ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್‌ರಿಂದ ರಂಗೇರಲಿದೆ ಐಪಿಎಲ್ 12ನೇ ಆವೃತ್ತಿ!

Steve Smith, David Warner to make IPL return next year

ನವದೆಹಲಿ, ನವೆಂಬರ್ 16: ಚೆಂಡು ವಿರೂಪ ಪ್ರಕರಣದಡಿಯಲ್ಲಿ ನಿಷೇಧಕ್ಕೀಡಾಗಿರುವ ಆಸ್ಟ್ರೇಲಿಯಾದ ದಾಂಡಿಗರಾದ ಡೇವಿಡ್ ವಾರ್ನರ್ ಮತ್ತು ಸ್ಟೀವ್ ಸ್ಮಿತ್ ಇಬ್ಬರೂ ಕೊಂಚ ನಿರಾಳರಾಗಿದ್ದಾರೆ. ಕಾರಣ ಮುಂದಿನ ವರ್ಷ ಐಪಿಎಲ್ ನಲ್ಲಿ ಇಬ್ಬರೂ ಕಣಕ್ಕಿಳಿಯುವ ಖುಷಿಯಲ್ಲಿದ್ದಾರೆ.

ಐಪಿಎಲ್ 2019: 'ಆರ್‌ಸಿಬಿ' ತಂಡಕ್ಕೆ ಬೇಕಾದವರು, ಬೇಡವಾದವರ ಪಟ್ಟಿ!ಐಪಿಎಲ್ 2019: 'ಆರ್‌ಸಿಬಿ' ತಂಡಕ್ಕೆ ಬೇಕಾದವರು, ಬೇಡವಾದವರ ಪಟ್ಟಿ!

ಕೇಪ್‌ ಟೌನ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ ಆಸೀಸ್ ನ ನಾಯಕ ಸ್ಮಿತ್, ಉಪನಾಯಕ ವಾರ್ನರ್ ಮತ್ತು ಬೌಲರ್ ಕ್ಯಾಮೆರಾನ್ ಬ್ಯಾನ್‌ಕ್ರಾಫ್ಟ್‌ ಬಾಲ್‌ ಟ್ಯಾಂಪರಿಂಗ್ ನಲ್ಲಿ ಪಾಲ್ಗೊಂಡು ನಿಷೇಧಕ್ಕೆ ಒಳಗಾಗಿದ್ದರು. ಸ್ಮಿತ್-ವಾರ್ನರ್ ಗೆ ಒಂದು ವರ್ಷ, ಬ್ಯಾನ್‌ಕ್ರಾಫ್ಟ್‌ಗೆ 9 ತಿಂಗಳ ನಿಷೇಧದ ಶಿಕ್ಷೆ ವಿಧಿಸಲಾಗಿತ್ತು.

ಕ್ರಿಕೆಟ್ ಇತಿಹಾಸದಲ್ಲೇ ಈ ಚೆಂಡು ವಿರೂಪ ಪ್ರಕರಣ ಒಂದು ಕಪ್ಪುಚುಕ್ಕೆಯಾಗಿ ಪರಿಣಮಿಸಿತ್ತು. ನಿಷೇಧಕ್ಕೀಡಾದಾಗ ಡೇವಿಡ್-ಸ್ಟೀವ್ ಇಬ್ಬರೂ ನೊಂದು ಪಶ್ಚಾತಾಪವೂ ಪಟ್ಟಿದ್ದರು. ನಿಷೇಧ ಇನ್ನೇನು ಕೊನೆಗೊಳ್ಳುವುದರಲ್ಲಿದೆ. ಇಬ್ಬರೂ ಆಟಗಾರರಿಗೆ ಕ್ಲಬ್ ಕ್ರಿಕೆಟ್ ನಲ್ಲಿ ಆಡಲು ಅವಕಾಶ ನೀಡಲಾಗಿದೆ. ಕ್ರಿಕೆಟ್ ವೃತ್ತಿಬದುಕಿಗೆ ಬಡಿದಿದ್ದ ಕತ್ತಲೆಯಿಂದ ಇಬ್ಬರೂ ಹೊರಬರುವುದರಲ್ಲಿದ್ದಾರೆ.

ಐಪಿಎಲ್ 2019: ಯುವಿ, ಅಕ್ಸರ್, ಫಿಂಚ್ ಬಿಟ್ಟುಕೊಟ್ಟ ಕಿಂಗ್ಸ್ XI ಪಂಜಾಬ್ಐಪಿಎಲ್ 2019: ಯುವಿ, ಅಕ್ಸರ್, ಫಿಂಚ್ ಬಿಟ್ಟುಕೊಟ್ಟ ಕಿಂಗ್ಸ್ XI ಪಂಜಾಬ್

12ನೇ ಐಪಿಎಲ್ ಆವೃತ್ತಿಗೆ ಸಂಬಂಧಿಸಿದಂತೆ ಫ್ರಾಂಚೈಸಿಗಳು ತಮ್ಮ ತಂಡದಿಂದ ಕೈಬಿಡಲಾದ, ಉಳಿಸಿಕೊಂಡ ಆಟಗಾರರ ಪಟ್ಟಿಯನ್ನು ಪ್ರಕಟಿಸಿವೆ. ಇದರಲ್ಲಿ ಡೇವಿಡ್ ವಾರ್ನರ್ ಮತ್ತು ಸ್ಟೀವ್ ಸ್ಮಿತ್ ಇಬ್ಬರೂ ಕ್ರಮವಾಗಿ ಸನ್‌ ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ತಾನ್ ರಾಯಲ್ಸ್ ತಂಡಗಳ ಉಳಿಸಿಕೊಂಡವರ ಪಟ್ಟಿಯಲ್ಲಿದ್ದಾರೆ.

ಇಬ್ಬರೂ ಪ್ರತಿಭಾನ್ವಿತರು ಈಗಲೂ ಐಸಿಸಿ ರ್ಯಾಂಕಿಂಗ್‌ನಲ್ಲಿ ಉತ್ತಮ ಸ್ಥಾನದಲ್ಲೇ ಉಳಿದಿದ್ದಾರೆ. ಟೆಸ್ಟ್ ಕ್ರಿಕೆಟ್ ನಲ್ಲಿ ಸ್ಮಿತ್ ದ್ವಿತೀಯ ಸ್ಥಾನದಲ್ಲಿ, ವಾರ್ನರ್ 5ನೇ ಸ್ಥಾನದಲ್ಲಿದ್ದರೆ, ಏಕದಿನದಲ್ಲಿ ವಾರ್ನರ್ ಈಗಲೂ 6ನೇ ಸ್ಥಾನಿಗ! ಹೀಗಾಗಿ ಇಬ್ಬರೂ ಐಪಿಎಲ್‌ನಲ್ಲಿ ಈಬಾರಿ ಮಿಂಚುವ ಭರವಸೆ ಮೂಡಿಸಿದ್ದಾರೆ.

Story first published: Friday, November 16, 2018, 17:20 [IST]
Other articles published on Nov 16, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X