ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಹರ್ಷಲ್ ಪಟೇಲ್ ಸೆಲೆಕ್ಷನ್‌ಗೆ ಫುಲ್ ಖುಷಿಯಾದ ಸುನಿಲ್ ಗವಾಸ್ಕರ್: ಆತನ ವಯಸ್ಸಿನ ಚಿಂತೆ ಬೇಡ!

ಮುಂಬರುವ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಗೆ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲಾಗಿದ್ದು, ಐಪಿಎಲ್ 14ನೇ ಆವೃತ್ತಿಯಲ್ಲಿ ಸ್ಟಾರ್‌ ಬೌಲರ್‌ ಆಗಿ ಮಿಂಚಿದ ಆರ್‌ಸಿಬಿ ವೇಗಿ ಹರ್ಷಲ್ ಪಟೇಲ್‌ ಕೂಡ ಆಯ್ಕೆಗಾರರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ವೆಂಕಟೇಶ್ ಅಯ್ಯರ್, ಅವೇಶ್ ಖಾನ್ ಜೊತೆಗೆ ಹರ್ಷಲ್ ಪಟೇಲ್ ಕೂಡ ಮೊದಲ ಬಾರಿಗೆ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅದ್ರಲ್ಲೂ ಕಳೆದ ಐಪಿಎಲ್ ಸೀಸನ್‌ನ ಲೀಡಿಂಗ್ ವಿಕೆಟ್ ಟೇಕರ್ ಹರ್ಷಲ್ ಪಟೇಲ್ ಟೀಮ್ ಇಂಡಿಯಾಗೆ ಆಯ್ಕೆ ಆಗಿರುವ ಕುರಿತು ಸಾಕಷ್ಟು ಶುಭಾಶಯ ಹರಿದು ಬಂದಿದೆ.

ಟೀಮ್ ಇಂಡಿಯಾದಲ್ಲಿ ಬದಲಾವಣೆ ಗಾಳಿ ಬೀಸಿದೆ: ಹಾರ್ದಿಕ್‌ ಪಾಂಡ್ಯಗೆ ಟಿ20ಯಿಂದ ಕೊಕ್ಟೀಮ್ ಇಂಡಿಯಾದಲ್ಲಿ ಬದಲಾವಣೆ ಗಾಳಿ ಬೀಸಿದೆ: ಹಾರ್ದಿಕ್‌ ಪಾಂಡ್ಯಗೆ ಟಿ20ಯಿಂದ ಕೊಕ್

32 ವಿಕೆಟ್‌ ಕಬಳಿಸಿದ್ದ ಹರ್ಷಲ್

32 ವಿಕೆಟ್‌ ಕಬಳಿಸಿದ್ದ ಹರ್ಷಲ್

ಐಪಿಎಲ್‌ 2021ರ ಸೀಸನ್‌ನಲ್ಲಿ ಹರ್ಷಲ್ ಪಟೇಲ್ 10.56 ಸ್ಟ್ರೈಕ್ ರೇಟ್‌ನಲ್ಲಿ 15 ಪಂದ್ಯಗಳಿಂದ 32 ವಿಕೆಟ್‌ಗಳನ್ನ ಕಬಳಿಸುವಲ್ಲಿ ಯಶಸ್ವಿಯಾಗಿದ್ದರು. ಈ ಮೂಲಕ 2013ರ ಐಪಿಎಲ್ ಸೀಸನ್‌ನಲ್ಲಿ ಡ್ವೇನ್ ಬ್ರಾವೋ ಗಳಿಸಿದ ಅತಿ ಹೆಚ್ಚು ವಿಕೆಟ್‌ಗಳ ದಾಖಲೆಗಳ ಸರಿಗಟ್ಟಲು ಸಾಧ್ಯವಾಯಿತು.

ಇಂತಹ ಅಮೋಘ ಫಾರ್ಮ್‌ನಲ್ಲಿರುವ ಬೌಲರ್ ಅನ್ನು ಟೀಮ್ ಇಂಡಿಯಾಕ್ಕೆ ಆಯ್ಕೆ ಮಾಡಿರುವ ಕುರಿತಾಗಿ ಮಾಜಿ ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ ಸ್ವಾಗತಿಸಿದ್ದಾರೆ. 30 ವರ್ಷ ವಯಸ್ಸಿನ ಹರ್ಷಲ್ ಪಟೇಲ್‌ರಿಗೆ ಟೀಮ್ ಇಂಡಿಯಾದಲ್ಲಿ ಅವಕಾಶ ನೀಡಿದ್ದಕ್ಕಾಗಿ ಸಾಕಷ್ಟು ಹರ್ಷ ವ್ಯಕ್ತಪಡಿಸಿದ್ದಾರೆ.

ಅಂತರಾಷ್ಟ್ರೀಯ ಮಟ್ಟದಲ್ಲೂ ಮಿಂಚಬಹುದು

ಅಂತರಾಷ್ಟ್ರೀಯ ಮಟ್ಟದಲ್ಲೂ ಮಿಂಚಬಹುದು

ಆರ್‌ಸಿಬಿ ಪರ ಮಿಂಚಿನ ದಾಳಿ ನಡೆಸಿದ ಹರ್ಷಲ್ ಪಟೇಲ್ ತಮ್ಮ ಅಮೋಘ ಫಾರ್ಮ್ ಅನ್ನು ಅಂತರಾಷ್ಟ್ರೀಯ ಮಟ್ಟದಲ್ಲೂ ಮುಂದುವರೆಸಬಹುದು ಎಂದು ಸುನಿಲ್ ಗವಾಸ್ಕರ್ ಊಹಿಸಿದ್ದಾರೆ. ಹರಿಯಾಣದ ಆಲ್‌ರೌಂಡರ್ ಅವರ ಕಠಿಣ ಪ್ರಯತ್ನಕ್ಕೆ ಸಿಕ್ಕ ಬಹುಮಾನ ಇದಾಗಿದೆ. ಇದನ್ನು ಎಲ್ಲರೂ ಪಾಲಿಸಬೇಕು ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ.

''ಐಪಿಎಲ್‌ನಲ್ಲಿ ಅವರ ಪ್ರದರ್ಶನವನ್ನು ನೋಡಿ, ಅವರು ಈ ಟೀಮ್ ಇಂಡಿಯಾ ಕ್ಯಾಪ್‌ಗೆ ಅರ್ಹರು. ಅವರು ಐಪಿಎಲ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ ಮತ್ತು ವಯಸ್ಸಿನ ಬಗ್ಗೆ ಯಾರೂ ಯೋಚಿಸಬೇಡಿ. ಏಕೆಂದರೆ 15 ದಿನಗಳ ಹಿಂದೆ ಅವರು ಇಷ್ಟು ವಿಕೆಟ್‌ಗಳನ್ನು ಪಡೆದಿದ್ದು, ಇದೇ ರೀತಿಯ ವಿಕೆಟ್ ಪಡೆಯುವುದನ್ನು ತಡೆಯಲಾಗದು. ಅವರು ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ ಮತ್ತು ಅವರ ಪ್ರಯತ್ನಗಳಿಗೆ ಪ್ರತಿಫಲವನ್ನು ಪಡೆದಿದ್ದಾರೆ ಹಾಗೂ ನಾವು ಅದನ್ನು ಪಾಲಿಸಬೇಕು." ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ.

ಹರ್ಷಲ್ ಪಟೇಲ್ ವಯಸ್ಸಿನ ಕುರಿತು ಚಿಂತೆ ಬೇಡ

ಹರ್ಷಲ್ ಪಟೇಲ್ ವಯಸ್ಸಿನ ಕುರಿತು ಚಿಂತೆ ಬೇಡ

ಹರ್ಷಲ್ ಪಟೇಲ್ 30 ನೇ ವಯಸ್ಸಿನಲ್ಲಿ ಟೀಮ್ ಇಂಡಿಯಾಕ್ಕೆ ಆಯ್ಕೆ ಮಾಡಲಾಗಿದೆ ಎಂಬ ಚಿಂತೆ ಬೇಡ ಎಂದು ಸುನಿಲ್ ಗವಾಸ್ಕರ್ ಅಭಿಮಾನಿಗಳಿಗೆ ತಿಳಿಸಿದ್ದಾರೆ.


"ನಿಮ್ಮ ವಯಸ್ಸಿನ ಬಗ್ಗೆ ಚಿಂತಿಸಬೇಡಿ, ನೀವು ಪ್ರದರ್ಶನ ನೀಡುವವರೆಗೆ, ನೀವು ಭಾರತಕ್ಕಾಗಿ ಆಡಲು ಆಯ್ಕೆಯಾಗುತ್ತೀರಿ. ಇದು ಆಯ್ಕೆ ಸಮಿತಿ ನೀಡಿದ ಉತ್ತಮ ಸಂಕೇತವಾಗಿದೆ'' ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ.

ಟಿ20 ವಿಶ್ವಕಪ್‌ನಲ್ಲಿ ನೆಟ್ ಬೌಲರ್ ಆಗಿದ್ದರು

ಟಿ20 ವಿಶ್ವಕಪ್‌ನಲ್ಲಿ ನೆಟ್ ಬೌಲರ್ ಆಗಿದ್ದರು

ಹರ್ಷಲ್ ಪಟೇಲ್ ಭಾರತದ T20 ವಿಶ್ವಕಪ್ ತಂಡದಲ್ಲಿ ನೆಟ್ ಬೌಲರ್ ಆಗಿದ್ದರು. ಯುಎಇಯಿಂದ ಹಿಂದಿರುಗಿದ ನಂತರ, ಅವರು ಹರಿಯಾಣ ಪರ ಸೈಯದ್ ಮುಷ್ತಾಕ್ ಅಲಿ ಟ್ರೋಫಿ 2021ರ ಐದು ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಓಪನಿಂಗ್ ಬ್ಯಾಟಿಂಗ್ ಬರುವ ಹರ್ಷಲ್ , ಬೌಲಿಂಗ್ ದಾಳಿಯನ್ನು ಮುನ್ನಡೆಸಿದರು. ಪಟೇಲ್ ಈಗಾಗಲೇ ಎಂಟು ವಿಕೆಟ್‌ಗಳನ್ನು ಪಡೆದು 85 ರನ್ ಗಳಿಸಿದ್ದಾರೆ.

ಭುವನೇಶ್ವರ್ ಆಯ್ಕೆ ಸಮರ್ಥವಾಗಿದೆ ಎಂದ ಗವಾಸ್ಕರ್

ಭುವನೇಶ್ವರ್ ಆಯ್ಕೆ ಸಮರ್ಥವಾಗಿದೆ ಎಂದ ಗವಾಸ್ಕರ್

ಹರ್ಷಲ್ ಪಟೇಲ್ ಹೊರತಾಗಿ, ಭುವನೇಶ್ವರ್ ಕುಮಾರ್ ಆಯ್ಕೆ ಕುರಿತು ಸುನಿಲ್ ಗವಾಸ್ಕರ್ ಬೆಂಬಲ ವ್ಯಕ್ತಪಡಿಸಿದ್ದಾರೆ. ಭುವಿ ಸದ್ಯ ಉತ್ತಮ ಫಾರ್ಮ್‌ನಲ್ಲಿ ಇಲ್ಲದಿದ್ರೂ ಸಹ ಓರ್ವ ಅನುಭವಿ ಬೌಲರ್ ಅನ್ನು ತಂಡದಲ್ಲಿ ಸೇರಿಸಿಕೊಂಡಿರುವುದು ಉತ್ತಮ ನಿರ್ಧಾರವಾಗಿದೆ ಎಂದು ಲಿಟ್ಲ್‌ ಮಾಸ್ಟರ್‌ ಹೇಳಿದ್ದಾರೆ. ಭುವನೇಶ್ವರ್ ಕುಮಾರ್ ಪುನರಾಗಮನಕ್ಕೆ ಮತ್ತೊಂದು ಅವಕಾಶಕ್ಕೆ ಅರ್ಹರಾಗಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ ಬಲಗೈ ಬೌಲರ್‌ನ ಅನುಭವ ಅತ್ಯಗತ್ಯ ಎಂದು ಮಾಜಿ ನಾಯಕ ಅಭಿಪ್ರಾಯಪಟ್ಟಿದ್ದಾರೆ.

Story first published: Wednesday, November 10, 2021, 15:57 [IST]
Other articles published on Nov 10, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X