ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಬಳಿ ಕ್ಷಮೆಯಾಚಿಸಿದ ಡೇಲ್ ಸ್ಟೇನ್‌!

Steyn apologises to Kohli 2019

ಜೊಹಾನ್ಸ್‌ಬರ್ಗ್‌, ಆಗಸ್ಟ್‌ 14: ಮುಂಬರುವ ಭಾರತ ಪ್ರವಾಸದಲ್ಲಿನ ಟೆಸ್ಟ್‌ ಮತ್ತು ಟಿ20 ಸರಣಿಗಳ ಸಲುವಾಗಿ ದಕ್ಷಿಣ ಆಫ್ರಿಕಾ ಕ್ರಿಕೆಟ್‌ ಮಂಡಳಿ ಮಂಗಳವಾರ ತನ್ನ ತಂಡಗಳನ್ನು ಪ್ರಕಟಿಸಿತ್ತು. ಈ ಸಂದರ್ಭದಲ್ಲಿ ಟಿ20 ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾದ ಅನುಭವಿ ವೇಗಿ ಡೇಲ್‌ ಸ್ಟೇನ್‌, ಟ್ವಿಟರ್‌ ಮೂಲಕ ತಮ್ಮ ಬೇಸರ ಹೊರಹಾಕಿದ್ದಾರೆ.

ಕ್ರಿಕೆಟ್‌ ಸೌತ್‌ ಆಫ್ರಿಕಾ ಪ್ರಕಟಿಸಿದ ಟಿ20 ತಂಡದಲ್ಲಿ ಕ್ವಿಂಟನ್‌ ಡಿ'ಕಾಕ್‌ ನಾಯಕತ್ವ ಪಡೆದಿದ್ದು, ತೆಂಬಾ ಬವೂಮಾ, ಯೊರ್ನ್‌ ಫಾರ್ಟೂಯ್ನ್‌ ಮತ್ತು ಎನ್ರಿಚ್‌ ನೊರ್ಜೆ ತಂಡದಲ್ಲಿ ಸ್ಥಾನ ಗಿಟ್ಟಿಸಿದರೆ ಟಿ20 ಮತ್ತು ಏಕದಿನ ಕ್ರಿಕೆಟ್‌ ವೃತ್ತಿ ಬದುಕು ಸಲುವಾಗಿ ಟೆಸ್ಟ್‌ಗೆ ವಿದಾಯ ಹೇಳಿದ್ದ ಸ್ಟೇನ್‌ ಅವರಿಗೆ ಸ್ಥಾನ ನೀಡಲಾಗಿಲ್ಲ.

ವಿಂಡೀಸ್‌ ಎದುರು ಮತ್ತೊಂದು ದಾಖಲೆಗೆ ಕೊಹ್ಲಿ-ರೋಹಿತ್‌ ಜೋಡಿ ಸಜ್ಜುವಿಂಡೀಸ್‌ ಎದುರು ಮತ್ತೊಂದು ದಾಖಲೆಗೆ ಕೊಹ್ಲಿ-ರೋಹಿತ್‌ ಜೋಡಿ ಸಜ್ಜು

"ಕೋಚ್‌ಗಳ ಮರು ಹೊಂದಾಣಿಕೆ ಬಳಿಕ ನನ್ನ ನಂಬರ್‌ ಕಳೆದು ಹೋಗಿದೆಯೇ," ಎಂದು ಸ್ಟೇನ್‌ ಟ್ವೀಟ್‌ ಮಾಡಿದ್ದರು. ಇದಕ್ಕೆ ಅಭಿಮಾನಿಯೊಬ್ಬ ಉತ್ತರಿಸಿ "ಆಯ್ಕೆ ಸಮಿತಿ ಸದಸ್ಯರು ನಿಮ್ಮನ್ನು ಮಹತ್ವದ ಪಂದ್ಯಗಳಿಗಾಗಿ ಕಾಯ್ದಿರಿಸಿದ್ದಾರೆ. (ಆದರೆ ಆಯ್ಕೆದಾರರು ಯಾರು?)," ಎಂದಿದ್ದರು. ಬಳಿಕ ಮರು ಉತ್ತರ ನೀಡಿದ ಸ್ಟೇನ್, "ವಿರಾಟ್‌ ಕೊಹ್ಲಿ ಮತ್ತು ಕೋಟ್ಯಂತರ ಮಂದಿ ಆಯ್ಕೆದಾರರು ನನ್ನನ್ನು ಇನ್ನು ಮರೆತಿಲ್ಲ ಎಂದು ನಂಬಿರುವುದಕ್ಕೆ ಕ್ಷಮೆಯಾಚಿಸುತ್ತೇನೆ," ಎಂದಿದ್ದಾರೆ.

ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ 75ರಿಂದ 80 ಶತಕ ದಾಖಲಿಸಲಿದ್ದಾರಂತೆ!ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ 75ರಿಂದ 80 ಶತಕ ದಾಖಲಿಸಲಿದ್ದಾರಂತೆ!

ದೈಹಿಕ ಮತ್ತು ಮಾನಸಿಕ ಸಾಮರ್ಥ್ಯಕ್ಕೆ ಸವಾಲೊಡ್ಡುವ ಟೆಸ್ಟ್‌ ಕ್ರಿಕೆಟ್‌ಗೆ ಕೆಲ ದಿನಗಳ ಹಿಂದಷ್ಟೇ ನಿವೃತ್ತಿ ಷೋಷಿಸಿದ್ದ ಸ್ಟೇನ್‌, ಏಕದಿನ ಮತ್ತು ಟಿ20 ಕ್ರಿಕೆಟ್‌ನಲ್ಲಿ ಆಯ್ಕೆಗೆ ಲಭ್ಯರಿರುವುದಾಗಿ ಹೇಳಿದ್ದರು.

ಅಂದಹಾಗೆ ಏಪ್ರಿಲ್‌ನಲ್ಲಿ ನಡೆದ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿ ವೇಳೆ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಪರ ಆಡಿದ ಸ್ಟೇನ್‌, ಒಂದೆರಡು ಪಂದ್ಯಗಳ ಬಳಿಕ ಭುಜದ ನೋವಿನ ಸಮಸ್ಯೆಗೆ ತುತ್ತಾಗಿ ಟೂರ್ನಿಯಿಂದಲೇ ನಿರ್ಗಮಿಸಿದ್ದರು. ಬಳಿಕ ಇಂಗ್ಲೆಂಡ್‌ ಮತ್ತು ವೇಲ್ಸ್‌ ಆತಿಥ್ಯದಲ್ಲಿ ನಡೆದ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿ ಹೊತ್ತಿಗೆ ಚೇತರಿಸಿ ತಂಡದಲ್ಲಿ ಸ್ಥಾನ ಪಡೆದರಾದರೂ, ಗಾಯದ ಸಮಸ್ಯೆ ಅಭ್ಯಾಸದ ವೇಳೆ ಮರುಕಳಿಸಿದ ಪರಿಣಾಮ ವಿಶ್ವಕಪ್‌ನಿಂದಲೂ ಒಂದು ಪಂದ್ಯವನ್ನೂ ಆಡದೆ ಹೊರಬಿದ್ದರು.

ಭಾರತ ವಿರುದ್ಧದ ಟಿ20, ಟೆಸ್ಟ್‌ ಸರಣಿಗೆ ತಂಡ ಪ್ರಕಟಿಸಿದ ದ. ಆಫ್ರಿಕಾಭಾರತ ವಿರುದ್ಧದ ಟಿ20, ಟೆಸ್ಟ್‌ ಸರಣಿಗೆ ತಂಡ ಪ್ರಕಟಿಸಿದ ದ. ಆಫ್ರಿಕಾ

ಸತತ ನಾಲ್ಕು ವರ್ಷಗಳ ಕಾಲ ವಿಶ್ವದ ನಂ.1 ಟೆಸ್ಟ್‌ ಬೌಲರ್‌ ಆಗಿ ಆಧಿಪತ್ಯ ಮೆರದಿದ್ದ ಡೇಲ್‌ ಸ್ಟೇನ್‌, 2016ರ ಬಳಿಕ ಸತತ ಗಾಯದ ಸಮಸ್ಯೆಗಳಿಗೆ ತುತ್ತಾಗಿದ್ದಾರೆ. ಚೇತರಿಸಿ ತಂಡಕ್ಕೆ ಹಿಂದಿರುಗಿದರೂ ಮರಳಿ ಗಾಯಕ್ಕೆ ತುತ್ತಾಗುತ್ತಿದ್ದ ಕಾರಣದಿಂದಲೇ ಟೆಸ್ಟ್‌ ಕ್ರಿಕೆಟ್‌ಗೆ ಅನಿವಾರ್ಯವಾಗಿ ನಿವೃತ್ತಿ ಹೇಳಿದ್ದರು.

Story first published: Wednesday, August 14, 2019, 16:48 [IST]
Other articles published on Aug 14, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X