ತಮ್ಮ ಪಾಲಿನ ಕರಾಳ ಅಂಗಳದಲ್ಲಿ ಸ್ಮಿತ್, ವಾರ್ನರ್ ಮತ್ತೆ ಕಣಕ್ಕೆ!

ಬುಧವಾರದಂದು ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಟಿ20 ಸರಣಿಯ ನಿರ್ಣಾಯಕ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಆಸ್ಟ್ರೇಲಿಯಾ ಮತ್ತು ದ.ಆಫ್ರಿಕಾ ತಂಡಗಳು ತಲಾ ಒಂದು ಪಂದ್ಯಗಳಲ್ಲಿ ಗೆದ್ದು ಸರಣಿಯನ್ನು ಕುತೂಹಲ ಹಂತಕ್ಕೆ ತಲುಪಿಸಿದೆ. ಆದರೆ ಈ ಮಧ್ಯೆ ನಾಳಿನ ಪಂದ್ಯ ಬೇರೆಯದೆ ಕಾರಣಕ್ಕೆ ಕುತೂಹಲವನ್ನು ಮೂಡಿಸಿದೆ.

ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಈ ನಿರ್ಣಾಯಕ ಪಂದ್ಯಕ್ಕೆ ಆತಿಥ್ಯ ವಹಿಸಿರುವುದು ಕೇಪ್‌ಟೌನ್‌ನ ನ್ಯೂಲ್ಯಾಂಡ್ಸ್ ಅಂಗಳ. ಆಸ್ಟ್ರೆಲಿಯಾದ ಇಬ್ಬರು ಪ್ರಮುಖ ಆಟಗಾರರಿಗೆ ಈ ಅಂಗಳ ಕನಸಿನಲ್ಲೂ ಕಾಡುವುದರಲ್ಲಿ ಅನುಮಾನವಿಲ್ಲ. ಇಂತಾ ಮೈದಾನದಲ್ಲಿ ಆ ಇಬ್ಬರು ಆಟಗಾರರು ಮತ್ತೆ ಕಣಕ್ಕಿಳಿಯುತ್ತಿದ್ದಾರೆ.

ಏಷ್ಯಾ XI vs ವಿಶ್ವ XI ಸರಣಿಗೆ ತಂಡಗಳು ಪ್ರಕಟ, 6 ಭಾರತೀಯರಿಗೆ ಸ್ಥಾನ

ಹೌದು, ಅದು ಬೇರೆ ಯಾರೂ ಅಲ್ಲ. ಆಸ್ಟ್ರೇಲಿಯಾದ ಬ್ಯಾಟಿಂಗ್ ಟ್ರಂಪ್ ಕಾರ್ಡ್‌ಗಳಾದ ಡೇವಿಡ್ ವಾರ್ನರ್ ಮತ್ತು ಸ್ಟೀವ್ ಸ್ಮಿತ್. ತಮ್ಮ ಜೀವನದ ಕರಾಳ ಘಟನೆಗೆ ಸಾಕ್ಷಿಯಾಗಿದ್ದ ಮೈದಾನದಲ್ಲಿ ಬರೊಬ್ಬರಿ ಎರಡು ವರ್ಷಗಳ ನಂತರ ಈ ಇಬ್ಬರು ಆಟಗಾರರು ಮತ್ತೆ ಕಣಕ್ಕಿಳಿಯುತ್ತಿದ್ದಾರೆ.

2018 ರ ಮಾರ್ಚ್‌ನಲ್ಲಿ ನಡೆದ ಟೆಸ್ಟ್‌ ಪಂದ್ಯ ಅದು. ಗೆಲುವಿನ ಹಸಿವಿನಲ್ಲಿದ್ದ ಆಸ್ಟ್ರೇಲಿಯಾದ ಆಟಗಾರರು ಕೆಟ್ಟಾಟವನ್ನು ಆಡಿ ಸಿಕ್ಕಿಬಿದ್ದಿದ್ದರು. ಕ್ರಿಕೆಟ್ ಲೋಕದಲ್ಲಿ ಸಂಚಲನವನ್ನುಂಟು ಮಾಡಿದ ಸ್ಯಾಂಡ್ ಪೇಪರ್ ಸ್ಕ್ಯಾಂಡಲ್‌ನಲ್ಲಿ ಆಸ್ಟ್ರೇಲಿಯಾದ ಅಂದಿನ ನಾಯಕ ಸ್ಟೀವ್ ಸ್ಮಿತ್ ಮತ್ತು ಡೇವಿಡ್ ವಾರ್ನರ್ ಮತ್ತು ಕ್ಯಾಮರೂನ್ ಬೆನ್‌ಕ್ರಾಫ್ಟ್ ನೇರವಾಗಿ ಭಾಗಿಯಾಗಿಯಾಗಿದ್ದು ಸಾಭೀತಾಗಿತ್ತು.

ಕೆ.ಎಲ್ ರಾಹುಲ್ ಟೆಸ್ಟ್‌ಗೆ ಕಡೆಗಣನೆ: ಆಯ್ಕೆಯ ಪ್ರಕ್ರಿಯೆ ಬಗ್ಗೆ ಕಪಿಲ್‌ದೇವ್ ಕೆಂಡ

ವಿಶ್ವ ಕ್ರಿಕೆಟ್‌ನಲ್ಲಿ ಸಂಚಲನವನ್ನುಂಟು ಮಾಡಿದ ಈ ಘಟನೆಯಲ್ಲಿ ಪಾಲ್ಗೊಂಡಿದ್ದ ಸ್ಟೀವ್ ಸ್ಮಿತ್ ಮತ್ತು ಡೇವಿಡ್ ವಾರ್ನರ್‌ಗೆ ಕ್ರಿಕೆಟ್ ಅಭಿಮಾನಿಗಳು ಛೀಮಾರಿ ಹಾಕಿದ್ದರು. ಕ್ರಿಕೆಟ್ ಆಸ್ಟ್ರೇಲಿಯಾ ಒಂದು ವರ್ಷ ನಿಶೇಧವನ್ನು ಹೇರಿ ಶಿಕ್ಷೆಯನ್ನೂ ನೀಡಿದ್ದು. ಬಳಿಕ ಇಬ್ಬರೂ ಆಟಗಾರರು ಮಾಡಿದ ತಪ್ಪಿಗೆ ಕಣ್ಣೀರಿಟ್ಟು ಕ್ಷಮೆಯನ್ನೂ ಕೇಳಿದ್ದರು.

ಒಂದು ವರ್ಷದ ಬಳಿಕ ನಿಶೇಧವನ್ನು ಮುಗಿಸಿ ಬಂದ ಡೇವಿಡ್ ವಾರ್ನರ್ ಮತ್ತು ಸ್ಟೀವ್ ಸ್ಮಿತ್ ಇಬ್ಬರೂ ಕೆಟ್ಟ ಘಟನೆಯನ್ನು ಮರೆತು ಉತ್ತಮ ಆಟವನ್ನು ಪ್ರದರ್ಶಿಸುತ್ತಿದ್ದಾರೆ. ಈ ಮಧ್ಯೆ ನಾಳೆ ಇದೇ ಅಂಗಳದಲ್ಲಿ ಮತ್ತೆ ಎರಡು ವರ್ಷಗಳ ಬಳಿಕ ಈ ಆಟಗಾರರು ಕಣಕ್ಕಿಳಿಯುತ್ತಿದ್ದಾರೆ. ಇದು ಕುತೂಹಲವನ್ನು ಮೂಡಿಸಿದೆ.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Tuesday, February 25, 2020, 21:12 [IST]
Other articles published on Feb 25, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X