ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಸ್ಡನ್ ಕ್ರಿಕೆಟರ್ಸ್ ಆಫ್‌ ದ ಇಯರ್ 2019: ವಿಜೇತರ ಸಂಪೂರ್ಣ ಪಟ್ಟಿ

Stokes, Perry named Wisden’s leading cricketers of 2019

ಲಂಡನ್, ಏಪ್ರಿಲ್ 8: ಇಂಗ್ಲೆಂಡ್‌ನ ಆಲ್ ರೌಂಡರ್ ಬೆನ್ ಸ್ಟೋಕ್ಸ್ ಮತ್ತು ಆಸ್ಟ್ರೇಲಿಯಾದ ಆಲ್ ರೌಂಡರ್ ಎಲ್ಲಿಸ್ ಪೆರ್ರಿ 2019ರ ವಿಸ್ಡನ್ಸ್ ಲೀಡಿಂಗ್ ಕ್ರಿಕೆಟರ್ಸ್ ಆಫ್‌ ದ ಇಯರ್ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಯುನೈಟೆಡ್ ಕಿಂಗ್ಡಮ್ ಪ್ರಕಟಿಸುವ ವಿಸ್ಡಂಮ್‌ನ ವಾರ್ಷಿಕ ಆವೃತ್ತಿಯ ಪ್ರಶಸ್ತಿಗಳು ಬುಧವಾರ (ಏಪ್ರಿಲ್ 8) ಪ್ರಕಟಗೊಂಡಿದ್ದು, ಸ್ಕೋಕ್ಸ್‌ ಮತ್ತು ಪೆರ್ರಿ ಪುರುಷರ ಮತ್ತು ಮಹಿಳೆಯರಲ್ಲಿ ಮುಂಚೂಣಿ ಕ್ರಿಕೆಟಿಗರಾಗಿ ಮಿನುಗಿದ್ದಾರೆ.

ಟೀಮ್ ಇಂಡಿಯಾಗೆ ಕಮ್‌ಬ್ಯಾಕ್ ಮಾಡುವ ವಿಶ್ವಾಸ ವ್ಯಕ್ತಪಡಿಸಿದ ಕನ್ನಡಿಗಟೀಮ್ ಇಂಡಿಯಾಗೆ ಕಮ್‌ಬ್ಯಾಕ್ ಮಾಡುವ ವಿಶ್ವಾಸ ವ್ಯಕ್ತಪಡಿಸಿದ ಕನ್ನಡಿಗ

ಆ್ಯಂಡ್ರೂ ಫ್ಲಿಂಟಾಫ್ 2005ರಲ್ಲಿ ವಿಸ್ಡನ್ಸ್ ಲೀಡಿಂಗ್ ಕ್ರಿಕೆಟರ್ ಪ್ರಶಸ್ತಿ ಪಡೆದ ಬಳಿಕ ಇದೇ ಪ್ರಶಸ್ತಿಗೆ ಭಾಜನರಾದ ಇಂಗ್ಲೆಂಡ್‌ನ ಮೊದಲ ಕ್ರಿಕೆಟಿಗರಾಗಿ ಬೆನ್ ಸ್ಟೋಕ್ಸ್ ಗುರುತಿಸಿಕೊಂಡಿದ್ದಾರೆ.

ಕ್ಲಾರ್ಕ್‌ರ ಶ್ರೇಷ್ಠ 7 ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಇಬ್ಬರು ಭಾರತೀಯರಿಗೆ ಸ್ಥಾನಕ್ಲಾರ್ಕ್‌ರ ಶ್ರೇಷ್ಠ 7 ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಇಬ್ಬರು ಭಾರತೀಯರಿಗೆ ಸ್ಥಾನ

2019ರ ವಿಸ್ಡನ್ ಕ್ರಿಕೆಟರ್ಸ್ ಆಫ್‌ ದ ಇಯರ್ ಪ್ರಶಸ್ತಿ ಪಡೆದ ಎಲ್ಲರ ಮಾಹಿತಿ ಇಲ್ಲಿದೆ.

ಪೆರ್ರಿಗೆ 2ನೇ ಪ್ರಶಸ್ತಿ

ಪೆರ್ರಿಗೆ 2ನೇ ಪ್ರಶಸ್ತಿ

ಆಸ್ಟ್ರೇಲಿಯಾದ ಆಲ್ ರೌಂಡರ್ ಎಲ್ಲಿಸ್ ಪೆರ್ರಿ ಇದೇ ಪ್ರಶಸ್ತಿಯನ್ನು 2016ರಲ್ಲೂ ಪಡೆದುಕೊಂಡಿದ್ದರು. ಅಲ್ಲಿಗೆ, ವಿಸ್ಡನ್ ಪ್ರಶಸ್ತಿಯನ್ನು ಎರಡು ಬಾರಿ ಪಡೆದ ಮೊದಲ ಮಹಿಳಾ ಕ್ರಿಕೆಟರ್ ಆಗಿ ಪೆರ್ರಿ ದಾಖಲೆ ಬರೆದಂತಾಗಿದೆ. 2019ರಲ್ಲಿ ಸ್ಟೋಕ್ಸ್ ಟೆಸ್ಟ್ ನಲ್ಲಿ 821 ರನ್, ಏಕದಿನ ಪಂದ್ಯಗಳಲ್ಲಿ 719 ರನ್ ಗಳಿಸಿದ್ದಕ್ಕಾಗಿ ಲೀಡಿಂಗ್ ಕ್ರಿಕೆಟರ್ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ವಿಸ್ಡನ್ ಫೈವ್ ಕ್ರಿಕೆಟರ್ಸ್

ವಿಸ್ಡನ್ ಫೈವ್ ಕ್ರಿಕೆಟರ್ಸ್

ವಿಸ್ಡನ್ ಫೈವ್ ಕ್ರಿಕೆಟರ್ಸ್ ಆಫ್‌ ದ ಇಯರ್ ಪ್ರಶಸ್ತಿಗೆ ಪ್ಯಾಟ್ ಕಮಿನ್ಸ್ (ಆಸ್ಟ್ರೇಲಿಯಾ), ಎಲ್ಲಿಸ್ ಪೆರ್ರಿ (ಆಸ್ಟ್ರೇಲಿಯಾ), ಜೋಫ್ರಾ ಆರ್ಚರ್ (ಇಂಗ್ಲೆಂಡ್), ಸೈಮನ್ ಹಾರ್ಮರ್ (ದಕ್ಷಿಣ ಆಫ್ರಿಕಾ), ಮಾರ್ನಸ್ ಲ್ಯಾಬುಸ್ಚಾಗ್ನೆ (ಆಸ್ಟ್ರೇಲಿಯಾ) ಹೆಸರಿಸಲ್ಪಟ್ಟಿದ್ದಾರೆ.

ಲೀಡಿಂಗ್ ಕ್ರಿಕೆಟರ್

ಲೀಡಿಂಗ್ ಕ್ರಿಕೆಟರ್

ವಿಸ್ಡನ್ ಲೀಡಿಂಗ್ ಕ್ರಿಕೆಟರ್ ಇನ್ ದ ವರ್ಲ್ಡ್ ಪ್ರಶಸ್ತಿ ಇಂಗ್ಲೆಂಡ್‌ನ ಬೆನ್ ಸ್ಟೋಕ್ಸ್‌ಗೆ ಲಭಿಸಿದೆ. ವಿಸ್ಡನ್ಸ್ ಲೀಡಿಂಗ್ ಟಿ20 ಕ್ರಿಕೆಟರ್ ಪ್ರಶಸ್ತಿ ವೆಸ್ಟ್ ಇಂಡೀಸ್‌ನ ಆ್ಯಂಡ್ರೆ ರಸೆಲ್ ಪಡೆದುಕೊಂಡಿದ್ದಾರೆ. ವಿಸ್ಡನ್ ಲೀಡಿಂಗ್ ವುಮೆನ್ ಕ್ರಿಕೆಟರ್ ಇನ್ ದ ವರ್ಲ್ಡ್ ಪ್ರಶಸ್ತಿ ಆಸ್ಟ್ರೇಲಿಯಾದ ಎಲ್ಲಿಸ್ ಪೆರ್ರಿ ಪಡೆದುಕೊಂಡಿದ್ದಾರೆ.

ಎಂಸಿಸಿ ಫೋಟೋಗ್ರಾಫ್

ಎಂಸಿಸಿ ಫೋಟೋಗ್ರಾಫ್

ವಿಸ್ಡನ್ ಎಂಸಿಸಿ ಫೋಟೋಗ್ರಾಫ್‌ ಪ್ರಶಸ್ತಿ ಇಂಗ್ಲೆಂಡ್‌ ಬೆನ್ ಸ್ಟೋಕ್ಸ್‌ಗೆ ದೊರೆತಿದೆ. ಹೆಡಿಂಗ್ಲಿ ಪಂದ್ಯಕ್ಕಾಗಿ ಸ್ಟೋಕ್ಸ್‌ಗೆ ಈ ಪ್ರಶಸ್ತಿ ದೊರೆತಿದೆ. ಇನ್ನು ವಿಸ್ಡನ್ ಬುಕ್ ಆಫ್ ದ ಇಯರ್ ಪ್ರಶಸ್ತಿ ಪತ್ರಕರ್ತರಾದ ಫ್ರೆಡ್ಡಿ ವೈಲ್ಡ್, ಟಿಮ್ ವಿಗ್ಮೋರ್ ಸಂಪಾದಿಸಿರುವ 'ಕ್ರಿಕೆಟ್ 2.0: ಇನ್‌ಸೈಡ್ ದ ಟಿ20 ರೆವೊಲ್ಯೂಶನ್' ಪಡೆದುಕೊಂಡಿದೆ.

Story first published: Wednesday, April 8, 2020, 19:58 [IST]
Other articles published on Apr 8, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X