ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್‌ನಲ್ಲಿ ಶುಬ್ಮನ್ ಗಿಲ್ ವೈಫಲ್ಯಕ್ಕೆ ಕಾರಣ ಹೇಳಿದ ಸುನಿಲ್ ಗವಾಸ್ಕರ್

Sunil Gavaskar find the reason of Shubman gill failur in ipl 2021

ಈ ಬಾರಿಯ ಐಪಿಎಲ್‌ನಲ್ಲಿ ಶುಬ್ಮನ್ ಗಿಲ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದರು. ಕೆಕೆಆರ್ ತಂಡದ ಪರವಾಗಿ ಆರಂಭಿಕನಾಗಿ ಕಣಕ್ಕಿಳಿಯುವ ಗಿಲ್ ಬ್ಯಾಟ್‌ನಿಂದ ಈ ಬಾರಿ ಸರಾಗವಾಗಿ ರನ್‌ಗಳು ಹರಿದು ಬರಲಿಲ್ಲ. ಈ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಕ್ರಿಕೆಟಿಗ ದಿಗ್ಗಜ ಆಟಗಾರ ಸುನಿಲ್ ಗವಾಸ್ಕರ್ ಗಿಲ್ ಬೆಂಬಲಕ್ಕೆ ನಿಂತಿದ್ದಾರೆ.

"ಶುಬ್ಮನ್ ಗಿಲ್ ಪ್ರದರ್ಶನದ ಬಗ್ಗೆ ನನಗೆ ಮೇಲ್ನೋಟಕ್ಕೆ ಅನಿಸುವುದೇನೆಂದರೆ ಆತನ ಮೇಲೆ ನಿರೀಕ್ಷೆಯ ಒತ್ತಡವಿದೆ. ಇದಕ್ಕೂ ಮುನ್ನ ಅದು ಬೇರೆಯದೇ ರೀತಿಯಾಗಿತ್ತು. ಆಗ ಆತ ಭರವಸೆಯ ಹೊಸ ಆಟಗಾರನಾಗಿದ್ದ. ಆದರೆ ಈಗ ಆಸ್ಟ್ರೇಲಿಯಾ ವಿರುದ್ಧದ ಪ್ರದರ್ಶನದ ನಂತರ ಆತ ರನ್‌ಗಳಿಸುವ ನಿರೀಕ್ಷೆ ಹೆಚ್ಚು ಮಾಡುತ್ತದೆ. ಹಾಗಾಗಿ ನಿರೀಕ್ಷೆಯ ಒತ್ತಡ ಆತನನ್ನು ಕುಸಿಯುವಂತೆ ಮಾಡಿದೆ" ಎಂದು ಗವಾಸ್ಕರ್ ಹೇಳಿದ್ದಾರೆ.

ವಾರ್ನರ್‌ರನ್ನು ನಾಯಕತ್ವದಿಂದ ವಜಾಗೊಳಿಸಿದಾಗ ನಾವ್ಯಾರೂ ತಲೆಕೆಡಿಸಿಕೊಳ್ಳಲಿಲ್ಲ ಎಂದ ಹೈದರಾಬಾದ್ ಆಟಗಾರವಾರ್ನರ್‌ರನ್ನು ನಾಯಕತ್ವದಿಂದ ವಜಾಗೊಳಿಸಿದಾಗ ನಾವ್ಯಾರೂ ತಲೆಕೆಡಿಸಿಕೊಳ್ಳಲಿಲ್ಲ ಎಂದ ಹೈದರಾಬಾದ್ ಆಟಗಾರ

"ಆತನಿಗೆ ಕೇವಲ ವಿಶ್ರಾಂತಿಯ ಅಗತ್ಯವಿದೆ. ಆತ ಕೇವಲ 21ರ ಹರೆಯದ ಹುಡುಗ. ವೈಫಲ್ಯಗಳು ಇರುತ್ತದೆ, ಆ ವೈಫಲ್ಯಗಳಿಂದ ಆತ ಕಲಿಯಬೇಕಿದೆ. ಆತ ನಿರೀಕ್ಷೆಗಳ ಬಗ್ಗೆ ಯೋಚಿಸದೆ ಮುಕ್ತವಾಗಿ ತೆರೆದುಕೊಂಡು ಆಡಬೇಕು. ತನ್ನ ಸ್ವಾಭಾವಿಕ ಆಟವನ್ನು ಆಟ ಆಡಿದರೆ ರನ್‌ಗಳು ಸರಾಗವಾಗಿ ಹರಿದುಬರುತ್ತದೆ. ಈ ನಿರೀಕ್ಷೆಯ ಕಾರಣದಿಂದಾಗಿಯೇ ಆಟ ಎಲ್ಲಾ ಎಸೆತಗಳಿಂದಲೂ ರನ್‌ಗಳಿಸಲು ಪ್ರಯತ್ನಿಸಿ ಔಟ್ ಆಗಿ ಹೊರಬರುತ್ತಿದ್ದಾನೆ" ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ.

ಯುವ ಆಟಗಾರ ಶುಬ್ಮನ್ ಗಿಲ್ 2020ರ ಐಪಿಎಲ್ ಆವೃತ್ತಿಯಲ್ಲಿ ಆಡಿದ 14 ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದು 33.84ರ ಸರಾಸರಿಯಲ್ಲಿ 440 ರನ್‌ಗಳಿಸಿದ್ದರು. ಆದರೆ 2021ರ ಆವೃತ್ತಿಯಲ್ಲಿ ಶುಬ್ಮನ್ ಗಿಲ್ ಟೂರ್ನಿ ಮುಂದೂಡುವುದಕ್ಕೂ ಮುನ್ನ ಆಡಿದ 7 ಪಂದ್ಯಗಳಲ್ಲಿ ಪ್ರತಿಯೊಂದರಲ್ಲಿಯೂ ವೈಫಲ್ಯತೆಯನ್ನು ಅನುಭವಿಸಿದ್ದರು.

ಕೊವಿಡ್ ವಿರುದ್ಧದ ಹೋರಾಟಕ್ಕೆ ವಿರುಷ್ಕಾ ಜೊತೆ ಕೈಜೋಡಿಸಿದ ಚಹಾಲ್ಕೊವಿಡ್ ವಿರುದ್ಧದ ಹೋರಾಟಕ್ಕೆ ವಿರುಷ್ಕಾ ಜೊತೆ ಕೈಜೋಡಿಸಿದ ಚಹಾಲ್

ಇಂಗ್ಲೆಂಡ್‌ಗೆ ತೆರಳಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಹಾಗೂ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಫಾಲ್ಗೊಳ್ಳಲು ಟೀಮ್ ಇಂಡಿಯಾ ತಂಡ ಪ್ರಕಟವಾಗಿದ್ದು ಇದರಲ್ಲಿ ಶುಬ್ಮನ್ ಗಿಲ್ ಕೂಡ ಆಯ್ಕೆಯಾಗಿದ್ದಾರೆ. ಹೀಗಾಗಿ ಇಂಗ್ಲೆಂಡ್ ನೆಲದಲ್ಲಿ ಯುವ ಆಟಗಾರನ ಪ್ರದರ್ಶನದ ಮೇಲೆ ಸಾಕಷ್ಟು ನಿರೀಕ್ಷೆಗಳು ಇದೆ.

Story first published: Sunday, May 9, 2021, 13:11 [IST]
Other articles published on May 9, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X