ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಬ್ಬರು ಕನ್ನಡಿಗರನ್ನು ಪ್ರಮುಖ ಆಟಗಾರರ ಅಲಭ್ಯತೆಯನ್ನು ತುಂಬಬಲ್ಲ ಆಟಗಾರರು ಎಂದ ಸ್ಟೀವ್ ಸ್ಮಿತ್

Steve Smith names two India batsmen who can fill the void of big stars

ಆಸ್ಟ್ರೇಲಿಯಾ ವಿರುದ್ಧದ ಸರಣಿ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಆದರೆ ಈ ಬಾರಿಯ ಸರಣಿಯಲ್ಲಿ ಭಾರತ 2018-19ರ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡ ಎದುರಿಸುತ್ತಿದ್ದ ಸಮಸ್ಯೆಯನ್ನು ಎದುರಿಸುತ್ತಿದೆ. ಅಂದಿನ ಆಸ್ಟ್ರೇಲಿಯಾ ತಂಡದಲ್ಲಿ ಡೇವಿಡ್ ವಾರ್ನರ್ ಹಾಗೂ ಸ್ಟೀವ್ ಸ್ಮಿತ್ ಬಾಲ್ ಟ್ಯಾಂಪರಿಂಗ್ ಪ್ರಕರಣದಲ್ಲಿ ಸಿಲುಕಿ ನಿಷೇಧಕ್ಕೆ ಒಳಗಾಗಿದ್ದ ಕಾರಣ ತಂಡದಲ್ಲಿರಲಿಲ್ಲ. ಆದರೆ ಈ ಬಾರಿಯ ಸರಣಿಯಲ್ಲಿ ಭಾರತ ತಂಡ ಬೇರೆಯದೇ ಕಾರಣಕ್ಕೆ ಪ್ರಮುಖ ಆಟಗಾರರ ಸೇವೆಯನ್ನು ಪಡೆಯುತ್ತಿಲ್ಲ.

ವಿರಾಟ್ ಕೊಹ್ಲಿ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಮಾತ್ರವೇ ಕಣಕ್ಕಿಳಿಯುತ್ತಿದ್ದಾರೆ. ಬಳಿಕ ಪಿತೃತ್ವದ ರಜೆತ ಮೇಲೆ ಕೊಹ್ಲಿ ತವರಿಗೆ ಮರಳಲಿದ್ದಾರೆ. ಮತ್ತೊಂದೆಡೆ ಟೀಮ್ ಇಂಡಿಯಾದ ಅನುಭವಿ ಆಟಗಾರ ರೋಹಿತ್ ಶರ್ಮಾ ಟೆಸ್ಟ್ ತಂಡವನ್ನು ಕೂಡ ಸೇರಿಕೊಳ್ಳುವುದು ಬಹುತೇಕ ಅನುಮಾನವೆನಿಸಿದೆ. ಇವರ ಜೊತೆಗೆ ಇಶಾಂತ್ ಶರ್ಮಾ, ವೃದ್ದಿಮಾನ್ ಸಾಹಾ ಕೂಡ ಗಾಯಗೊಂಡವರ ಸಾಲಿನಲ್ಲಿದ್ದಾರೆ.

ಭಾರತ vs ಆಸ್ಟ್ರೇಲಿಯಾ: ರೋಹಿತ್ ಬದಲು ಶ್ರೇಯಸ್‌ಗೆ ಟೆಸ್ಟ್‌ನಲ್ಲಿ ಸ್ಥಾನ?!ಭಾರತ vs ಆಸ್ಟ್ರೇಲಿಯಾ: ರೋಹಿತ್ ಬದಲು ಶ್ರೇಯಸ್‌ಗೆ ಟೆಸ್ಟ್‌ನಲ್ಲಿ ಸ್ಥಾನ?!

ಆದರೆ ಈ ಸರಣಿಯಲ್ಲಿ ಭಾರತ ತಂಡದಲ್ಲಿ ಪ್ರಮುಖ ಆಟಗಾರರ ಸೇವೆ ಇಲ್ಲದಿದ್ದರೂ ತಂಡದ ಮೀಸಲು ಪಡೆ ಅತ್ಯುತ್ತಮವಾಗಿದೆ ಎಂದು ಆಸ್ಟ್ರೇಲಿಯಾದ ಆಟಗಾರ ಸ್ಟೀವ್ ಸ್ಮಿತ್ ಹೇಳಿಕೆಯನ್ನು ನೀಡಿದ್ದಾರೆ.

ಪ್ರಮುಖ ಆಟಗಾರರ ಅಲಭ್ಯತೆ

ಪ್ರಮುಖ ಆಟಗಾರರ ಅಲಭ್ಯತೆ

ಭಾರತ ತಂಡದ ಪ್ರಮುಖ ಆಟಗಾರರು ಈ ಬಾರಿಯ ಸರಣಿಯಲ್ಲಿ ಪೂರ್ಣ ಪ್ರಮಾಣದಲ್ಲಿ ಕಣಕ್ಕಿಳಿಯದಿರಬಹುದು. ಆ ಆಟಗಾರರ ಅಲಬ್ಯತೆ ತಂಡದಲ್ಲಿ ದೊಡ್ಡ ರಂಧ್ರವನ್ನು ಉಂಟುಮಾಡಲಿದೆ. ಆದರೆ ಆ ಸ್ಥಾನವನ್ನು ತುಂಬಬಲ್ಲ ಸಮರ್ಥ ಆಟಗಾರರು ಭಾರತೀಯ ತಂಡದಲ್ಲಿ ಇದ್ದಾರೆ ಎಂದು ಸ್ಟೀವ್ ಸ್ಮಿತ್ ಅಭಿಪ್ರಾಯಪಟ್ಟಿದ್ದಾರೆ.

ಇಬ್ಬರು ಆಟಗಾರರನ್ನು ಉಲ್ಲೇಖಿಸಿದ ಸ್ಮಿತ್

ಇಬ್ಬರು ಆಟಗಾರರನ್ನು ಉಲ್ಲೇಖಿಸಿದ ಸ್ಮಿತ್

ಟೀಮ್ ಇಂಡಿಯಾದಲ್ಲಿ ಪ್ರಮುಖ ಆಟಗಾರರ ಅಲಭ್ಯತೆಯಲ್ಲಿ ಆ ಸ್ಥಾನವನ್ನು ತುಂಬಲು ಸಮರ್ಥ ಆಟಗಾರರ ಪಡೆ ಭಾರತ ತಂಡದಲ್ಲಿ ಇದೆ ಎಂದು ಸ್ಟೀವ್ ಸ್ಮಿತ್ ಹೇಳಿದ್ದಾರೆ. ಟೀಮ್ ಇಂಡಿಯಾದ ಆಟಗಾರರಾದ ಕೆಎಲ್ ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಅವರು ಐಪಿಎಲ್‌ನಲ್ಲಿ ಕಂಡ ಯಶಸ್ಸನ್ನು ಹೇಳಿದರು. "ಭಾರತ ತಂಡದ ಸೌಂದರ್ಯವೇ ಅಂತಾದ್ದು, ಅಲ್ಲಿ ಸಾಕಷ್ಟು ಉತ್ಕೃಷ್ಟ ಗುಣಮಟ್ಟದ ಆಟಗಾರರು ಸರದಿಯಲ್ಲಿದ್ದಾರೆ" ಎಂದು ಸ್ಮಿತ್ ವಿವರಿಸಿದ್ದಾರೆ.

ಗುಣಮಟ್ಟದ ಆಟಗಾರರು ಇದ್ದಾರೆ

ಗುಣಮಟ್ಟದ ಆಟಗಾರರು ಇದ್ದಾರೆ

"ಐಪಿಎಲ್‌ನಲ್ಲಿ ಮಯಾಂಕ್ ಅಗರ್ವಾಲ್ ಅವರಂತಾ ಆಟಗಾರ ನಿಡಿದ ಪ್ರದರ್ಶನವನ್ನು ನೀವು ಗಮಿಸಿದ್ದೀರಿ, ಅದ್ಭುತವಾಗಿತ್ತು. ಅಗ್ರ ಕ್ರಮಾಂಕದಲ್ಲಿ ಕೆಎಲ್ ರಾಹುಲ್ ಕೂಡ ಶ್ರೇಷ್ಠ ಪ್ರದರ್ಶನವನ್ನು ನೀಡುತ್ತಾರೆ. ಪ್ರಮುಖ ಆಟಗಾರರ ಅಲಭ್ಯತೆ ಉಂಟಾದರೂ ಅವರನ್ನು ತುಂಬಲು ಗುಣಮಟ್ಟದ ಆಟಗಾರರ ಬಳಗವೇ ಟೀಮ್ ಇಂಡಿಯಾದಲ್ಲಿ ಇದೆ" ಎಂದು ಸ್ಟೀವ್ ಸ್ಮಿತ್ ಹೇಳಿದ್ದಾರೆ.

ಟೆಸ್ಟ್‌ಗೆ ಕೊಹ್ಲಿ ಅಲಭ್ಯತೆ ಬಗ್ಗೆ ಸ್ಮಿತ್ ಮಾತು

ಟೆಸ್ಟ್‌ಗೆ ಕೊಹ್ಲಿ ಅಲಭ್ಯತೆ ಬಗ್ಗೆ ಸ್ಮಿತ್ ಮಾತು

ಇನ್ನು ಇದೇ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಬಗ್ಗೆ ಸ್ಟೀವ್ ಸ್ಮಿತ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವಿರಾಟ್ ಕೊಹ್ಲಿ ಅದ್ಭುತವಾದ ಆಟಗಾರ. ಕಳೆದ ಹಲವು ವರ್ಷಗಳಿಂದ ನಿರಂತರವಾಗಿ ತಂಡಕ್ಕೆ ಶ್ರೇಷ್ಠ ಪ್ರದರ್ಶನವನ್ನು ನೀಡಿಕೊಂಡು ಬರುತ್ತಿದ್ದಾರೆ. ವಿರಾಟ್ ಕೊಹ್ಲಿ ಭಾರತೀಯ ತಂಡಕ್ಕೆ ಪೂರ್ಣ ಪ್ರಮಾಣದಲ್ಲಿ ಲಭ್ಯರಾಗದೇ ಇರುವುದು ತಂಡಕ್ಕೆ ಖಂಡಿತಾ ಹಿನ್ನಡೆಯಾಗಲಿದೆ. ಆದರೆ ಆ ಸ್ಥಾನವನ್ನು ತುಂಬಬಲ್ಲ ಸಮರ್ಥರು ಭಾರತೀಯ ತಂಡದಲ್ಲಿ ಇದ್ದಾರೆ ಎಂದು ಸ್ಟೀವ್ ಸ್ಮಿತ್ ಹೇಳಿಕೆಯನ್ನು ನೀಡಿದರು.

Story first published: Wednesday, November 25, 2020, 10:01 [IST]
Other articles published on Nov 25, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X