ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸ್ಮಿತ್-ವಾರ್ನರ್ ನಿಷೇಧ ಅಂತ್ಯ, ಆಸ್ಟ್ರೇಲಿಯಾ ವಿಶ್ವಕಪ್ ತಂಡಕ್ಕೆ ಆಯ್ಕೆ?

ಸ್ಟೀವ್ ಸ್ಮಿತ್ ಹಾಗು ಡೇವಿಡ್ ವಾರ್ನರ್ ಅಂತ್ಯ ನಿಷೇಧ
Steve Smith, David Warner ‘paid price’ says cricket chief

ಸಿಡ್ನಿ, ಮಾರ್ಚ್ 29: ಆಸ್ಟ್ರೇಲಿಯಾದ ಬೀಸುಗೈ ದಾಂಡಿಗರಾದ ಸ್ಟೀವ್ ಸ್ಮಿತ್ ಮತ್ತು ಡೇವಿಡ್ ವಾರ್ನರ್ ಮೇಲಿನ ವರ್ಷದ ನಿಷೇಧ ಅಂತ್ಯಗೊಂಡಿದೆ. ಇನ್ಮುಂದೆ ಇಬ್ಬರೂ ಆಟಗಾರರು ರಾಜ್ಯ ಮತ್ತು ಅಂತಾರಾಷ್ಟ್ರೀಯ ಪಂದ್ಯಾಟಗಳಲ್ಲಿ ಪಾಲ್ಗೊಳ್ಳಬಹುದಾಗಿದೆ.

ಐಪಿಎಲ್: ರಾಯಲ್ ಚಾಲೆಂಜರ್ಸ್ ವಿರುದ್ಧ ಇಂಡಿಯನ್ಸ್‌ಗೆ ರೋಚಕ ಜಯಐಪಿಎಲ್: ರಾಯಲ್ ಚಾಲೆಂಜರ್ಸ್ ವಿರುದ್ಧ ಇಂಡಿಯನ್ಸ್‌ಗೆ ರೋಚಕ ಜಯ

ಕಳೆದ ವರ್ಷ ದಕ್ಷಿಣ ಆಫ್ರಿಕಾದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಚೆಂಡು ವಿರೂಪದಲ್ಲಿ ಪಾಲ್ಗೊಂಡ ಆಸ್ಟ್ರೇಲಿಯಾ ಆಟಗಾರರಾದ ಸ್ಮಿತ್, ವಾರ್ನರ್ ಮತ್ತು ಕ್ಯಮರಾನ್ ಬ್ಯಾನ್‌ ಕ್ರಾಫ್ಟ್‌ ಅವರಿಗೆ ನಿಷೇಧ ಹೇರಲಾಗಿತ್ತು.

IPL: ಹೈದರಾಬಾದ್ ವಿರುದ್ಧ ರಾಜಸ್ಥಾನ ಸಂಭಾವ್ಯ XIIPL: ಹೈದರಾಬಾದ್ ವಿರುದ್ಧ ರಾಜಸ್ಥಾನ ಸಂಭಾವ್ಯ XI

ಮೂವರೂ ಆಟಗಾರರು ಕಳೆದ ವರ್ಷ ಮಾರ್ಚ್ 28ರಂದು ಕ್ರಿಕೆಟ್ ಆಸ್ಟ್ರೇಲಿಯಾದದಿಂದ ನಿಷೇದಿಸಲ್ಪಟ್ಟಿದ್ದರು. ಇದರಲ್ಲಿ 9 ತಿಂಗಳ ನಿಷೇಧ ಶಿಕ್ಷೆಗೆ ಗುರಿಯಾಗಿದ್ದ ಬ್ಯಾನ್‌ಕ್ರಾಫ್ಟ್‌ ಮೇಲಿನ ನಿಷೇಧ ಕಳೆದ ಡಿಸೆಂಬರ್‌ನಲ್ಲೇ ಅಂತ್ಯಗೊಂಡಿತ್ತು. ಸ್ಮಿತ್-ವಾರ್ನರ್ ನಿಷೇಧವೂ ಮಾರ್ಚ್ 28ಕ್ಕೆ ಅಂತ್ಯ ಕಂಡಿದೆ.

ತಪ್ಪಿಗೆ ಬೆಲೆ ತೆತ್ತಿದ್ದಾರೆ

ತಪ್ಪಿಗೆ ಬೆಲೆ ತೆತ್ತಿದ್ದಾರೆ

ಆಸ್ಟ್ರೇಲಿಯಾ ಕ್ರಿಕೆಟ್‌ನ ಮುಖ್ಯಸ್ಥ ಕೆವಿನ್ ರೋಬರ್ಟ್ ಈ ಬಗ್ಗೆ ಪ್ರತಿಕ್ರಿಯಿಸಿ, 'ಸ್ಮಿತ್-ವಾರ್ನರ್ ತಪ್ಪಿಗೆ ಬೆಲೆ ತೆತ್ತಿದ್ದಾರೆ. ಅವರ ಶಿಕ್ಷೆಯ ಕಾಲಾವಧಿ ಮುಗಿದಿದೆ' ಎಂದಿದ್ದಾರೆ. ಸ್ಮಿತ್-ವಾರ್ನರ್ ಮರಳಿಕೆ ತಂಡದಲ್ಲಿ ವ್ಯತ್ಯಾಸ ತರಲಾರದು ಎಂದು ರೋಬರ್ಟ್ ಹೇಳಿದ್ದಾರಾದರೂ ಅಂತಿಮ ತಂಡದಲ್ಲಿ ಇಬ್ಬರೂ ಕಾಣಿಸಿಕೊಂಡರೂ ಅಚ್ಚರಿಯಿಲ್ಲ.

ವಿಶ್ವಕಪ್ ತಂಡ ಆಯ್ಕೆ ಕಠಿಣ

ವಿಶ್ವಕಪ್ ತಂಡ ಆಯ್ಕೆ ಕಠಿಣ

ನಿಷೇಧ ಮುಗಿಸಿ ಆಸ್ಟ್ರೇಲಿಯಾ ತಂಡಕ್ಕೆ ಹಿಂದಿರುಗಿರುವ ಬಗ್ಗೆ ಆಸ್ಟ್ರೇಲಿಯಾ ನಾಯಕ ಆ್ಯರನ್ ಫಿಂಚ್ ಮಾತನಾಡಿ, 'ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್ ತಂಡಕ್ಕೆ ಮರಳಿರುವುದರಿಂದ ವಿಶ್ವಕಪ್‌ಗೆ ತಂಡವನ್ನು ಆರಿಸುವುದು ಇನ್ನಷ್ಟು ಕ್ಲಿಷ್ಟವೆನಿಸಿದೆ' ಎಂದಿದ್ದಾರೆ.

ಕಳೆದ ವರ್ಷ ಐಪಿಎಲ್‌ನಿಂದ ಹೊರಗೆ

ಕಳೆದ ವರ್ಷ ಐಪಿಎಲ್‌ನಿಂದ ಹೊರಗೆ

ಸ್ಮಿತ್-ವಾರ್ನರ್ ಇಬ್ಬರೂ ಸದ್ಯ ಐಪಿಎಲ್‌ನಲ್ಲಿ ಕ್ರಮವಾಗಿ ರಾಜಸ್ಥಾನ್ ರಾಯಲ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ನಿಷೇಧದ ಬಳಿಕವೂ ಕಳೆದ ವರ್ಷ ಇಬ್ಬರನ್ನು ಐಪಿಎಲ್‌ನಲ್ಲಿ ಆಡಿಸಲು ಅವಕಾಶವಿತ್ತು. ಯಾಕೆಂದರೆ ನಿಷೇಧವು ಕ್ಲಬ್ ಮಾದರಿಯ ಕ್ರಿಕೆಟ್‌ಗಳಿಗೆ ಅನ್ವಯಿಸುವುದಿಲ್ಲ, ಬದಲಿಗೆ ರಾಜ್ಯ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್‌ಗಳಿಗೆ ಅನ್ವಯಿಸುತ್ತೆ.

ಇಬ್ಬರೂ ಐಪಿಎಲ್‌ನಲ್ಲಿ ಭಾಗಿ

ಇಬ್ಬರೂ ಐಪಿಎಲ್‌ನಲ್ಲಿ ಭಾಗಿ

ಕಳೆದ ವರ್ಷ ಬಿಸಿಸಿಐ ಮುನ್ನೆಚ್ಚರಿಕೆಯಾಗಿ ಇಬ್ಬರನ್ನು ಐಪಿಎಲ್‌ನಿಂದ ಹೊರಗಿಟ್ಟಿತ್ತು. ಈ ಬಾರಿ ಇಬ್ಬರೂ ನಿಷೇಧ ಅಂತ್ಯಕ್ಕೂ ಮುನ್ನವೇ ಐಪಿಎಲ್‌ನಲ್ಲಿ ಮೈದಾನಕ್ಕಿಳಿದಿದ್ದರು. ಮಾರ್ಚ್ 24ರಂದು ವಾರ್ನರ್ ಹೈದರಾಬಾದ್ ತಂಡವನ್ನು, ಮಾರ್ಚ್ 25ರಂದು ಸ್ಮಿತ್ ರಾಜಸ್ಥಾನ್ ತಂಡದ ಪರ ಆಡಿದ್ದರು.

Story first published: Friday, March 29, 2019, 16:33 [IST]
Other articles published on Mar 29, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X