ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರೋಹಿತ್ ರನ್ ಬಾರಿಸದಿದ್ರೂ ಯಾರೂ ಕೇಳಲ್ಲ!: ಕೊಹ್ಲಿ ಬೆಂಬಲಕ್ಕೆ ನಿಂತ ಸುನಿಲ್ ಗವಾಸ್ಕರ್

Sunil Gavaskar backs Virat Kohli said When Rohit and others does not score runs no one talks about it

ವಿರಾಟ್ ಕೊಹ್ಲಿ ಫಾರ್ಮ್ ಬಗ್ಗೆ ಕ್ರಿಕೆಟ್ ವಲಯದಲ್ಲಿ ಭಾರೀ ಚರ್ಚೆಗಳು ನಡೆಯುತ್ತಿದೆ. ದಿಗ್ಗಜ ಆಟಗಾರರ ಸತತವಾಗಿ ವೈಫಲ್ಯವನ್ನು ಅನುಭವಿಸುತ್ತಿರುವುದು ಕೊಹ್ಲಿಗೆ ಮಾತ್ರವಲ್ಲದೆ ತಂಡಕ್ಕೂ ಹಿನ್ನಡೆಯುಂಟು ಮಾಡುತ್ತಿದೆ. ಹೀಗಾಗಿ ವಿರಾಟ್ ಕೊಹ್ಲಿಯನ್ನು ಆಡುವ ಬಳಗದಿಂದ ಹೊರಗಿಡಬೇಕು ಎಂಬ ಅಭಿಪ್ರಾಯಗಳು ಜೋರಾಗಿ ಕೇಳಿ ಬರುತ್ತಿದೆ. ಆದರೆ ಈ ವಿಚಾರವಾಗಿ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಪ್ರತಿಕ್ರಿಯಿಸಿದ್ದು ಕೊಹ್ಲಿಗೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ.

ಐಪಿಎಲ್‌ನಲ್ಲಿ ಕಳಪೆ ಫಾರ್ಮ್‌ ಪ್ರದರ್ಶಿಸಿದ್ದ ವಿರಾಟ್ ಕೊಹ್ಲಿ ಇಂಗ್ಲೆಂಡ್ ಪ್ರವಾಸದಲ್ಲಿಯೂ ಫಾರ್ಮ್‌ಗೆ ಮರಳುವಲ್ಲಿ ವಿಫಲವಾಗಿದ್ದಾರೆ. ಟೆಸ್ಟ್ ಬಳಿಕ ಟಿ20 ಪಂದ್ಯದಲ್ಲಿಯೂ ಕೊಹ್ಲಿ ಬ್ಯಾಟ್‌ನಿಂದ ರನ್ ಹರುದುಬರುತ್ತಿಲ್ಲ. ಹೀಗಾಗಿ ಕ್ರಿಕೆಟ್ ಪಂಡಿತರಿಂದ ಸಾಕಷ್ಟು ಟೀಕೆ್ಗಳು ಬರುತ್ತಿದೆ. ಆದರೆ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಕೊಹ್ಲಿ ಪರವಾಗಿ ಮಾತನಾಡಿದ್ದಾರೆ. ವಿರಾಟ್ ಕೊಹ್ಲಿ ರನ್ ಗಳಿಸದಿದ್ದರೆ ಮಾತ್ರವೇ ಯಾಕೆ ಪ್ರತಿಕ್ರಿಯಿಸುತ್ತೀರಿ ರೋಹಿತ್ ಸೇರಿದಂತೆ ಬೇರೆಯವರು ರನ್‌ಗಳಿಸದಿದ್ದಾಗ ಯಾರೂ ಯಾಕೆ ಪ್ರಶ್ನಿಸಲ್ಲ ಎಂದಿದ್ದಾರೆ.

ಟೀಂ ಇಂಡಿಯಾಗೆ ಕೊಹ್ಲಿಯದ್ದಷ್ಟೇ ಚಿಂತೆ ಅಲ್ಲ, ರೋಹಿತ್‌ ಕೂಡ! ನಾಯಕನಾದ ಬಳಿಕ ಕಳೆಗುಂದಿದ ಬ್ಯಾಟಿಂಗ್‌ಟೀಂ ಇಂಡಿಯಾಗೆ ಕೊಹ್ಲಿಯದ್ದಷ್ಟೇ ಚಿಂತೆ ಅಲ್ಲ, ರೋಹಿತ್‌ ಕೂಡ! ನಾಯಕನಾದ ಬಳಿಕ ಕಳೆಗುಂದಿದ ಬ್ಯಾಟಿಂಗ್‌

ನನಗೆ ಇದು ಅರ್ಥವೇ ಆಗುತ್ತಿಲ್ಲ!

ನನಗೆ ಇದು ಅರ್ಥವೇ ಆಗುತ್ತಿಲ್ಲ!

ವಿರಾಟ್ ಕೊಹ್ಲಿ ಫಾರ್ಮ್ ಬಗ್ಗೆ ಬರುತ್ತಿರುವ ಟೀಕೆಗಳಿಗೆ ಸುನಿಲ್ ಗವಾಸ್ಕರ್ ಪ್ರತಿಕ್ರೀಯಿಸುತ್ತಾ "ನನಗೆ ಇದು ಅರ್ಥವೇ ಆಗುತ್ತಿಲ್ಲ. ರೋಹಿತ್ ಶರ್ಮಾ ರನ್ ಗಳಿಸದೇ ಇದ್ದಾಗ ಯಾರೂ ಪ್ರಶ್ನೆಯನ್ನೇ ಮಾಡುವುದಿಲ್ಲ. ಇತರ ಆಟಗಾರರ ವಿಚಾರವಾಗಿಯೂ ಇದು ಹಾಗೆಯೇ ಇರುತ್ತದೆ. ಫಾರ್ಮ್ ಎಂಬುದು ತಾತ್ಕಾಲಿಕ ಕ್ಲಾಸ್ ಶಾಶ್ವತ ಎಂಬ ಒಂದು ಮಾತಿದೆ. ಟಿ20 ಮಾದರಿಯಲ್ಲಿ ಆ ರೀತಿಯ ವೇಗದಲ್ಲಿ ಆಡಿದಾಗ ಯಶಸ್ಸೂ ಗಳಿಸಬಹುದು ವಿಪಲವೂ ಆಗಬಹುದು" ಎಂದಿದ್ದಾರೆ ಸುನಿಲ್ ಗವಾಸ್ಕರ್.

ಉತ್ತಮ ಆಯ್ಕೆ ಸಮಿತಿಯಿದೆ

ಉತ್ತಮ ಆಯ್ಕೆ ಸಮಿತಿಯಿದೆ

"ನಮ್ಮಲ್ಲಿ ಉತ್ತಮ ಆಯ್ಕೆ ಸಮಿತಿಯಿದೆ. ಈ ವಿಚಾರವಾಗಿ ಅವರು ಯೋಚನೆ ಮಾಡಲಿದ್ದಾರೆ. ಟಿ20 ವಿಶ್ವಕಪ್‌ಗೆ ತಂಡವನ್ನು ಘೋಷಣೆ ಮಾಡಲು ಸಾಕಷ್ಟ ಸಮಯಾವಕಾಶವಿದ್ದು ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಈ ಮಧ್ಯೆ ಏಷ್ಯಾ ಕಪ್ ಟೂರ್ನಿ ಕೂಡ ನಡೆಯಲಿದೆ. ನೀವು ಆಟಗಾರರ ಫಾರ್ಮ್‌ಅನ್ನು ಕುಡ ಗಮನದಲ್ಲಿಟ್ಟುಕೊಂಡು ತಂಡವನ್ನು ಆಯ್ಕೆ ಮಾಡಬೇಕಾಗುತ್ತದೆ. ಆತಂಕಪಡುವ ಸವಯವಲ್ಲ. ಅವರಿಗೆ ಸಾಕಷ್ಟು ಸಮಯವನ್ನು ನೀಡಬೇಕು" ಎಂದಿದ್ದಾರೆ ಸುನಿಲ್ ಗವಾಸ್ಕರ್.

ಏಕದಿನ ಸರಣಿಯಲ್ಲಿ ಫಾರ್ಮ್‌ಗೆ ಕೊಹ್ಲಿ ಮರಳಬಹುದು ಎಂದ ಗವಾಸ್ಕರ್

ಏಕದಿನ ಸರಣಿಯಲ್ಲಿ ಫಾರ್ಮ್‌ಗೆ ಕೊಹ್ಲಿ ಮರಳಬಹುದು ಎಂದ ಗವಾಸ್ಕರ್

ಇನ್ನು ಇದೇ ಸಂದರ್ಭದಲ್ಲಿ ಏಕದಿನ ಸರಣಿಯಲ್ಲಿ ವಿರಾಟ್ ಕೊಹ್ಲಿ ಫಾರ್ಮ್‌ಗೆ ಮರಳಬಹುದು ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. "ಏಕದಿನ ಸರಣಿ ಸೂಕ್ತ ಸಮಯಕ್ಕೆ ಬರುತ್ತಿದೆ. ಅವರ ಸ್ವಾಭಾವಿಕ ಆಟಕ್ಕೆ ಇದು ಸೂಕ್ತವಾಗಿದೆ. ಟೆಸ್ಟ್ ಕ್ರಿಕೆಟ್‌ನಂತೆ ಕ್ರೀಸ್‌ನಲ್ಲಿ ನೆಲೆಯೂರಲು ಸಾಕಷ್ಟು ಸಮಯಾವಕಾಶ ದೊರೆಯುತ್ತದೆ" ಎಂದಿದ್ದಾರೆ ಸುನಿಲ್ ಗವಾಸ್ಕರ್. ಆದರೆ ಇತ್ತೀಚಿನ ಮಾಹಿತಿಯ ಪ್ರಕಾರ ಗಾಯದ ಕಾರಣಿದಂದಾಗಿ ವಿರಾಟ್ ಕೊಹ್ಲಿ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಆಡುವುದು ಅನುಮಾನ ಎನ್ನಲಾಗಿದೆ.

ಅಡ್ಡ ಬಂದ ಇಂಗ್ಲೆಂಡ್ ಬೌಲರ್ ಗೆ ಹೊಡಿತೀನಿ ಎಂದ‌ ಪಂತ್ ಗೆ ರೋಹಿತ್ ಶರ್ಮಾ ಹೇಳಿದ್ದೇನು? | *Cricket | OneIndia
ಭಾರತ ಸ್ಕ್ವಾಡ್ ಹೀಗಿದೆ

ಭಾರತ ಸ್ಕ್ವಾಡ್ ಹೀಗಿದೆ

ರೋಹಿತ್ ಶರ್ಮಾ (ನಾಯಕ), ರಿಷಬ್ ಪಂತ್ (ವಿಕೆಟ್ ಕೀಪರ್), ಶಿಖರ್ ಧವನ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ , ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್

Story first published: Tuesday, July 12, 2022, 9:33 [IST]
Other articles published on Jul 12, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X