇನ್ನಿಂಗ್ಸ್‌ನಲ್ಲಿ 10 ರನ್

ಸ್ಟೀವ್ ಸ್ಮಿತ್ ಸೀಮಿತ ಓವರ್‌ಗಳ ಸರಣಿಯಲ್ಲಿ ಭಾರತದ ವಿರುದ್ಧ ಅದ್ಭುತ ಪ್ರದರ್ಶನವನ್ನು ನೀಡಿದ್ದರು. ಆದರೆ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತೀಯ ಬೌಲರ್‌ಗಳ ವಿರುದ್ಧ ಸ್ಮಿತ್ ಆಟ ಮೊದಲ ಎರಡು ಪಮದ್ಯಗಳಲ್ಲಿ ನಡೆದಿಲ್ಲ. ಸ್ಮಿತ್ ಮೊದಲ ಎರಡು ಪಂದ್ಯಗಳ ನಾಲ್ಕು ಇನ್ನಿಂಗ್ಸ್‌ಗಳಲ್ಲಿ ಒಟ್ಟು ಗಳಿಸಿದ್ದು ಕೇವಲ 10 ರನ್ ಮಾತ್ರ. 1, 1*, 8 ಹಾಗೂ 0 ಸ್ಮಿತ್ ಗಳಿಸಿದ ಸ್ಕೋರ್ ಆಗಿದೆ.

Story first published: Monday, January 4, 2021, 14:28 [IST]
Other articles published on Jan 4, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X