ನವದೆಹಲಿ, ಮಾರ್ಚ್ 17: ತನ್ನ ಮೇಲಿದ್ದ ಒಂದು ವರ್ಷದ ನಿಷೇಧ ಮುಕ್ತಾಯಗೊಳ್ಳಲಿರುವುದರಿಂದ ಆಸ್ಟ್ರೇಲಿಯಾ ಸ್ಫೋಟಕ ಬ್ಯಾಟ್ಸ್ಮನ್ ಸ್ಟೀವ್ ಸ್ಮಿತ್ ಇಂಡಿಯನ್ ಸೂಪರ್ ಲೀಗ್ (ಐಪಿಎಲ್) ತಂಡವಾದ ರಾಜಸ್ಥಾನ್ ರಾಯಲ್ಸ್ ಸೇರಿಕೊಂಡಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ಮೈದಾನಕ್ಕಿಳಿಯಲು ಸ್ಮಿತ್ ಸಜ್ಜಾಗಿದ್ದಾರೆ.
ಆರ್ ಸಿಬಿ ವಿರುದ್ಧದ ಪಂದ್ಯಕ್ಕೆ ಚೆನ್ನೈ ತಂಡದಿಂದ ಭರ್ಜರಿ ತಯಾರಿ
ಚೆಂಡು ವಿರೂಪ ಪ್ರಕರಣದಲ್ಲಿ ಕ್ರಿಕೆಟ್ ಆಸ್ಟ್ರೇಲಿಯಾದಿಂದ ಸ್ಮಿತ್ ನಿಷೇಧಕ್ಕೀಡಾದಾಗ ಅವರ ಕಾಂಟ್ರ್ಯಾಕ್ಟನ್ನು ಬಿಸಿಸಿಐ ತೆಗೆದು ಹಾಕಿತ್ತು. ಮಾರ್ಚ್ 28ಕ್ಕೆ ಸ್ಮಿತ್ ಮೇಲಿನ ನಿಷೇಧ ಅಂತ್ಯಗೊಳ್ಳಲಿದೆ. ಹೀಗಾಗಿ ಸ್ಮಿತ್ ಜೈಪುರದಲ್ಲಿ ನಡೆಯುತ್ತಿರುವ ರಾಜಸ್ಥಾನ್ ರಾಯಲ್ಸ್ ತಂಡದ ಅಭ್ಯಾಸ ಶಿಬಿರ ಸೇರಿಕೊಂಡಿದ್ದಾರೆ.
IPL 2019: ಟೂರ್ನಿಯ ಅವಿಸ್ಮರಣೀಯ ಪಂದ್ಯ ಮೆಲುಕು ಹಾಕಿದ ವಿರಾಟ್ ಕೊಹ್ಲಿ
ಐಪಿಎಲ್ ನಲ್ಲಿ ಸ್ಟೀವ್ ಸ್ಮಿತ್ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಕೊಚ್ಚಿ ಟಸ್ಕರ್ಸ್, ಪುಣೆ ವಾರಿಯರ್ಸ್, ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡವನ್ನು ಪ್ರತಿನಿಧಿಸಿದ್ದರು. 2018ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಸೇರಿಕೊಂಡಿದ್ದರು.
#SteveSmith is in #Jaipur for #IPL Boost for @rajasthanroyals pic.twitter.com/N1C8vdpNMz
— Mandakini_TOI (@MandakiniToi) March 17, 2019
'ರಾಯಲ್ಸ್ ಫ್ಯಾಮಿಲಿ ಜೊತೆ ಜೈಪುರಕ್ಕೆ ಮರಳಿಯುವುದಕ್ಕೆ ತುಂಬಾ ಖುಷಿ ಅನ್ನಿಸುತ್ತಿದೆ. ಈ ಬಾರಿಯ ಐಪಿಎಲ್ ಆರಂಭಗೊಳ್ಳುವವರೆಗೂ ನಾನು ಕಾಯಲಾರೆ' ಎಂದು ಟ್ವಿಟರ್ ವಿಡಿಯೋ ಮೂಲಕ ಸ್ಮಿತ್ ಕ್ರಿಕೆಟ್ ಆಡುವ ಬಗೆಗಿನ ತನ್ನ ಹಂಬಲವನ್ನು ತೋರಿಕೊಂಡಿದ್ದಾರೆ.
ಕುಂಬ್ಳೆ ಆರಿಸಿದ ವಿಶ್ವಕಪ್ 2019ರ ಭಾರತ ತಂಡದಲ್ಲಿ ಅಚ್ಚರಿಯ ಮುಖಗಳು!
ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಪಂದ್ಯದ ವೇಳೆ ಚೆಂಡು ವಿರೂಪ ಪ್ರಕರಣ ನಡೆದಿತ್ತು. ಇದರಲ್ಲಿ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್ ಮತ್ತು ಕ್ಯಾಮರಾನ್ ಬ್ಯಾನ್ಕ್ರಾಫ್ಟ್ ಸಿಕ್ಕಿಬಿದ್ದು ನಿಷೇಧ ಶಿಕ್ಷೆಗೆ ಗುರಿಯಾಗಿದ್ದರು. ಕಳೆದ ವರ್ಷ ಮಾರ್ಚ್ 28ರಂದು ಮೂವರನ್ನು ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿಷೇಧಿಸಲಾಗಿತ್ತು.