ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿಗೆ ಧೋನಿ ಸಹಾಯ ಬೇಕು: ಗವಾಸ್ಕರ್

Sunil Gavaskar feels Virat Kohli needs MS Dhoni 2019 world cup

ಮುಂಬೈ, ಅಕ್ಟೋಬರ್ 30: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರಿಗೆ 2019ರ ವಿಶ್ವಕಪ್ ಟೂರ್ನಿಯಲ್ಲಿ ಮಹೇಂದ್ರ ಸಿಂಗ್ ಅವರ ಸಹಾಯದ ಅಗತ್ಯವಿದೆ ಎಂದು ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.

ವಿಶ್ವಕಪ್ ತಂಡದಲ್ಲಿ ಧೋನಿ ಇರುವುದರಿಂದ ವಿರಾಟ್‌ ಕೊಹ್ಲಿಗೆ ಭಾರಿ ದೊಡ್ಡ ಲಾಭವಾಗಲಿದೆ ಎಂದು ಗವಾಸ್ಕರ್ ಹೇಳಿದ್ದಾರೆ.

ಭಾರತ Vs ವೆಸ್ಟ್ ಇಂಡೀಸ್: ಹಲವು ಹೊಸ ದಾಖಲೆಗಳನ್ನು ಬರೆದ ಭಾರತ ಭಾರತ Vs ವೆಸ್ಟ್ ಇಂಡೀಸ್: ಹಲವು ಹೊಸ ದಾಖಲೆಗಳನ್ನು ಬರೆದ ಭಾರತ

ಏಕದಿನ ಕ್ರಿಕೆಟ್‌ನಲ್ಲಿ ಎಂ.ಎಸ್. ಧೋನಿಯ ಸಲಹೆ ಮತ್ತು ಅನುಭವವು ವಿರಾಟ್ ಕೊಹ್ಲಿಗೆ ಅನುಕೂಲಕರವಾಗಿದೆ. ಅದರಲ್ಲಿ ಯಾವ ಅನುಮಾನವೂ ಇಲ್ಲ. 50 ಓವರ್‌ಗಳ ವಿಭಾಗದಲ್ಲಿ ಧೋನಿ ಇರುವುದರಿಂದ ಕೊಹ್ಲಿಗೆ ನಿರಾಳತೆ ಹೆಚ್ಚು.

ಧೋನಿ ಸಣ್ಣಪುಟ್ಟ ಫೀಲ್ಡಿಂಗ್ ಬದಲಾವಣೆಗಳನ್ನು ಮಾಡುತ್ತಾರೆ. ಬೌಲರ್‌ಗಳ ಜತೆ ಹಿಂದಿಯಲ್ಲಿ ಮಾತನಾಡುತ್ತಾರೆ. ಎಲ್ಲಿ ಯಾವ ರೀತಿ ಬೌಲ್ ಮಾಡಬೇಕು ಎಂದು ಸೂಚಿಸುತ್ತಾರೆ. ಇದು ಕೊಹ್ಲಿಗೆ ದೊಡ್ಡ ಲಾಭವಾಗಿದೆ ಎಂದಿದ್ದಾರೆ.

ಭಾರತ-ವಿಂಡೀಸ್: 21ನೇ ಏಕದಿನ ಶತಕ, ಹೊಸ ದಾಖಲೆ ಬರೆದ ರೋ'ಹಿಟ್'!ಭಾರತ-ವಿಂಡೀಸ್: 21ನೇ ಏಕದಿನ ಶತಕ, ಹೊಸ ದಾಖಲೆ ಬರೆದ ರೋ'ಹಿಟ್'!

ಧೋನಿ ಅವರಿಗೆ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಮತ್ತು ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಗಳಿಗೆ ವಿಶ್ರಾಂತಿ ನೀಡಲಾಗಿದೆ. ಹೀಗಾಗಿ ಧೋನಿ ಅನುಪಸ್ಥಿತಿಯಲ್ಲಿ ಕೊಹ್ಲಿ ಆಸ್ಟ್ರೇಲಿಯಾದಲ್ಲಿ ತಂಡವನ್ನು ಟಿ20ಯಲ್ಲಿ ಮುನ್ನಡೆಸಬೇಕಾಗಿದೆ.

ಚಾಲ್ತಿ ಆಟಗಾರರಲ್ಲಿ ಅತ್ಯಧಿಕ ರನ್: ಮತ್ತೊಂದು ದಾಖಲೆ ಬರೆದ ವಿರಾಟ್ ಕೊಹ್ಲಿಚಾಲ್ತಿ ಆಟಗಾರರಲ್ಲಿ ಅತ್ಯಧಿಕ ರನ್: ಮತ್ತೊಂದು ದಾಖಲೆ ಬರೆದ ವಿರಾಟ್ ಕೊಹ್ಲಿ

ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ ವಿರಾಟ್ ಕೊಹ್ಲಿ ಸಹ ಆಡುತ್ತಿಲ್ಲ. ರೋಹಿತ್ ಶರ್ಮಾ ನಾಯಕತ್ವದಲ್ಲಿ ತಂಡ ಆಡಲಿದೆ. ಈ ಎರಡೂ ಸರಣಿಗಳಿಗೆ ರಿಷಬ್ ಪಂತ್ ವಿಕೆಟ್ ಕೀಪರ್ ಆಗಿರಲಿದ್ದಾರೆ.

Story first published: Tuesday, October 30, 2018, 18:04 [IST]
Other articles published on Oct 30, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X