ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸ್ಟೀವ್ ಸ್ಮಿತ್ ಮುಡಿಗೆ ಐಸಿಸಿ ದಶಕದ ಟೆಸ್ಟ್ ಕ್ರಿಕೆಟರ್ ಗೌರವ

Steve Smith Wins the ICC Men’s Test Cricketer of the Decade

ಸಿಡ್ನಿ: ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಟೆಸ್ಟ್ ಸ್ಪೆಶಾಲಿಷ್ಟ್ ಸ್ಟೀವ್ ಸ್ಮಿತ್‌ಗೆ ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ದಶಕದ ಟೆಸ್ಟ್ ಕ್ರಿಕೆಟರ್ ಗೌರವ ಲಭಿಸಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಚೆಂಡು ವಿರೂಪ ಪ್ರಕರಣದಲ್ಲಿ ಪಾಲ್ಗೊಂಡು ಒಂದು ವರ್ಷದ ನಿಷೇಧ ಶಿಕ್ಷೆ ಅನುಭವಿಸಿರುವ ಸ್ಮಿತ್ ಸದ್ಯ ಮತ್ತೆ ಟೆಸ್ಟ್ ರ್‍ಯಾಂಕಿಂಗ್‌ನಲ್ಲಿ ನಂ.1 ಸ್ಥಾನ ಅಲಂಕರಿಸಿದ್ದಾರೆ.

ಐಸಿಸಿ ಟಿ20 ದಶಕದ ತಂಡದಲ್ಲಿ 4 ಭಾರತೀಯರು, 4 ಎಂಐ ಆಟಗಾರರು!ಐಸಿಸಿ ಟಿ20 ದಶಕದ ತಂಡದಲ್ಲಿ 4 ಭಾರತೀಯರು, 4 ಎಂಐ ಆಟಗಾರರು!

2010ರಿಂದ 2020ರ ವರೆಗೆ 10 ವರ್ಷಗಳಲ್ಲಿ ಸ್ಟೀವ್ ಸ್ಮಿತ್ ಟೆಸ್ಟ್ ಕ್ರಿಕೆಟ್‌ನಲ್ಲಿ 65.79ರ ಸರಾಸರಿಯಂತೆ ಒಟ್ಟು 26 ಶತಗಳು, 28 ಅರ್ಧ ಶತಕಗಳನ್ನು ಬಾರಿಸಿದ್ದಾರೆ. ಐಸಿಸಿ ಪ್ರಶಸ್ತಿಗಳ ವೇಳೆ ಸ್ಮಿತ್ ಟೆಸ್ಟ್ ಕ್ರಿಕೆಟ್‌ನಲ್ಲಿ ಒಟ್ಟು 7040 ರನ್‌ಗಳನ್ನು ಕಲೆ ಹಾಕಿದ್ದರು.

ಸ್ಮಿತ್‌ ಅವರನ್ನು ದಶಕದ ಟೆಸ್ಟ್ ಕ್ರಿಕೆಟರ್ ಆಗಿ ಹೆಸರಿಸಿರುವ ಐಸಿಸಿ, ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ, 'ವಿಭಿನ್ನ, ಪಟ್ಟು ಹಿಡಿದ, ನಂಬಲಸಾಧ್ಯವಾದ ಸ್ಥಿರ ಪ್ರದರ್ಶನ' ಎಂದು ಹೊಗಳಿದೆ. ಸ್ಮಿತ್ ಸದ್ಯ ಭಾರತ-ಆಸ್ಟ್ರೇಲಿಯಾ ಟೆಸ್ಟ್ ಸರಣಿಯಲ್ಲಿ ಆಡುತ್ತಿದ್ದಾರೆ. ಆದರೆ ಈ ಬಾರಿ ಟೆಸ್ಟ್ ಸರಣಿಯಲ್ಲಿ ಅಂಥ ಗಮನಾರ್ಹ ಪ್ರದರ್ಶನವೇನೂ ನೀಡಿಲ್ಲ.

ಚೆಕ್‌ ಮಾಡದ ಹೊರತು ನೀವು ನಂಬಲಾಗದ ಕ್ರಿಕೆಟ್‌ನ 5 ಸತ್ಯ ಸಂಗತಿಗಳು!ಚೆಕ್‌ ಮಾಡದ ಹೊರತು ನೀವು ನಂಬಲಾಗದ ಕ್ರಿಕೆಟ್‌ನ 5 ಸತ್ಯ ಸಂಗತಿಗಳು!

74 ಟೆಸ್ಟ್ ಪಂದ್ಯಗಳನ್ನಾಡಿರುವ ಸ್ಮಿತ್, 62.32ರ ಸರಾಸರಿಯಲ್ಲಿ, 55.19ರ ಸ್ಟ್ರೈಕ್ ರೇಟ್‌ನಂತೆ 7229 ರನ್ ಗಳಿಸಿದ್ದಾರೆ. 26 ಶತಕ, 29 ಅರ್ಧ ಶತಕ, 3 ದ್ವಿಶತಕಗಳನ್ನು ಬಾರಿಸಿದ್ದಾರೆ. ಟೆಸ್ಟ್‌ನಲ್ಲಿ ಸ್ಮಿತ್ ಬಾರಿಸಿರುವ ಅತ್ಯಧಿಕ ವೈಯಕ್ತಿಕ ರನ್ ಅಂದರೆ 239. ಸ್ಮಿತ್‌ಗೀಗ 31ರ ಹರೆಯ.

Story first published: Monday, December 28, 2020, 16:04 [IST]
Other articles published on Dec 28, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X