ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕನ್ನಡಿಗ ಕರುಣ್ ನಾಯರ್‌ ಮಾಡಿದ ತಪ್ಪೇನು?: ಅವಕಾಶ ನೀಡದ್ದಕ್ಕೆ ಗವಾಸ್ಕರ್ ಕಿಡಿ

ಓವಲ್, ಸೆಪ್ಟೆಂಬರ್ 8: ಕಳೆದ ನಾಲ್ಕು ಪಂದ್ಯಗಳಿಂದ ಬೆಂಚ್ ಕಾದಿದ್ದ ಕರ್ನಾಟಕದ ಬ್ಯಾಟ್ಸ್‌ಮನ್ ಕರುಣ್ ನಾಯರ್ ಅವರಿಗೆ ಕೊನೆಯ ಪಂದ್ಯದಲ್ಲಿಯೂ ಅವಕಾಶ ನೀಡದ ತಂಡದ ನಿರ್ಧಾರವನ್ನು ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಕಟುವಾಗಿ ಟೀಕಿಸಿದ್ದಾರೆ.

ಕರುಣ್ ನಾಯರ್ ಅವರ ಬದಲು ಅನನುಭವಿ ಆಟಗಾರ ಹನುಮ ವಿಹಾರಿ ಅವರ ಪಾದಾರ್ಪಣೆಗೆ ಅವಕಾಶ ನೀಡಿದ್ದಕ್ಕೆ ಗವಾಸ್ಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಭಾರತದ ಅನೇಕ ಕ್ರಿಕೆಟ್ ಪ್ರೇಮಿಗಳೂ ತಂಡದ ಈ ನಿರ್ಧಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

5ನೇ ಟೆಸ್ಟ್ ಗೆ ಭಾರತ ತಂಡ ಸೇರಿಕೊಂಡರಲ್ಲ, ಯಾರೀ ಹನುಮ ವಿಹಾರಿ? 5ನೇ ಟೆಸ್ಟ್ ಗೆ ಭಾರತ ತಂಡ ಸೇರಿಕೊಂಡರಲ್ಲ, ಯಾರೀ ಹನುಮ ವಿಹಾರಿ?

ದೇಶಿ ಕ್ರಿಕೆಟ್ ಹಾಗೂ ಎ ತಂಡದಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಕರ್ನಾಟಕ ಮಯಂಕ್ ಅಗರ್ವಾಲ್‌ ಅವರನ್ನು ಆಯ್ಕೆ ಸಮಿತಿಯೇ ನಿರ್ಲಕ್ಷಿಸುತ್ತಿದೆ. ಮತ್ತೊಬ್ಬ ಆಟಗಾರ ಕರುಣ್ ನಾಯರ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದ್ದರೂ ಅಂತಿಮ ಹನ್ನೊಂದರ ಬಳಗದಲ್ಲಿ ಸೇರಿಸಿಕೊಳ್ಳುತ್ತಿಲ್ಲ.

ತ್ರಿಶತಕ ಗಳಿಸಿದ್ದರು

ತ್ರಿಶತಕ ಗಳಿಸಿದ್ದರು

2016ರಲ್ಲಿ ಚೆನ್ನೈನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ನಲ್ಲಿ ಕರುಣ್ ನಾಯರ್ ಅಜೇಯ 303 ರನ್ ಗಳಿಸಿದ್ದರು. ಟೆಸ್ಟ್ ಕ್ರಿಕೆಟ್‌ನಲ್ಲಿ ವೀರೇಂದ್ರ ಸೆಹ್ವಾಗ್ ಬಳಿಕ ತ್ರಿಶತಕ ಗಳಿಸಿದ ಭಾರತದ ಏಕೈಕ ಆಟಗಾರ ಎಂಬ ಕೀರ್ತಿ ಕರುಣ್ ನಾಯರ್ ಅವರದು.

ಭಾರತ vs ಇಂಗ್ಲೆಂಡ್ 5ನೇ ಟೆಸ್ಟ್, Live Score: ಇಂಗ್ಲೆಂಡ್ ಬ್ಯಾಟಿಂಗ್

ಅಫ್ಘಾನಿಸ್ತಾನ ವಿರುದ್ಧವೂ ಸಿಗಲಿಲ್ಲ

ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಕರುಣ್ ನಾಯರ್ ವೈಫಲ್ಯ ಅನುಭವಿಸಿದ್ದರು. ಅಲ್ಲಿಂದ ಇದುವರೆಗೂ ಮತ್ತೆ ಆಡುವ ಅವಕಾಶವನ್ನೇ ಪಡೆದುಕೊಂಡಿಲ್ಲ. ಬೆಂಗಳೂರಿನಲ್ಲಿ ಅಫ್ಘಾನಿಸ್ತಾನದ ವಿರುದ್ಧ ನಡೆದ ಏಕೈಕ ಟೆಸ್ಟ್ ಪಂದ್ಯದಲ್ಲಿಯೂ ಕರುಣ್‌ಗೆ ಆಡುವ ಅವಕಾಶ ನೀಡಿರಲಿಲ್ಲ.

ನೀರು ಕೊಂಡೊಯ್ಯಲು ಸೀಮಿತವೇ?

ನೀರು ಕೊಂಡೊಯ್ಯಲು ಸೀಮಿತವೇ?

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೂ ಕರುಣ್ ಅವರನ್ನು ಹೆಚ್ಚುವರಿ ಬ್ಯಾಟ್ಸ್‌ಮನ್‌ ಆಗಿ 18ರ ಬಳಗಕ್ಕೆ ಆಯ್ಕೆ ಮಾಡಲಾಗಿತ್ತು. ಮೊದಲ ನಾಲ್ಕು ಪಂದ್ಯಗಳಲ್ಲಿ ಕರುಣ್ ಆಟಗಾರರಿಗೆ ನೀರು ಹೊತ್ತೊಯ್ಯುವ ಕಾಯಕಕ್ಕೆ ಮೀಸಲಾದರು. ನೆಟ್ಸ್‌ನಲ್ಲಿ ಒಂದೆರಡು ಬಾರಿ ಅಭ್ಯಾಸ ನಡೆಸಿದ್ದು ಬಿಟ್ಟರೆ ಮತ್ತೆ ಅವರಿಗೆ ಸಿಕ್ಕಿದ್ದು ಬೆಂಚ್ ಕಾಯುವ ಅವಕಾಶವಷ್ಟೇ.

ತಂಡವನ್ನು ಸೇರಿಕೊಂಡ ವಿಹಾರಿ

ತಂಡವನ್ನು ಸೇರಿಕೊಂಡ ವಿಹಾರಿ

ಕೊನೆಯ ಎರಡು ಟೆಸ್ಟ್ ಪಂದ್ಯಗಳಿಗೆ ತಂಡದಲ್ಲಿ ಬದಲಾವಣೆ ಮಾಡಿದಾಗ ಮುರಳಿ ವಿಜಯ್ ಮತ್ತು ಕುಲದೀಪ್ ಯಾದವ್ ಬದಲು ಅನನುಭವಿಗಳಾದ ಪೃಥ್ವಿ ಶಾ ಮತ್ತು ಹನುಮ ವಿಹಾರಿ ತಂಡವನ್ನು ಸೇರಿಕೊಂಡಿದ್ದರು. ಮೊದಲ ನಾಲ್ಕು ಟೆಸ್ಟ್‌ಗಳಲ್ಲಿ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವಕಾಶ ಪಡೆದಿದ್ದರು. ದಿ ಓವಲ್‌ನ ಕೊನೆಯ ಟೆಸ್ಟ್‌ನಲ್ಲಿ ಹಾರ್ದಿಕ್ ಪಾಂಡ್ಯ ಅವರನ್ನು ಕೈಬಿಟ್ಟಾಗ ಆಯ್ಕೆ ಮಾಡಿರುವುದು ಹನುಮ ವಿಹಾರಿ ಅವರನ್ನು.

ವಿಹಾರಿ ಉತ್ತಮ ಸಾಧನೆ

ವಿಹಾರಿ ಉತ್ತಮ ಸಾಧನೆ

ಆಂಧ್ರಪ್ರದೇಶದ ಹನುಮ ವಿಹಾರಿ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 59ರ ಸರಾಸರಿಯಲ್ಲಿ ರನ್ ಗಳಿಸಿದ ದಾಖಲೆ ಹೊಂದಿದ್ದಾರೆ. ಆದರೆ, ದೇಶಿ ಕ್ರಿಕೆಟ್‌ನಲ್ಲಿ ಉತ್ತಮ ಸಾಧನೆ ಪ್ರದರ್ಶಿಸಿದ್ದಲ್ಲದೆ, ಭಾರತ ಎ ತಂಡದ ನಾಯಕರಾಗಿ ಕೂಡ ಸಾಧನೆ ಮಾಡಿರುವ ಕರುಣ್ ನಾಯರ್ ಅವರನ್ನು ಕಡೆಗಣಿಸಿ ಹನುಮ ವಿಹಾರಿ ಅವರನ್ನು ಆಯ್ಕೆ ಮಾಡಿರುವುದಕ್ಕೆ ಎಲ್ಲೆಡೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.

ಇಂಗ್ಲೆಂಡ್ ವಿರುದ್ಧದ ತಮ್ಮ ಕೊನೆಯ ಇನ್ನಿಂಗ್ಸ್‌ನಲ್ಲಿ ತ್ರಿಶತಕ ಬಾರಿಸಿದ್ದ ಕರುಣ್ ಅವರನ್ನು ಆಡಿಸದೆ ಇರುವುದಕ್ಕೆ ಯಾವುದೇ ಕಾರಣ ತಿಳಿಯುತ್ತಿಲ್ಲ ಎಂದು ತಂಡದ ಮ್ಯಾನೇಜ್ಮೆಂಟ್‌ನ ನಿರ್ಧಾರದ ಬಗ್ಗೆ ಗವಾಸ್ಕರ್ ಆಘಾತ ವ್ಯಕ್ತಪಡಿಸಿದ್ದಾರೆ.

ಕರುಣ್ ಮಾಡಿದ ತಪ್ಪೇನು?

ಕರುಣ್ ಮಾಡಿದ ತಪ್ಪೇನು?

'ಯಾವ ವಾದವೂ ನನಗೆ ತೃಪ್ತಿ ನೀಡುವುದಿಲ್ಲ. ತಂಡದಲ್ಲಿ ಸ್ಥಾನ ಪಡೆದುಕೊಳ್ಳದೆ ಇರುವುದಕ್ಕೆ ಕರುಣ್ ನಾಯರ್ ಏನು ಮಾಡಿದ್ದಾರೆ? ನನಗೆ ಗೊತ್ತು, ಅವರು ನಿಮ್ಮ ಫೇವರಿಟ್ ಆಟಗಾರ ಅಲ್ಲ. ನಿಮಗೆ ಅವರನ್ನು ಆಡಿಸಲು ಇಷ್ಟವಿಲ್ಲ. ಅವರು ತ್ರಿಶತಕ ಬಾರಿಸಿದ್ದಾರೆ. ಪುಣೆಯಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಆಲ್‌ರೌಂಡರ್ ಜಯಂತ್ ಯಾದವ್ ಅವರಿಗಾಗಿ ಕರುಣ್‌ರನ್ನು ಕೈಬಿಡಲಾಗಿತ್ತು ಎಂದು ಗವಾಸ್ಕರ್ ಹಳೆಯ ತಪ್ಪುಗಳನ್ನು ತೋರಿಸಿದ್ದಾರೆ.

ಆಯ್ಕೆದಾರರು ಕರೆತಂದರು, ಆದರೆ...

ಆಸ್ಟ್ರೇಲಿಯಾ ವಿರುದ್ಧದ ಒಂದೆರಡು ಪಂದ್ಯಗಳಲ್ಲಿ ಕರುಣ್ ವಿಫಲರಾದರು. ಅವರನ್ನು ಹೊರಗೆ ಇಟ್ಟುಬಿಟ್ಟಿರಿ. ತಂಡದೊಳಗೆ ಮತ್ತೆ ಕರೆತಂದಿರಿ. ಬಹುಶಃ ಅವರನ್ನು ಮರಳಿ ಕರೆತಂದಿದ್ದು ಆಯ್ಕೆದಾರರು ಇರಬೇಕು. ಆದರೆ, ತಂಡದ ಮ್ಯಾನೇಜ್‌ಮೆಂಟ್‌ಗೆ ಬಹುಶಃ ಅವರು ಬೇಕಿಲ್ಲ. ಈ ಕಾರಣದಿಂದಲೇ ಅವರಿಗೆ ಈ ಪಂದ್ಯದಲ್ಲಿ ಆಡಲು ಅವಕಾಶ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉತ್ತಮ ಆಟಗಾರ ಅಲ್ಲವೇ?

ಉತ್ತಮ ಆಟಗಾರ ಅಲ್ಲವೇ?

ಭಾರತದ ಎಷ್ಟು ಮಂದಿ ಆಟಗಾರರು ತ್ರಿಶತಕ ಬಾರಿಸಿದ್ದಾರೆ? ವೀರೇಂದ್ರ ಸೆಹ್ವಾಗ್ ಎರಡು ಮತ್ತು ಕರುಣ್ ನಾಯರ್ ಒಂದು. ನೀವು ಈ ಆಟಗಾರನಿಗೆ ಹೆಚ್ಚು ಅವಕಾಶ ನೀಡದೆ ಇದ್ದರೆ, ಅವರಿಗೆ ಏನನ್ನು ಹೇಳಲು ಹೊರಟಿದ್ದೀರಿ? 'ನೋಡು ನೀವೊಬ್ಬ ಒಳ್ಳೆಯ ಆಟಗಾರ ಅಲ್ಲ ಎಂದು ನಮಗೆ ಅನಿಸುತ್ತದೆ' ಎಂದೇ? ಎಂಬುದಾಗಿ ಗವಾಸ್ಕರ್ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಪ್ರಶ್ನಿಸುವ ಹಕ್ಕು ಇದೆ

ಹನುಮ ವಿಹಾರಿ ಅವರಿಗೆ ಒಳ್ಳೆಯದಾಗಲಿ. ಅವರು ಚೆನ್ನಾಗಿ ಆಡಲಿ ಎಂದು ನಿಜಕ್ಕೂ ಹಾರೈಸುತ್ತೇನೆ. ತಾನೇನು ತಪ್ಪು ಮಾಡಿದ್ದೇನೆ ಎಂದು ತಂಡ ಆಡಳಿತ ಮಂಡಳಿಯನ್ನು ಪ್ರಶ್ನಿಸುವ ಪ್ರತಿ ಹಕ್ಕೂ ಕರುಣ್ ನಾಯರ್‌ಗಿದೆ. ಉತ್ತರ ಪಡೆಯಲು ಅವರು ಅರ್ಹರು. ಒಬ್ಬ ಹೆಚ್ಚುವರಿ ಬ್ಯಾಟ್ಸ್‌ಮನ್‌ಗೆ ಅವಕಾಶ ನೀಡಲು ಹೊರಟಿದ್ದೀರಿ ಎಂದರೆ ಅದನ್ನು ಮೊದಲ ಟೆಸ್ಟ್‌ನಲ್ಲಿಯೇ ಮಾಡಬೇಕಿತ್ತಲ್ಲವೇ? ಅವರಿಗೆ ಅವಕಾಶ ನೀಡದೆ ಇರುವಾಗ ಅವರಿಗೆ ಉತ್ತರ ನೀಡಬೇಕಾಗುತ್ತದೆ ಎಂದು ಗವಾಸ್ಕರ್ ತಂಡದ ಮ್ಯಾನೇಜ್‌ಮೆಂಟ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಕಾಶ್ ಚೋಪ್ರಾ

ಕರುಣ್ ನಾಯರ್ ಅವರಿಗೆ ಅವಕಾಶ ನೀಡುವ ಸಾಧ್ಯತೆ ಬಗ್ಗೆ ಯಾರೂ ಮಾತನಾಡದಿರುವುದು ವಿಚಿತ್ರವೆನಿಸುತ್ತದೆ. ಭಾರತವು ಆರು ಬ್ಯಾಟ್ಸ್‌ಮನ್‌ ಜತೆ ಆಡಲು ಬಯಸಿದ್ದರೆ, ಕರುಣ್ ನಾಯರ್ ಮೊದಲ ಆಯ್ಕೆಯಾಗಬೇಕು ಎಂದು ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಹೇಳಿದ್ದಾರೆ.

ಹರ್ಷ ಭೋಗ್ಲೆ

ಭಾರತದ ಆಯ್ಕೆದಾರರು ಕರುಣ್ ನಾಯರ್‌ ಅವರನ್ನು ಒಬ್ಬ ಆಟಗಾರನಾಗಿ ತಾವು ಭಾವಿಸಿರುವ ತಪ್ಪಾದ ಹೇಳಿಕೆಯನ್ನು ನೀಡಿದ್ದಾರೆ. ಕರುಣ್ ಅವರ ವಿರುದ್ಧದ ತುಂಬಾ ಕಠಿಣ ನಿರ್ಧಾರವಿದು. ತಂಡವನ್ನು ಆಯ್ಕೆ ಮಾಡಿದಾಗ ಅವರಿಗೆ ಏನು ಹೇಳಲಾಯಿತು ಎಂದು ತಿಳಿದುಕೊಳ್ಳಲು ಬಯಸಿದ್ದೇನೆ ಎಂದು ವೀಕ್ಷಕ ವಿವರಣೆಗಾರ ಹರ್ಷ ಭೋಗ್ಲೆ ಹೇಳಿದ್ದಾರೆ.

ಎಸ್. ಬದರಿನಾಥ್

ಹನುಮ ವಿಹಾರಿ ಒಬ್ಬ ಉತ್ತಮ ಯುವ ಆಟಗಾರ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ, ಕರುಣ್ ನಾಯರ್ ಅವರನ್ನು ಆಯ್ಕೆ ಮಾಡಬೇಕಾಗಿದ್ದು ಸರಿಯಾದ ನಿರ್ಧಾರವಾಗುತ್ತಿತ್ತು. ಸುದೀರ್ಘಾವಧಿ ಯಶಸ್ಸಿಗಾಗಿ ವ್ಯವಸ್ಥೆ ಮತ್ತು ಪ್ರಕ್ರಿಯೆಗಳೇ ಮೂಲ ಬೇರು ಎಂದು ಕ್ರಿಕೆಟಿಗ ಸುಬ್ರಮಣಿಯನ್ ಬದರಿನಾಥ್ ಸೂಚ್ಯವಾಗಿ ಹೇಳಿದ್ದಾರೆ.

ಜೋಯ್ ಭಟ್ಟಾಚಾರ್ಜ್ಯ

ಕರುಣ್ ನಾಯರ್ ಅವರ ಬದಲು ಹನುಮ ವಿಹಾರಿ ಆಯ್ಕೆ ಗೊಂದಲಕಾರಿ. ಬಹುಶಃ ನೆಟ್ಸ್‌ನಲ್ಲಿ ಕರುಣ್ ನಾಯರ್ ಏಕಾಂಗಿಯಾಗಿ ಪ್ರಭಾವ ಮೂಡಿಸದೆ ಇರಬಹುದು. ಇದು ನನಗೆ 1986ರ ಘಟನೆಯನ್ನು ನೆನಪಿಸುತ್ತದೆ. ಚೇತನ್ ಶರ್ಮಾ ಗಾಯಗೊಂಡಾಗ ತಂಡದಲ್ಲಿದ್ದ ಪ್ರಭಾಕರ್ ಅವರ ಬದಲು ಲೀಗ್ ಕ್ರಿಕೆಟ್ ಆಡುತ್ತಿದ್ದ ಮದನ್‌ ಲಾಲ್ ಅವರನ್ನು ಆಯ್ಕೆ ಮಾಡಲಾಗಿತ್ತು ಎಂದು ಕ್ರಿಕೆಟ್ ತಜ್ಞ ಜೋಯ್ ಭಟ್ಟಾಚಾರ್ಜ್ಯ ಹೇಳಿದ್ದಾರೆ.

Story first published: Saturday, September 8, 2018, 14:23 [IST]
Other articles published on Sep 8, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X