ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್‌ನಲ್ಲಿ ವಿದೇಶಿ ಕೋಚ್‌ಗಳು ಭಾರತದ ಕ್ರಿಕೆಟ್‌ಗೆ ಆದರ್ಶವಾಗಿಲ್ಲ: ಸುನಿಲ್ ಗವಾಸ್ಕರ್‌

Sunil gavaskar

ಐಪಿಎಲ್‌ನಲ್ಲಿ ವಿದೇಶಿ ಕೋಚ್‌ಗಳು ತಂಡಕ್ಕೆ ಮಾರ್ಗದರ್ಶನ ನೀಡುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ, ಇದು ಭವಿಷ್ಯದ ಭಾರತದ ಕ್ರಿಕೆಟ್‌ಗೆ ಹೆಚ್ಚು ಆದರ್ಶವಾಗಿಲ್ಲ ಎಂದು ಟೀಂ ಇಂಡಿಯಾ ಮಾಜಿ ಆಟಗಾರ ಮತ್ತು ಮಾಜಿ ನಾಯಕ ಸುನಿಲ್ ಗವಾಸ್ಕರ್ ಹೇಳಿದ್ದಾರೆ.

ಸುನಿಲ್ ಗವಾಸ್ಕರ್ ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಭಾರತ-ಇಂಗ್ಲೆಂಡ್ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಕೋಚ್ ಬ್ರೆಂಡನ್ ಮೆಕಲಮ್ ಹೇಗೆ ಸನ್ನೆ ಮಾಡಿ ಶ್ರೇಯಸ್ ಅಯ್ಯರ್ ವಿಕೆಟ್ ಪಡೆಯಲು ಪ್ರೇರೇಪಿಸಿದರು ಎಂಬುದರ ಕುರಿತು ಉದಾಹರಣೆಯಾಗಿ ಮಾತನಾಡಿದ್ದಾರೆ.

ಐಪಿಎಲ್‌ನಲ್ಲಿ ಕೊಲ್ಕತ್ತಾ ನೈಟ್‌ ರೈಡರ್ಸ್ ತಂಡದ ಮುಖ್ಯ ಕೋಚ್ ಆಗಿರುವ ಮೆಕಲಮ್ ಅಯ್ಯರ್ ಅವರ ದೌರ್ಬಲ್ಯವನ್ನು ಚೆನ್ನಾಗಿ ತಿಳಿದಿದ್ದರು. ಈ ಕ್ರಮದಲ್ಲಿ ಅವರು ತಮ್ಮ ಬೌಲರ್‌ಗಳಿಗೆ ಆತ ಕ್ರೀಸ್‌ನಲ್ಲಿ ನೆಲೆಯೂರದಂತೆ ಹಲವು ಸನ್ನೆಗಳನ್ನು ಮಾಡಿದರು.

ಶಾರ್ಟ್‌ ಬಾಲ್‌ಗೆ ಔಟಾದ ಶ್ರೇಯಸ್ ಅಯ್ಯರ್

ಶಾರ್ಟ್‌ ಬಾಲ್‌ಗೆ ಔಟಾದ ಶ್ರೇಯಸ್ ಅಯ್ಯರ್

ಎಡ್ಜ್‌ಬಾಸ್ಟನ್‌ ಟೆಸ್ಟ್‌ನ ನಾಲ್ಕನೇ ದಿನದ ಭೋಜನ ವಿರಾಮದ ವೇಳೆಗೆ ಭಾರತ 7 ವಿಕೆಟ್ ನಷ್ಟಕ್ಕೆ 229 ರನ್ ಗಳಿಸಿತ್ತು. ಈ ವೇಳೆಗೂ ಮೊದಲು ಶ್ರೇಯಸ್ ಅಯ್ಯರ್ ಅವರ ದೌರ್ಬಲ್ಯವನ್ನು ಮೆಟ್ಟಿ ನಿಲ್ಲಲು ಇಂಗ್ಲೆಂಡ್ ಬೌಲರ್ ಗಳಿಗೆ ತಂಡದ ಕೋಚ್ ಮೆಕಲಮ್ ಸನ್ನೆ ಮಾಡಿದ್ದು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು

ಅಯ್ಯರ್ ಶಾರ್ಟ್ ಪಿಚ್ ಬಾಲ್ ಗಳನ್ನು ಆಡುವುದರಲ್ಲಿ ಸೀಮಿತವಾಗಿರುತ್ತಾರೆ ಎಂದು ಮೆಕಲಮ್ ತಮ್ಮ ಸನ್ನೆಗಳ ಮೂಲಕ ಬೌಲರ್ ಗಳಿಗೆ ಸೂಚಿಸಿದರು. ತರಬೇತುದಾರರ ಸೂಚನೆಯ ಮೇರೆಗೆ ಇಂಗ್ಲೆಂಡ್ ಶಾರ್ಟ್ ಪಿಚ್ ಎಸೆತಗಳಲ್ಲಿ ಅಯ್ಯರ್ ಅವರನ್ನು ಔಟ್ ಮಾಡಿತು.

7 ಸರಣಿಗೆ 7 ನಾಯಕರು: ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದೇನು?

ವಿದೇಶಿ ಕೋಚ್‌ಗಳು ಭಾರತೀಯ ಕ್ರಿಕೆಟ್‌ನ ದೀರ್ಘಾವಧಿಗೆ ಹಾನಿಕಾರಕವೇ?

ವಿದೇಶಿ ಕೋಚ್‌ಗಳು ಭಾರತೀಯ ಕ್ರಿಕೆಟ್‌ನ ದೀರ್ಘಾವಧಿಗೆ ಹಾನಿಕಾರಕವೇ?

ಭಾರತದ ಮಾಜಿ ಆಟಗಾರ ಸುನಿಲ್ ಗವಾಸ್ಕರ್ ಇಂತಹ ಒಂದು ಪ್ರಶ್ನೆಯನ್ನು ಹುಟ್ಟುಹಾಕಿದ್ದಾರೆ. ಅವರು ಸ್ಪೋರ್ಟ್ಸ್ ಟುಡೇಗೆ ಮೆಕಲಮ್ ಸನ್ನೆ ಮಾಡಿದ ಘಟನೆಯನ್ನು ನೋಡಿಲ್ಲ ಎಂದು ಹೇಳಿದರು. ಆದರೆ ವಿದೇಶಿ ಕೋಚ್‌ಗಳ ಐಪಿಎಲ್ ಅವಧಿಗಳು ದೀರ್ಘಾವಧಿಯಲ್ಲಿ ಭಾರತೀಯ ಕ್ರಿಕೆಟ್‌ಗೆ ಹಾನಿಕಾರಕವೆಂದು ಸಾಬೀತಾಗಿರುವುದರಿಂದ ಪರಿಶೀಲಿಸಬೇಕಾಗಿದೆ ಎಂದು ಸಲಹೆ ನೀಡಿದ್ದಾರೆ.

IND vs ENG: ಎಡ್ಜ್‌ಬಾಸ್ಟನ್ ಟೆಸ್ಟ್‌ನಲ್ಲಿ ಭಾರತದ ಸೋಲಿನ ಬಗ್ಗೆ ಸೌರವ್ ಗಂಗೂಲಿ ಹೇಳಿದ್ದೇನು?

ಆಟಗಾರರನ್ನು ನೇರವಾಗಿ ನೋಡಿರುತ್ತಾರೆ ಮತ್ತು ತಿಳಿದುಕೊಂಡಿರುತ್ತಾರೆ

ಆಟಗಾರರನ್ನು ನೇರವಾಗಿ ನೋಡಿರುತ್ತಾರೆ ಮತ್ತು ತಿಳಿದುಕೊಂಡಿರುತ್ತಾರೆ

"ಐಪಿಎಲ್‌ನಲ್ಲಿ ಕೋಚ್‌ಗಳ ವಿಷಯಕ್ಕೆ ಬಂದಾಗ ನಾವು ನೋಡಬೇಕಾದ ವಿಷಯ ಇದಾಗಿದೆ. ತಮ್ಮ ರಾಷ್ಟ್ರೀಯ ತಂಡಗಳಿಗೆ ತರಬೇತಿ ನೀಡುತ್ತಿರುವ ಬಹಳಷ್ಟು ಆಟಗಾರರನ್ನು ನೀವು ಹೊಂದಿದ್ದೀರಿ ಮತ್ತು ಅವರು ಐಪಿಎಲ್‌ಗೆ ಬಂದಾಗ, ಅವರು ನಮ್ಮ ಆಟಗಾರರನ್ನು ನೇರವಾಗಿ ನೋಡುತ್ತಾರೆ. ಕಂಪ್ಯೂಟರ್‌ನಿಂದ ಡೇಟಾವನ್ನು ಪಡೆಯುವುದು ಮತ್ತು ಆಟಗಾರರನ್ನು ನೇರವಾಗಿ ನೋಡುವುದು ವಿಭಿನ್ನವಾಗಿದೆ. ಆದ್ದರಿಂದ ಇದು ಭಾರತೀಯ ಕ್ರಿಕೆಟ್‌ಗೆ ಅನಾನುಕೂಲವಾಗಿದೆ''

''ಏಕೆಂದರೆ ಅವರಲ್ಲಿ ಕೆಲವರು ಹಿಂತಿರುಗಿ ತಮ್ಮ ರಾಷ್ಟ್ರೀಯ ತಂಡಕ್ಕೆ ಸಹಾಯ ಮಾಡಬಹುದು. ಬಹುಶಃ ಮುಖ್ಯ ತರಬೇತುದಾರರಾಗಿರುವುದಿಲ್ಲ. ಆದರೆ, ಸಹಾಯಕ ತರಬೇತುದಾರರು ಅಥವಾ ಬ್ಯಾಟಿಂಗ್ ಸಲಹೆಗಾರರು ಅಥವಾ ಬೌಲಿಂಗ್ ಸಲಹೆಗಾರರಾಗಿರಬಹುದು. ಅವರು ಭಾರತೀಯ ಆಟಗಾರರ ಬಗ್ಗೆ ಮೊದಲ ಮಾಹಿತಿ ಪಡೆಯುತ್ತಿದ್ದಾರೆ. ಇದು ಭಾರತಕ್ಕೆ ಅನುಕೂಲವಾಗದಿರಬಹುದು," ಎಂದು ಗವಾಸ್ಕರ್ ಸ್ಪೋರ್ಟ್ಸ್ ಟುಡೆಗೆ ತಿಳಿಸಿದರು.

ಐಪಿಎಲ್‌ನಲ್ಲಿ ಶ್ರೇಯಸ್ ಅಯ್ಯರ್ ಅವರ ದೊಡ್ಡ ದೌರ್ಬಲ್ಯ ಬೌನ್ಸರ್ ಬಾಲ್ ಎಂದು ಬೆಳಕಿಗೆ ಬಂದಿದೆ. ಕೋಲ್ಕತ್ತಾ ತಂಡದ ಕೋಚ್ ಆಗಿದ್ದ ಮೆಕಲಮ್ ಇಂಗ್ಲೆಂಡ್ ತಂಡದ ಕೋಚ್ ಆಗಿದ್ದಾರೆ. ಮೆಕಲಮ್ ಶ್ರೇಯಸ್ ಅಯ್ಯರ್ ಅವರಿಗೆ ಶಾರ್ಟ್ ಬೌಲಿಂಗ್ ಮಾಡುವಂತೆ ಸೂಚಿಸಿದರು ಮತ್ತು ಅದು ಯಶಸ್ವಿಯಾಯಿತು. ಹೀಗಾಗಿ ವಿದೇಶಿ ಕೋಚ್‌ಗಳ ನೇಮಕಾತಿಗೂ ಮುನ್ನ ಬಿಸಿಸಿಐ ಪರಿಶೀಲನೆ ನಡೆಸುವುದು ಉತ್ತಮ.

Story first published: Saturday, July 9, 2022, 10:02 [IST]
Other articles published on Jul 9, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X