ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್: 7 ತಂಡಗಳಿಗೆ ದುಃಸ್ವಪ್ನದಂತೆ ಕಾಡುತ್ತಿರುವ ಸ್ಪಿನ್ ಮಾಂತ್ರಿಕ

ಹಾಲೀ ಐಪಿಎಲ್ ಸರಣಿಯಲ್ಲಿ ಎಲ್ಲಾ ತಂಡಗಳಿಗೂ ಕಾಡುತ್ತಿರುವುದು ಅಫಘಾನಿಸ್ತಾನ ರಾಷ್ಟ್ರೀಯ ತಂಡದ ಉಪನಾಯಕ, ಸನ್ ರೈಸರ್ಸ್ ಹೈದರಾಬಾದ್ ತಂಡದ ಆಟಗಾರ ರಶೀದ್ ಖಾನ್ ಅರ್ಮನ್.

"ಪ್ರತೀ ನಾಯಕನು ಆತನಂತ ಬೌಲರ್ ಅನ್ನು ಹೊಂದಲು ಬಯಸುತ್ತಾನೆ" ಎಂದು ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಅವರಿಂದ ಶಹಬ್ಬಾಸ್ ಗಿರಿ ಪಡೆದುಕೊಂಡಿರುವ, 22ವರ್ಷ ವಯಸ್ಸಿನ ರಶೀದ್ ಖಾನ್, ವಾರ್ನರ್ ಪಡೆಯ ಪ್ರಮುಖ ಬೌಲಿಂಗ್ ಅಸ್ತ್ರ.

ಪ್ರತಿ ನಾಯಕನೂ ಆತನಂತಾ ಬೌಲರ್‌ನನ್ನು ಹೊಂದಲು ಬಯಸುತ್ತಾನೆ: ಸುನಿಲ್ ಗವಾಸ್ಕರ್ಪ್ರತಿ ನಾಯಕನೂ ಆತನಂತಾ ಬೌಲರ್‌ನನ್ನು ಹೊಂದಲು ಬಯಸುತ್ತಾನೆ: ಸುನಿಲ್ ಗವಾಸ್ಕರ್

ಐಪಿಎಲ್ ನಂತಹ ರನ್ ಪ್ರವಾಹವೇ ಹರಿಯುವ ಪಂದ್ಯಗಳಲ್ಲಿ ಸರಾಸರಿ 4.8 ಬೌಲಿಂಗ್ ಇಕಾನಮಿ ರೇಟ್ ಹೊಂದಿರುವ ಇನ್ನೊಬ್ಬ ಬೌಲರ್, ಸದ್ಯದ ಐಪಿಎಲ್ ಸರಣಿಯಲ್ಲಿ ಇನ್ನೊಬ್ಬರಿರಲಿಕ್ಕಿಲ್ಲ. 2017ರಿಂದ ಸತತವಾಗಿ ರಶೀದ್, ಹೈದರಾಬಾದ್ ತಂಡದ ಪರವಾಗಿ ಆಡುತ್ತಿದ್ದಾರೆ.

ಬಲಗೈ ಸ್ಪಿನ್ನರ್ ರಶೀದ್ ಖಾನ್, ಇದುವರೆಗೆ ಸನ್ ರೈಸರ್ಸ್ ಆಡಿರುವ ಆರೂ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಐಪಿಎಲ್ ಬಿಡ್ ನಲ್ಲಿ ಇವರನ್ನು ಖರೀದಿಸಲು ಬೇರೆ ತಂಡಗಳೂ ಸಾಕಷ್ಟು ಪ್ರಯತ್ನ ನಡೆಸಿದ್ದವು. ಇದುವರೆಗಿನ ಅವರ ಪರ್ಫಾರ್ಮೆನ್ಸ್ ಹೇಗಿದೀ? ಮುಂದೆ ಓದಿ..

''ನನ್ನ ತಾಯಿ ನನ್ನ ದೊಡ್ಡ ಫ್ಯಾನ್, ಮಿಸ್ ಯೂ'' ಎಂದ ರಶೀದ್ ಖಾನ್''ನನ್ನ ತಾಯಿ ನನ್ನ ದೊಡ್ಡ ಫ್ಯಾನ್, ಮಿಸ್ ಯೂ'' ಎಂದ ರಶೀದ್ ಖಾನ್

ರಶೀದ್ ಖಾನ್, ಹೈದರಾಬಾದ್ ತಂಡಕ್ಕೆ ಬಿಕರಿ

ರಶೀದ್ ಖಾನ್, ಹೈದರಾಬಾದ್ ತಂಡಕ್ಕೆ ಬಿಕರಿ

2017ರಲ್ಲಿ ನಾಲ್ಕು ಕೋಟಿ, 2018 ಮತ್ತು 2019ರಲ್ಲಿ ಒಂಬತ್ತು ಕೋಟಿಗೆ ರಶೀದ್ ಖಾನ್, ಹೈದರಾಬಾದ್ ತಂಡಕ್ಕೆ ಬಿಕರಿಯಾಗಿದ್ದರು. ಕೇನ್ ವಿಲಿಯಮ್ಸ್, ಮನೀಶ್ ಪಾಂಡೆ, ಬೈರ್ಸ್ಟೋ, ವಾರ್ನರ್ ಹೀಗೆ.. ರಶೀದ್ ಖಾನ್ ಅವರನ್ನೂ ಸನ್ ರೈಸರ್ಸ್ ತಂಡ ತನ್ನಲ್ಲಿ ಉಳಿಸಿಕೊಂಡಿತ್ತು.

ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ದದ ಪಂದ್ಯ

ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ದದ ಪಂದ್ಯ

ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ದದ ಪಂದ್ಯದಲ್ಲಿ ನಾಲ್ಕು ಓವರ್ ಗೆ 31 ರನ್ ನೀಡಿದ್ದರೆ, ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ದದ ಪಂದ್ಯದಲ್ಲಿ ನಾಲ್ಕು ಓವರ್ ಬೌಲ್ ಮಾಡಿ, 25 ರನ್ ನೀಡಿ ಒಂದು ವಿಕೆಟ್ ಪಡೆದಿದ್ದರು. ಆದರೆ, ಎರಡೂ ಪಂದ್ಯದಲ್ಲಿ ಹೈದರಾಬಾದ್ ತಂಡ ಸೋಲು ಅನುಭವಿಸಿತ್ತು.

ನಾಲ್ಕು ಓವರ್ ನಲ್ಲಿ ಕೇವಲ ಹದಿನಾಲ್ಕು ರನ್ ಮೂರು ವಿಕೆಟ್

ನಾಲ್ಕು ಓವರ್ ನಲ್ಲಿ ಕೇವಲ ಹದಿನಾಲ್ಕು ರನ್ ಮೂರು ವಿಕೆಟ್

ಇನ್ನು ದೆಹಲಿ ವಿರುದ್ದದ ಪಂದ್ಯದಲ್ಲಿ ಉತ್ತಮ ಬೌಲಿಂಗ್ ಪ್ರದರ್ಶಿಸಿದ್ದ ರಶೀದ್ ಖಾನ್, ನಾಲ್ಕು ಓವರ್ ನಲ್ಲಿ ಕೇವಲ ಹದಿನಾಲ್ಕು ರನ್ ಮೂರು ವಿಕೆಟ್ ಪಡೆದು, ತಂಡದ ಗೆಲುವಿಗೆ ಪ್ರಮುಖ ಕಾರಣರಾಗಿದ್ದರು. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ದದ ಪಂದ್ಯದಲ್ಲಿ ವಿಕೆಟ್ ಗಳಿಸದೇ ಇದ್ದರೂ, ನಾಲ್ಕು ಓವರ್ ನಲ್ಲಿ ಕೇವಲ ಹನ್ನೆರಡು ರನ್ ನೀಡಿದ್ದರು.

ಪಂಜಾಬ್ ತಂಡದ ವಿರುದ್ದ ನಾಲ್ಕು ಓವರ್ ನಲ್ಲಿ ಹನ್ನೆರಡು ರನ್ನಿಗೆ ಮೂರು ವಿಕೆಟ್

ಪಂಜಾಬ್ ತಂಡದ ವಿರುದ್ದ ನಾಲ್ಕು ಓವರ್ ನಲ್ಲಿ ಹನ್ನೆರಡು ರನ್ನಿಗೆ ಮೂರು ವಿಕೆಟ್

ಮುಂಬೈ ಇಂಡಿಯನ್ಸ್ ವಿರುದ್ದದ ಪಂದ್ಯದಲ್ಲಿ ನಾಲ್ಕು ಓವರ್ ನಲ್ಲಿ 22 ರನ್ ನೀಡಿ ಒಂದು ವಿಕೆಟ್, ಮತ್ತು, ಕಳೆದ ಪಂದ್ಯದಲ್ಲಿ ಪಂಜಾಬ್ ತಂಡದ ವಿರುದ್ದ ನಾಲ್ಕು ಓವರ್ ನಲ್ಲಿ ಹನ್ನೆರಡು ರನ್ನಿಗೆ ಮೂರು ವಿಕೆಟ್ ಪಡೆದು ತಂಡದ ಗೆಲುವಿಗೆ ಕಾರಣರಾಗಿದ್ದರು. ಇದುವರೆಗೆ ರಶೀದ್, 24 ಓವರ್ ಬೌಲ್ ಮಾಡಿ, ಕೇವಲ 116 ರನ್ ನೀಡಿ, 8 ವಿಕೆಟ್ ಪಡೆದಿದ್ದಾರೆ. ಇದುವರೆಗಿನ ಅವರ ಇಕಾನಮಿ ರೇಟ್ 4.8.

Story first published: Saturday, October 10, 2020, 10:04 [IST]
Other articles published on Oct 10, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X