ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ಆಡಲು ಸ್ಟೀವ್ ಸ್ಮಿತ್ ರೆಡಿ, ಟಿ20 ವಿಶ್ವಕಪ್ ವೇಳೆ ಆ್ಯರನ್ ಫಿಂಚ್ ಚೇತರಿಕೆ ನಿರೀಕ್ಷೆ

Steve Smith set to play in IPL, Aaron Finch may return for T20 World Cup

ಮೆಲ್ಬರ್ನ್: ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟ್ಸ್‌ಮನ್‌ ಸ್ಟೀವ್ ಸ್ಮಿತ್ ಮುಂಬರಲಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್)ನಲ್ಲಿ ಆಡಲು ಸಿದ್ಧರಾಗಿದ್ದಾರೆ. ಮೊಣಕೈ ಗಾಯಕ್ಕೀಡಾಗಿದ್ದ ಸ್ಮಿತ್ ಐಪಿಎಲ್ ಆರಂಭಿಕ ಹಂತದಲ್ಲಿ ಕೊಂಚ ಮೂಲೆ ಗುಂಪಾಗಿದ್ದರು. ಆದರೆ ದ್ವಿತೀಯ ಹಂತದ ಐಪಿಎಲ್ ವೇಳೆ ಸ್ಮಿತ್ ವಾಪಸ್ಸಾಗಲಿದ್ದಾರೆ. ಆಸ್ಟ್ರೇಲಿಯಾ ಸೀಮಿತ ಓವರ್‌ಗಳ ನಾಯಕ ಆ್ಯರನ್ ಫಿಂಚ್ ಕೂಡ ಮುಂಬರಲಿರುವ ಟಿ20 ವಿಶ್ವಕಪ್‌ ವೇಳೆ ಸಂಪೂರ್ಣವಾಗಿ ಚೇತರಿಸಿಕೊಳ್ಳುವ ನಿರೀಕ್ಷೆಯಿದೆ.

ಪಾಕಿಸ್ತಾನ vs ವಿಂಡೀಸ್: ಪರದೆ ಮೇಲೆ ನಿರ್ಣಯ ಪ್ರಕಟಿಸುವ ಬದಲು ಬೇರೆ ವಿಷಯವನ್ನು ಹರಿಬಿಟ್ಟ ಥರ್ಡ್ ಅಂಪೈರ್!ಪಾಕಿಸ್ತಾನ vs ವಿಂಡೀಸ್: ಪರದೆ ಮೇಲೆ ನಿರ್ಣಯ ಪ್ರಕಟಿಸುವ ಬದಲು ಬೇರೆ ವಿಷಯವನ್ನು ಹರಿಬಿಟ್ಟ ಥರ್ಡ್ ಅಂಪೈರ್!

ವೆಸ್ಟ್‌ ಇಂಡೀಸ್ ಮತ್ತು ಬಾಂಗ್ಲಾದೇಶ ಪ್ರವಾಸ ಸರಣಿಯ ಪಂದ್ಯಗಳನ್ನು ಸ್ಟೀವ್ ಸ್ಮಿತ್ ತಪ್ಪಿಸಿಕೊಂಡಿದ್ದರು. ಮೊಣಕೈ ಗಾಯಕ್ಕೀಡಾಗಿದ್ದರಿಂದ ಆ ಎರಡೂ ಪ್ರವಾಸ ಪಂದ್ಯಗಳಲ್ಲಿ ಸ್ಮಿತ್‌ ಆಡಲಾಗಿರಲಿಲ್ಲ. ಅಂದ್ಹಾಗೆ ಸ್ಮಿತ್‌ಗೆ ಈ ಗಾಯದ ಸಮಸ್ಯೆ ಕಳೆದ ವರ್ಷದಿಂದಲೂ ಕಾಡುತ್ತಲೇಯಿತ್ತು.

ನ್ಯೂ ಸೌತ್‌ ವೇಲ್ಸ್‌ನಲ್ಲಿ ಸ್ಮಿತ್ ಸದ್ಯ ನೆಟ್ ಅಭ್ಯಾಸ

ನ್ಯೂ ಸೌತ್‌ ವೇಲ್ಸ್‌ನಲ್ಲಿ ಸ್ಮಿತ್ ಸದ್ಯ ನೆಟ್ ಅಭ್ಯಾಸ

32ರ ಹರೆಯದ ಸ್ಟೀವ್ ಸ್ಮಿತ್ ಈಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. ಅರ್ಧಕ್ಕೆ ನಿಲ್ಲಿಸಲ್ಪಟ್ಟು ಪುನರಾರಂಭಗೊಳ್ಳಲಿರುವ ಐಪಿಎಲ್ ಟೂರ್ನಿಯಲ್ಲಿ ಸ್ಮಿತ್ ಆಡಲಿದ್ದಾರೆ. ನ್ಯೂ ಸೌತ್‌ ವೇಲ್ಸ್‌ನಲ್ಲಿ ಸ್ಮಿತ್ ಸದ್ಯ ನೆಟ್ ಅಭ್ಯಾಸ ನಡೆಸುತ್ತಿದ್ದಾರೆ. ಸೆಪ್ಟೆಂಬರ್‌-ಅಕ್ಟೋಬರ್‌ನಲ್ಲಿ ನಡೆಯಲಿರುವ ಐಪಿಎಲ್‌ನಲ್ಲಿ ಸ್ಮಿತ್ ಪಾಲ್ಗೊಳ್ಳಲಿದ್ದಾರೆ ಎಂದು cricket.com.au. ಹೇಳಿದೆ. ಭಾರತದಲ್ಲಿ ಏಪ್ರಿಲ್ 9ರಂದು ಆರಂಭಗೊಂಡಿದ್ದ ಐಪಿಎಲ್ ಅರ್ಧಕ್ಕೆ ನಿಲ್ಲಿಸಲ್ಪಟ್ಟಿತ್ತು. ಐಪಿಎಲ್ ಫ್ರಾಂಚೈಸಿಗಳಲ್ಲಿ ಕೋವಿಡ್-19 ಪ್ರಕರಣಗಳು ಕಾಣಿಸಿಕೊಂಡಿದ್ದರಿಂದ ಟೂರ್ನಿಯನ್ನು ಅರ್ಧಕ್ಕೆ ನಿಲ್ಲಿಸುವ ನಿರ್ಧಾರಕ್ಕೆ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಬಂದಿತ್ತು.

ಯಾವಾಗ ದ್ವಿತೀಯ ಹಂತದ ಐಪಿಎಲ್?

ಯಾವಾಗ ದ್ವಿತೀಯ ಹಂತದ ಐಪಿಎಲ್?

ಭಾರತದಲ್ಲಿ ನಿಲುಗಡೆಯಾಗಿರುವ ಐಪಿಎಲ್ 2021ರ ಟೂರ್ನಿ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಸೆಪ್ಟೆಂಬರ್‌ 19ರಿಂದ ಅಕ್ಟೋಬರ್‌ 15ರ ವರೆಗೆ ನಡೆಯಲಿದೆ. ಐಪಿಎಲ್ ದ್ವಿತೀಯ ಹಂತದ ಟೂರ್ನಿ ಮುಗಿಯುತ್ತಲೇ ಟಿ20ಐ ವಿಶ್ವಕಪ್‌ ಶುರುವಾಗಲಿದೆ. ವಿಶ್ವಕಪ್‌ ಕೂಡ ಅಸಲಿಗೆ ಭಾರತದಲ್ಲಿ ನಡೆಯಬೇಕಿತ್ತು. ಕೋವಿಡ್ ಕಾರಣದಿಂದಲೇ ಟಿ20 ವಿಶ್ವಕಪ್‌ ಕೂಡ ಯುಎಇಗೆ ಸ್ಥಳಾಂತರಗೊಂಡಿದೆ. ಭಾರತದಲ್ಲಿ ನಡೆದ ಐಪಿಎಲ್ ವೇಳೆ ಒಟ್ಟು 29 ಪಂದ್ಯಗಳು ನಡೆದಿದ್ದವು. ಇನ್ನುಳಿದ 31 ಪಂದ್ಯಗಳು ಯುಎಇಯಲ್ಲಿ ನಡೆಯಲಿವೆ. ನಡೆಯಲಿರುವ 31 ಪಂದ್ಯಗಳಲ್ಲಿ 13 ಪಂದ್ಯಗಳು ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯಲಿವೆ. ಮೊದಲ ಕ್ವಾಲಿಫೈಯರ್ ಮತ್ತು ಫೈನಲ್ ಪಂದ್ಯಗಳು ಇದೇ ಸ್ಟೇಡಿಯಂನಲ್ಲಿ ನಡೆಯಲಿವೆ. ಶಾರ್ಜಾ ಸ್ಟೇಡಿಯಂನಲ್ಲಿ 10 ಪಂದ್ಯಗಳು ನಡೆಯಲಿವೆ. ಇದರಲ್ಲಿ ದ್ವಿತೀಯ ಕ್ವಾಲಿಫೈಯರ್ ಮತ್ತು ಎಲಿಮಿನೇಟರ್ ಪಂದ್ಯ ಸೇರಿದೆ. ಐಪಿಎಲ್ ದ್ವಿತೀಯ ಹಂತದ ಐಪಿಎಲ್ ಪಂದ್ಯಗಳ ವೇಳೆ ಒಟ್ಟು 7 ಡಬಲ್ ಹೆಡ್ಡರ್ ಪಂದ್ಯಗಳು ನಡೆಯಲಿವೆ.

Rashid Khan ಅವರ ಬಳಿ ವಿಶೇಷ ಮನವಿಯನ್ನಿಟ್ಟ ಅಭಿಮಾನಿಗಳು | Oneindia Kannada
ಟಿ20 ವಿಶ್ವಕಪ್‌ ವೇಳೆ ಸಂಪೂರ್ಣ ಚೇತರಿಸಿಕೊಳ್ಳಲಿದ್ದೇನೆ

ಟಿ20 ವಿಶ್ವಕಪ್‌ ವೇಳೆ ಸಂಪೂರ್ಣ ಚೇತರಿಸಿಕೊಳ್ಳಲಿದ್ದೇನೆ

"ಸ್ಮಿತ್ ಚೆನ್ನಾಗಿ ಚೇತರಿಸಿಕೊಳ್ಳುತ್ತಿರುವಂತೆ ಕಾಣುತ್ತಿದೆ. ಕಳೆದ ಕೆಲ ವಾರಗಳಿಂದ ಸ್ಮಿತ್ ತನ್ನ ಬ್ಯಾಟಿಂಗ್‌ ಅನ್ನು ಬಿಲ್ಡಪ್‌ ಮಾಡುತ್ತಿದ್ದಾರೆ ಅನ್ನೋದು ನನಗೆ ಗೊತ್ತಿದೆ. ಅಭ್ಯಾಸಕ್ಕೆ ಅವಕಾಶ ಇಲ್ಲದಾಗ ಸಮಯ ಕಳೆಯೋದು ಎಷ್ಟು ಕಷ್ಟ ಆಗುತ್ತದೆ ಅನ್ನೋದು ನನಗೆ ಗೊತ್ತು. ತನಗಿರುವ ಮಿತಿಯಲ್ಲಿ ಸ್ಮಿತ್ ಚೆನ್ನಾಗಿ ಅಭ್ಯಾಸ ಮಾಡುತ್ತಿದ್ದಾರೆ. ಹಾಗಂತ ಎಲ್ಲೆ ಮೀರಿ ಅಭ್ಯಾಸ ಮಾಡುತ್ತಿಲ್ಲ,' ಎಂದು cricket.com.au ಜೊತೆ ಆ್ಯರನ್ ಫಿಂಚ್ ಹೇಳಿಕೊಂಡಿದ್ದಾರೆ. ವಿಶ್ವಕಪ್‌ ವೇಳೆ ತಾನು ಸಂಪೂರ್ಣ ಫಿಟ್‌ ಆಗಲಿದ್ದೇನೆ ಎಂಬ ಬಗ್ಗೆ ನನಗೆ ನಂಬಿಕೆಯಿದೆ ಎಂದೂ ಫಿಂಚ್ ತಿಳಿಸಿದ್ದಾರೆ. ಈ ಬಾರಿಯ ಐಪಿಎಲ್ ಹರಾಜಿವ ವೇಳೆ ಸ್ಮಿತ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ 2.2 ಕೋಟಿ ರೂ.ಗೆ ಖರೀದಿಸಿತ್ತು. ಇದಕ್ಕೂ ಮುನ್ನ ಸ್ಮಿತ್ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕರಾಗಿದ್ದರು.

Story first published: Wednesday, August 18, 2021, 17:15 [IST]
Other articles published on Aug 18, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X