ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸ್ಟೀವ್ ಸ್ಮಿತ್ ಮತ್ತೆ ನಾಯಕನಾಗುವ ಸಾಧ್ಯತೆಯ ಬಗ್ಗೆ ಪ್ರತಿಕ್ರಿಯಿಸಿದ ಇಯಾನ್ ಚಾಪೆಲ್

Steve Smith might get back Australia captaincy due to lack of choice says Ian Chappell

ಭಾರತದ ವಿರುದ್ಧದ ನಡೆದ ಟೆಸ್ಟ್ ಸರಣಿಯಲ್ಲಿ ಸೋಲು ಕಂಡ ಬಳಿಕ ಆಸ್ಟ್ರೇಲಿಯಾ ನಾಯಕ ಟಿಮ್ ಪೈನ್ ನಾಯಕತ್ವದ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿದೆ. ನಾಯಕತ್ವ ಬದಲಾವಣೆ ಬಗ್ಗೆ ಮಾತುಗಳು ಕೆಳಿ ಬರುತ್ತಿದೆ. ಈ ಮಧ್ಯೆ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಇಯಾನ್ ಚಾಪೆಲ್ ನಾಯಕತ್ವ ಬದಲಾವಣೆಯಾದರೆ ಸ್ಟೀವ್ ಸ್ಮಿತ್ ಆಸಿಸ್ ತಂಡದ ಮುಂದಿನ ನಾಯಕನಾಗಬಹುದು ಎಂದಿದ್ದಾರೆ. ಬ್ರಿಸ್ಬೇನ್‌ನಲ್ಲಿ ನಡೆದ ಟೆಸ್ಟ್ ಪಂದ್ಯದ ಐದನೇ ದಿನದಾಟದಲ್ಲಿ ಟೀಮ್ ಇಂಡಿಯಾ ಆಸ್ಟ್ರೇಲಿಯಾ ನೀಡಿದ್ದ 328 ರನ್‌ಗಳ ಗುರಿಯನ್ನು ಬೆನ್ನಟ್ಟುವಲ್ಲಿ ಯಶಸ್ವಿಯಾಗಿತ್ತು.

ಭಾರತದ ವಿರುದ್ಧದ ನಡೆದ ಟೆಸ್ಟ್ ಸರಣಿಯಲ್ಲಿ ಸೋಲು ಕಂಡ ಬಳಿಕ ಆಸ್ಟ್ರೇಲಿಯಾ ನಾಯಕ ಟಿಮ್ ಪೈನ್ ನಾಯಕತ್ವದ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿದೆ. ನಾಯಕತ್ವ ಬದಲಾವಣೆ ಬಗ್ಗೆ ಮಾತುಗಳು ಕೆಳಿ ಬರುತ್ತಿದೆ. ಈ ಮಧ್ಯೆ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಇಯಾನ್ ಚಾಪೆಲ್ ನಾಯಕತ್ವ ಬದಲಾವಣೆಯಾದರೆ ಸ್ಟೀವ್ ಸ್ಮಿತ್ ಆಸಿಸ್ ತಂಡದ ಮುಂದಿನ ನಾಯಕನಾಗಬಹುದು ಎಂದಿದ್ದಾರೆ.

 ಅಜಿಂಕ್ಯ ರಹಾನೆ ಬಳಗಕ್ಕೆ ಕ್ವಾರಂಟೈನ್ ವಿನಾಯಿತಿ ನೀಡಿದ ಮಹಾರಾಷ್ಟ್ರ ಅಜಿಂಕ್ಯ ರಹಾನೆ ಬಳಗಕ್ಕೆ ಕ್ವಾರಂಟೈನ್ ವಿನಾಯಿತಿ ನೀಡಿದ ಮಹಾರಾಷ್ಟ್ರ

ಬ್ರಿಸ್ಬೇನ್‌ನಲ್ಲಿ ನಡೆದ ಟೆಸ್ಟ್ ಪಂದ್ಯದ ಐದನೇ ದಿನದಾಟದಲ್ಲಿ ಟೀಮ್ ಇಂಡಿಯಾ ಆಸ್ಟ್ರೇಲಿಯಾ ನೀಡಿದ್ದ 328 ರನ್‌ಗಳ ಗುರಿಯನ್ನು ಬೆನ್ನಟ್ಟುವಲ್ಲಿ ಯಶಸ್ವಿಯಾಗಿತ್ತು. ಈ ಮೂಲಕ ಐತಿಹಾಸಿಕವಾಗಿ ಬ್ರಿಸ್ಬೇನ್‌ನ ಗಾಬಾ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ತಂಡವನ್ನು ಮಣಿಸಿದ್ದಲ್ಲದೆ ಸರಣಿಯನ್ನು 2-1 ಅಂತರದಿಂದ ಭಾರತ ವಶಕ್ಕೆ ಪಡೆದಿತ್ತು.

ಆಸ್ಟ್ರೇಲಿಯಾ ತಂಡದಲ್ಲಿ ನಾಯಕತ್ವಕ್ಕೆ ಹೆಚ್ಚಿನ ಆಯ್ಕೆಗಳು ಇಲ್ಲದಿರುವ ಕಾರಣ ಟಿಮ್ ಪೈನ್ ನಾಯಕತ್ವದಿಂದ ಕೆಳಗಿಳಿದರೆ ಸ್ಟೀವ್ ಸ್ಮಿತ್ ಅವರೇ ಮುಂದಿನ ನಾಯಕನಾಗುವ ಸಂಭವ ಇದೆ ಎಂದು ಇಯಾನ್ ಚಾಪೆಲ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

2018ರಲ್ಲಿ ಸ್ಟೀವ್ ಸ್ಮಿತ್ ನಾಯಕತ್ವದಿಂದ ಕೆಳಗಿಳಿದ ನಂತರ ಟಿಮ್ ಪೈನ್ ಆಸ್ಟ್ರೇಲಿಯಾ ತಂಡವನ್ನು 23 ಟೆಸ್ಟ್ ಪಂದ್ಯಗಳಲ್ಲಿ ಮುನ್ನಡೆಸಿದ್ದಾರೆ. 11 ಪಂದ್ಯಗಳಲ್ಲಿ ಗೆಲುವು ಹಾಗೂ 11 ಪಂದ್ಯಗಳಲ್ಲಿ ಈವರೆಗೆ ಸೋಲನ್ನು ಕಂಡಿದ್ದರೆ 4 ಪಂದ್ಯಗಳ ಫಲಿತಾಂಶ ಡ್ರಾ ಆಗಿದೆ. ಸ್ಟೀವ್ ಸ್ಮಿತ್ ನಾಯಕನಾಗಿ 18 ಪಂದ್ಯಗಳಲ್ಲಿ ಗೆಲುವನ್ನು ಸಾಧಿಸಿದ್ದರೆ 10 ಸೋಲು ಹಾಗೂ 6 ಪಂದ್ಯಗಳಲ್ಲಿ ಡ್ರಾ ಫಲಿತಾಂಶವನ್ನು ಆಸ್ಟ್ರೇಲಿಯಾ ಪಡೆದುಕೊಂಡಿತ್ತು. 2014ರಿಂದ 2018ರ ಅವಧಿಯಲ್ಲಿ ಸ್ಮಿತ್ ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸಿದ್ದರು.

ಭಾರತ vs ಇಂಗ್ಲೆಂಡ್: ಟೆಸ್ಟ್ ಪಂದ್ಯಗಳಿಗೆ ಇಂಗ್ಲೆಂಡ್ ತಂಡ ಪ್ರಕಟಭಾರತ vs ಇಂಗ್ಲೆಂಡ್: ಟೆಸ್ಟ್ ಪಂದ್ಯಗಳಿಗೆ ಇಂಗ್ಲೆಂಡ್ ತಂಡ ಪ್ರಕಟ

"ಖಂಡಿತಾ ಸ್ಮಿತ್ ಮತ್ತೊಮ್ಮೆ ನಾಯಕನಾಗುವ ಸಂಭವವಿದೆ. ಆದರೆ ಇದು ತಂಡದಲ್ಲಿ ನಾಯಕತ್ವಕ್ಕೆ ಹೆಚ್ಚಿನ ಆಯ್ಕೆಗಳು ಇಲ್ಲದಿದ್ದಲ್ಲಿ ಮಾತ್ರವೇ ಇದು ನಡೆಯಲಿದೆ ಎಂದು ನಾನು ಭಾವಿಸುತ್ತೇನೆ" ಎಂದು ಇಯಾನ್ ಚಾಪೆಲ್ ಹೇಳಿಕೊಂಡಿದ್ದಾರೆ.

ಇನ್ನು ಇದೇ ಸಂದರ್ಭದಲ್ಲಿ ಚಾಪೆಲ್ "ಸ್ಟೀವ್ ಸ್ಮಿತ್ ಅವರ ಮೇಲೆ ತೆರವಾಗಿರುವ ನಾಯಕತ್ವದ ಮೇಲಿನ ನಿಷೇಧ ಡೇವಿಡ್ ವಾರ್ನರ್ ಮೇಲೆ ಯಾಕಿಲ್ಲ. ಸ್ಟಿತ್ ಎರಡು ವರ್ಷ ನಾಯಕತ್ವದ ನಿಷೇಧವನ್ನು ಪೂರ್ಣಗೊಳಿಸಿದ್ದಾರೆ. ಆದರೆ ವಾರ್ನರ್ ಮೇಲೆ ಯಾಕೆ ನಾಯಕತ್ವದ ಮೇಲೆ ಜೀವಮಾನದ ನಿಷೇಧವನ್ನು ಹೇರಲಾಗಿದೆ. ಇಬ್ಬರೂ ಒಂದೇ ಪ್ರಕರಣದಲ್ಲಿ ಸಿಲುಕಿದ್ದ. ಹಾಗೆ ನೋಡಿದರೆ ನನ್ನ ಪ್ರಕಾರ ಡೇವಿಡ್ ವಾರ್ನರ್‌ಗಿಂತ ನಾಯಕನಾಗಿ ಸ್ಟೀವ್ ಸ್ಮಿತ್ ಮಾಡಿದ ದೊಡ್ಡ ಅಪರಾಧವಾಗಿತ್ತು" ಎಂಬುದನ್ನು ಪ್ರಶ್ನಿಸಿದ್ದಾರೆ.

Story first published: Friday, January 22, 2021, 12:00 [IST]
Other articles published on Jan 22, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X