AUS v IND 2020-21: ಏಕದಿನ ಕ್ರಿಕೆಟ್‌ನಲ್ಲಿ ಕೊಹ್ಲಿಗಿಂತ ಸ್ಮಿತ್ ತುಂಬಾ ಅಂತರದಲ್ಲಿಲ್ಲ: ಗೌತಮ್ ಗಂಭೀರ್

ಆಸ್ಟ್ರೇಲಿಯಾ ವಿರುದ್ದದ ಏಕದಿನ ಸೋಲಿನ ಬಳಿಕ ಗೌತಮ್ ಗಂಭೀರ್ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯ ನಾಯಕತ್ವದ ಬಗ್ಗೆ ಟೀಕಿಸಿದ್ದರು. ಈಗ ಆಸ್ಟ್ರೇಲಿಯಾದ ಪ್ರಮುಖ ಆಟಗಾರ ಸ್ಟೀವ್ ಸ್ಮಿತ್ ಹಾಗೂ ವಿರಾಟ್ ಕೊಹ್ಲಿಯ ಏಕದಿನ ಕ್ರಿಕೆಟ್‌ನ ಪ್ರದರ್ಶನದ ಬಗ್ಗೆ ಹೋಲಿಕೆಯನ್ನು ಮಾಡಿ ಸ್ಟೀವ್ ಸ್ಮಿತ್ ಏಕದಿನ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿಗಿಂತ ಬಹಳ ಅಂತರದಲ್ಲೇನೂ ಇಲ್ಲ ಎಂದಿದ್ದಾರೆ.

ಟೀಮ್ ಇಂಡಿಯಾ ವಿರುದ್ಧದ ಎರಡು ಏಕದಿನ ಪಂದ್ಯಗಳಲ್ಲಿ ಶತಕವನ್ನು ಬಾರಿಸಿದ ರೀತಿಯನ್ನು ನಂಬುವುದು ಅಸಾಧ್ಯ ಎಂದು ಗೌತಮ್ ಗಂಭೀರ್ ಹೇಳಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಬಂದಿಳಿದು ಸ್ಟೀವ್ ಸ್ಮಿತ್ ಆಡಿದ ರೀತಿ ಅದ್ಭುತವಾಗಿತ್ತು ಎಂದು ಗೌತಮ್ ಗಂಭೀರ್ ಹೇಳಿದ್ದಾರೆ.

ಪ್ರೇಕ್ಷಕರ ಮುಂದೆ ಆಡಿದ್ದು, ಒಡಿಐ ಸರಣಿ ಗೆದ್ದಿದ್ದು ಖುಷಿ ನೀಡಿದೆ: ಫಿಂಚ್

ಮಧ್ಯಮ ಓವರ್‌ನಲ್ಲಿ ಭಾರತದ ವಿರುದ್ಧ ಬ್ಯಾಟಿಂಗ್ ಸುಲಭವಿಲ್ಲ

ಮಧ್ಯಮ ಓವರ್‌ನಲ್ಲಿ ಭಾರತದ ವಿರುದ್ಧ ಬ್ಯಾಟಿಂಗ್ ಸುಲಭವಿಲ್ಲ

ಭಾರತದ ವಿರುದ್ಧ ಮಧ್ಯಮ ಓವರ್‌ಗಳಲ್ಲಿ ಕಣಕ್ಕಿಳಿದು ಬ್ಯಾಟಿಂಗ್ ನಡೆಸುವುದು ಸುಲಭವಲ್ಲ. ಯಾಕೆಂದರೆ ಭಾರತದ ಸ್ಪಿನ್ನರ್‌ಗಳು ಕಠಿಣವಾಗಿರುತ್ತಾರೆ. ಆದರೆ ಸ್ಟೀವ್ ಸ್ಮಿತ್ ನಿರಾಯಾಸವಾಗಿ ಬೌಲರ್‌ಗಳ ಮೇಲೆ ದಂಡೆತ್ತಿ ಹೋಗಿ ಸತತ ಎರಡು ಶತಕವನ್ನು ದಾಖಲಿಸಿದ್ದಾರೆ ಎಂದಿದ್ದಾರೆ.

ಶುದ್ಧ ಶಾಸ್ಟ್ರೀಯವಾದ ಆಟ

ಶುದ್ಧ ಶಾಸ್ಟ್ರೀಯವಾದ ಆಟ

"ಇದೊಂದು ಶುದ್ಧ ಶಾಸ್ತ್ರೀಯವಾದ ಆಟವಾಗಿತ್ತು. ಆತ ವಿರಾಟ್ ಕೊಹ್ಲಿಗಿಂತ ತುಂಬಾ ದೂರದಲ್ಲೇನೂ ಇಲ್ಲ. ನಾವು ವಿರಾಟ್ ಕೊಹ್ಲಿಯ ಬಗ್ಗೆ ಯಾವಾಗಲೂ ಮಾತನಾಡುತ್ತೇವೆ. ವಿರಾಟ್ ಕೊಹ್ಲಿ ಯಾವಾಗಲೂ ವಿಶ್ವದ ನಂಬರ್ 1 ಬ್ಯಾಟ್ಸ್‌ಮನ್ ಆಗಿಯೇ ಮುಂದುವರಿಯುತ್ತಾರೆಯೇ? ಸ್ಮಿತ್ ಅದಕ್ಕಿಂತ ತುಂಬಾ ಹಿಂದೆ ಉಳಿದಿಲ್ಲ. 18 ಓವರ್‌ಗಳಲ್ಲಿ ಶತಕವನ್ನು ಬಾರಿಸುವುದು ಹಾಗೂ ಸತತವಾಗಿ ಎರಡು ಶತಕವನ್ನು ಬಾರಿಸುವುದು ಸಾಮಾನ್ಯವಾದ ಮಾತಲ್ಲ" ಎಂದು ಗಂಭೀರ್ ಹೇಳಿದ್ದಾರೆ.

ಅಂಕಿಸಂಖ್ಯೆಗಳಲ್ಲಿ ದೊಡ್ಡ ಅಂತರವಿದೆ

ಅಂಕಿಸಂಖ್ಯೆಗಳಲ್ಲಿ ದೊಡ್ಡ ಅಂತರವಿದೆ

"ಹೌದು ವಿರಾಟ್ ಕೊಹ್ಲಿ ಅತ್ಯುತ್ತಮ ಅಂಕಿಸಂಖ್ಯೆಗಳನ್ನು ಹೊಂದಿದ್ದಾರೆ. ಈ ಅಂಕಿಗಳಲ್ಲಿ ವಿರಾಟ್ ಕೊಹ್ಲಿ ಮತ್ತು ಸ್ಮಿತ್ ಮಧ್ಯೆ ತುಂಬಾ ದೊಡ್ಡ ಅಂತರವಿದೆ. ಆದರೆ ಕಳೆದ ಎರಡು ಪಂದ್ಯಗಳಲ್ಲಿ ಸ್ಟೀವ್ ಸ್ಮಿತ್ ಬೀರಿದ ಪರಿಣಾಮವನ್ನು ನೋಡಿ. ಅದು ನಿಜಕ್ಕೂ ನಂಬಲು ಅಸಾಧ್ಯ" ಎಂದು ಗಂಭೀರ್ ವಿವರಿಸಿದ್ದಾರೆ.

ಕೊಹ್ಲಿ ಬಗ್ಗೆ ಗಂಭೀರ್ ನಿರಂತರ ಟೀಕೆ

ಕೊಹ್ಲಿ ಬಗ್ಗೆ ಗಂಭೀರ್ ನಿರಂತರ ಟೀಕೆ

ಗೌತಮ್ ಗಂಭೀರ್ ವಿರಾಟ್ ಕೊಹ್ಲಿ ಪ್ರದರ್ಶನ ಹಾಗೂ ನಾಯಕತ್ವದ ಬಗ್ಗೆ ಹಲವು ಸಂದರ್ಭಗಳಲ್ಲಿ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಸದ್ಯ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಸರಣಿಯಲ್ಲಿ ನಾಯಕನಾಗಿ ತೆಗೆದುಕೊಂಡ ನಿರ್ಧಾರಗಳ ಬಗ್ಗೆಯೂ ಪ್ರಶ್ನಿಸಿರುವ ಗಂಭೀರ್ ಕೊಹ್ಲಿಯ ನಿರ್ಧಾರಗಳಿಗೆ ಕಾರಣಗಳೇ ತಿಳಿಯುತ್ತಿಲ್ಲ ಎಂದಿದ್ದರು.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
 

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Tuesday, December 1, 2020, 8:54 [IST]
Other articles published on Dec 1, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X