ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನ್ಯೂಜಿಲೆಂಡ್‌ ವಿರುದ್ಧದ ಫೈನಲ್‌ ಕುರಿತಾಗಿ ಮಾತನಾಡಿದ ಇಂಗ್ಲೆಂಡ್‌ ನಾಯಕ!

ICC World Cup 2019 : ಇಂಗ್ಲೆಂಡ್ ಆಟಗಾರರಿಗೆ ಎಚ್ಚರಿಕೆಯ ಸಂದೇಶ ನೀಡಿದ ಮಾರ್ಗನ್..? | Eoin Morgan
Sunday is a day to look forward to and enjoy: Eoin Morgan

ಲಂಡನ್, ಜುಲೈ 12: ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಇಂಗ್ಲೆಂಡ್‌ ತಂಡ 27 ವರ್ಷಗಳ ಬಳಿಕ ಇದೇ ಮೊದಲ ಬಾರಿ ಪ್ರಶಸ್ತಿ ಸುತ್ತಿಗೆ ಕಾಲಿಟ್ಟಿದೆ. ಈ ಸಂದರ್ಭದಲ್ಲಿ ಆಸ್ಟ್ರೇಲಿಯಾ ವಿರುದ್ಧ ನೀಡಿದ್ದ ಪ್ರದರ್ಶನವನ್ನೇ ಫೈನಲ್‌ನಲ್ಲೂ ಕಾಯ್ದುಕೊಳ್ಳುವಂತೆ ತಮ್ಮ ತಂಡಕ್ಕೆ ನಾಯಕ ಐಯಾನ್‌ ಮಾರ್ಗನ್‌ ಸಂದೇಶ ರವಾನಿಸಿದ್ದಾರೆ.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ

"ಈ ಭಾನುವಾರದ ಕುರಿತಾಗಿ ಅಂಜಿಕೊಳ್ಳುವುದೇನೂ ಇಲ್ಲ. ಮತ್ತೊಂದು ದಿನದಂತೆ ಭಾವುವಾರವನ್ನು ಎದುರು ನೋಡುತ್ತಿದ್ದೇವೆ ಅಷ್ಟೇ. ವಿಶ್ವಕಪ್‌ ಫೈನಲ್‌ನಲ್ಲಿ ಆಡುವ ಅವಕಾಶ ಗಿಟ್ಟಿಸಿಕೊಂಡಿದ್ದೇವೆ. ನಮ್ಮ ಕೈಲಾದ ಪ್ರಯತ್ನ ನಡೆಸಿ ಪಂದ್ಯವನ್ನು ಆನಂದಿಸುವ ಕಡೆಗೆ ಎದುರು ನೋಡುತ್ತಿದ್ದೇವೆ,'' ಎಂದು ಮಾರ್ಗನ್‌ ಹೇಳಿದ್ದಾರೆ.

ಇದೇ ವೇಳೆ ಎಡ್ಜ್‌ಬಾಸ್ಟನ್‌ ಅಂಗಣದಲ್ಲಿ ಆಸ್ಟ್ರೇಲಿಯಾದ ಬಲಿಷ್ಠ ಬೌಲಿಂಗ್‌ ದಾಳಿ ಎದುರು ಉತ್ತಮ ರೀತಿಯಲ್ಲಿ ಆಡಲು ಸಾಧ್ಯವಾದದದ್ದುಅಲ್ಲಿನ ಸ್ಥಿತಿಗತಿಗಳಿಗೆ ಹೊಂದಿಕೊಳ್ಳಲು ಸಾಧ್ಯವಾದುದರಿಂದ ಎಂದು ಮಾರ್ಗನ್‌ ತಿಳಿಸಿದ್ದಾರೆ.

ಆಸೀಸ್‌ ವಿರುದ್ಧ ಸೆಮಿಫೈನಲ್‌ ಗೆದ್ದು ತೊಡೆತಟ್ಟಿ ಮಾರ್ಗನ್‌ ಹೇಳಿದ್ದಿದು!ಆಸೀಸ್‌ ವಿರುದ್ಧ ಸೆಮಿಫೈನಲ್‌ ಗೆದ್ದು ತೊಡೆತಟ್ಟಿ ಮಾರ್ಗನ್‌ ಹೇಳಿದ್ದಿದು!

"ಆಸ್ಟ್ರೇಲಿಯಾ ಅತ್ಯಂತ ಬಲಿಷ್ಠ ತಂಡ. ವಿಶ್ವ ಶ್ರೇಷ್ಠ ಬೌಲರ್‌ಗಳು ಆಸೀಸ್ ತಂಡದಲ್ಲಿದ್ದಾರೆ. ಮಿಚೆಲ್ ಸ್ಟಾರ್ಕ್‌ ಅದ್ಭುತ ವಿಶ್ವಕಪ್‌ ಆಡಿದ್ದಾರೆ.. ನೇಥನ್‌ ಲಯಾನ್‌ ಅಪ್ರತಿಮ ಟೆಸ್ಟ್‌ ಬೌಲರ್‌. ಇವರಿಬ್ಬರು ತಂಡಕ್ಕೆ ಯಾವುದೇ ಸಂದರ್ಭದಲ್ಲಿ ಯಸಸ್ಸು ತಂದುಕೊಡಬಲ್ಲರು. ಆದರೆ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವ ಮೂಲಕ ಬ್ಯಾಟಿಂಗ್‌ಗೆ ಹೇಳಿ ಮಾಡಿಸಿದ್ದ ಪಿಚ್‌ನಲ್ಲಿ ಸುಲಭವಾಗಿ ರನ್‌ ಗಳಿಸಿದೆವು," ಎಂದಿದ್ದಾರೆ.

ಅಂಪೈರ್‌ ತೀರ್ಪಿಗೆ ಅಸಮಾಧಾನ, ಇಂಗ್ಲೆಂಡ್‌ನ ಜೇಸನ್‌ ರಾಯ್‌ಗೆ ದಂಡ!ಅಂಪೈರ್‌ ತೀರ್ಪಿಗೆ ಅಸಮಾಧಾನ, ಇಂಗ್ಲೆಂಡ್‌ನ ಜೇಸನ್‌ ರಾಯ್‌ಗೆ ದಂಡ!

"ನಮ್ಮ ತಂಡ ಕಳೆದ ನಾಲ್ಕು ವರ್ಷಗಳಲ್ಲಿ ಸಾಕಷ್ಟು ಅಭಿವೃದ್ಧಿ ಕಂಡಿದೆ. 2015ರಲ್ಲಿ ನಮ್ಮ ತಂಡ ಲಯದಲ್ಲಿ ಇರಲಿಲ್ಲ. ಅಗ್ರ ಶ್ರೇಯಾಂಕಿತ ತಂಡಗಳ ಎದುರು ತಿಣುಕಾಡಿದ್ದೆವು. ಇದರಿಂದ ಸಾಕಷ್ಟು ಪಾಠ ಕಲಿತು ತಂಡದಲ್ಲಿ ಮಹತ್ವದ ಬದಲಾವಣೆಗಳನ್ನು ತಂದುಕೊಂಡಿದ್ದೇವೆ. ಇದರಿಂದಲೇ ಇಂದು ಈ ಹಂತ ತಲುಪಲು ಸಾಧ್ಯವಾಗಿದೆ," ಎಂದು ತಂಡದ ಕಠಿಣ ಪರಿಶ್ರಮವನ್ನು ಮಾರ್ಗನ್‌ ಹೊಗಳಿಸಿದ್ದಾರೆ.

ವಿಶ್ವಕಪ್‌ ಕೂಡ ಐಪಿಎಲ್‌ ರೀತಿ ಆಗಬೇಕು ಎಂದ ವಿರಾಟ್‌ ಕೊಹ್ಲಿ!ವಿಶ್ವಕಪ್‌ ಕೂಡ ಐಪಿಎಲ್‌ ರೀತಿ ಆಗಬೇಕು ಎಂದ ವಿರಾಟ್‌ ಕೊಹ್ಲಿ!

ಇನ್ನು ಭಾರತ ಮತ್ತು ನ್ಯೂಜಿಲೆಂಡ್‌ ನಡುವಣ ಸೆಮಿಫೈನಲ್‌ ಪಂದ್ಯದ ಕುರಿತಾಗಿ ಮಾತನಾಡಿದ ಮಾರ್ಗನ್‌, "ನಮ್ಮ ಅಭ್ಯಾಸ ಆರಂಭವಾಗುವ ವರೆಗೂ ಪಂದ್ಯವನ್ನು ವೀಕ್ಷಿಸಿದೆ. ಒಂದು ಉತ್ತಮ ಕ್ರಿಕೆಟ್‌ ಪಂದ್ಯವದು. ಭಾರತ ತಂಡ ಆರಂಭಿಕ ವಿಕೆಟ್‌ ಕಳೆದುಕೊಂಡ ಬಳಿಕ ನಿರ್ಣಾಮವಾಯಿತೆಂದೇ ಎಣಿಸಿದ್ದೆ. ಆದರೆ ಬಳಿಕ ಎಲ್ಲವೂ ಬದಲಾಯಿತು. ನ್ಯೂಜಿಲೆಂಡ್‌ ನಿಜಕ್ಕೂ ಅತ್ಯುತ್ತಮ ರೀತಿಯಲ್ಲಿ ಬೌಲಿಂಗ್‌ ನಡೆಸಿತು," ಎಂದು ಹೇಳಿದ್ದಾರೆ.

Story first published: Friday, July 12, 2019, 18:24 [IST]
Other articles published on Jul 12, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X