ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಸಿಸಿ ಟೆಸ್ಟ್ ಚಾಂಪಿಯನ್‌ಷಿಪ್‌: ಭಾರತ ನಂ.1 ತಂಡ, ಬ್ರಾಡ್ ನಂ.1 ಬೌಲರ್!

Stuart Broad Tops ICC World Test Championship With 51 Wickets

ಮ್ಯಾನ್ಚೆಸ್ಟರ್: ವಿನೂತನ ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಷಿಪ್‌ನಲ್ಲಿ ಇಂಗ್ಲೆಂಡ್‌ ವೇಗಿ ಸ್ಟುವರ್ಟ್ ಬ್ರಾಡ್ ಅಗ್ರ ಸ್ಥಾನಿ ಬೌಲರ್ ಆಗಿ ಗುರುತಿಸಿಕೊಂಡಿದ್ದಾರೆ. ಸದ್ಯ ನಡೆಯುತ್ತಿರುವ ಇಂಗ್ಲೆಂಡ್ vs ವೆಸ್ಟ್ ಇಂಡೀಸ್ ನಡುವಿನ ಟೆಸ್ಟ್ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರುವ ಬ್ರಾಡ್, ಐಸಿಸಿ ಟೆಸ್ಟ್ ಚಾಂಪಿಯನ್‌ಷಿಪ್‌ನಲ್ಲಿ ಅತ್ಯಧಿಕ ವಿಕೆಟ್ ದಾಖಲೆಯೊಂದಿಗೆ ನಂ.1 ಸ್ಥಾನ ಅಲಂಕರಿಸಿದ್ದಾರೆ. ತಂಡಗಳನ್ನು ಪರಿಗಣಿಸಿದರೆ ಟೀಮ್ ಇಂಡಿಯಾ ಸದ್ಯ ನಂ.1 ಸ್ಥಾನದಲ್ಲಿದೆ.

ವಿಚಿತ್ರ ಸಮಸ್ಯೆ ಹಿಡ್ಕೊಂಡು ಸಚಿನ್ ಬಳಿಗೆ ಬಂದಿದ್ದರಂತೆ ವಿರಾಟ್ ಕೊಹ್ಲಿ!ವಿಚಿತ್ರ ಸಮಸ್ಯೆ ಹಿಡ್ಕೊಂಡು ಸಚಿನ್ ಬಳಿಗೆ ಬಂದಿದ್ದರಂತೆ ವಿರಾಟ್ ಕೊಹ್ಲಿ!

ಇಂಗ್ಲೆಂಡ್‌ಗೆ ಪ್ರವಾಸ ಬಂದಿರುವ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡ, ಆತಿಥೇಯರ ವಿರುದ್ಧ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನಾಡುತ್ತಿದೆ. ಇದರಲ್ಲಿ ಬ್ರಾಡ್ ಅವರನ್ನು ಮೊದಲ ಟೆಸ್ಟ್‌ನಲ್ಲಿ ಇಂಗ್ಲೆಂಡ್ ಆಡಿಸಿರಲಿಲ್ಲ. ದ್ವಿತೀಯ ಟೆಸ್ಟ್ ಬಳಿಕ ಮೈದಾನಕ್ಕಿಳಿದ ಬ್ರಾಡ್, ಮಾರಕ ಬೌಲಿಂಗ್ ಪ್ರದರ್ಶಿಸಿದ್ದಾರೆ.

ವೈರಲ್ ಆಯ್ತು ಐಪಿಎಲ್ 2020 ವೇಳಾಪಟ್ಟಿ: ಅನುಮಾನಕ್ಕೆ 3 ಕಾರಣಗಳುವೈರಲ್ ಆಯ್ತು ಐಪಿಎಲ್ 2020 ವೇಳಾಪಟ್ಟಿ: ಅನುಮಾನಕ್ಕೆ 3 ಕಾರಣಗಳು

ಐಸಿಸಿ ಟೆಸ್ಟ್ ಚಾಂಪಿಯನ್‌ಷಿಪ್‌ನಲ್ಲಿ ತಂಡಗಳ ಸ್ಥಾನಮಾನ, ಬೌಲರ್‌ಗಳ ಟೇಬಲ್‌ನಲ್ಲಿ ಭಾರತೀಯ ಬೌಲರ್‌ಗಳ ಶ್ರೇಯಾಂಕ ಇತ್ಯಾದಿ ಸಂಪೂರ್ಣ ಮಾಹಿತಿ ಇಲ್ಲಿದೆ.

ಒಂದೇ ಸರಣಿಯಲ್ಲಿ 14+ ವಿಕೆಟ್‌ಗಳು

ಒಂದೇ ಸರಣಿಯಲ್ಲಿ 14+ ವಿಕೆಟ್‌ಗಳು

ವೆಸ್ಟ್ ಇಂಡೀಸ್ ವಿರುದ್ಧದ ಎರಡು ಪಂದ್ಯಗಳಲ್ಲಿ ಸ್ಟುವರ್ಟ್ ಬ್ರಾಡ್ (ಭಾನುವಾರ 3ನೇ ದಿನದಾಟದ ಅಂತ್ಯಕ್ಕೆ) ಬರೋಬ್ಬರಿ 14 ವಿಕೆಟ್‌ಗಳನ್ನು ಪಡೆದಿದ್ದರು. ಈ ಸಾಧನೆಯೊಂದಿಗೆ ಸ್ಟುವರ್ಟ್ ಬ್ರಾಡ್ ಈಗ ಐಸಿಸಿ ಟೆಸ್ಟ್ ಚಾಂಪಿಯನ್‌ಷಿಪ್‌ನಲ್ಲಿ 11 ಟೆಸ್ಟ್ ಪಂದ್ಯಗಳಲ್ಲಿ 51 ವಿಕೆಟ್‌ಗಳನ್ನು ಪಡೆದು ನಂ.1 ಸ್ಥಾನಕ್ಕೇರಿದ್ದಾರೆ.

500 ವಿಕೆಟ್‌ಗಳತ್ತ ಸ್ಟುವರ್ಟ್ ಬ್ರಾಡ್

500 ವಿಕೆಟ್‌ಗಳತ್ತ ಸ್ಟುವರ್ಟ್ ಬ್ರಾಡ್

ಕೆರಿಬಿಯನ್ನರ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಬ್ರಾಡ್, ಟೆಸ್ಟ್ ಕ್ರಿಕೆಟ್‌ನಲ್ಲಿ ಅಪರೂಪದ ದಾಖಲೆ ನಿರ್ಮಿಸುವುದರಲ್ಲಿದ್ದಾರೆ. 140 ಟೆಸ್ಟ್ ಪಂದ್ಯಗಳಲ್ಲಿ ಬ್ರಾಡ್ 499 ವಿಕೆಟ್‌ಗಳನ್ನು ಪಡೆದಿದ್ದಾರೆ. ವಿಂಡೀಸ್ ಈಗ ಕೊನೇಯ ಇನ್ನಿಂಗ್ಸ್‌ ಆಡುತ್ತಿದ್ದು, ಬ್ರಾಡ್‌ಗೆ ವಿಕೆಟ್ ಮುರಿಯಲು ಇನ್ನೂ ಅವಕಾಶವಿದೆ. ಇನ್ನೊಂದು ವಿಕೆಟ್ ಲಭಿಸಿದರೂ ಬ್ರಾಡ್ ಟೆಸ್ಟ್ ಕ್ರಿಕೆಟ್‌ನಲ್ಲಿ 500 ವಿಕೆಟ್ ಪಡೆದ ವಿಶ್ವದ 4ನೇ ವೇಗಿಯಾಗಿ, ವಿಶ್ವದ 7ನೇ ಬೌಲರ್‌ ಆಗಿ ಮೈಲಿಗಲ್ಲು ಸ್ಥಾಪಿಸಲಿದ್ದಾರೆ.

ಭಾರತೀಯನಿಗೆ 4ನೇ ಸ್ಥಾನ

ಭಾರತೀಯನಿಗೆ 4ನೇ ಸ್ಥಾನ

ಐಸಿಸಿ ಟೆಸ್ಟ್ ಚಾಂಪಿಯನ್‌ಷಿಪ್‌ನಲ್ಲಿ ಅತ್ಯಧಿಕ ವಿಕೆಟ್ ಪಡೆದವರಲ್ಲಿ ಭಾರತದ ವೇಗಿ ಮೊಹಮ್ಮದ್ ಶಮಿ 4ನೇ ಸ್ಥಾನ ಪಡೆದುಕೊಂಡಿದ್ದಾರೆ. 9 ಪಂದ್ಯಗಳನ್ನಾಡಿರುವ ಶಮಿ, 36 ವಿಕೆಟ್ ಮುರಿದಿದ್ದಾರೆ. ಸದ್ಯ ಟೆಸ್ಟ್ ಚಾಂಪಿಯನ್‌ಶಿಪ್ ಬೆಸ್ಟ್ ಬೌಲರ್‌ಗಳಲ್ಲಿ 1. ಸ್ಟುವರ್ಟ್ ಬ್ರಾಡ್* (51 ವಿಕೆಟ್‌ಗಳು), 2. ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ (49), 3. ನೇಥನ್ ಲಿಯಾನ್ (47), 4. ಮೊಹಮ್ಮದ್ ಶಮಿ (36), 5. ನ್ಯೂಜಿಲೆಂಡ್‌ನ ಟಿಮ್ ಸೌಥೀ (33), 6. ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ (33), 7. ಇಂಗ್ಲೆಂಡ್‌ನ ಜೋಫ್ರಾ ಆರ್ಚರ್* (32), 8. ಆಸ್ಟ್ರೇಲಿಯಾದ ಜೋಶ್ ಹ್ಯಾಝಲ್ವುಡ್ (31), 9. ಭಾರತದ ಇಶಾಂತ್ ಶರ್ಮಾ (30), 10. ಇಂಗ್ಲೆಂಡ್‌ನ ಬೆನ್ ಸ್ಟೋಕ್ಸ್* (27) ಇದ್ದಾರೆ.

ಭಾರತಕ್ಕೆ ನಂ.1 ಶ್ರೇಯಾಂಕ

ಭಾರತಕ್ಕೆ ನಂ.1 ಶ್ರೇಯಾಂಕ

ಟೆಸ್ಟ್ ಚಾಂಪಿಯನ್‌ಷಿಪ್‌ನಲ್ಲಿ ಸರಣಿಯೊಂದಕ್ಕೆ 120ರಂತೆ ಅಂಕಗಳನ್ನು ನೀಡಲಾಗುತ್ತದೆ. ಅಂದರೆ 3 ಪಂದ್ಯಗಳ ಸರಣಿಯಾದರೆ ಪ್ರತೀ ಪಂದ್ಯಕ್ಕೆ 40ರಂತೆ ಅಂಕಗಳನ್ನು, 2 ಪಂದ್ಯಗಳ ಸರಣಿಯಾದರೆ ಪ್ರತೀ ಪಂದ್ಯಕ್ಕೆ 60ರಂತೆ ಅಂಕಗಳನ್ನು ವಿಭಾಜಿಸಲಾಗುತ್ತದೆ. ಸದ್ಯ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ 1. ಭಾರತ (360 ಅಂಕಗಳು), 2. ಆಸ್ಟ್ರೇಲಿಯಾ (296), 3. ಇಂಗ್ಲೆಂಡ್ (186), 4. ನ್ಯೂಜಿಲೆಂಡ್ (180), 5. ಪಾಕಿಸ್ತಾನ (140) ತಂಡಗಳಿವೆ.

Story first published: Monday, July 27, 2020, 16:02 [IST]
Other articles published on Jul 27, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X