ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಆಸೀಸ್: ಕುತಂತ್ರವೆಸಗಿ ಮತ್ತೆ ಸಿಕ್ಕಿಬಿದ್ದ ಸ್ಟೀವ್ ಸ್ಮಿತ್-ವಿಡಿಯೋ

Steve Smith Caught Damaging Rishabh Pants Batsman Mark

ಸಿಡ್ನಿ: ಚೆಂಡು ವಿರೂಪ ಪ್ರಕರಣದಲ್ಲಿ ಪಾಲ್ಗೊಂಡು ಕ್ರಿಕೆಟ್ ಆಸ್ಟ್ರೇಲಿಯಾದಿಂದ ಒಂದು ವರ್ಷದ ನಿಷೇಧಕ್ಕೆ ಗುರಿಯಾಗಿದ್ದ ಆಸ್ಟ್ರೇಲಿಯಾದ ಮಾಜಿ ಟೆಸ್ಟ್‌ ನಾಯಕ ಸ್ಟೀವ್ ಸ್ಮಿತ್ ಮತ್ತೆ ಮೈದಾನದಲ್ಲಿ ತಪ್ಪೆಸಗಿ ಸಿಕ್ಕಿಬಿದ್ದಿದ್ದಾರೆ. ಸಿಡ್ನಿ ಕ್ರಿಕೆಟ್‌ಗ್ರೌಂಡ್‌ನಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯದ ವೇಳೆ ಸ್ಮಿತ್ ಅವರು ಬ್ಯಾಟ್ಸ್‌ಮನ್ ಮಾರ್ಕ್ ಅನ್ನು ಅಳಿಸಿದ್ದು ವಿಡಿಯೋದಲ್ಲಿ ಸೆರೆಯಾಗಿದೆ.

ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ: ಮೊದಲ ಪಂದ್ಯದಲ್ಲಿ ಕರ್ನಾಟಕಕ್ಕೆ ಭರ್ಜರಿ ಗೆಲುವುಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ: ಮೊದಲ ಪಂದ್ಯದಲ್ಲಿ ಕರ್ನಾಟಕಕ್ಕೆ ಭರ್ಜರಿ ಗೆಲುವು

ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ಆರಂಭಿಕ ಇನ್ನಿಂಗ್ಸ್‌ನಲ್ಲಿ ಹಿನ್ನಡೆ ಅನುಭವಿಸಿದ್ದ ಭಾರತ, ದ್ವಿತೀಯ ಇನ್ನಿಂಗ್ಸ್‌ನಲ್ಲಿ ಉಪನಾಯಕ ರೋಹಿತ್ ಶರ್ಮಾ ಅರ್ಧ ಶತಕ, ಚೇತೇಶ್ವರ ಪೂಜಾರ ಅರ್ಧ ಶತಕ ಮತ್ತು ರಿಷಭ್ ಪಂತ್ ಅರ್ಧ ಶತಕದೊಂದಿಗೆ ಪಂದ್ಯ ಗೆಲ್ಲುವ ನಿರೀಕ್ಷೆ ಮೂಡಿಸಿದೆ.

ಭಾರತ vs ಆಸ್ಟ್ರೇಲಿಯಾ, 3ನೇ ಟೆಸ್ಟ್‌, Live ಸ್ಕೋರ್‌ಕಾರ್ಡ್

1
48442

ಸೋಲಿನಂಚಿನಲ್ಲಿದ್ದ ತಂಡವನ್ನು ಗೆಲುವಿನೆಡೆಗೆ ಕೊಂಡೊಯ್ಯುತ್ತಿದ್ದ ರಿಷಭ್ ಪಂತ್ ಅವರನ್ನು ಬೇಗ ಔಟ್ ಮಾಡುವ ಉದ್ದೇಶದಿಂದಲೇ ಏನೋ. ಪಂತ್‌ ಅರ್ಧ ಶತಕ ಪೂರೈಸಿದ್ದಾಗ ಸ್ಮಿತ್ ಅವರು ಸ್ಟ್ರೈಕಿಂಗ್ ಪಾಯಿಂಟ್ ಬಳಿ ಬಂದು ಪಂತ್‌ ಹಾಕಿದ್ದ ಬ್ಯಾಟ್ಸ್‌ಮನ್‌ ಗೆರೆ ಅಳಿಸಿದ್ದಾರೆ.

ಉದ್ದೇಶಪೂರ್ವಕವಾಗಿ ಕೃತ್ಯ

ಉದ್ದೇಶಪೂರ್ವಕವಾಗಿ ಕೃತ್ಯ

ಸ್ಟೀವ್ ಸ್ಮಿತ್ ಉದ್ದೇಶಪೂರ್ವಕವಾಗಿ ಮಾಡಿರುವ ಈ ಕೃತ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಬ್ಯಾಟಿಂಗ್‌ಗೆ ಬಂದ ಪಂತ್ ಮತ್ತೆ ಬ್ಯಾಟ್ಸ್‌ಮನ್‌ ಲೈನ್ ಎಳೆಯಲು ಮುಂದಾಗಿರುವುದು ವಿಡಿಯೋದಲ್ಲಿ ಕಾಣಿಸಿದೆ. 79.1ನೇ ಓವರ್‌ನಲ್ಲಿ ಪಂತ್‌ ಅವರು ನೇಥನ್ ಲಿಯಾನ್ ಎಸೆತಕ್ಕೆ ಪ್ಯಾಟ್ ಕಮಿನ್ಸ್‌ಗೆ ಕ್ಯಾಚ್ ನೀಡಿ ನಿರ್ಗಮಿಸುವಾಗ 97 ರನ್ ಬಾರಿಸಿದ್ದರು.

ಸ್ಟಂಪ್‌ ಕ್ಯಾಮರಾದಲ್ಲಿ ಸೆರೆ

ಮೊದಲ ಸೆಶನ್‌ ಬಳಿಕ ಡ್ರಿಂಕ್ಸ್‌ ಬ್ರೇಕ್‌ ವೇಳೆ ಆಟ ಕ್ಷಣ ಕಾಲ ನಿಲುಗಡೆಯಾಗಿತ್ತು. ಆಗ ಒಬ್ಬ ಆಟಗಾರ ಸ್ಪಂಪ್‌ ಬಳಿ ಬಂದು ಹೊಂಚು ಹಾಕಿ ಬ್ಯಾಟ್ಸ್‌ಮನ್ ಹಾಕಿದ್ದ ಮಾರ್ಕ್ ಅಳಿಸಿ ಅಲ್ಲಿಂದ ತೆರಳುತ್ತಾನೆ. ಆ ಬಳಿಕ ಬ್ಯಾಟಿಂಗ್‌ಗೆ ಬರುವ ಪಂತ್ ಮತ್ತೆ ಗೆರೆ ಎಳೆದು ಬ್ಯಾಟಿಂಗ್‌ ಮಾಡುತ್ತಾರೆ. ಈ ದೃಶ್ಯವೆಲ್ಲ ಸ್ಟಂಪ್‌ ಕ್ಯಾಮರಾದಲ್ಲಿ ಸೆರೆಯಾಗಿದೆ. ಮಾರ್ಕ್ ಅಳಿಸುವ ಆಟಗಾರನ ಮುಖ ಕಾಣಿಸುತ್ತಿಲ್ಲ. ಆದರೆ ಅಳಿಸಿದ್ದು ಸ್ಮಿತ್ ಎನ್ನಲಾಗುತ್ತಿದೆ.

ಮುಂದೇನಾಗಲಿದೆ?

ಮುಂದೇನಾಗಲಿದೆ?

ಬ್ಯಾಟ್ಸ್‌ಮನ್‌ ಮಾರ್ಕ್ ಅಳಿಸಿ ತಪ್ಪೆಸಗಿರುವ ಸ್ಮಿತ್‌ಗೆ ಮುಂದೇನಾಗಲಿದೆ? ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಬಹುಶಃ ಸ್ಮಿತ್‌ಗೆ ಎಚ್ಚರಿಕೆ ನೀಡುವ ನಿರೀಕ್ಷೆಯಿದೆ. ಪಂತ್‌ ಅವರ ಬ್ಯಾಟಿಂಗ್‌ ಮಾರ್ಕ್‌ ಅಳಿಸಿದ್ದಕ್ಕಾಗಿ ಸ್ಮಿತ್‌ಗೆ ಐಸಿಸಿ ಎಚ್ಚರಿಕೆ ನೀಡಲಿದೆ. ಮತ್ತೂ ಇಂಥದ್ದು ಜರುಗಿದರೆ ಸ್ಮಿತ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.

ನಿಷೇಧ ಶಿಕ್ಷೆಗೀಡಾಗಿದ್ದ ಸ್ಮಿತ್

ನಿಷೇಧ ಶಿಕ್ಷೆಗೀಡಾಗಿದ್ದ ಸ್ಮಿತ್

ದಕ್ಷಿಣ ಆಫ್ರಿಕಾಕ್ಕೆ ಪ್ರವಾಸ ಹೋಗಿದ್ದ ಆಸ್ಟ್ರೇಲಿಯಾ, ಟೆಸ್ಟ್‌ ಸರಣಿಯಲ್ಲಿ ಚೆಂಡು ವಿರೂಪ ಪ್ರಕರಣದಲ್ಲಿ ಭಾಗಿಯಾಗಿತ್ತು. ಅಂದು ತಂಡದ ನಾಯಕರಾಗಿದ್ದ ಸ್ಟೀವ್ ಸ್ಮಿತ್ ಮತ್ತು ಡೇವಿಡ್ ವಾರ್ನರ್ ಪ್ರಕರಣದ ಪ್ರಮುಖ ರುವಾರಿಗಳಾಗಿದ್ದರು. ಚೆಂಡು ವಿರೂಪ ನಡೆಸಿದ್ದಕ್ಕಾಗಿ ಸ್ಮಿತ್-ವಾರ್ನರ್ ಇಬ್ಬರೂ 29 ಮಾರ್ಚ್ 2018ರಂದು ಕ್ರಿಕೆಟ್ ಆಸ್ಟ್ರೇಲಿಯಾದಿಂದ ಒಂದು ವರ್ಷದ ನಿಷೇಧಕ್ಕೆ ಗುರಿಯಾಗಿದ್ದರು. 2019 ಮಾರ್ಚ್‌ 29ಕ್ಕೆ ಇಬ್ಬರ ಮೇಲಿನ ನಿಷೇಧ ಕೊನೆಗೊಂಡಿತ್ತು.

Story first published: Monday, January 11, 2021, 11:57 [IST]
Other articles published on Jan 11, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X