2ನೇ ಹಂತದ ಐಪಿಎಲ್ 2021ರ ಪಂದ್ಯಗಳಲ್ಲಿ ಸ್ಟೀವ್ ಸ್ಮಿತ್ ಆಡುತ್ತಿಲ್ಲ!

IPL ಗೆ ಕೈ ಕೊಟ್ಟ ಸ್ಟೀವ್ ಸ್ಮಿತ್ | Steve Smith | Oneindia Kannada

ನವದೆಹಲಿ: ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 2ನೇ ಹಂತದ ಪಂದ್ಯಗಳಲ್ಲಿ ಆಸ್ಟ್ರೇಲಿಯಾದ ಪ್ರಮುಖ ಬ್ಯಾಟ್ಸ್‌ಮನ್‌ ಸ್ಟೀವ್ ಸ್ಮಿತ್ ಆಡುತ್ತಿಲ್ಲ. ಗಾಯಕ್ಕೀಡಾಗಿರುವುದರಿಂದ ಸ್ಮಿತ್ ಐಪಿಎಲ್ ಇನ್ನುಳಿದ ಪಂದ್ಯಗಳನ್ನು ಮಿಸ್ ಮಾಡಿಕೊಳ್ಳಲಿದ್ದಾರೆ.

ಇನ್‌ಸ್ಟಾಗ್ರಾಮ್ ಸಿರಿವಂತರ ಪಟ್ಟಿ ಪ್ರಕಟ: ಒಂದು ಪೋಸ್ಟ್‌ಗೆ ಕೊಹ್ಲಿ ಗಳಿಸುವ ಆದಾಯ ಎಷ್ಟು ಗೊತ್ತಾ?!ಇನ್‌ಸ್ಟಾಗ್ರಾಮ್ ಸಿರಿವಂತರ ಪಟ್ಟಿ ಪ್ರಕಟ: ಒಂದು ಪೋಸ್ಟ್‌ಗೆ ಕೊಹ್ಲಿ ಗಳಿಸುವ ಆದಾಯ ಎಷ್ಟು ಗೊತ್ತಾ?!

ಮೊಣಕೈ ಗಾಯಕ್ಕೀಡಾಗಿರುವ ಸ್ಟೀವ್ ಸ್ಮಿತ್ ಐಪಿಎಲ್ 2021ರ ಇನ್ನುಳಿದ ಪಂದ್ಯಗಳಲ್ಲಿ ಆಡುತ್ತಿಲ್ಲ. 2020ರ ಸೀಸನ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ನಾಯಕರಾಗಿದ್ದ ಸ್ಮಿತ್, ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್‌ಗೆ ಸೇರಿಕೊಂಡಿದ್ದರು. ಆದರೆ ಈ ಬಾರಿ ಸ್ಮಿತ್ ನಡೆದ ಪಂದ್ಯಗಳಲ್ಲಿ ಗಮನಾರ್ಹ ಪ್ರದರ್ಶನವೇನೂ ನೀಡಿರಲಿಲ್ಲ.

ಗಾಯ ಸುಧಾರಣೆ ನಿಧಾನವಾಗುತ್ತಿರುವುದರಿಂದ ಸದ್ಯ ವೆಸ್ಟ್‌ ಇಂಡೀಸ್ ವಿರುದ್ಧದ ಸೀಮಿತ ಓವರ್‌ಗಳ ಸರಣಿಯಿಂದಲೂ ಸ್ಮಿತ್ ಹಿಂದೆ ಸರಿದಿದ್ದಾರೆ. ಸೆಪ್ಟೆಂಬರ್‌-ಅಕ್ಟೋಬರ್‌ನಲ್ಲಿ ನಡೆಯುವ ಐಪಿಎಲ್ 2ನೇ ಹಂತದ ಪಂದ್ಯಗಳಲ್ಲದೆ ಅಕ್ಟೋಬರ್‌-ನವೆಂಬರ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲೂ ಸ್ಮಿತ್ ಆಡೋದು ಅನುಮಾನವಾಗಿದೆ. ಆದರೆ ಆ್ಯಷಸ್ ಸರಣಿ ವೇಳೆ ಸ್ಮಿತ್ ಚೇತರಿಸಿಕೊಳ್ಳುವ ನಿರೀಕ್ಷೆಯಿದೆ.

ಭಾರತ ದ್ವಿತೀಯ ದರ್ಜೆಯ ತಂಡವಲ್ಲ: ರಣತುಂಗಾ ವಾಗ್ದಾಳಿಗೆ ಲಂಕಾ ಮಂಡಳಿ ತಿರುಗೇಟುಭಾರತ ದ್ವಿತೀಯ ದರ್ಜೆಯ ತಂಡವಲ್ಲ: ರಣತುಂಗಾ ವಾಗ್ದಾಳಿಗೆ ಲಂಕಾ ಮಂಡಳಿ ತಿರುಗೇಟು

"ಈಗಿನಿಂದ ವಿಶ್ವಕಪ್‌ವರೆಗೆ ಇನ್ನೂ ಸ್ವಲ್ಪ ಕಾಲಾವಕಾಶವಿದೆ. ಈ ಕ್ಷಣದಲ್ಲಿ ನಾನು ಸರಿಯಿದ್ದೇನೆ. ಗಾಯ ನಿಧಾನವಾಗಿ ಗುಣವಾಗುತ್ತಿದೆ. ಆದರೆ ನಾನು ಚೆನ್ನಾಗಿದ್ದೇನೆ. ವಿಶ್ವಕಪ್‌ನಲ್ಲಿ ಆಡೋಕೆ ನಂಗತೂ ಇಷ್ಟವಿದೆ ಅನ್ನೋದನ್ನು ಮಾತ್ರ ನಾನು ಖಂಡಿತಾಗಿಯೂ ಹೇಳುತ್ತೇನೆ," ಎಂದು ಕ್ರಿಕೆಟ್.ಕಾಮ್.ಎಯು cricket.com.auಗೆ ಶುಕ್ರವಾರ ಸ್ಮಿತ್ ಹೇಳಿಕೊಂಡಿದ್ದರು.

For Quick Alerts
ALLOW NOTIFICATIONS
For Daily Alerts
Story first published: Saturday, July 3, 2021, 12:39 [IST]
Other articles published on Jul 3, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X