ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಧುನಿಕ ಕ್ರಿಕೆಟ್‌ನ ಬೆಸ್ಟ್ ಫೀಲ್ಡರ್ ಹೆಸರಿಸಿದ ಆಸಿಸ್ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್

Steve Smith Names The Best Fielder In Modern Era

ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್ ಟೆಸ್ಟ್ ಕ್ರಿಕೆಟ್‌ನಲ್ಲಿ ಸಾಕಷ್ಟು ದಾಖಲೆಯನ್ನು ತಮ್ಮ ಹೆಸರಿನಲ್ಲಿ ಬರೆಯುತ್ತಿದ್ದಾರೆ. ಬ್ಯಾಟಿಂಗ್ ಮಾತ್ರವಲ್ಲದೆ ಫೀಲ್ಡಿಂಗ್‌ನಲ್ಲೂ ಸ್ಮಿತ್ ಖ್ಯಾತಿಯನ್ನು ಪಡೆದುಕೊಂಡಿದ್ದಾರೆ. ಆದರೆ ಪ್ರಸಕ್ತ ಕಾಲದಲ್ಲಿ ಅತ್ಯುತ್ತಮ ಫೀಲ್ಡರ್ ಯಾರು ಎಂದು ಸ್ಮಿತ್ ಹೆಸರಿಸಿದ್ದಾರೆ.

ಬ್ರಾಡ್ಮನ್ ನಂತರ ಗ್ರೇಟೆಸ್ಟ್ ಎನಿಸಬಲ್ಲ ಅರ್ಹತೆ ಈ ಭಾರತೀಯನಿಗೆ ಮಾತ್ರ: ಸಂಗಕ್ಕರಬ್ರಾಡ್ಮನ್ ನಂತರ ಗ್ರೇಟೆಸ್ಟ್ ಎನಿಸಬಲ್ಲ ಅರ್ಹತೆ ಈ ಭಾರತೀಯನಿಗೆ ಮಾತ್ರ: ಸಂಗಕ್ಕರ

ಸ್ಮಿತ್ ಹೆಸರಿಸಿದ ಆ ಫೀಲ್ಡರ್ ಭಾರತೀಯನೇ ಎಂಬುವುದು ಭಾರತೀಯ ಕ್ರಿಕೆಟ್ ಅಭಿಮಾನಿಗಳ ಹೆಮ್ಮೆ. ಸ್ವತಃ ಶ್ರೇಷ್ಠ ಫೀಲ್ಡರ್ ಎನಿಸಿಕೊಂಡಿರುವ ಸ್ಮಿತ್ ಹೆಸರಿಸಿದ ಆ ಶ್ರೇಷ್ಠ ಫೀಲ್ಡರ್ ಯಾರು? ಯಾವ ಭಾರತೀಯ ಫೀಲ್ಡರ್‌ನ ಕ್ಷೇತ್ರ ರಕ್ಷಣೆ ಆಸಿಸ್‌ನ ಶ್ರೇಷ್ಠ ಬ್ಯಾಟ್ಸ್‌ಮನನ್ನು ಸೆಳೆದಿದೆ. ಮುಂದೆ ಓದಿ..

ಜಡ್ಡು ಶ್ರೇಷ್ಠ ಫೀಲ್ಡರ್ ಎಂದ ಸ್ಮಿತ್

ಜಡ್ಡು ಶ್ರೇಷ್ಠ ಫೀಲ್ಡರ್ ಎಂದ ಸ್ಮಿತ್

ಪ್ರಸ್ತುತ ಕಾಲದ ಶ್ರೇಷ್ಟ ಪೀಲ್ಡರ್ ಯಾರು ಎಂಬ ಪ್ರಶ್ನೆಗೆ ಟೀಮ್ ಇಂಡಿಯಾದ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರನ್ನು ಹೆಸರಿಸಿದ್ದಾರೆ ಸ್ಟೀವ್ ಸ್ಮಿತ್. ಪ್ರಸಕ್ತ ಕಾಲದ ಶ್ರೇಷ್ಠ ಫೀಲ್ಡರ್‌ಗಳಲ್ಲಿ ರವೀಂದ್ರ ಜಡೇಜಾ ಮೊದಲ ಸ್ಥಾನವನ್ನು ಪಡೆದುಕೊಳ್ಳುತ್ತಾರೆ ಎಂದಿದ್ದಾರೆ.

ಭಾರತೀಯ ಕ್ರಿಕೆಟ್‌ನ ಟ್ರಂಪ್ ಕಾರ್ಡ್

ಭಾರತೀಯ ಕ್ರಿಕೆಟ್‌ನ ಟ್ರಂಪ್ ಕಾರ್ಡ್

ಸ್ಟೀವ್ ಸ್ಮಿತ್ ಅವರ ಆಯ್ಕೆಯನ್ನು ಹೆಚ್ಚಿನ ಅಭಿಮಾನಿಗಳು ನಿರಾಕರಿಸಲಾರರು. ಯಾಕೆಂದರೆ ಜಡೇಜಾ ತನ್ನ ಚುರುಕಿನ ಫೀಲ್ಡಿಂಗ್‌ನಿಂದ ಅದೆಷ್ಟೋ ಬಾರಿ ಟೀಮ್ ಇಂಡಿಯಾ ಬ್ರೇಕ್ ನೀಡಿದ್ದಾರೆ. ಎದುರಾಳಿಗಳನ್ನು ದಂಗು ಬಡಿಸಿದ್ದಾರೆ. ಅದೇ ಕಾರಣಕ್ಕೆ ಸ್ಟೀವ್ ಸ್ಮಿತ್ ಜಡೇಜಾ ಹೆಸರನ್ನು ಆಯ್ಕೆ ಮಾಡಿದ್ದಾರೆ.

ಆಲ್‌ರೌಂಡರ್ ಆಗಿ ಜಡ್ಡು ಮಿಂಚು

ಆಲ್‌ರೌಂಡರ್ ಆಗಿ ಜಡ್ಡು ಮಿಂಚು

ಸದ್ಯ ವಿಶ್ವ ಕ್ರಿಕೆಟ್‌ನಲ್ಲಿ ರವೀಂದ್ರ ಜಡೇಜಾ ಅತ್ಯುತ್ತಮ ಆಲ್‌ರೌಂಡರ್ ಅಂಬ ಖ್ಯಾತಿಗೂ ಒಳಗಾಗಿದ್ದಾರೆ. 31 ವರ್ಷದ ಈ ಆಲ್‌ರೌಂಡರ್ ಟೀಮ್ ಇಂಡಿಯಾ ಪರವಾಗಿ 165 ಏಕದಿನ, 49 ಟೆಸ್ಟ್ ಮತ್ತು 49 ಟಿ20 ಪಂದ್ಯಗಳನ್ನು ಆಡಿದ್ದಾರೆ.

ಬ್ಯಾಟಿಂಗ್ ಮೂಲವೂ ತಂಡಕ್ಕೆ ಆಸರೆ

ಬ್ಯಾಟಿಂಗ್ ಮೂಲವೂ ತಂಡಕ್ಕೆ ಆಸರೆ

ಬೌಲಿಂಗ್ ನಲ್ಲಿ ಕರಾಮತ್ತು ಮಾಡುವ ಜಡೇಜಾ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್‌ನಲ್ಲೂ ಟೀಮ್ ಇಂಡಿಯಾ ಪಾಲಿಗೆ ಆಪತ್ಭಾಂಧವನಾಗಿ ಮಿಂಚಿದ್ದಾರೆ. ಅದರಲ್ಲೂ ಕಳೆದ 2019ರ ಏಕದಿನ ವಿಶ್ವಕಪ್‌ನ ಸೆಮಿ ಫೈನಲ್ ಪಂದ್ಯದಲ್ಲಿ ಅಗ್ರ ಕ್ರಮಾಂಕದ ವಿಕೆಟ್ ಕಳೆದುಕೊಂಡಿದ್ದಾಗ ಜಡೇಜಾ ಅಂತಿಮ ಹಂತದವರೆಗೂ ಹೋರಾಡಿದ್ದು ಭಾರತೀಯ ಕ್ರಿಕೆಟಿಗರ ಪಾಲಿಗೆ ಅವಿಸ್ಮರಣೀಯ. ಏಕಾಂಗಿಯಾಗಿ ಹೋರಾಟವನ್ನು ನಡೆಸಿದ್ದ ಜಡ್ಡು, ಅಂದು 77ರನ್‌ಗಳ ಕಾಣಿಕೆಯನ್ನು ನೀಡಿದ್ದರೂ ಟೀಮ್ ಇಂಡಿಯಾವನ್ನು ಗೆಲ್ಲಿಸಲು ಸಾಧ್ಯವಾಗಿರಲಿಲ್ಲ.

Story first published: Monday, June 15, 2020, 15:45 [IST]
Other articles published on Jun 15, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X