ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಂಗ್ಲೆಂಡ್‌ ಕ್ರಿಕೆಟ್‌ನ ಸ್ಟುವರ್ಟ್ ಬ್ರಾಡ್, ಕ್ರಿಸ್ ವೋಕ್ಸ್ ಮತ್ತೆ ಮೈದಾನಕ್ಕೆ

Stuart Broad, Chris Woakes among first cricketers to restart training

ಲಂಡನ್, ಮೇ 22: ಕೊರೊನಾವೈರಸ್ ಲಾಕ್‌ಡೌನ್ ಬಳಿಕ ಮತ್ತೆ ಕ್ರಿಕೆಟ್‌ ಅಭ್ಯಾಸ ಆರಂಭಿಸಿದ ಮೊದಲ ಅಂತಾರಾಷ್ಟ್ರೀಯ ಆಟಗಾರರಾಗಿ ಇಂಗ್ಲೆಂಡ್‌ನ ಸ್ಟುವರ್ಟ್ ಬ್ರಾಡ್ ಮತ್ತು ಕ್ರಿಸ್ ವೋಕ್ಸ್ ಗುರುತಿಸಿಕೊಂಡಿದ್ದಾರೆ. ಇಬ್ಬರೂ ಆಟಗಾರರು ಕ್ರಮವಾಗಿ ನಾಟಿಂಗ್‌ಹ್ಯಾಮ್‌ನಲ್ಲಿರುವ ಟ್ರೆಂಟ್ ಬ್ರಿಡ್ಜ್ ಮೈದಾನದಲ್ಲಿ, ಬರ್ಮಿಂಗ್‌ಹ್ಯಾಮ್‌ನ ಎಜ್‌ಬಾಸ್ಟನ್‌ನಲ್ಲಿ ಅಭ್ಯಾಸ ಶುರು ಮಾಡಿದ್ದಾರೆ.

ತಂದೆಯ ಕೂರಿಸಿ 1200 km ಸೈಕಲ್ ತುಳಿದ ಬಾಲಕಿಗೆ ಸೈಕಲ್ ಫೆಡ್‌.ನಿಂದ ಕರೆತಂದೆಯ ಕೂರಿಸಿ 1200 km ಸೈಕಲ್ ತುಳಿದ ಬಾಲಕಿಗೆ ಸೈಕಲ್ ಫೆಡ್‌.ನಿಂದ ಕರೆ

ಇಂಗ್ಲೆಂಡ್‌ನ ಟಾಪ್ ಬೌಲರ್‌ ಆದ ಸ್ಟುವರ್ಟ್ ಬ್ರಾಡ್ ಸೇರಿದಂತೆ ಇಂಗ್ಲೆಂಡ್ ಮತ್ತು ವೇಲ್ಸ್‌ ಕ್ರಿಕೆಟ್ ಬೋರ್ಡ್‌ (ಇಸಿಬಿ)ನಿಂದ ಆಯ್ಕೆಗೊಂಡಿರುವ 18 ವೇಗಿಗಳು ಬೇರೆ ಬೇರೆ 7 ಕ್ರಿಕೆಟ್‌ ಸ್ಟೇಡಿಯಂನಲ್ಲಿ ಅಭ್ಯಾಸ ಆರಂಭಿಸಿದ್ದಾರೆ ಎಂದು ತಿಳಿದುಬಂದಿದೆ.

'ಆತ'ನನ್ನು ಆರ್‌ಸಿಬಿಗೆ ಆರಿಸುವಂತೆ ಕೊಹ್ಲಿಗೆ ಹೇಳಿದ್ದೆ: ಪಾರ್ಥಿವ್ ಪಟೇಲ್'ಆತ'ನನ್ನು ಆರ್‌ಸಿಬಿಗೆ ಆರಿಸುವಂತೆ ಕೊಹ್ಲಿಗೆ ಹೇಳಿದ್ದೆ: ಪಾರ್ಥಿವ್ ಪಟೇಲ್

ಇಂಗ್ಲೆಂಡ್ ಆಲ್ ರೌಂಡರ್ ಬೆನ್ ಸ್ಟೋಕ್ಸ್ ಮತ್ತು ಕ್ರಿಸ್ ವೋಕ್ಸ್ ಕೂಡ ಎಜ್‌ಬಾಸ್ಟನ್‌ನಲ್ಲಿ ಅಭ್ಯಾಸಕ್ಕೆ ಮರಳಿರುವುದನ್ನು ಬಹಿರಂಗಪಡಿಸಿದ್ದಾರೆ ಎಂದು ಸ್ಕೈ ಸ್ಪೋರ್ಟ್ ವರದಿ ಹೇಳಿದೆ. ಬ್ರಾಡ್ ತಾನು ವೈಯಕ್ತಿಕ ಅಭ್ಯಾಸಕ್ಕೆ ತೆರಳಿರುವುದನ್ನು ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದಾರೆ.

ಐಪಿಎಲ್ ಈ ವರ್ಷವೇ ನಡೆಯುವ ಬಗ್ಗೆ ಆಸಿಸ್ ಕ್ರಿಕೆಟಿಗ ಭರವಸೆಐಪಿಎಲ್ ಈ ವರ್ಷವೇ ನಡೆಯುವ ಬಗ್ಗೆ ಆಸಿಸ್ ಕ್ರಿಕೆಟಿಗ ಭರವಸೆ

ಟ್ವಿಟರ್‌ನಲ್ಲಿ ಬ್ರಾಡ್ ವೀಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಬ್ರಾಡ್ ಬೌಲಿಂಗ್ ಮಾಡುತ್ತಿರುವ ದೃಶ್ಯವಿದೆ. 'ಈ ಬೌಲಿಂಗ್ ದೃಶ್ಯ ಸೆರೆ ಹಿಡಿಯಲು ತೆರೆಯ ಮರೆಯಲ್ಲಿ ತುಂಬಾ ಶ್ರಮ ವಹಿಸಬೇಕಾಗಿ ಬಂತು,' ಎಂದು ಬ್ರಾಡ್ ಸಾಲೊಂದನ್ನೂ ಬರೆದುಕೊಂಡಿದ್ದಾರೆ. ಅಭ್ಯಾಸಕ್ಕೆ ಮರಳುವಂತೆ ಸಹಕಾರ ನೀಡಿದ ಇಂಗ್ಲೆಂಡ್ ಮತ್ತು ಟ್ರೆಂಟ್ ಬ್ರಿಡ್ಜ್ ಜನತೆಗೆ ಬ್ರಾಡ್ ಧನ್ಯವಾದ ಹೇಳಿದ್ದಾರೆ.

Story first published: Friday, May 22, 2020, 10:55 [IST]
Other articles published on May 22, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X