ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮೂರು ತಿಂಗಳು ಜರ್ಮನಿಯಲ್ಲಿ ಸಿಲುಕಿದ್ದ ವಿಶ್ವನಾಥನ್ ಆನಂದ್ ಇಂದು ತಾಯ್ನಾಡಿಗೆ ವಾಪಾಸ್

Stuck In Germany For Over Three Months, Anand Finally Return Home

ಜರ್ಮನಿಯಲ್ಲಿ ಸಿಲುಕಿದ್ದ ವಿಶ್ವನಾಥನ್ ಆನಂದ್ ಇಂದು ತಾಯ್ನಾಡಿಗೆ ಮರಳುವಲ್ಲಿ ಯಶಸ್ವಿಯಾಗಿದ್ದಾರೆ. ವಿಶ್ವನಾಥನ್ ಆನಂದ್ ಕಳೆದ ಮೂರು ತಿಂಗಳಿನಿಂದ ಜರ್ಮನಿಯಲ್ಲಿ ಸಿಲುಕಿಕೊಂಡಿದ್ದರು. ಕೊರೊನಾ ವೈರಸ್‌ನ ಕಾರಣದಿಂದಾಗಿ ಭಾರತಕ್ಕೆ ಮರಳಲು ಸಾಧ್ಯವಾಗದೆ ಅಲ್ಲ ಜರ್ಮನಿಯಲ್ಲೇ ಉಳಿದುಕೊಂಡಿದ್ದರು.

ನಾಲ್ಕನೇ ಹಂತದ ಲಾಕ್‌ಡೌನ್‌ ಸಡಿಲಗೊಳಿಸಿದ ನಂತರ ವಿಮಾನ ಹಾರಾಟಗಳಿಗೆ ಅವಕಾಶವನ್ನು ನೀಡಲಾಗಿದೆ. ಆ ಹಿನ್ನೆಲೆಯಲ್ಲಿ ವಿಶ್ವನಾಥನ್ ಆನಂದ್ ವಾಪಾಸಾಗುತ್ತಿದ್ದಾರೆ. ಶುಕ್ರವಾರ ರಾತ್ರಿ ಏರ್ ಇಂಡಿಯಾ ವಿಮಾನದ ಮೂಲಕ ಪ್ರಯಾಣವನ್ನು ಆನಂದ್ ಆರಂಭಿಸಿದ್ದು ಶನಿವಾರ ಮಧ್ಯಾಹ್ನ 1.15 ಬೆಂಗಳೂರಿಗೆ ತಲುಪಲಿದ್ದಾರೆ ಎಂದು ಅವರ ಪತ್ನಿ ಅರುಣಾ ಮಾಹಿತಿ ನೀಡಿದ್ದಾರೆ.

ಫೋರ್ಬ್ಸ್ ಪಟ್ಟಿಯಲ್ಲಿ ಫೆಡರರ್ ದಾಖಲೆ, ನೂರು ಕ್ರೀಡಾಪಟುಗಳಲ್ಲಿ ಓರ್ವ ಕ್ರಿಕೆಟರ್‌ಗೆ ಮಾತ್ರ ಸ್ಥಾನಫೋರ್ಬ್ಸ್ ಪಟ್ಟಿಯಲ್ಲಿ ಫೆಡರರ್ ದಾಖಲೆ, ನೂರು ಕ್ರೀಡಾಪಟುಗಳಲ್ಲಿ ಓರ್ವ ಕ್ರಿಕೆಟರ್‌ಗೆ ಮಾತ್ರ ಸ್ಥಾನ

ಐದು ಬಾರಿಯ ಚೆಸ್ ವಿಶ್ವ ಚಾಂಪಿಯನ್ ಆನಂದ್ ಬೆಂಗಳೂರಿಗೆ ಬಂದಿಳಿದ ಕೂಡಲೇ ಕ್ವಾರಂಟೈನ್‌ಗೆ ಒಳಪಡಲಿದ್ದಾರೆ. ಕರ್ನಾಟಕ ಸರ್ಕಾರದ ನಿಯಮದ ಪ್ರಕಾರ ಈ ಅವಧಿಯನ್ನು ಪೂರೈಸಿದ ನಂತರ ಚೆನ್ನೈನ ತಮ್ಮ ನಿವಾಸಕ್ಕೆ ತೆರಳಲಿದ್ದಾರೆ ಎಂದು ಅರುಣಾ ಮಾಹಿತಿ ನೀಡಿದ್ದಾರೆ.

ಬಂದೆಸ್ಲಿಗಾ ಚೆಸ್ ಲೀಗ್‌ನಲ್ಲಿ ಪಾಲ್ಗೊಳ್ಳಲು ವಿಶ್ವನಾಥನ್ ಆನಂದ್ ಜರ್ಮನಿಗೆ ತೆರಳಿದ್ದರು. ಅಲ್ಲಿಂದ ಭಾರತಕ್ಕೆ ವಾಪಾಸಾಗಬೇಕೆನ್ನುವಷ್ಟರಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗಲು ಆರಂಭಿಸಿತ್ತು. ಅದಾದ ಬಳಿಕ ಲಾಕ್‌ಡೌನ್ ಘೋಷಣೆಯಾದ ಕಾರಣ ವಿಶ್ವನಾಥನ್ ಆನಂದ್ ಭಾರತಕ್ಕೆ ಮರಳಲು ಸಾಧ್ಯವಾಗಿರಲಿಲ್ಲ.

ಸಾರ್ವಕಾಲಿಕ ಶ್ರೇಷ್ಠ ಆರ್‌ಸಿಬಿ ತಂಡದಲ್ಲಿ ನಾಲ್ವರು ಕನ್ನಡಿಗರಿಗೆ ಸ್ಥಾನಸಾರ್ವಕಾಲಿಕ ಶ್ರೇಷ್ಠ ಆರ್‌ಸಿಬಿ ತಂಡದಲ್ಲಿ ನಾಲ್ವರು ಕನ್ನಡಿಗರಿಗೆ ಸ್ಥಾನ

ಜರ್ಮನಿಯಿಂದ ಭಾರತಕ್ಕೆ ದೆಹಲಿ ಮತ್ತು ಬೆಂಗಳೂರು ಎರಡು ನಗರಗಳಿಗೆ ಮಾತ್ರ ಸಂಪರ್ಕವಿದೆ. ಆ ಹಿನ್ನೆಲೆಯಲ್ಲಿ ವಿಶ್ವನಾಥನ್ ಆನಂದ್ ಬೆಂಗಳೂರಿಗೆ ಬಂದಿಳಿದು ಕ್ವಾರಂಟೈನ್ ಅವಧಿ ಪೂರೈಸಿದ ನಂತರ ಚೆನ್ನೈನಲ್ಲಿರುವ ತಮ್ಮ ಕುಟುಂಬವನ್ನು ಸೇರಿಕೊಳ್ಳಲಿದ್ದಾರೆ.

Story first published: Saturday, May 30, 2020, 17:37 [IST]
Other articles published on May 30, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X