ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಚಿತ್ರ ಬ್ಯಾಟಿಂಗ್ ಶೈಲಿಯ ರಹಸ್ಯ ಬಹಿರಂಗ ಪಡಿಸಿದ ಸ್ಟೀವ್ ಸ್ಮಿತ್

Steve Smith Reveals Reason Behind Unusual Batting Stance

ಸ್ಟೀವ್ ಸ್ಮಿತ್ ಟೆಸ್ಟ್ ಕ್ರಿಕೆಟ್‌ನ ನಂಬರ್ 1 ಬ್ಯಾಟ್ಸ್‌ಮನ್. ಟೆಸ್ಟ್ ಕ್ರಿಕೆಟ್‌ನಲ್ಲಿ ಅಮೋಘ ಬ್ಯಾಟಿಂಗ್ ಮಾತ್ರವಲ್ಲ ತಮ್ಮ ವಿಚಿತ್ರ ಬ್ಯಾಟಿಂಗ್ ಮೂಲಕವೂ ಸುದ್ದಿಯಾಗಿದ್ದಾರೆ. ಈಗ ಸ್ಟೀವ್ ಸ್ಮಿತ್ ತಮ್ಮ ವಿಚಿತ್ರ ಶೈಲಿಯ ಬ್ಯಾಟಿಂಗ್‌ನ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ.

ಈ ಶೈಲಿಯ ಹಿಂದೆ ಹಲವು ಸಂಗತಿಗಳು ಅಡಗಿವೆ ಎಂದಿದ್ದಾರೆ. ಪಂದ್ಯದ ಪರಿಸ್ಥಿತಿಯನ್ನು ಗಮನಿಸಿಕೊಂಡು, ಬೌಲರನ್ನು ಮತ್ತು ಪಿಚ್ಚನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ವಿಚಿತ್ರ ಶೈಲಿಯನ್ನು ಅಳವಡಿಸಿಕೊಳ್ಳುವುದಾಗಿ ಸ್ಟೀವ್ ಸ್ಮಿತ್ ಹೇಳಿಕೊಂಡಿದ್ದಾರೆ.

ಸ್ಮಿತ್ ಬಿಚ್ಚಿಟ್ಟ ಬ್ಯಾಟಿಂಗ್ ರಹಸ್ಯವೇನು ಮುಂದೆ ಓದಿ..

ಗುಟ್ಟು ಬಹಿರಂಗ

ಗುಟ್ಟು ಬಹಿರಂಗ

ಯಾರು ಬೌಲಿಂಗ್‌ ಮಾಡುತ್ತಿದ್ದಾರೆ. ಪಿಚ್‌ ಹೇಗಿದೆ. ಅಲ್ಲಿ ನಾನು ಹೇಗೆ ರನ್‌ ಗಳಿಸಬಹುದು. ನನ್ನನ್ನು ಔಟ್‌ ಮಾಡಲು ಏನೆಲ್ಲಾ ತಂತ್ರ ರೂಪಿಸಿದ್ದಾರೆ ಈ ಎಲ್ಲವನ್ನೂ ದೃಷ್ಟಿಯಲ್ಲಿಟ್ಟುಕೊಂಡಿರುತ್ತೇನೆ. ಸಾಮಾನ್ಯವಾಗಿ ನನ್ನ ಹಿಂದಿನ ಕಾಲನ್ನು ಆಫ್‌ಸ್ಟಂಪ್‌ ಹತ್ತಿರ ಇಟ್ಟಿರುತ್ತೇನೆ. ಕೆಲ ಸಮಯ ಆಫ್‌ಸ್ಟಂಪ್‌ನ ಆಚೆಗೂ ಇರುತ್ತದೆ. ಈ ಮೂಲಕ ಕಣ್ಣುಗಳ ಅಂದಾಜಿನಲ್ಲಿ ಆಫ್‌ ಸ್ಟಂಪ್‌ ಕಡೆಗೆ ಬರುವ ಚೆಂಡು ಬ್ಯಾಟ್‌ನಿಂದ ತಪ್ಪಿಸಿಕೊಂಡರೂ ಆಫ್‌ಸ್ಟಂಪ್‌ಗೆ ಬಡಿಯದಂತೆ ಎಚ್ಚರ ವಹಿಸುತ್ತೇನೆ' ಎಂದು ಗುಟ್ಟನ್ನು ಬಹಿರಂಗ ಪಡಿಸಿದ್ದಾರೆ

ನಂಬರ್ 1 ಟೆಸ್ಟ್ ಬ್ಯಾಟ್ಸ್‌ಮನ್

ನಂಬರ್ 1 ಟೆಸ್ಟ್ ಬ್ಯಾಟ್ಸ್‌ಮನ್

ಬಾಲ್‌ ಟ್ಯಾಂಪರಿಂಗ್ ಪ್ರಕರಣದಲ್ಲಿ ಸಿಲುಕಿ ಸ್ಟೀವ್ ಸ್ಮಿತ್ ಒಂದು ವರ್ಷ ನಿಶೇಧಕ್ಕೆ ಒಳಗಾಗಿದ್ದರು. ಈ ಸಂದರ್ಭದಲ್ಲಿ ಸ್ಮಿತ್ ತಮ್ಮ ನಂಬರ್ 1 ಪಟ್ಟವನ್ನು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಬಿಟ್ಟುಕೊಟ್ಟಿದ್ದರು. ಮರಳಿ ಬಂದು ಈಗ ಮತ್ತೆ ವಿಶ್ವ ಟೆಸ್ಟ್ ಕ್ರಿಕೆಟ್‌ನಲ್ಲಿ ನಂಬರ್ 1 ಸ್ಥಾನವನ್ನು ಗಳಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ವಿಕೆಟ್ ಕೊಡದಂತೆ ಕಾಪಾಡಲು ಈ ಯತ್ನ

ವಿಕೆಟ್ ಕೊಡದಂತೆ ಕಾಪಾಡಲು ಈ ಯತ್ನ

ಟೆಸ್ಟ್‌ ಮತ್ತು ಏಕದಿನ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ತಂಡದ ರನ್‌ ಮಷೀನ್‌ ಆಗಿರುವ ಸ್ಟೀವ್‌ ಸ್ಮಿತ್‌, ತಮ್ಮ ಆಫ್‌ ಸ್ಟಂಪ್‌ ಕಾಯ್ದುಕೊಂಡು ವಿಕೆಟ್‌ ನೀಡದೇ ಇರುವ ಪ್ರಯತ್ನ ನಡೆಸಲು ಇಂಥದ್ದೊಂದು ವಿಚಿತ್ರ ಬ್ಯಾಟಿಂಗ್‌ ಶೈಲಿ ಅಭ್ಯಾಸ ಮಾಡಿಕೊಂಡಿರುವುದಾಗಿ ಹೇಳಿಕೊಂಡಿದ್ದಾರೆ.

ಸಂದರ್ಶನದಲ್ಲಿ ಬಹಿರಂಗ

ಸಂದರ್ಶನದಲ್ಲಿ ಬಹಿರಂಗ

ಟ್ವಿಟ್ಟರ್‌ ಸಂದರ್ಶನದಲ್ಲಿ ಸ್ಟೀವ್ ಸ್ಮಿತ್ ಪಾಲ್ಗೊಂಡಿದ್ದರು. ಈ ಸಂದರ್ಶನದ ಸಂದರ್ಭದಲ್ಲಿ ಸ್ಟೀವ್ ಸ್ಮಿತ್ ತಮ್ಮ ವಿಚಿತ್ರ ಬ್ಯಾಟಿಂಗ್ ಶೈಲಿಯ ಬಗ್ಗೆ ಮಾತನ್ನಾಡಿದ್ದಾರೆ. ಅದರ ಕಾರಣಗಳನ್ನು ಬಹಿರಂಗಪಡಿಸಿದ್ದಾರೆ. ಆಸ್ಟ್ರೇಲಿಯಾ ಪರ ಸ್ಮಿತ್‌ ಈವರೆಗೆ 73 ಟೆಸ್ಟ್‌ ಪಂದ್ಯಗಳನ್ನಾಡಿದ್ದು 7227 ರನ್‌ಗಳನ್ನು ಬಾರಿಸಿದ್ದಾರೆ.

Story first published: Sunday, April 12, 2020, 13:44 [IST]
Other articles published on Apr 12, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X