ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರನ್ ಬರ ಎದುರಿಸುತ್ತಿರುವ ಕೊಹ್ಲಿಗೆ ದಿಗ್ಗಜನ ಸಹಾಯ ಪಡೆಯಲು ಗವಾಸ್ಕರ್ ಸಲಹೆ

Sunil Gavaskar suggest Virat Kohli Seek Sachin Tendulkars advice to avoid poor run
ಗವಾಸ್ಕರ್ ಮಾತು ಕೇಳಿದ್ರೆ ವಿರಾಟ್ ನೆಕ್ಸ್ಟ್ ಮ್ಯಾಚ್ ನಲ್ಲಿ ಸೆಂಚುರಿ ಹೊಡಿತಾರಾ? | Oneindia Kannada

ಲೀಡ್ಸ್, ಆಗಸ್ಟ್ 25: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇಂಗ್ಲೆಂಡ್ ನೆಲದಲ್ಲಿ ತಮ್ಮ ರನ್ ಪರದಾಟವನ್ನು ಮುಂದುವರಿಸಿದ್ದಾರೆ. ಲೀಡ್ಸ್‌ನ ಹೆಡಿಂಗ್ಲೆ ಅಂಗಳದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್‌ ಪಂದ್ಯದಲ್ಲಿ ಟೀಮ್ ಇಂಡಿಯಾ ಬ್ಯಾಟಿಂಗ್ ವಿಭಾಗ ಹೀನಾಯ ಪ್ರದರ್ಶನ ನೀಡಿದ್ದು ಕೇವಲ 78 ರನ್‌ಗಳಿಗೆ ಆಲೌಟ್ ಆಗಿದೆ. ಸ್ವತಃ ನಾಯಕ ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ ಕೂಡ ವೈಫಲ್ಯವನ್ನು ಅನುಭವಿಸಿದ್ದು ತಂಡಕ್ಕೆ ದೊಡ್ಡ ಹಿನ್ನಡೆಯುಂಟು ಮಾಡಿದೆ.

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸತತವಾಗಿ ಈ ರೀತಿ ವೈಫಲ್ಯ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ಭಾರತದ ಮಾಜಿ ಕ್ರಿಕೆಟಿಗ ದಿಗ್ಗಜ ಆಟಗಾರ ಸುನಿಲ್ ಗವಾಸ್ಕರ್ ಸಲಹೆಯೊಂದನ್ನು ನೀಡಿದ್ದಾರೆ. ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಕ್ಷಣವೇ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರಿಂದ ಸಲಹೆಯನ್ನು ಪಡೆಯಬೇಕು. 2004ರ ಸರಣಿಯಲ್ಲಿ ತೆಂಡೂಲ್ಕರ್ ಫಾರ್ಮ್‌ಗೆ ಪರಳಿ ಯಾವ ರೀತಿಯ ಪ್ರದರ್ಶನ ನೀಡಿದರು ಎಂಬುದನ್ನು ಅರಿತುಕೊಂಡು ಅದರಿಂದ ಸ್ಪೂರ್ತಿಯನ್ನು ಪಡೆಯಬೇಕು ಎಂದಿದ್ದಾರೆ ಸುನಿಲ್ ಗವಾಸ್ಕರ್.

"ವಿರಾಟ್ ಕೊಹ್ಲಿ ತಕ್ಷಣವೇ ಸಚಿನ್ ತೆಂಡೂಲ್ಕರ್‌ಗೆ ಕರೆಯನ್ನು ಮಾಡಬೇಕು. ಇಂತಾ ಸಂದರ್ಭದಲ್ಲಿ ತಾನೇನು ಮಾಡಬೇಕು ಎಂದು ಕೇಳಬೇಕು" ಎಂದು ಸುನಿಲ್ ಗವಾಸ್ಕರ್ ಹೇಳಿಕೆ ನೀಡಿದ್ದಾರೆ. ವಿರಾಟ್ ಕೊಹ್ಲಿ 2004ರಲ್ಲಿ ಸಚಿನ್ ತೆಂಡೂಲ್ಕರ್ ಏನು ಮಾಡಿದರು ಅದನ್ನು ಮಾಡಬೇಕಿದೆ. ವಿರಾಟ್ ಕೊಹ್ಲಿ ತನಗೆ ನಾನು ಕವರ್ ಡ್ರೈವ್ ಆಡಲು ಮುಂದಾಗುವುದಿಲ್ಲ ಎಂಬುದನ್ನು ಹೇಳಿಕೊಳ್ಳಬೇಕು" ಎಂದಿದ್ದಾರೆ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್.

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೂರನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ತನ್ನ ಬದ್ಧ ಎದುರಾಳಿ ಜೇಮ್ಸ್ ಆಂಡರ್ಸನ್‌ಗೆ ಕೇವಲ 7 ರನ್‌ಗಳಿಸಿದ್ದಾಗ ವಿಕೆಟ್ ಒಪ್ಪಿಸಿದ್ದಾರೆ. ಆಂಡರ್ಸನ್ ಎಸೆತವನ್ನು ಡ್ರೈವ್ ಮಾಡಲು ಯತ್ನಿಸಿದ ವಿರಾಟ್ ಕೊಹ್ಲಿ ಎಡ್ಜ್ ಆಗುವ ಮೂಲಕ ಔಟಾದರು. ಬ್ಯಾಟ್‌ಅನ್ನು ಸವರಿಕೊಂಡು ಬಂದ ಚೆಮಡು ವಿಕೆಟ್ ಕೀಪರ್ ಜೋಸ್ ಬಟ್ಲರ್ ಕೈ ಸೇರಿತ್ತು. ಈ ಮೂಲಕ ಕೊಹ್ಲಿ ತಮ್ಮ ವಿಕೆಟ್ ಕಳೆದುಕೊಂಡಿದ್ದಾರೆ.

ಟಿಟ್ವೆಂಟಿ ಪಂದ್ಯಗಳ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಲಿವೆ ಈ 5 ಹೊಸ ನಿಯಮಗಳು!; ವೀಕ್ಷಕರಿಗೆ ಹಬ್ಬದೂಟಟಿಟ್ವೆಂಟಿ ಪಂದ್ಯಗಳ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಲಿವೆ ಈ 5 ಹೊಸ ನಿಯಮಗಳು!; ವೀಕ್ಷಕರಿಗೆ ಹಬ್ಬದೂಟ

ಈ ಪಂದ್ಯದಲ್ಲಿ ಔಟಾಗುವುದರೊಂದಿಗೆ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ ಮಾದರಿಯಲ್ಲಿ 23 ಟೆಸ್ಟ್ ಪಂದ್ಯಗಳಲ್ಲಿ 7ನೇ ಬಾರಿ ಜೇಮ್ಸ್ ಆಂಡರ್ಸನ್‌ಗೆ ವಿಕೆಟ್ ಒಪ್ಪಿಸಿದ್ದಾರೆ. ಈ ಮೂಲಕ ಇಂಗ್ಲೆಂಡ್ ತಂಡದ ಅನುಭವಿ ವೇಗಿ ಟೆಸ್ಟ್ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿಯನ್ನು ಅತಿ ಹೆಚ್ಚು ಬಾರಿ ಔಟ್ ಮಾಡಿದ ಬೌಲರ್‌ಗಳ ಪೈಕಿ ಆಸ್ಟ್ರೇಲಿಯಾದ ಸ್ಪಿನ್ನರ್ ನಥನ್ ಲಿಯಾನ್‌ ಸಾಧನೆಯನ್ನು ಸರಿಗಟ್ಟಿದ್ದಾರೆ.

ಈ ಬಾರಿಯ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆಡಿದ ಮೂರು ಪಂದ್ಯಗಳಲ್ಲಿ ಕೂಡ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದಾರೆ. ಮೂರು ಪಂದ್ಯಗಳ ನಾಲ್ಕು ಇನ್ನಿಂಗ್ಸ್‌ನಲ್ಲಿ ವಿರಾಟ್ ಕೊಹ್ಲಿ ಕೇವಲ 69 ರನ್‌ಗಳನ್ನು ಮಾತ್ರವೇ ಗಳಿಸಿದ್ದಾರೆ. ಒಂದು ಅರ್ಧ ಶತಕವನ್ನು ಕೂಡ ಗಳಿಸುವಲ್ಲಿ ಕೊಹ್ಲಿ ವಿಫಲವಾಗಿದ್ದಾರೆ. ಇನ್ನು ವಿರಾಟ್ ಕೊಹ್ಲಿಯ ಈ ಪ್ರದರ್ಶನದ ಬಗ್ಗೆ ಮಾತನಾಡಿದ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಕೊಹ್ಲಿ ಆಫ್‌ಸ್ಟಂಪ್‌ಗಿಂತ ಆಚೆಗಿರುವ ಎಸೆತಗಳನ್ನು ಕೆಣಕಲು ಮುಂದಾಗುತ್ತಿರುವುದು ಕಳವಳಗೊಳ್ಳಬೇಕಾದ ಸಂಗತಿ ಎಂದಿದ್ದಾರೆ.

ವಿಕೆಟ್ ಒಪ್ಪಿಸುತ್ತಿರುವ ರೀತಿ ಕಳವಳಕಾರಿ: "ನನಗೆ ವಿರಾಟ್ ಕೊಹ್ಲಿ ಔಟಾಗುತ್ತಿರುವ ರೀತಿಯಲ್ಲಿ ಇದೇ ದೊಡ್ಡ ಕಳವಳವನ್ನುಂಟು ಮಾಡುತ್ತಿದೆ. ಆತ 5,6 ಹಾಗೂ 7ನೇ ವಿಕೆಟ್‌ನ ನೇರಕ್ಕೆ ಬಂದ ಎಸೆತಗಳಿಗೆ ಔಟಾಗುತ್ತಿದ್ದಾರೆ. 2014ರಲ್ಲಿ ಕೂಡ ಕೊಹ್ಲಿ ಆಫ್‌ಸ್ಟಂಪ್‌ಗಿಂತ ಆಚೆಗಿನ ಎಸೆತಗಳಿಗೇ ಹೆಚ್ಚು ಬಾರಿ ವಿಕೆಟ್ ಕಳೆದುಕೊಂಡಿದ್ದರು" ಎಂದು ಗವಾಸ್ಕರ್ ಸ್ಮರಿಸಿಕೊಂಡಿದ್ದಾರೆ.

ಸಿಡ್ನಿ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್: 2003-04ನೇ ಸಾಲಿನ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಸಿಡ್ನಿಯಲ್ಲಿ ನಡೆದ ಪಂದ್ಯದಲ್ಲಿ ಟೀಮ್ ಇಂಡಿಯಾದ ದಿಗ್ಗಜ ಆಟಗಾರ ಸಚಿನ್ ತೆಂಡೂಲ್ಕರ್ ಅತ್ಯಂತ ತಾಳ್ಮೆಯ ಆಟವನ್ನು ಪ್ರದರ್ಶಿಸಿದ್ದರು. ಕವರ್ ಡ್ರೈವ್ ಬಾರಿಸುವ ತಮ್ಮ ಪ್ರವೃತ್ತಿಯನ್ನು ಸಚಿನ್ ಈ ಪಂದ್ಯದಲ್ಲಿ ಸಂಪೂರ್ಣವಾಗಿ ನಿಯಂತ್ರಿಸಿದ್ದರು. 613 ನಿಮಷಗಳ ಕಾಲ ಕ್ರೀಸ್‌ನಲ್ಲಿದ್ದ ಸಚಿನ್ ತೆಂಡೂಲ್ಕರ್ 436 ಎಸೆತಗಳನ್ನು ಎದುರಿಸಿದ್ದರು. ಈ ಪಂದ್ಯದಲ್ಲಿ ಸಚಿನ್ ಅಜೇಯ 241 ರನ್‌ಗಳನ್ನು ಬಾರಿಸಿದ್ದರು. ಈ ಇನ್ನಿಂಗ್ಸ್‌ನಲ್ಲಿ ಭಾರತ 705 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡು ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತ್ತು. ಈ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ ಸೋಲಿನ ದವಡೆಯಲ್ಲಿದ್ದು ಅಂತಿಮವಾಗಿ ಪ್ರಯಾಸದಿಂದ ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು.

ಐಪಿಎಲ್‌ಗೂ ಮುನ್ನ ಅತೀ ದುಬಾರಿ ವಾಚ್ ಕೊಂಡ ಹಾರ್ದಿಕ್, ಬೆಲೆಯೆಷ್ಟು ಗೊತ್ತಾ?!ಐಪಿಎಲ್‌ಗೂ ಮುನ್ನ ಅತೀ ದುಬಾರಿ ವಾಚ್ ಕೊಂಡ ಹಾರ್ದಿಕ್, ಬೆಲೆಯೆಷ್ಟು ಗೊತ್ತಾ?!

ಸಂಕಷ್ಟದಲ್ಲಿ ಟೀಮ್ ಇಂಡಿಯಾ: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಪಡೆ ಮೊದಲ ದಿನದಾಟದಲ್ಲಿ ಕಳಪೆ ಪ್ರದರ್ಶನ ನೀಡಿದೆ. ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ಮಾಡಿದ ವಿರಾಟ್ ಕೊಹ್ಲಿ ಬಳಗ ಕೇವಲ 79 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಆಘಾತ ಅನುಭವಿಸಿದೆ. ಲಾರ್ಡ್ಸ್ ಅಂಗಳದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯವನ್ನು ಗೆದ್ದು ಬೀಗಿದ ಉತ್ಸಾಗದಲ್ಲಿದ್ದ ಟೀಮ್ ಇಂಡಿಯಾಗೆ ಹೆಡಿಂಗ್ಲೆ ಅಂಗಳ ಭಾರೀ ಹಿನ್ನಡೆಯುಂಟು ಮಾಡಿದೆ.

ಟೀಮ್ ಇಂಡಿಯಾ ಆಡುವ ಬಳಗ: ರೋಹಿತ್ ಶರ್ಮಾ, ಕೆಎಲ್ ರಾಹುಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ರಿಷಭ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ
ಇಂಗ್ಲೆಂಡ್ ಆಡುವ ಬಳಗ: ರೋರಿ ಬರ್ನ್ಸ್, ಹಸೀಬ್ ಹಮೀದ್, ಡೇವಿಡ್ ಮಲನ್, ಜೋ ರೂಟ್ (ನಾಯಕ), ಜೋಸ್ ಬಟ್ಲರ್ (ವಿಕೆಟ್ ಕೀಪರ್), ಜಾನಿ ಬೈರ್‌ಸ್ಟೊವ್, ಮೊಯೀನ್ ಅಲಿ, ಸ್ಯಾಮ್ ಕರನ್, ಕ್ರೇಗ್ ಓವರ್‌ಟನ್, ಒಲ್ಲಿ ರಾಬಿನ್ಸನ್, ಜೇಮ್ಸ್ ಆಂಡರ್ಸನ್

Story first published: Wednesday, August 25, 2021, 21:23 [IST]
Other articles published on Aug 25, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X