ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IND vs ENG: ರಿಷಭ್ ಪಂತ್-ಹಾರ್ದಿಕ್ ಪಾಂಡ್ಯರನ್ನು ಈ ಭಲೇ ಜೋಡಿಗೆ ಹೋಲಿಸಿದ ಸುನಿಲ್ ಗವಾಸ್ಕರ್

Sunil Gavaskar Compares Duo Of Rishabh Pant, Hardik Pandya With Yuvraj Singh And MS Dhoni

ಇಂಗ್ಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತು ರಿಷಭ್ ಪಂತ್ ನಡುವಿನ ಜೊತೆಯಾಟವನ್ನು ಭಾರತ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಶ್ಲಾಘಿಸಿದ್ದಾರೆ. ಈ ಜೋಡಿಯು ಭಾರತಕ್ಕಾಗಿ ಆಡುವಾಗ ಯುವರಾಜ್ ಸಿಂಗ್ ಮತ್ತು ಎಂಎಸ್ ಧೋನಿ ಜೋಡಿಯನ್ನು ಮರುಸೃಷ್ಟಿಸಬಹುದು ಎಂದು ಹೊಗಳಿದರು.

'ಅವರ ಸಾಮರ್ಥ್ಯವನ್ನು ತಳ್ಳಿಹಾಕಲು ಸಾಧ್ಯವಿಲ್ಲ'; ವಿರಾಟ್ ಕೊಹ್ಲಿ ಬೆಂಬಲಕ್ಕೆ ನಿಂತ ಆರ್‌ಸಿಬಿ ಆಟಗಾರ'ಅವರ ಸಾಮರ್ಥ್ಯವನ್ನು ತಳ್ಳಿಹಾಕಲು ಸಾಧ್ಯವಿಲ್ಲ'; ವಿರಾಟ್ ಕೊಹ್ಲಿ ಬೆಂಬಲಕ್ಕೆ ನಿಂತ ಆರ್‌ಸಿಬಿ ಆಟಗಾರ

ಮ್ಯಾಂಚೆಸ್ಟರ್‌ನಲ್ಲಿ ಭಾನುವಾರ ನಡೆದ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ಭಾರತ ತಂಡ 260 ರನ್‌ಗಳ ಗುರಿಯನ್ನು ಬೆನ್ನಟ್ಟುವ ವೇಳೆ ಸ್ಕೋರ್‌ಬೋರ್ಡ್‌ನಲ್ಲಿ ಕೇವಲ 72 ರನ್‌ಗಳಾಗಿದ್ದಾಗ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಈ ವೇಳೆ ಭಾರತ ತಂಡಕ್ಕೆ ಆಸರೆಯಾಗಿ ಗೆಲುವಿನ ಜೊತೆಯಾಟ ನಿರ್ಮಿಸಿದ್ದು ರಿಷಭ್ ಪಂತ್ ಮತ್ತು ಹಾರ್ದಿಕ್ ಪಾಂಡ್ಯ ಜೋಡಿ.

ಎಂಎಸ್ ಧೋನಿ, ಯುವರಾಜ್ ಸಿಂಗ್ ಜೋಡಿಗೆ ಹೋಲಿಕೆ

ಎಂಎಸ್ ಧೋನಿ, ಯುವರಾಜ್ ಸಿಂಗ್ ಜೋಡಿಗೆ ಹೋಲಿಕೆ

ರಿಷಭ್ ಪಂತ್ ಮತ್ತು ಹಾರ್ದಿಕ್ ಪಾಂಡ್ಯ ಇಬ್ಬರು 133 ರನ್‌ಗಳ ಜೊತೆಯಾಟದಲ್ಲಿ ಭಾರತ ತಂಡವನ್ನು ಕಠಿಣ ಅವಧಿಯಲ್ಲಿ ಮುನ್ನಡೆಸಿದರು ಮತ್ತು ಪ್ರವಾಸಿ ತಂಡಕ್ಕೆ ಏಕದಿನ ಸರಣಿಯನ್ನು 2-1 ಅಂತರದಿಂದ ಗೆಲ್ಲಲು ಸಹಾಯ ಮಾಡಿದರು. ಹಾರ್ದಿಕ್ ಪಾಂಡ್ಯ 55 ಎಸೆತಗಳಲ್ಲಿ 71 ರನ್ ಗಳಿಸಿದರೆ, ರಿಷಭ್ ಪಂತ್ ಅಮೋಘ ಅಜೇಯ 125 ರನ್ (ಚೊಚ್ಚಲ ಏಕದಿನ ಶತಕ) ಗಳಿಸಿ ಗೆಲುವಿನ ರೂವಾರಿಯಾದರು.

ಇನ್ನು ಭಾರತದ ಮಾಜಿ ಬ್ಯಾಟ್ಸ್‌ಮನ್ ಸುನಿಲ್ ಗವಾಸ್ಕರ್ ಅವರು ಸ್ಪೋರ್ಟ್ಸ್ ಟಾಕ್‌ನೊಂದಿಗೆ ಮಾತನಾಡುತ್ತಾ, ಭಾರತವನ್ನು ಅಂತಿಮ ಪಂದ್ಯದಲ್ಲಿ ಗೆಲುವಿನ ಆಟವಾಡಿದ್ದಕ್ಕಾಗಿ ರಿಷಭ್ ಪಂತ್ ಮತ್ತು ಹಾರ್ದಿಕ್ ಪಾಂಡ್ಯ ಜೋಡಿಯ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಇದೇ ವೇಳೆ ಭಾರತ ಮಾಜಿ ನಾಯಕ ಎಂಎಸ್ ಧೋನಿ ಮತ್ತು ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್ ಅವರು ರಾಷ್ಟ್ರೀಯ ತಂಡಕ್ಕಾಗಿ ತಮ್ಮ ಆಟದ ದಿನಗಳಲ್ಲಿ ಹೇಗೆ ಮಾಡಿದ್ದರೋ ಅದೇ ರೀತಿ ಈ ಜೋಡಿ ಮಾಡುತ್ತಿದೆ ಎಂದು ಅಭಿನಂದಿಸಿದ್ದಾರೆ.

24 ರನ್‌ಗಳಿಗೆ 4 ವಿಕೆಟ್‌ ಕಿತ್ತ ಹಾರ್ದಿಕ್ ಪಾಂಡ್ಯ

24 ರನ್‌ಗಳಿಗೆ 4 ವಿಕೆಟ್‌ ಕಿತ್ತ ಹಾರ್ದಿಕ್ ಪಾಂಡ್ಯ

"ಹೌದು, ಹಾರ್ದಿಕ್ ಪಾಂಡ್ಯ ಮತ್ತು ರಿಷಭ್ ಪಂತ್ ಖಂಡಿತವಾಗಿಯೂ ಯುವರಾಜ್ ಮತ್ತು ಎಂಎಸ್ ಧೋನಿಯಂತಹ ಜೋಡಿಯನ್ನು ರೂಪಿಸಬಹುದು. ಇಬ್ಬರೂ ಬೃಹತ್ ಸಿಕ್ಸರ್‌ಗಳನ್ನು ಬಾರಿಸುವ ಸಾಮರ್ಥ್ಯವನ್ನು ಹೊಂದಿದ್ದರು ಮತ್ತು ವಿಕೆಟ್‌ಗಳ ನಡುವೆ ಉತ್ತಮವಾಗಿ ಓಡುತ್ತಿದ್ದರು," ಎಂದು ಸುನಿಲ್ ಗವಾಸ್ಕರ್ ಹೇಳಿದರು.

ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಪ್ರದರ್ಶನದ ಹೊರತಾಗಿಯೂ, ಸರಣಿಯ ನಿರ್ಣಾಯಕ ಪಂದ್ಯದಲ್ಲಿ 24 ರನ್‌ಗಳಿಗೆ 4 ವಿಕೆಟ್‌ಗಳ ಅತ್ಯುತ್ತಮ ಬೌಲಿಂಗ್ ಅಂಕಿಅಂಶಗಳನ್ನು ಪಡೆದು ಬೌಲಿಂಗ್‌ನಲ್ಲಿಯೂ ಅದ್ಭುತವಾಗಿದ್ದರು.

ಬೆನ್ ಸ್ಟೋಕ್ಸ್ ದಿಢೀರ್ ನಿವೃತ್ತಿ ಬಗ್ಗೆ ವಿರಾಟ್ ಕೊಹ್ಲಿ ರಿಯಾಕ್ಟ್ ಮಾಡಿದ್ದು ಹೀಗೆ? | *Cricket | OneIndia
ಐಸಿಸಿ ಪ್ರಶಸ್ತಿ ಗೆದ್ದಾಗ ಉತ್ತಮ ಆಲ್‌ರೌಂಡರ್‌ಗಳಿದ್ದರು

ಐಸಿಸಿ ಪ್ರಶಸ್ತಿ ಗೆದ್ದಾಗ ಉತ್ತಮ ಆಲ್‌ರೌಂಡರ್‌ಗಳಿದ್ದರು

ಭಾರತಕ್ಕೆ ಆಲ್‌ರೌಂಡರ್‌ನ ಅವಶ್ಯಕತೆ ಇದ್ದ ಕಾರಣ 28ರ ಹರೆಯದ ಹಾರ್ದಿಕ್ ಪಾಂಡ್ಯ ಸರಿಯಾದ ಸಮಯದಲ್ಲಿ ತಮ್ಮ ರಾಷ್ಟ್ರೀಯ ತಂಡಕ್ಕೆ ಮರಳಿದರು ಎಂದು ಸುನಿಲ್ ಗವಾಸ್ಕರ್ ಹೇಳಿದರು. ಅತ್ಯುತ್ತಮ ಭಾರತೀಯ ತಂಡಗಳಲ್ಲಿ ಉತ್ತಮ ಆಲ್‌ರೌಂಡರ್‌ಗಳು ಇದ್ದಾರೆ ಎಂದು ಕ್ರಿಕೆಟ್ ದಂತಕಥೆ ಗಮನ ಸೆಳೆದಿದ್ದಾರೆ.

"ಭಾರತಕ್ಕೆ ಆಲ್‌ರೌಂಡರ್‌ನ ಅಗತ್ಯವಿದ್ದ ಕಾರಣ ಹಾರ್ದಿಕ್ ಪಾಂಡ್ಯ ಸರಿಯಾದ ಸಮಯದಲ್ಲಿ ಪುನರಾಗಮನ ಮಾಡಿದ್ದಾರೆ. ಈಗ ಹಾರ್ದಿಕ್ ಪಾಂಡ್ಯ ಮತ್ತು ರವೀಂದ್ರ ಜಡೇಜಾ ಇಬ್ಬರೂ ಬ್ಯಾಟಿಂಗ್ ಮತ್ತು ಹತ್ತು ಓವರ್‌ಗಳನ್ನು ಬೌಲ್ ಮಾಡಬಹುದು. 1983, 1985, 2011 ಮತ್ತು 2013 ರಲ್ಲಿ ವಿಶ್ವ ಚಾಂಪಿಯನ್‌ಶಿಪ್ ಗೆದ್ದ ತಂಡಗಳನ್ನು ನೀವು ನೋಡಿದರೆ, ಎಲ್ಲರೂ ಉತ್ತಮ ಆಲ್‌ರೌಂಡರ್‌ಗಳನ್ನು ಹೊಂದಿದ್ದರು," ಎಂದು ಮಾಜಿ ಆಟಗಾರ ಸುನಿಲ್ ಗವಾಸ್ಕರ್ ತಿಳಿಸಿದರು.

Story first published: Tuesday, July 19, 2022, 15:58 [IST]
Other articles published on Jul 19, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X