ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸ್ಮಿತ್-ಮ್ಯಾಕ್ಸ್‌ವೆಲ್ ಅರ್ಧಶತಕ, ಕಿವೀಸ್ XI ವಿರುದ್ಧ ಆಸೀಸ್ XIಗೆ ಜಯ

ಸ್ಮಿತ್ ಭರ್ಜರಿ ಆಟಕ್ಕೆ ಬೆಚ್ಚಿಬಿದ್ದ ನ್ಯೂಜಿಲೆಂಡ್..!? | Oneindia Kannada
Steve Smith hits 91 not out as Australia beat New Zealand

ಬ್ರಿಸ್ಬೇನ್, ಮೇ 10: ಸ್ಟೀವ್ ಸ್ಮಿತ್ ಮತ್ತು ಗ್ಲೆನ್ ಮ್ಯಾಕ್ಸೆಲ್ ಆಕರ್ಷಕ ಅರ್ಧಶತಕದ ಬೆಂಬಲದೊಂದಿಗೆ ಬ್ರಿಸ್ಬೇನ್‌ನಲ್ಲಿ ಶುಕ್ರವಾರ (ಮೇ 10) ನಡೆದ ಏಕದಿನ ಅಭ್ಯಾಸ ಪಂದ್ಯದಲ್ಲಿ ಪ್ರವಾಸಿ ನ್ಯೂಜಿಲ್ಯಾಂಡ್ XI ವಿರುದ್ಧ ಆಸ್ಟ್ರೇಲಿಯಾ XI 16 ರನ್ (ಡಕ್ವರ್ಥ್ ಲೂಯೀಸ್ ನಿಯಮದ ಆಧಾರದಲ್ಲಿ) ಜಯ ಗಳಿಸಿದೆ.

ವಿಶ್ವಕಪ್‌ ಫ್ಲ್ಯಾಷ್‌ಬ್ಯಾಕ್‌: ಸ್ಕ್ವಾಷ್‌ ಬಾಲ್‌ನಿಂದ ಪಂದ್ಯ ಗೆಲ್ಲಿಸಿದ್ದ ಗಿಲ್‌ಕ್ರಿಸ್ಟ್‌!ವಿಶ್ವಕಪ್‌ ಫ್ಲ್ಯಾಷ್‌ಬ್ಯಾಕ್‌: ಸ್ಕ್ವಾಷ್‌ ಬಾಲ್‌ನಿಂದ ಪಂದ್ಯ ಗೆಲ್ಲಿಸಿದ್ದ ಗಿಲ್‌ಕ್ರಿಸ್ಟ್‌!

ಟಾಸ್ ಗೆದ್ದು ಬ್ಯಾಟಿಂಗ್ ಅಯ್ದುಕೊಂಡ ನ್ಯೂಜಿಲ್ಯಾಂಡ್ ತಂಡಕ್ಕೆ ವಿಲ್ ಯಂಗ್ ಶತಕದ ಕೊಡುಗೆ ದೊರೆಯಿತು. ಜಾರ್ಜ್ ವರ್ಕರ್ 59, ಯಂಗ್ 111 (108 ಎಸೆತ), ಜೇಮ್ಸ್ ನೀಶಮ್ 39 ರನ್ ಸೇರ್ಪಡೆಯೊಂದಿಗೆ ಕಿವೀಸ್ 50 ಓವರ್‌ಗೆ 9 ವಿಕೆಟ್ ನಷ್ಟದಲ್ಲಿ 286 ರನ್ ಗಳಿಸಿತು.

ನ್ಯೂಜಿಲ್ಯಾಂಡ್ XI ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ XIನ ಪ್ಯಾಟ್ ಕಮಿನ್ಸ್ 4, ಆದಂ ಝಂಪಾ ಮತ್ತು ಮಾರ್ಕಸ್ ಸ್ಟೋಯ್ನಿಸ್ ತಲಾ 2 ವಿಕೆಟ್‌ನೊಂದಿಗೆ ಪಾರಮ್ಯ ಮೆರೆದರು. ಮಳೆ ಸುರಿದ್ದರಿಂದ ಆಸ್ಟ್ರೇಲಿಯಾ ಗೆಲುವಿಗೆ 44 ಓವರ್‌ಗಳಲ್ಲಿ 233 ರನ್ ಗುರಿ ನೀಡಲಾಗಿತ್ತು.

ತಂಡಕ್ಕೆ ಮರಳಿದ ಸ್ಟೀವನ್‌ ಸ್ಮಿತ್‌ ಬಗ್ಗೆ ಕೋಚ್‌ ಲ್ಯಾಂಗರ್‌ ಹೇಳಿದ್ದೇನು?ತಂಡಕ್ಕೆ ಮರಳಿದ ಸ್ಟೀವನ್‌ ಸ್ಮಿತ್‌ ಬಗ್ಗೆ ಕೋಚ್‌ ಲ್ಯಾಂಗರ್‌ ಹೇಳಿದ್ದೇನು?

ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ, ಉಸ್ಮಾನ್ ಖವಾಜಾ 23, ಸ್ಟೀವ್ ಸ್ಮಿತ್ ಅಜೇಯ 91 (108 ಎಸೆತ), ಶಾನ್ ಮಾರ್ಷ್ 32, ಮಾರ್ಕಸ್ ಸ್ಟೋಯ್ನಿಸ್ 15, ಗ್ಲೆನ್ ಮ್ಯಾಕ್ಸ್‌ವೆಲ್ 70 ರನ್ (48 ಎಸೆತ) ಸೇರ್ಪಡೆಯೊಂದಿಗೆ 44 ಓವರ್‌ಗಳಲ್ಲಿ 5 ವಿಕೆಟ್ ಕಳೆದು 248 ರನ್ ಪೇರಿಸಿ ಗೆಲುವಿನ ನಗೆ ಬೀರಿತು.

Story first published: Friday, May 10, 2019, 20:42 [IST]
Other articles published on May 10, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X