ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

"ಆಸಿಸ್‌ಗೆ ಕ್ರಿಸ್‌ಮಸ್ ಗಿಫ್ಟ್‌ ನೀಡುತ್ತಿದ್ದಾರೆ ಟೀಮ್ ಇಂಡಿಯಾ ಆಟಗಾರರು"

Sunil Gavaskar unhappy for Indias poor fielding

ಅಡಿಲೇಡ್‌ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಮುನ್ನಡೆಯನ್ನು ಪಡೆದುಕೊಂಡಿದೆ. ಭಾರತೀಯ ಬೌಲಿಂಗ್ ಪಡೆಯ ತೀಕ್ಷ್ಣ ದಾಳಿಗೆ ಆಸ್ಟ್ರೇಲಿಯಾ ದಾಂಡಿಗರು ಶೀಘ್ರವಾಗಿ ವಿಕೆಟ್ ಕಳೆದುಕೊಂಡು 191 ರನ್‌ಗೆ ಆಲೌಟ್‌ ಆಗಿದೆ. ಆದರೆ ಭಾರತ ಫೀಲ್ಡಿಂಗ್ ಮಾತ್ರ ತೀರಾ ಕಳಪೆಯಾಗಿತ್ತು.

ಟೀಮ್ ಇಂಡಿಯಾದ ಕಳಪೆ ಫೀಲ್ಡಿಂಗ್ ಬಗ್ಗೆ ದಿಗ್ಗಜ ಆಟಗಾರ ಸುನಿಲ್ ಗವಾಸ್ಕರ್ ಟೀಕೆ ವ್ಯಕ್ತಪಡಿಸಿದ್ದಾರೆ. ಭಾರತೀಯ ಆಟಗಾರರು ಕ್ರಿಸ್‌ಮಸ್ ಮೂಡ್‌ನಲ್ಲಿ ಇದ್ದು ಎದುರಾಳಿ ತಂಡಕ್ಕೆ ಕ್ರಿಸ್‌ಮಸ್ ಗಿಫ್ಟ್‌ಗಳನ್ನು ನೀಡಿದ್ದಾರೆ ಎಂದು ಗವಾಸ್ಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮೊದಲ ಟೆಸ್ಟ್‌ನಲ್ಲಿ ಭಾರತಕ್ಕೆ ಸಮಾನ ಅವಕಾಶವಿದೆ ಎಂದ ಆಸ್ಟ್ರೇಲಿಯಾ ದಿಗ್ಗಜ ಕ್ರಿಕೆಟಿಗಮೊದಲ ಟೆಸ್ಟ್‌ನಲ್ಲಿ ಭಾರತಕ್ಕೆ ಸಮಾನ ಅವಕಾಶವಿದೆ ಎಂದ ಆಸ್ಟ್ರೇಲಿಯಾ ದಿಗ್ಗಜ ಕ್ರಿಕೆಟಿಗ

ಆಸ್ಟ್ರೇಲಿಯಾದ ಫೀಲ್ಡರ್‌ಗಳು ತಮ್ಮೆಡೆಗೆ ಬಂದ ಎಲ್ಲಾ ಕ್ಯಾಚ್‌ಗಳನ್ನು ಪಡೆದರೆ ಭಾರತೀಯ ಫೀಲ್ಡರ್‌ಗಳು ಮಾತ್ರ ಕೈಚೆಲ್ಲುತ್ತಿದ್ದರು. ಲ್ಯಾಬುಶೈನ್ ಎರಡು ಜೀವದಾನಗಳನ್ನು ಪಡೆದರು. ಡೀಪ್‌ಫೈನ್ ಲೆಗ್‌ನಲ್ಲಿ ಬೂಮ್ರಾ ಸುಲಭ ಕ್ಯಾಚ್‌ಅನ್ನು ಕೈಚೆಲ್ಲಿದರೆ ಪೃಥ್ವಿ ಶಾ ಕೂಡ ಸುಲಭ ಅವಕಾಶವನ್ನು ಡ್ರಾಪ್ ಮಾಡಿದರು.

" ಭಾರತೀಯ ಆಟಗಾರರು ಕ್ರಿಸ್‌ಮಸ್ ಮೂಡ್‌ನಲ್ಲಿ ಇದ್ದಾರೆ ಎಂದು ನನಗೆ ಅನಿಸುತ್ತಿದೆ. ತಮ್ಮ ಕ್ರಿಸ್‌ಮಸ್ ಗಿಫ್ಟ್‌ಗಳನ್ನು ಒಂದು ವಾರಕ್ಕೂ ಮುನ್ನವೇ ನೀಡುತ್ತಿದ್ದಾರೆ." ಎಂದು ಸುನಿಲ್ ಗವಾಸ್ಕರ್ ಪೃಥ್ವಿ ಶಾ ಸುಲಭ ಕ್ಯಾಚ್ ಡ್ರಾಪ್ ಮಾಡಿದ ಬಳಿಕ ಹೇಳಿದ್ದಾರೆ.

ವಿರಾಟ್ ಕೊಹ್ಲಿ ರನ್‌ಔಟ್‌ಗೆ ನಿರಾಸೆ ವ್ಯಕ್ತಪಡಿಸಿದ ಶೇನ್‌ವಾರ್ನ್ವಿರಾಟ್ ಕೊಹ್ಲಿ ರನ್‌ಔಟ್‌ಗೆ ನಿರಾಸೆ ವ್ಯಕ್ತಪಡಿಸಿದ ಶೇನ್‌ವಾರ್ನ್

ಲ್ಯಾಬುಶೈನ್ ಜೊತೆಗೆ ಟಿಮ್ ಪೈನ್ ಕೂಡ ಟೀಮ್ ಇಂಡಿಯಾದ ಕಳಪೆ ಫೀಲ್ಡಿಂಗ್‌ನ ಲಾಭವನ್ನು ಪಡೆದುಕೊಂಡಿದ್ದಾರೆ. ಆಸ್ಟ್ರೇಲಿಯಾ ಪರವಾಗಿ ಟಿಮ್ ಪೈನ್ ಅರ್ಧ ಶತಕವನ್ನು ಬಾರಿಸಿ ಮಿಂಚಿದ್ದಾರೆ. ಅಂತಿಮವಾಗಿಯೂ ಅಜೇಯವಾಗಿಯೇ ಉಳಿದ ಪೈನ್ 73 ರನ್ ಬಾರಿಸಿದ್ದಾರೆ.

Story first published: Friday, December 18, 2020, 17:28 [IST]
Other articles published on Dec 18, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X