ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕ್ರಿಕೆಟ್ ದಂತಕತೆಗಳ ಹಿಂದಿಕ್ಕಿ ದಾಖಲೆ ನಿರ್ಮಿಸಿದ ಸ್ಟೀವ್ ಸ್ಮಿತ್!

Steve Smith joins in a record list with Gary Sobers, Sir Viv Richards and Ricky Ponting

ಸಿಡ್ನಿ: ಆಸ್ಟ್ರೇಲಿಯಾದ ಪ್ರಸ್ತುತ ಟೆಸ್ಟ್‌ ಕ್ರಿಕೆಟ್ ಸ್ಪೆಶಾಲಿಸ್ಟ್ ಸ್ಟೀವ್ ಸ್ಮಿತ್ ಭಾರತ ವಿರುದ್ಧದ ಮೂರನೇ ಟೆಸ್ಟ್‌ ಪಂದ್ಯದಲ್ಲಿ ವಿಶೇಷ ದಾಖಲೆಗಾಗಿ ಗುರುತಿಸಿಕೊಂಡಿದ್ದಾರೆ. ಸಿಡ್ನಿ ಕ್ರಿಕೆಟ್‌ ಗ್ರೌಂಡ್‌ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಶತಕ ಬಾರಿಸಿರುವ ಸ್ಮಿತ್, ಕಡಿಮೆ ಇನ್ನಿಂಗ್ಸ್‌ಗಳಲ್ಲಿ ಹೆಚ್ಚು ಟೆಸ್ಟ್‌ ಶತಕಗಳನ್ನು ಬಾರಿಸಿದ ದಾಖಲೆಗಾಗಿ ವಿರಾಟ್ ಕೊಹ್ಲಿ ಹೆಸರಿನಲ್ಲಿದ್ದ ದಾಖಲೆಯನ್ನು ಸರಿಗಟ್ಟಿದ್ದಾರೆ. ಅಷ್ಟೇ ಅಲ್ಲ, ಭಾರತ ಪರ ವಿರುದ್ಧವೂ ಅಪರೂಪದ ದಾಖಲೆ ನಿರ್ಮಿಸಿದ್ದಾರೆ.

ಭಾರತ vs ಆಸ್ಟ್ರೇಲಿಯಾ: ವಿಶೇಷ ದಾಖಲೆ ಪಟ್ಟಿ ಸೇರಿದ ಶುಬ್ಮನ್ ಗಿಲ್ಭಾರತ vs ಆಸ್ಟ್ರೇಲಿಯಾ: ವಿಶೇಷ ದಾಖಲೆ ಪಟ್ಟಿ ಸೇರಿದ ಶುಬ್ಮನ್ ಗಿಲ್

ಮೂರನೇ ಟೆಸ್ಟ್‌ನ ಆರಂಭಿಕ ಇನ್ನಿಂಗ್ಸ್‌ನಲ್ಲಿ 226 ಎಸೆತಗಳಲ್ಲಿ 131 ರನ್ ಬಾರಿಸಿದ ಸ್ಟೀವ್ ಸ್ಮಿತ್ ಆ ಬಳಿಕ 105.4ನೇ ಓವರ್‌ನಲ್ಲಿ ರವೀಂದ್ರ ಜಡೇಜಾ ಅವರಿಂದ ರನ್ ಔಟ್ ಆಗಿ ನಿರ್ಮಿಸಿದರು. ಆದರೆ ಸ್ಮಿತ್ ಶತಕ ಬಾರಿಸುತ್ತಲೇ ಅವರ ಹೆಸರಿನಲ್ಲಿ ವಿಶೇಷ ದಾಖಲೆಯೂ ನಿರ್ಮಾಣವಾಗಿದೆ.

ಭಾರತ vs ಆಸ್ಟ್ರೇಲಿಯಾ, 3ನೇ ಟೆಸ್ಟ್‌, Live ಸ್ಕೋರ್‌ಕಾರ್ಡ್

1
48442

ಪ್ರಸ್ತುತ ಸಕ್ರಿಯ ಆಟಗಾರರಲ್ಲಿ ಕೊಹ್ಲಿಗಿಂತ ಕಡಿಮೆ ಇನ್ನಿಂಗ್ಸ್‌ಗಳಲ್ಲಿ ಅತ್ಯಧಿಕ ಟೆಸ್ಟ್‌ ಶತಕಗಳನ್ನು ಬಾರಿಸಿರುವ ಸ್ಮಿತ್, ಕ್ರಿಕೆಟ್ ದಂತಕತೆಗಳನ್ನೆಲ್ಲಾ ಹಿಂದಿಕ್ಕಿ ಮತ್ತೊಂದು ದಾಖಲೆ ಬರೆದಿದ್ದಾರೆ.

ವಿರಾಟ್ ಕೊಹ್ಲಿ ದಾಖಲೆ ಬದಿಗೆ

ವಿರಾಟ್ ಕೊಹ್ಲಿ ದಾಖಲೆ ಬದಿಗೆ

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 147 ಟೆಸ್ಟ್‌ ಇನ್ನಿಂಗ್ಸ್‌ಗಳಲ್ಲಿ 27 ಶತಕ, 7 ದ್ವಿಶತಕಗಳನ್ನು ಬಾರಿಸಿದ್ದಾರೆ. ಆದರೆ ಸ್ಟೀವ್ ಸ್ಮಿತ್ 136 ಟೆಸ್ಟ್‌ ಇನ್ನಿಂಗ್ಸ್‌ಗಳಲ್ಲಿ 27 ಶತಕ, 3 ದ್ವಿಶತಕಗಳನ್ನು ಬಾರಿಸಿದ್ದಾರೆ. ಚೆಂಡು ವಿರೂಪ ಪ್ರಕರಣದಲ್ಲಿ ಸ್ಮಿತ್ ಒಂದು ವರ್ಷ ನಿಷೇಧಕ್ಕೀಡಾಗಿಯೂ ಈ ಸಾಧನೆ ಮಾಡಿರುವುದು ವಿಶೇಷ. ಈ ಟೆಸ್ಟ್‌ ಸರಣಿಯ ಆರಂಭಿಕ ಪಂದ್ಯದಲ್ಲಿ ಪಾಲ್ಗೊಂಡ ಬಳಿಕ ವಿರಾಟ್ ಪಿತೃತ್ವ ರಜೆ ಪಡೆದುಕೊಂಡಿರುವುದರಿಂದ ಸ್ಮಿತ್‌ಗೆ ಶತಕ ಹೆಚ್ಚಿಸಿಕೊಳ್ಳಲು ಇನ್ನೂ ಅವಕಾಶವಿದೆ.

ಭಾರತ ವಿರುದ್ಧ ವಿಶೇಷ ಸಾಧನೆ

ಭಾರತ ವಿರುದ್ಧ ವಿಶೇಷ ಸಾಧನೆ

ಭಾರತದ ವಿರುದ್ಧ ಹೆಚ್ಚು ಶತಕಗಳನ್ನು ಬಾರಿಸಿದ ದಾಖಲೆಗಾಗಿ ವಿಶ್ವದ ದಿಗ್ಗಜ ಕ್ರಿಕೆಟರ್‌ಗಳನ್ನು ಸ್ಮಿತ್ ಹಿಂದಿಕ್ಕಿದ್ದಾರೆ. ಭಾರತ ವಿರುದ್ಧ 8 ಟೆಸ್ಟ್ ಶತಕಗಳನ್ನು ಬಾರಿಸಿರುವ ಸ್ಮಿತ್ ಇದಕ್ಕಾಗಿ 25 ಇನ್ನಿಂಗ್ಸ್‌ಗಳನ್ನು ಬಳಸಿಕೊಂಡಿದ್ದಾರೆ. ಅಷ್ಟೇ ಅಲ್ಲ ಅತೀ ಕಡಿಮೆ ಇನ್ನಿಂಗ್ಸ್‌ ಬಳಸಿ ಭಾರತ ತಂಡದ ವಿರುದ್ಧ ಹೆಚ್ಚಿನ ಟೆಸ್ಟ್ ಶತಕ ಬಾರಿಸಿದ ದಾಖಲೆ ಪಟ್ಟಿಯಲ್ಲಿ ದಿಗ್ಗಜರನ್ನೆಲ್ಲಾ ಹಿಂದಿಕ್ಕಿರುವ ಸ್ಮಿತ್ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ.

ಭಾರತದೆದುರು ಹೆಚ್ಚು ಟೆಸ್ಟ್ ಶತಕ ದಾಖಲೆಗಳು

ಭಾರತದೆದುರು ಹೆಚ್ಚು ಟೆಸ್ಟ್ ಶತಕ ದಾಖಲೆಗಳು

* ಸ್ಟೀವ್ ಸ್ಮಿತ್, ಆಸ್ಟ್ರೇಲಿಯಾ, 8 ಶತಕಗಳು, 25 ಇನ್ನಿಂಗ್ಸ್‌
* ಗ್ಯಾರಿ ಸೋಬರ್ಸ್, ವೆಸ್ಟ್ ಇಂಡೀಸ್, 8 ಶತಕಗಳು, 30 ಇನ್ನಿಂಗ್ಸ್‌
* ವಿವಿಯನ್ ರಿಚರ್ಡ್ಸ್, ವೆಸ್ಟ್ ಇಂಡೀಸ್, 8 ಶತಕಗಳು, 41 ಇನ್ನಿಂಗ್ಸ್‌
* ರಿಕಿ ಪಾಂಟಿಂಗ್, ಆಸ್ಟ್ರೇಲಿಯಾ, 8 ಶತಕಗಳು, 51 ಇನ್ನಿಂಗ್ಸ್‌

Story first published: Friday, January 8, 2021, 21:19 [IST]
Other articles published on Jan 8, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X