ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಆಸ್ಟ್ರೇಲಿಯಾ: ಸತತ ಶತಕದ ಹಿಂದಿನ ಗುಟ್ಟು ಬಿಚ್ಚಿಟ್ಟ್ ಸ್ಟೀವ್ ಸ್ಮಿತ್

Steve Smith explains how he managed to score two hundreds in a row

ಟೀಮ್ ಇಂಡಿಯಾ ವಿರುದ್ಧದ ಮೊದಲ ಎರಡು ಪಂದ್ಯಗಳಲ್ಲಿ ಭರ್ಜರಿಯಾಗಿ ಶತಕವನ್ನು ಗಳಿಸುವ ಮೂಲಕ ಸ್ಟೀವ್ ಸ್ಮಿತ್ ಆಸ್ಟ್ರೇಲಿಯಾದ ಬೃಹತ್ ಮೊತ್ತಕ್ಕೆ ಕಾರಣರಾಗಿದ್ದರು. ಈ ಮೂಲಕ ಎರಡು ಪಂದ್ಯಗಳ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಈಗ ಈ ಸತತ ಎರಡು ಶತಕದ ಹಿಂದಿನ ಗುಟ್ಟನ್ನು ಸ್ಟೀವ್ ಸ್ಮಿತ್ ಬಿಚ್ಚಿಟ್ಟಿದ್ದಾರೆ.

ಈ ಸರಣಿಯ ಆರಂಭಕ್ಕೂ ಮುನ್ನ ಸ್ಟೀವ್ ಸ್ಮಿತ್ ಅಚ್ಚರಿಯ ಹೇಳಿಕೆಯೊಂದನ್ನು ನೀಡುತ್ತಾ ಎದುರಾಳಿ ಟೀಮ್ ಇಂಡಿಯಾಗೆ ಎಚ್ಚರಿಕೆಯನ್ನು ನೀಡಿದ್ದರು. "ತಾನು ಕೈಗಳನ್ನು ಕಂಡುಕೊಂಡಿದ್ದೇನೆ" ಎಂದಿದ್ದರು ಸ್ಟೀವ್ ಸ್ಮಿತ್. ಆ ಮಾತಿನ ಮರ್ಮವನ್ನು ಈಗ ಸ್ಟೀವ್ ಸ್ಮಿತ್ ಬಿಚ್ಚಿಟ್ಟಾರೆ.

ಒಡಿಐನಲ್ಲಿ ಸಾರ್ವಕಾಲಿಕ ಟಾಪ್ 5 ಬೌಲರ್‌ಗಳ ಹೆಸರಿಸಿದ ಗ್ಲೆನ್ ಮೆಗ್ರಾತ್ಒಡಿಐನಲ್ಲಿ ಸಾರ್ವಕಾಲಿಕ ಟಾಪ್ 5 ಬೌಲರ್‌ಗಳ ಹೆಸರಿಸಿದ ಗ್ಲೆನ್ ಮೆಗ್ರಾತ್

ಆಸ್ಟ್ರೇಲಿಯಾದ ಅನುಭವು ಆಟಗಾರ ಸ್ಮಿತ್ ತನ್ನ ಬ್ಯಾಟ್‌ನ ಹಿಡಿತದಲ್ಲಿ ಸಣ್ಣ ಬದಲಾವಣೆಯನ್ನು ಮಾಡಿಕೊಂಡಿರುವುದಾಗಿ ಹೇಳಿದ್ದಾರೆ. ಗ್ರಿಪ್‌ನಲ್ಲಿ ಮಾಡಿಕೊಂಡ ಈ ಬದಲಾವಣೆ ಬ್ಯಾಟಿಂಗ್‌ಗೆ ಮತ್ತಷ್ಟು ಹೆಚ್ಚಿನ ಸಹಕಾರಿಯಾಗಿದ್ದು ಅದರ ಫಲಿತಾಂಶವೂ ಅದ್ಭುತವಾಗಿದ ಎಂದು ತಿಳಿಸಿದ್ದಾರೆ. ಇದರ ಪರಿಣಾಮವಾಗಿ ಸತತ ಎರಡು ಶತಕ ಸಿಡಿಸಿಲು ಸ್ಟೀವ್ ಸ್ಮಿತ್‌ಗೆ ಸಾಧ್ಯವಾಗಿದೆ.

"ತಾನು ಕೈಗಳನ್ನು ಕಂಡುಕೊಂಡಿದ್ದೇನೆ" ಎಂಬ ಮಾತಿನ ಅರ್ಥವೇನು ಎಂದು ಕೇಳಲಾದ ಪ್ರಶ್ನೆಗೆ ಸ್ಟೀವ್ ಸ್ಮಿತ್ "ನಾನು ಆ ಬಗ್ಗೆ ಸಾಕಷ್ಟು ಆಕರ್ಷಿತನಾಗಿದ್ದೇನೆ. ಕಳೆದ ಕೆಲ ವರ್ಷಗಳಿಂದ ನಾನು ವಿಭಿನ್ನವಾದ ಗ್ರಿಪ್‌ಗಳನ್ನು ಹೊಂದಿದ್ದೆ. 2014 ಹಾಗೂ 2015ರ ವಿಶ್ವಕಪ್‌ನಲ್ಲಿ ನನ್ನ ಮೇಲಿನ ಕೈ ಬಹುಶಃ ಬ್ಯಾಟ್‌ನ ಹಿಂಭಾಗದ ಮಧ್ಯದಲ್ಲಿ ನೇರವಾಗಿ ಇತ್ತು" ಎಂದು ಫಾಕ್ಸ್‌ ಕ್ರಿಕೆಟ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಜಡೇಜಾ ಅರ್ಧಶತಕ ಬಾರಿಸುತ್ತಲೇ ಸಂಜಯ್ ಮಂಜ್ರೇಕರ್ ಟ್ರೋಲ್ಜಡೇಜಾ ಅರ್ಧಶತಕ ಬಾರಿಸುತ್ತಲೇ ಸಂಜಯ್ ಮಂಜ್ರೇಕರ್ ಟ್ರೋಲ್

ಯಾವಾಗ ಈ ಹೊಸ ಗ್ರಿಪ್‌ಅನ್ನು ಕಂಡುಕೊಂಡಿರಿ ಎಂಬ ಪ್ರಶ್ನೆಗೆ ಸ್ಟೀವ್ ಸ್ಮಿತ್ ಇದು ನಮ್ಮ ಮೊದಲ ಪಂದ್ಯಕ್ಕೂ ಮುನ್ನ ಮೂರು ದಿನಗಳ ಕ್ವಾರಂಟೈನ್ ಅವಧಿಯ ಕೇವಲ ಒಂದು ಸೆಶನ್‌ನಲ್ಲಿ ಕಂಡುಕೊಂಡೆ.ಬಳಿಕ ಅದರಲ್ಲೇ ಹೆಚ್ಚಿನ ಅಭ್ಯಾಸವನ್ನು ನಡೆಸಿದೆ. 2014-15ರ ಸಾಕಷ್ಟು ವಿಡಿಯೋಗಳನ್ನು ಗಮನಿಸಿಕೊಂಡೆ. ಹೊಸ ಗ್ರಿಪ್‌ನಲ್ಲಿ ಉತ್ತಮ ಅನುಭವ ದೊರೆಯಿತು. ಹಾಗಾಗಿ ಇದರಲ್ಲೇ ಮುಂದುವರಿಸಬಹುದು ಎನಿಸಿತು ಎಂದು ಸ್ಮಿತ್ ಹೇಳಿದ್ದಾರೆ.

Story first published: Thursday, December 3, 2020, 9:02 [IST]
Other articles published on Dec 3, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X