ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪರ್ತ್ ಅಲ್ಲ ಜಮೈಕಾ ಅಲ್ಲ: ಸುನಿಲ್ ಗವಾಸ್ಕರ್‌ಗೆ ಕಾಡಿದ ವೇಗದ ಪಿಚ್ ಇದು!

Sunil Gavaskar reveals the toughest pitch hes ever faced

ಭಾರತೀಯ ಕ್ರಿಕೆಟ್‌ ತಂಡದ ಮಾಜಿ ನಾಯಕ ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಕುತೂಹಲಕಾರಿ ಸಂಗತಿಯನ್ನು ಬಹಿರಂಗ ಪಡಿಸಿದ್ದಾರೆ. ತಾನು ಆಡಿದ ಅತ್ಯಂತ ಕಠಿಣ ವೇಗದ ಪಿಚ್ ಯಾವುದು ಎಂಬ ವಿಚಾರವನ್ನು ಸುನಿಲ್ ಗವಾಸ್ಕರ್ ಬಿಚ್ಚಿದ್ದಾರೆ. ಆದರೆ ಇದು ಆಸ್ಟ್ರೇಲಿಯಾದ ಪರ್ಥ್ ಅಥವಾ ಗಾಬಾ ಪಿಚ್ ಅಲ್ಲ. ಜಮೈಕಾದ ಸಬೀನಾ ಪಾರ್ಕ್‌ನ ಪಿಚ್‌ ಕೂಡ ಅಲ್ಲ. ಬದಲಾಗಿ ಭಾರತದ ಮೈದಾನದ ಪಿಚ್ ಎಂದು ಸುನಿಲ್ ಗವಾಸ್ಕರ್ ವಿವರಿಸಿದ್ದಾರೆ.

ಕ್ರಿಕೆಟ್ ಆರಂಭದ ಕಾಲದಿಂದಲೂ ಭಾರತ ಸ್ಪಿನ್ ಸ್ನೇಹಿ ಪಿಚ್‌ಗಳನ್ನು ಹೊಂದಿದೆ. ಇಲ್ಲ ವೇಗಿಗಳಿಗಿಂತ ಸ್ಪಿನ್ನರ್‌ಗಳು ಅತ್ಯಂತ ಹೆಚ್ಚಿನ ಯಶಸ್ಸನ್ನು ಸಾಧಿಸುತ್ತಾರೆ. ಆದರೆ ಸುನಿಲ್ ಗವಾಸ್ಕರ್ "ನಾನು ಪರ್ತ್, ಗಾಬಾ ಸಬೀನಾ ಪಾರ್ಕ್‌ನಲ್ಲಿ ಆಡಿದ ಅನುಭವವನ್ನು ಹೊಂದಿದ್ದೇನೆ. ಆದರೆ 1978ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಆಡಿದ ಭಾರತದ ಮೈದಾನದ ಪಿಚ್ ತಾನು ಎದುರಿಸಿದ ಅತ್ಯಂತ ಕಠಿಣ ಪಿಚ್" ಎಂದು ಸುನಿಲ್ ಗವಾಸ್ಕರ್ ಹೇಳಿಕೆಯನ್ನು ನೀಡಿದ್ದಾರೆ.

ಮನೀಷ್ ಪಾಂಡೆ ಮುಂದೆ ಧವನ್ ಮತ್ತು ಭುವನೇಶ್ವರ್‌ಗೆ ನಾಯಕರಾಗುವ ಅರ್ಹತೆ ಇಲ್ಲ ಎಂದ ಮಾಜಿ ಕ್ರಿಕೆಟಿಗಮನೀಷ್ ಪಾಂಡೆ ಮುಂದೆ ಧವನ್ ಮತ್ತು ಭುವನೇಶ್ವರ್‌ಗೆ ನಾಯಕರಾಗುವ ಅರ್ಹತೆ ಇಲ್ಲ ಎಂದ ಮಾಜಿ ಕ್ರಿಕೆಟಿಗ

ಸುನಿಲ್ ಗವಾಸ್ಕರ್ ಪಾಲಿಗೆ ಅತ್ಯಂತ ಕಠಿಣವೆನಿಸಿದ್ದ ಆ ಪಿಚ್ ಬೇರೆ ಯಾವುದೂ ಅಲ್ಲ ಅದು ಚೆನ್ನೈ ಕ್ರೀಡಾಂಗಣದ ಪಿಚ್. 1978ರಲ್ಲಿ ವಿಂಡೀಸ್ ವಿರುದ್ಧದ ಸರಣಿಯಲ್ಲಿ ಚೆನ್ನೈ ಪಿಚ್ ತನ್ನ ಪಾಲಿಗೆ ಅತ್ಯಂತ ಕಠಿಣವಾಗಿತ್ತು ಎಂದು ಸ್ವತಃ ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಬಹಿರಂಗೊಡಿಸಿದ್ದಾರೆ.

"ನಾನು ಸಿಡ್ನಿಯ ಪಿಚ್‌ನಲ್ಲಿ ಆಸ್ಟ್ರೇಲಿಯಾದ ವೇಗಿ ಜೆಫ್ ಥಾಮ್ಸನ್ ಅವರ ವೇಗವನ್ನು ಎದುರಿಸಿದ್ದೇನೆ. ನಿಜಕ್ಕೂ ಅದು ಕಠಿಣವಾಗಿತ್ತು. ಆದರೆ ಚೆನ್ನೈನ ಪಿಚ್‌ನಲ್ಲಿ ವೆಸ್ಟ್ ಇಂಡೀಸ್ ವೇಗಿ ಸಿಲ್ವೆಸ್ಟರ್ ಕ್ಲಾರ್ಕ್ ಅತ್ಯಂತ ಕಠಿಣವಾಗಿತ್ತು. ಚೆಂಡು ಸುತ್ತಲೂ ಹಾರಾಡುತ್ತಿತ್ತು. ನನ್ನ ಪ್ರಕಾರ ಈ ಪಿಚ್ ನಾನು ಎದುರಿಸಿದ ಅತ್ಯಂತ ಕಠಿಣ ಪಿಚ್ ಆಗಿದೆ" ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ.

ಇನ್ನು ಇದೇ ಸಂದರ್ಭದಲ್ಲಿ ಸುನಿಲ್ ಗವಾಸ್ಕರ್ ತಮ್ಮ ಕಾಲದ ಅದ್ಭುತ ಆಲ್‌ರೌಂಡರ್‌ಅನ್ನು ಕೂಡ ಹೆಸರಿಸಿದ್ದಾರೆ. ಗ್ಯಾರಿ ಸೋಬರ್ಸ್ ಆ ಸಂದರ್ಭದ ಅದ್ಭುತವಾದ ಆಲ್‌ರೌಂಡರ್ ಆಗಿದ್ದರು. ಅವರು ತಮ್ಮ ಬ್ಯಾಟ್ ಹಾಗೂ ಬೌಲಿಂಗ್ ಮೂಲಕ ಪಂದ್ಯದ ಗತಿಯನ್ನು ಬದಲಾಯಿಸುತ್ತಿದ್ದರು. ಜೊತೆಗೆ ಫೀಲ್ಡಿಂಗ್‌ನಲ್ಲಿಯೂ ಶ್ರೇಷ್ಠ ಕ್ಯಾಚ್‌ಗಳನ್ನು ಪಡೆಯುವ ಮೂಲಕ ಪಂದ್ಯವನ್ನು ತಮ್ಮ ತಂಡದ ಪರವಾಗುವಂತೆ ಮಾಡುವಲ್ಲಿ ಯಶಸ್ವಿಯಾಗುತ್ತಿದ್ದರು. ಈ ಕಾರಣದಿಂದಾಗಿ ನಾನು ಕಂಡ ಶ್ರೇಷ್ಠ ಆಲ್‌ರೌಂಡರ್ ಆಗಿ ಸರ್ ಗ್ಯಾರಿ ಸೋಬರ್ಸ್ ಅವರನ್ನು ಹೆಸರಿಸುತ್ತೇನೆ ಎಂದಿದ್ದಾರೆ.

Story first published: Monday, June 14, 2021, 13:59 [IST]
Other articles published on Jun 14, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X