ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ದ್ವಿತೀಯ ಟೆಸ್ಟ್‌ನಲ್ಲಿ ಒಂದು ಬದಲಾವಣೆಗೆ ಸುನಿಲ್ ಗವಾಸ್ಕರ್ ಸಲಹೆ

Sunil Gavaskar Suggests Change in India’s Playing XI For 2nd Test

ಚೆನ್ನೈ: ಇಂಗ್ಲೆಂಡ್ ವಿರುದ್ಧದ ಆರಂಭಿಕ ಟೆಸ್ಟ್‌ನಲ್ಲಿ ಆತಿಥೇಯ ಭಾರತ 227 ರನ್‌ಗಳ ಸೋಲನುಭವಿಸಿದೆ. ಹೀಗಾಗಿ ಮುಂದಿನ ಟೆಸ್ಟ್‌ನಲ್ಲಿ ಗೆಲುವಿನತ್ತ ಟೀಮ್ ಇಂಡಿಯಾ ಕಣ್ಣಿಟ್ಟಿದೆ. ಮುಂದಿನ ಪಂದ್ಯದಲ್ಲಿ ಗೆಲ್ಲಬೇಕಾದರೆ ಎಚ್ಚರಿಕೆಯ ಆಟದ ಜೊತೆಗೆ ತಂಡದಲ್ಲಿ ಬದಲಾವಣೆಯೂ ಬೇಕು ಎಂಬ ಮಾತುಗಳು ಕೇಳಿಬರುತ್ತಿವೆ.

'ರವೀಂದ್ರ ಜಡೇಜಾರನ್ನು ಭಾರತ ತುಂಬಾ ಮಿಸ್ ಮಾಡಿಕೊಳ್ಳುತ್ತಿದೆ''ರವೀಂದ್ರ ಜಡೇಜಾರನ್ನು ಭಾರತ ತುಂಬಾ ಮಿಸ್ ಮಾಡಿಕೊಳ್ಳುತ್ತಿದೆ'

ಭಾರತದ ಮಾಜಿ ಬ್ಯಾಟ್ಸ್‌ಮನ್ ಸುನಿಲ್ ಗವಾಸ್ಕರ್ ಅವರು ದ್ವಿತೀಯ ಟೆಸ್ಟ್‌ನಲ್ಲಿ ತಂಡದಲ್ಲಿ ಏನು ಬದಲಾವಣೆ ಮಾಡಬಹುದು ಎಂಬುದನ್ನು ಹೇಳಿಕೊಂಡಿದ್ದಾರೆ. ಮುಂದಿನ ಪಂದ್ಯದಲ್ಲಿ ಶಹಬಾಝ್ ನದೀಮ್ ಅಥವಾ ವಾಷಿಂಗ್ಟನ್ ಸುಂದರ್ ಬದಲಿಗೆ ಕುಲದೀಪ್ ಯಾದವ್ ಅವರನ್ನು ಪ್ಲೇಯಿಂಗ್ XIಗೆ ತರಬೇಕು ಎಂದು ಗವಾಸ್ಕರ್ ಹೇಳಿದ್ದಾರೆ.

'ಮುಂದಿನ ಪಂದ್ಯದಲ್ಲಿ ಶಹಬಾಝ್ ನದೀಮ್ ಅಥವಾ ವಾಷಿಂಗ್ಟನ್ ಸುಂದರ್ ಜಾಗದಲ್ಲಿ ಕುಲದೀಪ್ ಯಾದವ್ ಅವರನ್ನು ಅವರು ಆಡಿಸಬಹುದು. ಆರಂಭಿಕ ಪಂದ್ಯ ಸೋಲಿನ ಪಶ್ಚಾತಾಪಕ್ಕಾದರೂ ಅವರು ಕುಲದೀಪ್ ಅವರನ್ನು ತಂಡದಲ್ಲಿ ಸೇರಿಸಬಹುದು,' ಎಂದು ಸ್ಟಾರ್ ಸ್ಪೋರ್ಟ್ಸ್‌ ಜೊತೆ ಮಾತನಾಡಿದ ಸುನಿಲ್ ಗವಾಸ್ಕರ್ ಹೇಳಿದ್ದಾರೆ.

ಆರ್‌ಸಿಬಿ ಬ್ಯಾಟಿಂಗ್‌ ಸಲಹೆಗಾರರಾಗಿ ಸಂಜಯ್ ಬಂಗಾರ್ ಆಯ್ಕೆಆರ್‌ಸಿಬಿ ಬ್ಯಾಟಿಂಗ್‌ ಸಲಹೆಗಾರರಾಗಿ ಸಂಜಯ್ ಬಂಗಾರ್ ಆಯ್ಕೆ

ಭಾರತ ಮತ್ತು ಇಂಗ್ಲೆಂಡ್ ನಡುವಿನ ದ್ವಿತೀಯ ಟೆಸ್ಟ್ ಪಂದ್ಯ ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಫೆಬ್ರವರಿ 13ರಿಂದ 17ರ ವರೆಗೆ ನಡೆಯಲಿದೆ. ನಾಲ್ಕು ಪಂದ್ಯಗಳ ಟೆಸ್ಟ್‌ ಸರಣಿಯ ಫಲಿತಾಂಶ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ ಸ್ಪರ್ಧಿಯನ್ನು ನಿರ್ಧರಿಸಲಿದೆ.

Story first published: Wednesday, February 10, 2021, 16:49 [IST]
Other articles published on Feb 10, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X