ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರಾಯಲ್ಸ್‌ ಎದುರು ಗೆಲ್ಲಲೇ ಬೇಕಾದ ಒತ್ತಡದಲ್ಲಿ ನೈಟ್‌ ರೈಡರ್ಸ್‌

Struggling KKR seek turnaround against Rajasthan Royals By Tapan Mohanta


ಕೋಲ್ಕೊತಾ, ಏಪ್ರಿಲ್‌ 25: ಸತತ ಐದು ಸೋಲಿನ ಬಳಿಕ ನಾಯಕತ್ವ ಕಳೆದುಕೊಳ್ಳುವ ಆತಂಕದಲ್ಲಿರುವ ದಿನೇಶ್‌ ಕಾರ್ತಿಕ್‌, ತವರಿನ ಪ್ರೇಕ್ಷಕರ ಬಲದೊಂದಿಗೆ ಇಲ್ಲಿನ ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ಗುರುವಾರ ರಾಜಸ್ಥಾನ್‌ ರಾಯಲ್ಸ್‌ ಎದುರು ನೈಟ್‌ ರೈಡರ್ಸ್‌ಗೆ ಜಯ ತಂದುಕೊಡುವ ತುಡಿತದಲ್ಲಿದ್ದಾರೆ.

ರಹಸ್ಯ ಬಿಚ್ಚಿಟ್ಟರೆ ಸಿಎಸ್‌ಕೆ ನನ್ನನ್ನು ಖರೀದಿಸುವುದಿಲ್ಲ: ಧೋನಿರಹಸ್ಯ ಬಿಚ್ಚಿಟ್ಟರೆ ಸಿಎಸ್‌ಕೆ ನನ್ನನ್ನು ಖರೀದಿಸುವುದಿಲ್ಲ: ಧೋನಿ

ಆಂಡ್ರೆ ರಸೆಲ್‌ ಮೇಲಿನ ಅತಿಯಾದ ಅವಲಂಬನೆಯಿಂದಾಗಿ ನೈಟ್‌ ರೈಡರ್ಸ್‌ ಸತತ ಐದು ಪಂದ್ಯಗಳನ್ನು ಸೋತು ಕಂಗಾಲಾಗಿದೆ. ಅಲ್ಲದೆ ಲೀಗ್‌ ಹಂತದಲ್ಲಿ ಕೆಕೆಆರ್‌ ಪಾಲಿಗೆ ಇನ್ನು ನಾಲ್ಕು ಪಂದ್ಯಳಷ್ಟೇ ಬಾಕಿ ಇದ್ದು ಪ್ಲೇ ಆಫ್ಸ್‌ ಹಂತಕ್ಕೇರ ಬೇಕಾದರೆ ನಾಲ್ಕರಲ್ಲೂ ಜಯ ದಾಖಲಿಸುವ ಒತ್ತಡದಲ್ಲಿದೆ.

ಇನ್ನು ಆಂಡ್ರೆ ರಸೆಲ್‌ ಅವರನ್ನು ಅಗ್ರ ಕ್ರಮಾಂಕದಲ್ಲಿ ಆಡಿಸದೇ ಇರುವುದಕ್ಕೆ ದಿನೇಶ್‌ ಕಾರ್ತಿಕ್‌ ಅವರ ನಾಯಕತ್ವದ ಕುರಿತಾಗಿ ಸಾಕಷ್ಟು ಟೀಕೆಗಳು ಕೇಳಿಬಂದಿವೆ.

ಬೇರೆ ತಂಡದಲ್ಲಿ ಕಿತ್ತೊಗೆಯುತ್ತಿದ್ದರು: ಶೇನ್‌ ವ್ಯಾಟ್ಸನ್‌ಬೇರೆ ತಂಡದಲ್ಲಿ ಕಿತ್ತೊಗೆಯುತ್ತಿದ್ದರು: ಶೇನ್‌ ವ್ಯಾಟ್ಸನ್‌

ಮುಂಬರುವ ವಿಶ್ವಕಪ್‌ಗೆ ರಿಷಭ್‌ ಪಂತ್‌ ಅವರ ಬದಲಾಗಿ ಭಾರತ ತಂಡದಲ್ಲಿ ಸ್ಥಾನ ಪಡೆದಿರುವ ದಿನೇಶ್‌ ಕಾರ್ತಿಕ್‌, ಪ್ರಸಕ್ತ ಐಪಿಎಲ್‌ನಲ್ಲಿ ಆಡಿದ ೯ ಪಂದ್ಯಗಳಿಂದ 16.71ರ ಬ್ಯಾಟಿಂಗ್‌ ಸರಾಸರಿ ಹೊಂದಿದ್ದು, ಅತ್ಯಂತ ಕಳಪೆ ಫಾರ್ಮ್‌ನಲ್ಲಿದ್ದಾರೆ. ಜತೆಗೆ ಸ್ಟಾರ್‌ ಆಟಗಾರರಾದ ಕುಲ್ದೀಪ್‌ ಯಾದವ್‌ ಮತ್ತು ರಾಬಿನ್‌ ಉತ್ತಪ್ಪ ಕೂಡ ಲಯ ಕಂಡುಕೊಳ್ಳಲು ಪರದಾಡುತ್ತಿರುವುದು ಕೆಕೆಆರ್‌ ಪಡೆಯ ಅಧೋಗತಿಗೆ ಕಾರಣವಾಗಿದೆ.

ಮತ್ತೊಂದೆಡೆ ಇನ್ನೊಂದು ಪಂದ್ಯ ಸೋತರೂ ನಾಕ್‌ಔಟ್‌ ರೇಸ್‌ನಿಂದ ಹೊರ ಬೀಳುವ ಸ್ಥಿತಿಯಲ್ಲಿರುವ ರಾಜಸ್ಥಾನ್‌ ರಾಯಲ್ಸ್‌ ತಂಡ ನೂತನ ನಾಯಕ ಸ್ಟೀವನ್‌ ಸ್ಮಿತ್‌ ಅವರ ಸಾರಥ್ಯದಲ್ಲಿ ತನ್ನುಳಿದ ಲೀಗ್‌ ಪಂದ್ಯಗಳನ್ನು ಗೆಲ್ಲಲು ಹಂಬಲಿಸುತ್ತಿದೆ. ಸದ್ಯ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿರುವ ರಾಯಲ್ಸ್‌ 6ನೇ ಸ್ಥಾನದಲ್ಲಿರುವ ಕೆಕೆಆರ್‌ಗೆ ಸೋಲುಣಿಸಲು ರಣತಂತ್ರ ರೂಪಿಸಿದೆ.

ಕೆಕೆಆರ್‌ ಸಂಭಾವ್ಯ 11

ಕ್ರಿಸ್‌ ಲಿನ್‌, ಸುನಿಲ್‌ ನರೇನ್‌, ಶುಭಮನ್‌ ಗಿಲ್‌, ನಿತೀಶ್‌ ರಾಣಾ, ದಿನೇಶ್‌ ಕಾರ್ತಿಕ್‌, ರಿಂಕು ಸಿಂಗ್‌, ಆಂಡ್ರೆ ರಸೆಲ್‌, ಪಿಯೂಶ್‌ ಚಾವ್ಲಾ, ಪೃಥ್ವಿ ರಾಜ್‌, ಕೆಸಿ ಕಾರಿಯಪ್ಪ, ಹ್ಯಾರಿ ಗರ್ನಿ.

ಆರ್‌ಆರ್‌ ಸಂಭಾವ್ಯ 11

ಅಜಿಂಕ್ಯ ರಹಾನೆ, ಸಂಜು ಸ್ಯಾಮ್ಸನ್‌, ಸ್ಟೀವನ್‌ ಸ್ಮಿತ್‌, ಬೆನ್‌ ಸ್ಟೋಕ್ಸ್‌, ಆಷ್ಟನ್‌ ಟರ್ನರ್‌, ಸ್ಟುವರ್ಟ್‌ ಬಿನ್ನಿ, ರಿಯಾನ್‌ ಪರಾಗ್‌, ಶ್ರೇಯಸ್‌ ಗೋಪಾಲ್‌, ಜೋಫ್ರಾ ಆರ್ಚರ್‌, ಜಯದೇವ್‌ ಉನಾದ್ಕಟ್‌, ಧವಳ್‌ ಕುಲಕರ್ಣಿ.

Story first published: Wednesday, April 24, 2019, 18:33 [IST]
Other articles published on Apr 24, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X