ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

''ಇನ್ನಾದರೂ ಧೋನಿ ಜೊತೆ ಪಂತ್ ಹೋಲಿಸುವುದನ್ನು ನಿಲ್ಲಿಸಿ''

Stop Comparing Rishabh Pant With MS Dhoni: Gautam Gambhir

ಟೀಂ ಇಂಡಿಯಾದ ಮಾಜಿ ನಾಯಕ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಯಶಸ್ವಿ ನಾಯಕ ಎಂಎಸ್ ಧೋನಿ ಜೊತೆ ಯುವ ಕ್ರಿಕೆಟರ್ ರಿಷಬ್ ಪಂತ್ ಅವರನ್ನು ಹೋಲಿಸುವುದನ್ನು ಬಿಡಿ ಎಂದು ಮಾಜಿ ಕ್ರಿಕೆಟರ್ ಗೌತಮ್ ಗಂಭೀರ್ ಹೇಳಿದ್ದಾರೆ.

ಡೆಲ್ಲಿ ಕ್ಯಾಪಿಟಲ್ ಪರ ಆಡುವ ಯುವ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ರಿಷಬ್ ಪಂತ್ ಅವರನ್ನು ಧೋನಿ ಜೊತೆ ಹೋಲಿಕೆ ಮಾಡಿ ಸುದ್ದಿ ಮಾಡುವ ಮಾಧ್ಯಮ ಹಾಗೂ ಕ್ರಿಕೆಟ್ ತಜ್ಞರು ಇನ್ನಾದರು ಹೋಲಿಕೆ ನಿಲ್ಲಿಸಿದರೆ ಒಳ್ಳೆಯದು. ಇಂಗ್ಲೆಂಡ್ ನಲ್ಲಿ ಶತಕ, ಆಸ್ಟ್ರೇಲಿಯಾದಲ್ಲಿ ಉತ್ತಮ ಆಟ ಪ್ರದರ್ಶಿಸಿದ ಪಂತ್ ನಂತರ ಹೆಚ್ಚಿನ ಒತ್ತಡದಿಂದ ಅಡುತ್ತಿದ್ದಾರೆ. ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ನೀಡಬೇಕು ಎಂಬ ಒತ್ತಡ ಹೆಚ್ಚಾಗಿದ್ದರಿಂದ ಪಂತ್ ಸರಿಯಾಗಿ ಆಡಲು ಆಗುತ್ತಿಲ್ಲ ಎಂದು ಗಂಭೀರ್ ಹೇಳಿದ್ದಾರೆ.

 ಟೀಮ್ ಇಂಡಿಯಾದಲ್ಲಿ ಎಂ.ಎಸ್ ಧೋನಿ ಸ್ಥಾನಕ್ಕೆ ಈತನೇ ಸೂಕ್ತ: ಆಶಿಶ್ ನೆಹ್ರಾ ಟೀಮ್ ಇಂಡಿಯಾದಲ್ಲಿ ಎಂ.ಎಸ್ ಧೋನಿ ಸ್ಥಾನಕ್ಕೆ ಈತನೇ ಸೂಕ್ತ: ಆಶಿಶ್ ನೆಹ್ರಾ

ಆಫ್ ಸ್ಟಂಪ್ ನಿಂದ ಹೊರಗಿನ ಚೆಂಡನ್ನು ಕೆಣಕುವ ಪಂತ್ ಆಟವನ್ನು ಎದುರಾಳಿಗಳು ಚೆನ್ನಾಗಿ ತಿಳಿದುಕೊಂಡು ಅದಕ್ಕೆ ತಕ್ಕಂತೆ ತಂತ್ರ ರೂಪಿಸಿ ಪಂತ್ ವಿಕೆಟ್ ಪಡೆಯುತ್ತಿದ್ದಾರೆ.

ಧೋನಿಯಂತೆ ಪಂತ್ ಆಗಲು ಸಾಧ್ಯವಿಲ್ಲ, ಹೋಲಿಕೆಯಿಂದ ನೈಜ ಆಟವೂ ಮಾಯವಾಗುತ್ತದೆ. ಪಂತ್ ಕೆಲವು ಹೊಡೆತಗಳನ್ನು ಬಿಟ್ಟರೆ ಆಲ್ ರೌಂಡ್ ಆಟವಾಗಲಿ, ವಿಕೆಟ್ ಕೀಪಿಂಗ್ ಚಾಕಚಕ್ಯತೆಯನ್ನಾಗಿ ಇನ್ನೂ ಕಲಿತಿಲ್ಲ. ಸಿಕ್ಸರ್ ಹೊಡೆದ ಮಾತ್ರಕ್ಕೆ ಎಲ್ಲರೂ ಧೋನಿ ಆಗಲ್ಲ ಸಾಧ್ಯವಿಲ್ಲ ಎಂದು ಗೌತಮ್ ಗಂಭೀರ್ ಹೇಳಿದ್ದಾರೆ.

ಭಾರತ vs ಆಸ್ಟ್ರೇಲಿಯಾ: ವಿಚಿತ್ರ ಕಾರಣ, ಪಂತ್ ಆಯ್ಕೆ ಅನುಮಾನ!ಭಾರತ vs ಆಸ್ಟ್ರೇಲಿಯಾ: ವಿಚಿತ್ರ ಕಾರಣ, ಪಂತ್ ಆಯ್ಕೆ ಅನುಮಾನ!

ಕ್ವಾಲಿಫೈಯರ್ 1 ಪಂದ್ಯದಲ್ಲಿ ಚಾಂಪಿಯನ್ ತಂಡ ಮುಂಬೈ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಅತ್ಯಂತ ಕಳಪೆ ಪ್ರದರ್ಶನ ನೀಡಿತು. ಆರಂಭಿಕ ಮೂವರು ಬ್ಯಾಟ್ಸ್ ಮನ್ ಗಳು ಶೂನ್ಯ ಸುತ್ತಿದರೆ, ಕೆಳ ಕ್ರಮಾಂಕದಲ್ಲಿ ಆಡಲು ಬಂದ ಪಂತ್ 9 ಎಸೆತಗಳಲ್ಲಿ 3 ರನ್ ಮಾತ್ರ ಗಳಿಸಿ ಪೆವಿಲಿಯನ್ ಸೇರಿದರು.

Story first published: Friday, November 6, 2020, 17:40 [IST]
Other articles published on Nov 6, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X