ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ದಕ್ಷಿಣ ಆಫ್ರಿಕಾ vs ಇಂಗ್ಲೆಂಡ್‌: ಮಾರಕ ವೇಗಿ ಸ್ಟುವರ್ಟ್ ಬ್ರಾಡ್‌ಗೆ ದಂಡ

Stuart Broad fined after audible obscenity in South Africa Test | STUART BOARD | FINED |SOUTH AFRICA
Stuart Broad fined after ‘audible obscenity’ in South Africa Test

ಜೋಹಾನ್ಸ್‌ಬರ್ಗ್, ಜನವರಿ 29: ಇಂಗ್ಲೆಂಡ್‌ನ ಮಾರಕ ವೇಗಿ ಸ್ಟುವರ್ಟ್‌ ಬ್ರಾಡ್‌ಗೆ ಪಂದ್ಯದ ಸಂಭಾವನೆಯ ಶೇ.15ರಷ್ಟು ದಂಡ ವಿಧಿಸಲಾಗಿದೆ. ದಕ್ಷಿಣ ಆಫ್ರಿಕಾ-ಇಂಗ್ಲೆಂಡ್‌ ನಾಲ್ಕನೇ ಟೆಸ್ಟ್ ಪಂದ್ಯದ ವೇಳೆ ಅಶ್ಲೀಲ ಪದ ಬಳಸಿದ್ದಕ್ಕಾಗಿ ಬ್ರಾಡ್‌ ಶಿಕ್ಷೆಗೆ ಗುರಿಯಾಗಿದ್ದಾರೆ.

ಅಂಡರ್ 19 ವಿಶ್ವಕಪ್: ಟೀಮ್ ಇಂಡಿಯಾ ಕಪ್‌ ಗೆಲ್ಲಲು ಇನ್ನೆರಡೇ ಮೆಟ್ಟಿಲು!ಅಂಡರ್ 19 ವಿಶ್ವಕಪ್: ಟೀಮ್ ಇಂಡಿಯಾ ಕಪ್‌ ಗೆಲ್ಲಲು ಇನ್ನೆರಡೇ ಮೆಟ್ಟಿಲು!

ಸೋಮವಾರ (ಜನವರಿ 27) ಜೋಹಾನ್ಸ್‌ಬರ್ಗ್‌ನಲ್ಲಿ ನಡೆದಿದ್ದ ಇತ್ತಂಡಗಳ ನಾಲ್ಕನೇ ಮತ್ತು ಕೊನೆಯ ಟೆಸ್ಟ್ ವೇಳೆ ಸ್ಟುವರ್ಟ್ ಬ್ರಾಡ್‌ ಅವರು ದಕ್ಷಿಣ ಆಫ್ರಿಕಾ ನಾಯಕ ಫಾ ಡು ಪ್ಲೆಸಿಸ್ ಎದುರು ಅಶ್ಲೀಲ ಪದ ಬಳಸಿ ದುರ್ನಡತೆ ತೋರಿದ್ದನ್ನು ಪಂದ್ಯದ ಅಧಿಕಾರಿಗಳು ಗಮನಿಸಿದ್ದರು.

ಐಪಿಎಲ್ 2020: ಟೂರ್ನಿ ಆರಂಭ, ಅಂತ್ಯದ ಅಧಿಕೃತ ದಿನಾಂಕ ಪ್ರಕಟ!ಐಪಿಎಲ್ 2020: ಟೂರ್ನಿ ಆರಂಭ, ಅಂತ್ಯದ ಅಧಿಕೃತ ದಿನಾಂಕ ಪ್ರಕಟ!

ಇಂಟರ್ ನ್ಯಾಷನಲ್ ಕ್ರಿಕೆಟ್‌ ಕೌನ್ಸಿಲ್‌ನ ಆರ್ಟಿಕಲ್ 2.3ರ ಪ್ರಕಾರ ಅಂತಾರಾಷ್ಟ್ರೀಯ ಪಂದ್ಯಗಳ ವೇಳೆ ಆಟಗಾರರು 'ಶ್ರವ್ಯ ಅಶ್ಲೀಲ'ವಾಗಿ ನಡೆದುಕೊಳ್ಳುವುದು ನಿಯಮ ಉಲ್ಲಂಘನೆಯಾಗುತ್ತದೆ. ಹೀಗಾಗಿ ಬ್ರಾಡ್‌ ಅವರ ಶಿಸ್ತು ದಾಖಲೆಗೆ 1 ನಕಾರಾತ್ಮಕ ಅಂಕ ಸೇರಿಸಲಾಗಿದೆ. 24 ತಿಂಗಳುಗಳಲ್ಲಿ ಬ್ರಾಡ್‌ ಎಸಗಿರುವ ಎರಡನೇ ತಪ್ಪಿದು.

ಟಾಸ್ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಇಂಗ್ಲೆಂಡ್‌ 400+248 ರನ್ ಪೇರಿಸಿದರೆ, ದಕ್ಷಿಣ ಆಫ್ರಿಕಾ 183+274 ರನ್ ಕಲೆ ಹಾಕಿ 191 ರನ್‌ಗಳ ಸೋಲನುಭವಿಸಿದೆ. ಮಾರ್ಕ್ ವುಡ್ ಪಂದ್ಯಶ್ರೇಷ್ಠರಾಗಿ, ಆಲ್ ರೌಂಡರ್ ಬೆನ್ ಸ್ಟೋಕ್ಸ್‌ ಸರಣಿಶ್ರೇಷ್ಠರಾಗಿ ಹೊರಹೊಮ್ಮಿದ್ದಾರೆ. ಸರಣಿಯೂ 3-1ರಿಂದ ಇಂಗ್ಲೆಂಡ್‌ ವಶವಾಗಿದೆ.

Story first published: Wednesday, January 29, 2020, 10:18 [IST]
Other articles published on Jan 29, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X