ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿರಾಟ್ ನೇತೃತ್ವದ ಟೆಸ್ಟ್ ತಂಡ ಭಾರತದ ಸಾರ್ವಕಾಲಿಕ ಶ್ರೇಷ್ಠ ಎಂದ ಸುನಿಲ್ ಗವಾಸ್ಕರ್

Sunil Gavaskar Says Virat Kohli’s Test Team ‘India’s Best-ever’

ಭಾರತ ಟೆಸ್ಟ್ ಕ್ರಿಕೆಟ್‌ನಲ್ಲಿ ಇತ್ತೀಚೆಗೆ ಅದ್ಭುತ ಪ್ರದರ್ಶನವನ್ನು ನೀಡುತ್ತಿದೆ. ಕಳೆದ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್‌ನಲ್ಲಿ ಎಡವಿದ್ದು ಬಿಟ್ಟರೆ ಕಳೆದ ಎರಡ್ಮೂರು ವರ್ಷದಲ್ಲಿ ಭಾರತ ಟೆಸ್ಟ್ ತಂಡದ ಪ್ರದರ್ಶನ ಅತ್ಯುತ್ತಮ ಮಟ್ಟದಲ್ಲಿದೆ. ಭಾರತೀಯ ಕ್ರಿಕೆಟ್‌ನ ಈ ಸಾಧನೆಗೆ ಬಾರತೀಯ ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ ಪ್ರಶಂಸೆಯ ಸುರಿಮಳೆಗೈದಿದ್ದಾರೆ.

ಭಾರತ ಶ್ರೇಷ್ಠ ಟೆಸ್ಟ್ ಆಟಗಾರರಲ್ಲಿ ಒಬ್ಬರೆನಿಸಿದ ಸುನಿಲ್ ಗವಾಸ್ಕರ್ " ತಂಡದಲ್ಲಿನ ಸಮತೋಲನ, ಕೌಶಲ್ಯ, ಸಾಮರ್ಥ್ಯ ಆಟಗಾರರ ಮನೋಧರ್ಮವನ್ನು ಗಮನಿಸಿದರೆ ವಿರಾಟ್ ಕೊಹ್ಲಿ ನೇತೃತ್ವದ ತಂಡ ಭಾರತದ ಸಾರ್ವಕಾಲಿಕ ಶ್ರೇಷ್ಠ ತಂಡವೆನಿಸುತ್ತದೆ" ಎಂದು ಅಭಿಪ್ರಾಯವನ್ನು ವ್ಯಕ್ತಡಿಸಿದ್ದಾರೆ.

ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನದ ಕಳಪೆ ಪ್ರದರ್ಶನಕ್ಕೆ ಛಾಟಿ ಬೀಸಿದ ಶೋಯೆಬ್ ಅಖ್ತರ್ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನದ ಕಳಪೆ ಪ್ರದರ್ಶನಕ್ಕೆ ಛಾಟಿ ಬೀಸಿದ ಶೋಯೆಬ್ ಅಖ್ತರ್

ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಟೀಮ್ ಇಂಡಿಯಾ ಟೆಸ್ಟ್‌ನಲ್ಲಿ ನಂಬರ್ 1 ಸ್ಥಾನಕ್ಕೇರಿತ್ತು. ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನಲ್ಲಿ ಸದ್ಯ ಭಾರತ ಮೊದಲ ಸ್ಥಾನವನ್ನು ಅಲಂಕರಿಸಿದೆ. ಅದರಲ್ಲೂ 2018-19ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಟೆಸ್ಟ್ ಸರಣಿಯ ಗೆಲುವು ಈ ತಂಡಕ್ಕೆ ಎಲ್ಲದಕ್ಕಿಂತ ಮಹತ್ವದ್ದೆನಿಸಿದೆ.

ಸುನಿಲ್ ಗವಾಸ್ಕರ್ ಹಿಂದಿನ ಭಾರತ ತಂಡಗಳಿಗೆ ಹೋಲಿಸಿದಾಗ ಬೌಲಿಂಗ್ ವಿಭಾಗದ ಸಾಮರ್ಥ್ಯವನ್ನು ಪರಿಗಣಿಸಿದ್ದಾರೆ. ಜಸ್ಪ್ರೀತ್ ಬೂಮ್ರಾ, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಆರ್ ಅಶ್ವಿನ್ ಬೌಲಿಂಗ್ ಎಲ್ಲಾ ರೀತಿಯ ಅಂಗಳದಲ್ಲೂ ಮಿಂಚುವ ಸಾಮರ್ಥ್ಯವನ್ನು ಹೊಂದಿದೆ. ಬ್ಯಾಟಿಂಗ್ ಆಧಾರದಲ್ಲಿ ಭಾರತ ತಂಡ ಅನೇಕ ಶ್ರೇಷ್ಠ ತಂಡಗಳನ್ನು ಹೊಂದಿತ್ತು. ಆದರೆ ಈಗಿನ ತಂಡ ಬೌಲಿಂಗ್‌ನಲ್ಲಿ ಹೆಚ್ಚಿನ ಅಂಕವನನ್ಉ ಗಳಿಸಿಕೊಳ್ಳುತ್ತದೆ ಎಂದು ಗವಾಸ್ಕರ್ ವಿವರಿಸಿದ್ದಾರೆ.

ಆರ್‌ಸಿಬಿ ಜೊತೆಗೆ ಕೊಹ್ಲಿ ಯುಎಇಗೆ ಪ್ರಯಾಣಿಸದ್ದಕ್ಕೆ ಕಾರಣ ಬಹಿರಂಗಆರ್‌ಸಿಬಿ ಜೊತೆಗೆ ಕೊಹ್ಲಿ ಯುಎಇಗೆ ಪ್ರಯಾಣಿಸದ್ದಕ್ಕೆ ಕಾರಣ ಬಹಿರಂಗ

ಬೌಲಿಂಗ್ ವಿಭಾಗದ ಸಾಮರ್ಥ್ಯವನ್ನು ಸುನಿಲ್ ಗವಾಸ್ಕರ್ ಮತ್ತಷ್ಟು ಪ್ರಶಂಸಿಸುತ್ತಾ ಬೂಮ್ರಾ ಹಾಗೂ ಅವರ ಬಳಗದ ಈಗಿನ ಬೌಲಿಂಗ್ ವಿಭಾಗ ಎಲ್ಲಾ ರೀತಿಯ ಅಂಗಳದಲ್ಲೂ 20 ವಿಕೆಟ್‌ಗಳನ್ನು ಪಡೆಯುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಭಾರತ ತಂಡ ಬಹಳ ವಿಭಿನ್ನ ಬೌಲಿಂಗ್ ದಾಳಿಯನ್ನು ಹೊಂದಿದೆ. ಅದು ತಂಡಕ್ಕೆ ಸಾಕಷ್ಟು ಅಗತ್ಯವಾಗಿದೆ ಎಂದು ಗವಾಸ್ಕರ್ ಹೇಳಿದ್ದಾರೆ.

Story first published: Monday, August 24, 2020, 10:15 [IST]
Other articles published on Aug 24, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X