ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತದ ಆರಂಭಿಕರ ವೈಫಲ್ಯವನ್ನು ಕಟುವಾಗಿ ಟೀಕಿಸಿದ ಸುನಿಲ್ ಗವಾಸ್ಕರ್

Sunil Gavaskar disappointed India openers after failure in 1st Test

ಭಾರತದ ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಟೀಮ್ ಇಂಡಿಯಾದ ಇಬ್ಬರು ಆರಂಭಿಕ ಆಟಗಾರರ ಬಗ್ಗೆ ಕಟು ಮಾತುಗಳಲ್ಲಿ ಟೀಕೆಯನ್ನು ಮಾಡಿದ್ದಾರೆ. ಟೀಮ್ ಇಂಡಿಯಾದ ಆರಂಭಿಕರಾದ ಪೃಥ್ವಿ ಶಾ ಹಾಗೂ ಮಯಾಂಕ್ ಅಗರ್ವಾಲ್ ಮೊದಲ ಟೆಸ್ಟ್‌ನಲ್ಲಿ ಭಾರತಕ್ಕೆ ಉತ್ತಮ ಆರಂಭವನ್ನು ನೀಡಲು ವಿಫಲರಾದರು.

ಇಬ್ಬರು ಬ್ಯಾಟ್ಸ್‌ಮನ್‌ಗಳ ಬ್ಯಾಟಿಂಗ್ ತಂತ್ರದ ಬಗ್ಗೆ ಗವಾಸ್ಕರ್ ಹರಿಹಾಯ್ದರು. ಇಬ್ಬರು ಬ್ಯಾಟ್ಸ್‌ಮನ್‌ಗಳು ಬ್ಯಾಟಿಂಗ್ ಮಾಡುವ ವೇಳೆ ಮಾಡಿದ ದೊಡ್ಡ ತಪ್ಪನ್ನು ಅವರು ಬೊಟ್ಟು ಮಾಡಿ ಹೇಳಿದರು. ಬ್ಯಾಟ್ ಹಾಗೂ ಪ್ಯಾಡ್‌ನ ಮಧ್ಯೆ ದೊಡ್ಡ ಅಂತರವನ್ನು ಇಟ್ಟು ಬ್ಯಾಟಿಂಗ್ ಮಾಡಿದ್ದಾರೆ. ಆ ಅಂತರದಲ್ಲಿ ಟ್ರಕ್ ಒಂದು ಸಾಗಬಹುದು ಎಂದು ಟೀಕಿಸಿದ್ದಾರೆ.

ಪೃಥ್ವಿ ಶಾ ವೀಕ್‌ನೆಸ್ ಕಾಮೆಂಟರಿಯಲ್ಲಿ ವಿವರಿಸಿದ ಪಾಂಟಿಂಗ್, ಮರುಕ್ಷಣವೇ ಶಾ ಬೌಲ್ಡ್!ಪೃಥ್ವಿ ಶಾ ವೀಕ್‌ನೆಸ್ ಕಾಮೆಂಟರಿಯಲ್ಲಿ ವಿವರಿಸಿದ ಪಾಂಟಿಂಗ್, ಮರುಕ್ಷಣವೇ ಶಾ ಬೌಲ್ಡ್!

ಆರಂಭಿಕರನ್ನು ವಂಚಿಸಿದ ವೇಗದ ಎಸೆತ

ಆರಂಭಿಕರನ್ನು ವಂಚಿಸಿದ ವೇಗದ ಎಸೆತ

ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಪೃಥ್ವಿ ಶಾ ಅವರನ್ನು ಶೂನ್ಯಕ್ಕೆ ಬಲಿ ತೆಗೆದುಕೊಂಡರು. ಉತ್ತಮ ಲೆಂತ್ ಎಸೆತವನ್ನು ಬ್ಲಾಕ್ ಮಾಡಲು ಮುಂದಾದ ಶಾ ಅದರಲ್ಲಿ ವಿಫಲರಾದರು. ಬ್ಯಾಟ್‌ನ ಒಳಭಾಗಕ್ಕೆ ಸವರಿದ ಚೆಂಡು ವಿಕೆಟ್‌ಗೆ ಬಡಿದಿತ್ತು. ಅದಾದ ಬಳಿಕ 18ನೇ ಓವರ್‌ನಲ್ಲಿ ಪ್ಯಾಟ್ ಕಮ್ಮಿನ್ಸ್ ಎಸೆದ ತೀಕ್ಷ್ಣವಾದ ಎಸೆತ ಬ್ಯಾಟ್‌ಅನ್ನು ವಂಚಿಸಿ ವಿಕೆಟ್‌ಗೆ ಬಡಿದಿತ್ತು.

ಬ್ಯಾಟ್ ಪ್ಯಾಡ್ ಮಧ್ಯೆ ನುಸುಳಿಕೊಂಡು ಸಾಗುತ್ತದೆ

ಬ್ಯಾಟ್ ಪ್ಯಾಡ್ ಮಧ್ಯೆ ನುಸುಳಿಕೊಂಡು ಸಾಗುತ್ತದೆ

"ನೀವು ಬ್ಯಾಟ್ ಹಾಗೂ ಪ್ಯಾಡ್‌ನ ನಡುವೆ ಅಷ್ಟು ಅಂತರವನ್ನು ಬಿಡುವುದರ ಜೊತೆಗೆ ತಡವಾಗಿ ಚಲನೆಯನ್ನು ಮಾಡುತ್ತೀರಿ. ಆಗ ಚೆಂಡು ಬ್ಯಾಟ್‌ನ ಒಳಭಾಗವನ್ನು ಸವರಿಕೊಂಡು ಹೋಗುತ್ತದೆ ಅಥವಾ ಬ್ಯಾಟ್ ಹಾಗೂ ಪ್ಯಾಡ್‌ನ ಮಧ್ಯೆ ನುಸುಳಿಕೊಂಡು ಹೋಗುತ್ತದೆ" ಎಂದು ಗವಾಸ್ಕರ್ 7 ಕ್ರಿಕೆಟ್‌ನಲ್ಲಿ ಮಾತನಾಡುತ್ತಾ ಹೇಳಿದ್ದಾರೆ.

ಆತ್ಮವಿಶ್ವಾಸ ಹೆಚ್ಚಿದ ಬಳಿಕ ಎಂದಿನ ಹೊಡೆತ

ಆತ್ಮವಿಶ್ವಾಸ ಹೆಚ್ಚಿದ ಬಳಿಕ ಎಂದಿನ ಹೊಡೆತ

"ಇನ್ನಿಂಗ್ಸ್‌ನ ಆರಂಭದಲ್ಲಿ ನೀವು ಬ್ಯಾಟ್ ಹಾಗೂ ಪ್ಯಾಡ್‌ ಅತ್ಯಂತ ಸಮೀಪದಲ್ಲಿರುವಂತೆ ನೋಡಿಕೊಳ್ಳಬೇಕು. ಅಂದರೆ ಆರಂಭದಲ್ಲಿ ನಿಮ್ಮ ಬ್ಯಾಟ್‌ನ ವೇಗ ಕಡಿಮೆಯಿರಬೇಕು. ಹೆಚ್ಚು ಎಸೆತ ಎದುರಿಸಿದಂತೆ ನಿಮ್ಮ ಆತ್ಮವಿಶ್ವಾಸ ಹೆಚ್ಚಾದಾಗ ನಿಮ್ಮ ಎಂದಿದ ಹೊಡೆತಗಳನ್ನು ನೀವು ಬಾರಿಸಬಹುದು. ಆದರೆ ಆರಂಭದಲ್ಲಿ ನೀವಿನ್ನೂ ಲಯಕ್ಕೆ ಮರಳಬೇಕಿದ್ದರೆ ನಿಮ್ಮ ಬ್ಯಾಟ್‌ನ ವೇಗವನ್ನು ಕಡಿಮೆ ಮಾಡಬೇಕು" ಎಂದು ಗವಾಸ್ಕರ್ ಹೇಳಿಕೆ ನೀಡಿದ್ದಾರೆ.

ಮಯಾಂಕ್ ಬಗ್ಗೆಯೂ ಟೀಕೆ

ಮಯಾಂಕ್ ಬಗ್ಗೆಯೂ ಟೀಕೆ

ಇನ್ನು ಮಯಾಂಕ್ ಅಗರ್ವಾಲ್ ವಿಕೆಟ್ ಒಪ್ಪಿಸಿದ ಬಗ್ಗೆಯೂ ಗವಾಸ್ಕರ್ ಪ್ರತಿಕ್ರಿಯಿಸಿದರು. "ಮಯಾಂಕ್ ಅಗರ್ವಾಲ್ ವಿಕೆಟ್ ಒಪ್ಪಿಸಿದ ಎಸೆತಕ್ಕೂ ನೀವು ಗಮನಿಸಬಹುದು. ಆ ಎಸೆತದಲ್ಲಿ ಬ್ಯಾಟ್ ಹಾಗೂ ಪ್ಯಾಡ್ ಸಮೀಪದಲ್ಲಿದ್ದಂತೆ ತೋರುತ್ತದೆ. ಆದರೆ ಅದು ಸಮೀಪದಲ್ಲಿಲ್ಲ. ಅಲ್ಲಿದ್ದ ದೊಡ್ಡ ಅಂತರದಿಮದಾಗಿ ಬಾಲ್ ನುಸುಳಿಕೊಂಡು ಹೋಗಿದೆ. ಅಲ್ಲಿ ಅಂತರದಲ್ಲಿ ಒಂದು ಟ್ರಕ್ ಕೂಡ ಸಾಗಬಹುದು. ಭಾರತೀಯರು ಇಲ್ಲಿಯೇ ದೊಡ್ಡ ತಪ್ಪುಗಳನ್ನು ಎದುರಿಸುತ್ತಿದ್ದಾರೆ" ಎಂದು ಗವಾಸ್ಕರ್ ಹೇಳಿದ್ದಾರೆ.

Story first published: Thursday, December 17, 2020, 17:02 [IST]
Other articles published on Dec 17, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X