ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ವೇಗದ ಆಟ ಆಡಿದ ಮಾತ್ರಕ್ಕೆ ಆತ ಸೆಹ್ವಾಗ್ ಆಗಲ್ಲ'; ಭಾರತೀಯ ಆಟಗಾರನ ಕಾಲೆಳೆದ ಸಲ್ಮಾನ್ ಬಟ್

Stop comparing Prithvi Shaw with Sehwag and Richards says Pakistan former cricketer

ಇತ್ತೀಚಿನ ದಿನಗಳಲ್ಲಿ ಯುವ ಕ್ರಿಕೆಟಿಗರು ನಾಲ್ಕೈದು ಪಂದ್ಯಗಳಲ್ಲಿ ಅಬ್ಬರದ ಬ್ಯಾಟಿಂಗ್ ನಡೆಸಿ ಮಿಂಚಿದರೆ ಸಾಕು ಅವರನ್ನು ಕೆಲ ಜನರು ಹಿರಿಯ ಕ್ರಿಕೆಟಿಗರ ಜೊತೆ ಹೋಲಿಕೆ ಮಾಡಿ ಮಾತನಾಡಲು ಶುರು ಮಾಡಿಬಿಡುತ್ತಾರೆ. ಇಂತಹ ಹೇಳಿಕೆಗಳ ವಿರುದ್ಧ ಈಗಾಗಲೇ ಸಾಕಷ್ಟು ಹಿರಿಯ ಕ್ರಿಕೆಟಿಗರು ಅಸಮಾಧಾನ ವ್ಯಕ್ತಪಡಿಸಿದ ಸಂಗತಿಗಳು ನಡೆದಿವೆ.

ಟೀಮ್ ಇಂಡಿಯಾ ಸಾಮರ್ಥ್ಯದ ಬಗ್ಗೆ ಮಾತನಾಡಿದ ಹಾರ್ದಿಕ್ ಪಾಂಡ್ಯ

ಇದೀಗ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಸಲ್ಮಾನ್ ಬಟ್ ಕೂಡ ಅಂತಹದ್ದೇ ಹೋಲಿಕೆಯ ವಿರುದ್ಧ ಕಿಡಿಕಾರಿದ್ದಾರೆ. ಹೌದು ವೀರೇಂದ್ರ ಸೆಹ್ವಾಗ್ ಮತ್ತು ವಿವಿಯನ್ ರಿಚರ್ಡ್ಸ್ ಜೊತೆ ಯುವ ಆಟಗಾರ ಪೃಥ್ವಿ ಶಾರನ್ನು ಹೋಲಿಕೆ ಮಾಡುವುದರ ವಿರುದ್ಧ ಸಲ್ಮಾನ್ ಬಟ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದೇಶೀಯ ಕ್ರಿಕೆಟ್, ಐಪಿಎಲ್ ಹಾಗೂ ಇತ್ತೀಚಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಮಿಂಚುತ್ತಿರುವ ಪೃಥ್ವಿ ಶಾ ಆಟದ ಕುರಿತು ಈಗಾಗಲೇ ಸಾಕಷ್ಟು ಹಿರಿಯ ಕ್ರಿಕೆಟಿಗರು ಮತ್ತು ನೆಟ್ಟಿಗರು ಸಾಕಷ್ಟು ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ.

'ಮೂರ್ಖರಿಗೆ ತಲೆಕೆಡಿಸಿಕೊಳ್ಳಬೇಡಿ'; ಭಾರತದ ವಿರುದ್ಧ ಸರಣಿ ಸೋತ ನಂತರ ಕಿಡಿಕಾರಿದ ಶ್ರೀಲಂಕಾ ಕೋಚ್!'ಮೂರ್ಖರಿಗೆ ತಲೆಕೆಡಿಸಿಕೊಳ್ಳಬೇಡಿ'; ಭಾರತದ ವಿರುದ್ಧ ಸರಣಿ ಸೋತ ನಂತರ ಕಿಡಿಕಾರಿದ ಶ್ರೀಲಂಕಾ ಕೋಚ್!

ಈ ಹಿಂದೆ ರವಿ ಶಾಸ್ತ್ರಿ ಕೂಡ ಪೃಥ್ವಿ ಶಾ ಬ್ಯಾಟಿಂಗ್ ಶೈಲಿಯನ್ನು ಹಲವಾರು ಹಿರಿಯ ಕ್ರಿಕೆಟಿಗರಿಗೆ ಹೋಲಿಸಿ ವರ್ಣನೆ ಮಾಡಿದ್ದರು. ಇದಾದ ಬಳಿಕ ಇದೀಗ ಪೃಥ್ವಿ ಶಾರನ್ನು ವಿರೇಂದ್ರ ಸೆಹ್ವಾಗ್ ಮತ್ತು ವಿವಿಯನ್ ರಿಚರ್ಡ್ಸ್ ರಂತಹ ದಂತಕತೆಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹೋಲಿಸಲಾಗುತ್ತಿದೆ. ಈ ಹೋಲಿಕೆ ಸರಿಯಲ್ಲ ಎಂದು ಕಿಡಿಕಾರಿರುವ ಸಲ್ಮಾನ್ ಬಟ್ ಈ ಕೆಳಕಂಡಂತೆ ಹೇಳಿಕೆಗಳನ್ನು ನೀಡಿದ್ದಾರೆ.

ದಂತಕಥೆಗಳಿಗೆ ಹೋಲಿಸುವುದು ಸೂಕ್ತವಲ್ಲ

ದಂತಕಥೆಗಳಿಗೆ ಹೋಲಿಸುವುದು ಸೂಕ್ತವಲ್ಲ

ಇತ್ತೀಚೆಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿರುವ ಪೃಥ್ವಿ ಶಾರನ್ನು ವಿರೇಂದ್ರ ಸೆಹ್ವಾಗ್ ಮತ್ತು ವಿವಿಯನ್ ರಿಚರ್ಡ್ಸ್ ರೀತಿಯ ದಂತಕಥೆಗಳಿಗೆ ಹೋಲಿಸುವುದು ಸೂಕ್ತವಲ್ಲ ಎಂದು ಸಲ್ಮಾನ್ ಬಟ್ ಅಭಿಪ್ರಾಯಪಟ್ಟಿದ್ದಾರೆ.

ಸೆಹ್ವಾಗ್, ರಿಚರ್ಡ್ಸನ್ ರೀತಿ ಫಲಿತಾಂಶ ನೀಡಿದ ನಂತರ ಹೋಲಿಕೆ ಮಾಡಿ

ಸೆಹ್ವಾಗ್, ರಿಚರ್ಡ್ಸನ್ ರೀತಿ ಫಲಿತಾಂಶ ನೀಡಿದ ನಂತರ ಹೋಲಿಕೆ ಮಾಡಿ

ಇನ್ನೂ ಮುಂದುವರೆದು ಮಾತನಾಡಿರುವ ಸಲ್ಮಾನ್ ಬಟ್ ಪೃಥ್ವಿ ಶಾ ವೀರೇಂದ್ರ ಸೆಹವಾಗ್ ಮತ್ತು ವಿವಿಯನ್ ರಿಚರ್ಡ್ಸ್ ರೀತಿ ರನ್ ಗಳಿಸಿ, ಶತಕಗಳನ್ನು ಸಿಡಿಸಿ ಉತ್ತಮ ಫಲಿತಾಂಶವನ್ನು ನೀಡಿದ ನಂತರ ಆತನನ್ನು ಹಿರಿಯರ ಜೊತೆ ಹೋಲಿಕೆ ಮಾಡಿ ಎಂದು ಸಲಹೆ ನೀಡಿದ್ದಾರೆ. ಸೆಹ್ವಾಗ್ ಮತ್ತು ವಿವಿಯನ್ ರಿಚರ್ಡ್ಸ್ ದೊಡ್ಡ ದೊಡ್ಡ ಇನ್ನಿಂಗ್ಸ್‌ ಆಡಿದ್ದಾರೆ, ಆ ರೀತಿಯ ದೊಡ್ಡ ಇನ್ನಿಂಗ್ಸ್‌ನ್ನು ಪೃಥ್ವಿ ಶಾ ಆಡಿದ ನಂತರ ಹೋಲಿಕೆ ಮಾಡುವುದು ಉತ್ತಮ ಎಂದು ಸಲ್ಮಾನ್ ಬಟ್ ಹೇಳಿದ್ದಾರೆ.

ಪೃಥ್ವಿ ಶಾ ಅತಿ ಬೇಗನೇ ದೊಡ್ಡ ಹೊಡೆತಗಳಿಗೆ ಕೈ ಹಾಕಬಾರದು

ಪೃಥ್ವಿ ಶಾ ಅತಿ ಬೇಗನೇ ದೊಡ್ಡ ಹೊಡೆತಗಳಿಗೆ ಕೈ ಹಾಕಬಾರದು

ಇದೇ ವೇಳೆ ಪೃಥ್ವಿ ಶಾಗೆ ಸಲಹೆಯೊಂದನ್ನು ನೀಡಿರುವ ಸಲ್ಮಾನ್ ಬಟ್ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿ ನೆಲೆಯೂರಿ ತದನಂತರ ದೊಡ್ಡ ಹೊಡೆತಗಳಿಗೆ ಕೈ ಹಾಕಲಿ ಎಂದು ಹೇಳಿದ್ದಾರೆ. ಬ್ಯಾಟಿಂಗ್ ಆರಂಭಿಸಿದ ಕೂಡಲೇ ಪೃಥ್ವಿ ಶಾ ದೊಡ್ಡ ಹೊಡೆತಗಳಿಗೆ ಕೈ ಹಾಕಲು ಹೋಗಿ ಎಡವುತ್ತಿದ್ದಾರೆ, ಹೀಗಾಗಿ ಮೈದಾನಕ್ಕೆ ಇಳಿದ ಕೂಡಲೇ ದೊಡ್ಡ ಹೊಡೆತಗಳಿಗೆ ಪೃಥ್ವಿ ಶಾ ಕೈ ಹಾಕಬಾರದು ಎಂದು ಸಲ್ಮಾನ್ ಬಟ್ ಸಲಹೆ ನೀಡಿದ್ದಾರೆ.

Story first published: Sunday, July 25, 2021, 12:02 [IST]
Other articles published on Jul 25, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X