ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸಿಡ್ನಿ ಟೆಸ್ಟ್: ಶುಬ್ಮನ್ ಗಿಲ್ ಆಟಕ್ಕೆ ಮನಸೋತ ಸುನಿಲ್ ಗವಾಸ್ಕರ್ ಹಾಗೂ ವಿವಿಎಸ್ ಲಕ್ಷ್ಮಣ್

Sunil gavaskar and VVS Laxman praises Shubhman Gill

ಭಾರತ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ಉತ್ತಮ ಆರಂಭವನ್ನು ಪಡೆದಿದೆ. ಇದರಲ್ಲಿ ಯುವ ಆಟಗಾರ ಶುಬ್ಮನ್ ಗಿಲ್ ಪ್ರದರ್ಶನ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿದೆ. ಎರಡನೇ ಪಂದ್ಯವನ್ನಾಡುತ್ತಿರುವ ಶುಬ್ಮನ್ ಗಿಲ್ ಆತ್ಮವಿಶ್ವಾಸದ ಪ್ರದರ್ಶನವನ್ನು ನೀಡಿರುವುದು ಮಾಜಿ ಕ್ರಿಕೆಟರ್‌ಗಲೂ ಮೆಚ್ಚುವಂತೆ ಮಾಡಿದೆ.

ಭಾರತೀಯ ಕ್ರಿಕೆಟ್‌ನ ದಿಗ್ಗಜ ಆಟಗಾರ ಸುನಿಲ್ ಗವಾಸ್ಕರ್ ಗಿಲ್ ಆಟವನ್ನು ಮುಕ್ತವಾಗಿ ಕೊಂಡಾಡಿದ್ದಾರೆ. ಇಂದು ಶುಬ್ಮನ್ ಗಿಲ್ ತೋರಿದ ಆಟ ಆತ ಭವಿಷ್ಯದ ಭರವಸೆಯ ಎಂಬುದನ್ನು ವ್ಯಕ್ತಪಡಿಸುತ್ತದೆ ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ. ಈ ಅರ್ಧ ಶತಕ ಶತಕವಾಗಿ ಬದಲಾಗುವುದನ್ನು ನಾನು ಬಯಸಿದ್ದೆ ಎಂದಿದ್ದಾರೆ ಗವಾಸ್ಕರ್.

ಭಾರತ vs ಆಸ್ಟ್ರೇಲಿಯಾ: 27ನೇ ಶತಕ ಸಿಡಿಸಿ ಕೊಹ್ಲಿ ದಾಖಲೆಯನ್ನು ಸರಿಗಟ್ಟಿದ ಸ್ಮಿತ್ಭಾರತ vs ಆಸ್ಟ್ರೇಲಿಯಾ: 27ನೇ ಶತಕ ಸಿಡಿಸಿ ಕೊಹ್ಲಿ ದಾಖಲೆಯನ್ನು ಸರಿಗಟ್ಟಿದ ಸ್ಮಿತ್

ಆಕ್ರಮಣಕಾರಿ ಹಾಗೂ ರಕ್ಷಣಾತ್ಮಕ ಆಟಗಾರ

ಆಕ್ರಮಣಕಾರಿ ಹಾಗೂ ರಕ್ಷಣಾತ್ಮಕ ಆಟಗಾರ

ಶುಬ್ಮನ್ ಗಿಲ್ ಬತ್ತಳಿಕೆಯಲ್ಲಿ ಸಾಕಷ್ಟು ಉತ್ತಮ ಹೊಡೆತಗಳು ಇವೆ. ಶುಬ್ಮನ್ ಗಿಲ್ ಆಕ್ರಮಣಕಾರಿ ಆಟದಲ್ಲಿ ಅದ್ಭುತವಾಗಿ ಆಡಿದಷ್ಟೇ ರಕ್ಷಣಾತ್ಮಕವಾಗಿಯೂ ಆಡಬಲ್ಲವರಾಗಿದ್ದಾರೆ. ಅದೇ ಕಾರಣದಿಂದಾಗಿ ಆತನ ಅತ್ಯುತ್ತಮ ವೃತ್ತಿ ಬದುಕನನ್ನು ಹೊಂದಲಿದ್ದಾರೆ ಎಂದು ಸುನಿಲ್ ಗವಾಸ್ಕರ್ ಶುಭ್ಮನ್ ಗಿಲ್ ಪ್ರದರ್ಶನದ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.

ಮೂರು ಮಾದರಿಯಲ್ಲೂ ಉತ್ತಮ ಭವಿಷ್ಯ

ಮೂರು ಮಾದರಿಯಲ್ಲೂ ಉತ್ತಮ ಭವಿಷ್ಯ

ಮತ್ತೊಂದೆಡೆ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಕೂಡ ಶುಬ್ಮನ್ ಗಿಲ್ ಪ್ರದರ್ಶನದ ಬಗ್ಗೆ ಹೊಗಳಿಕೆಯ ಮಾತುಗಳನ್ನು ಆಡಿದ್ದಾರೆ. ಶುಬ್ಮನ್ ಗಿಲ್ ಮೂರು ಮಾದರಿಯ ಕ್ರಿಕೆಟ್‌ನಲ್ಲೂ ಅದ್ಭುತವಾದ ಭವಿಷ್ಯವನ್ನು ಹೊಂದಿದ್ದಾರೆ ಎಂದು ವಿವಿಎಸ್ ಲಕ್ಷ್ಮಣ್ ಹೇಳಿದ್ದಾರೆ.

ಭರವಸೆದಾಯದ ಆಟ

ಭರವಸೆದಾಯದ ಆಟ

ವೃತ್ತಿ ಜೀವನದ ಎರಡನೇ ಟೆಸ್ಟ್‌ನಲ್ಲಿ ಶುಬ್ಮನ್ ಗಿಲ್ ಆಡುತ್ತಿದ್ದರೂ ಆಸ್ಟ್ರೇಲಿಯಾದ ಭಯಾನಕ ಬೌಲಿಂಗ್ ದಾಳಿಯನ್ನು ಸರಾಗವಾಗಿ ಎದುರಿಸುತ್ತಿದ್ದಾರೆ. ವೃತ್ತಿ ಜೀವನದ ಆರಂಭದಲ್ಲಿ ಈ ರೀತಿಯ ಪ್ರದರ್ಶನವನ್ನು ನೀಡುತ್ತಿರುವುದು ನಿಜಕ್ಕೂ ಭರವಸೆದಾಯಕ ಎಂದು ಲಕ್ಷ್ಮಣ್ ಹೇಳಿದ್ದಾರೆ. ಈತ ಭಾರತದ ಮೂರು ಮಾದರಿಯ ಕ್ರಿಕೆಟ್‌ನಲ್ಲೂ ಅದ್ಭುತವಾದ ಭವಿಷ್ಯವನ್ನು ಹೊಂದಿದ್ದಾರೆ ಎಂದು ಲಕ್ಷ್ಮಣ್ ಹೇಳಿದ್ದಾರೆ.

ಅವಕಾಶ ಕೈಚೆಲ್ಲಿದ ಪೃಥ್ವಿ ಶಾ

ಅವಕಾಶ ಕೈಚೆಲ್ಲಿದ ಪೃಥ್ವಿ ಶಾ

ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್ ಪೃಥ್ವಿ ಶಾಗೆ ಅವಕಾಶವನ್ನು ನೀಡಿತ್ತು. ಆದರೆ ಶಾ ಆ ಪಂದ್ಯದಲ್ಲಿ ಕಳಪೆಯಾಗಿ ಆಡಿ ಅವಕಾಶವನ್ನು ಕಳೆದುಕೊಂಡರು. ಹೀಗಾಗಿ ಎರಡನೇ ಪಂದ್ಯದಲ್ಲಿ ಅವಕಾಶವನ್ನು ಗಿಟ್ಟಿಸಿಕೊಂಡು ಮೊದಲ ಇನ್ನಿಂಗ್ಸ್‌ನಲ್ಲಿ 45 ಹಾಗೂ ಎರಡನೇ ಇನ್ನಿಂಗ್ಸ್‌ನಲ್ಲಿ ಅಜೇಯ 35 ರನ್ ಬಾರಿಸಿದ್ದರು. ಈಗ ಎರಡನೇ ಪಂದ್ಯದಲ್ಲಿ ಟೆಸ್ಟ್ ಕ್ರಿಕೆಟ್‌ನ ಚೊಚ್ಚಲ ಅರ್ಧ ಶತಕವನ್ನು ಬಾರಿಸಿ ಮಿಂಚಿದ್ದಾರೆ.

Story first published: Friday, January 8, 2021, 16:59 [IST]
Other articles published on Jan 8, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X