ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕನ್ನಡಿಗ ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷನಾಗಿದ್ದಕ್ಕೆ ಆಕಾಶ್ ಚೋಪ್ರಾಗೆ ಕಣ್ಣುರಿ!

Sunil Joshi named BCCIs selection committee chairman: Aakash Chopra reaction

ಬೆಂಗಳೂರು, ಮಾರ್ಚ್ 5: ಬುಧವಾರ (ಮಾರ್ಚ್ 4) ಬಿಸಿಸಿಐ ಆಯ್ಕೆ ಸಮಿತಿಯ ನೂತನ ಅಧ್ಯಕ್ಷರಾಗಿ ಕನ್ನಡಿಗ ಸುನಿಲ್ ಜೋಶಿ ಆಯ್ಕೆಯಾಗಿದ್ದರು. ಇದಕ್ಕೆ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಜಿತ್ ಅಗರ್ಕರ್ ಹೆಸರು ಶಾರ್ಟ್‌ ಲಿಸ್ಟ್‌ನಲ್ಲೂ ಬಾರದಿದ್ದಿದ್ದು ಬೇಸರ ತಂದಿದೆ ಎಂದು ಚೋಪ್ರಾ ಟ್ವೀಟ್ ಮಾಡಿದ್ದಾರೆ.

ಬಿಸಿಸಿಐ ಆಯ್ಕೆ ಸಮಿತಿಯ ಅಧ್ಯಕ್ಷರಾಗಿ ಕನ್ನಡಿಗ ಸುನಿಲ್ ಜೋಶಿ ಆಯ್ಕೆಬಿಸಿಸಿಐ ಆಯ್ಕೆ ಸಮಿತಿಯ ಅಧ್ಯಕ್ಷರಾಗಿ ಕನ್ನಡಿಗ ಸುನಿಲ್ ಜೋಶಿ ಆಯ್ಕೆ

ಬಿಸಿಸಿಐಯ ಆಯ್ಕೆ ಸಮಿತಿಯ ಅಧ್ಯಕ್ಷರಾಗಿ ಸುನಿಲ್ ಜೋಶಿ ಮತ್ತು ಸದಸ್ಯರಾಗಿ ಹರ್ವೀಂದರ್ ಸಿಂಗ್ ಹೆಸರುಗಳು ಘೋಷಣೆಯಾಗುತ್ತಲೇ ಬೇಸರ ವ್ಯಕ್ತಪಡಿಸಿರುವ ಮೂಲತಃ ಉತ್ತರ ಪ್ರದೇಶದವರಾದ ಆಕಾಶ್ ಚೋಪ್ರಾ, ಈ ಬಗ್ಗೆ ಸರಣಿ ಟ್ವೀಟ್‌ಗಳನ್ನು ಮಾಡಿದ್ದಾರೆ.

ಮಹಿಳಾ ವರ್ಲ್ಡ್‌ಕಪ್ ಸೆಮಿಫೈನಲ್: ಇತಿಹಾಸ ನಿರ್ಮಿಸಲು ಟೀಮ್ ಇಂಡಿಯಾ ಸಜ್ಜುಮಹಿಳಾ ವರ್ಲ್ಡ್‌ಕಪ್ ಸೆಮಿಫೈನಲ್: ಇತಿಹಾಸ ನಿರ್ಮಿಸಲು ಟೀಮ್ ಇಂಡಿಯಾ ಸಜ್ಜು

ಆಕಾಶ್ ಚೋಪ್ರಾ ಮಾಡಿರುವ ಟ್ವೀಟ್‌ ಮತ್ತು ಸುನಿಲ್ ಜೋಶಿ ಬಗೆಗಿನ ಮಾಹಿತಿ ಕೆಳಗಿದೆ.

ಗದಗಿನವರು ಸುನಿಲ್ ಜೋಶಿ

ಗದಗಿನವರು ಸುನಿಲ್ ಜೋಶಿ

ಕರ್ನಾಟಕದ ಗದಗದಲ್ಲಿ ಜನಿಸಿರುವ, ಈಗ 49ರ ಹರೆಯದ ಸುನಿಲ್ ಜೋಶಿ, 15 ಟೆಸ್ಟ್ ಪಂದ್ಯಗಳಲ್ಲಿ 41 ವಿಕೆಟ್‌ಗಳು, 69 ಏಕದಿನ ಪಂದ್ಯಗಳಲ್ಲಿ 69 ವಿಕೆಟ್‌, 160 ಪ್ರಥಮದರ್ಜೆ ಪಂದ್ಯಗಳಲ್ಲಿ 615 ವಿಕೆಟ್‌ ದಾಖಲೆ ಹೊಂದಿದ್ದಾರೆ. ಅದೇ ಅಜಿತ್ ಅಗರ್ಕರ್, 26 ಟೆಸ್ಟ್ ಪಂದ್ಯಗಳಲ್ಲಿ 571 ರನ್, 191 ಏಕದಿನ ಪಂದ್ಯಗಳಲ್ಲಿ 1269 ರನ್, 4 ಟಿ20ಐ ಪಂದ್ಯಗಳಲ್ಲಿ 15 ರನ್ ಗಳಿಸಿದ್ದಾರೆ.

ನೋಡಲು ಕಿರಿಕಿರಿಯೆನಿಸುತ್ತಿದೆ

ನೋಡಲು ಕಿರಿಕಿರಿಯೆನಿಸುತ್ತಿದೆ

ಮೊದಲ ಟ್ವೀಟ್‌ನಲ್ಲಿ ಚೋಪ್ರಾ, 'ಅಜಿತ್ ಅಗರ್ಕರ್ ಹೆಸರು ಶಾರ್ಟ್‌ ಲಿಸ್ಟ್‌ನಲ್ಲೂ ಬಾರದ್ದನ್ನು ನೋಡಲು ಕಿರಿಕಿರಿಯೆನಿಸುತ್ತಿದೆ. ನಿಜ ಹೇಳೋದಾದರೆ ಆಯ್ಕೆ ಸಮಿತಿಗೆ ಅರ್ಜಿ ಸಲ್ಲಿಸಿದವರಲ್ಲಿ ಭಾರತ ಪರ ಹೆಚ್ಚು ಪಂದ್ಯಗಳನ್ನಾಡಿದವರು ಅವರಾಗಿದ್ದರು,' ಎಂದು ಬರೆದುಕೊಂಡಿದ್ದರು. ಆ ಬಳಿಕ ಮತ್ತೊಂದು ಟ್ವೀಟ್‌ಗೆ ರಿಪ್ಲೆಯಾಗಿಯೂ ಟ್ವೀಟ್ ಮಾಡಿದ್ದರು.

ಅಗರ್ಕರ್ ಅರ್ಜಿ ಮುಂದಿನ ಸುತ್ತಿಗೆ

ಅಗರ್ಕರ್ ಅರ್ಜಿ ಮುಂದಿನ ಸುತ್ತಿಗೆ

ಇತ್ತೀಚಿನ ಮಾಹಿತಿ ಪ್ರಕಾರ, ಅಜಿತ್ ಅಗರ್ಕಾರ್ ಅರ್ಜಿ ಮುಂದಿನ ಸುತ್ತಿಗಾಗಿ ಉಳಿಸಿಕೊಳ್ಳಲಾಗಿದೆ ಎನ್ನಲಾಗುತ್ತಿದೆ. ಅಗರ್ ಅರ್ಜಿಯನ್ನು ಮುಂದಿನ ಸುತ್ತಿನ ಆಯ್ಕೆಗೆ ಇರಿಸಿಕೊಂಡಿದ್ದೇವೆ ಎಂದು ಸ್ವತಃ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಯೇ ಹೇಳಿಕೊಂಡಿದ್ದಾರೆ.

ವರ್ಷದ ಕೊನೆಯಲ್ಲಿ ಇನ್ನೊಂದು ರೌಂಡ್

ವರ್ಷದ ಕೊನೆಯಲ್ಲಿ ಇನ್ನೊಂದು ರೌಂಡ್

ಹೊಸದಾಗಿ ಆರಿಸಲ್ಪಟ್ಟಿರುವ ಸುನಿಲ್ ಜೋಶಿ ಮತ್ತು ಹರ್ವೀಂದರ್ ಸಿಂಗ್ ಅವರು ದೇವಾಂಗ್ ಗಾಂಧಿ, ಸರಣ್‌ದೀಪ್ ಸಿಂಗ್ ಮತ್ತು ಜತಿನ್ ಪರಾನಜ್ಪೆ ಅವರನ್ನೊಳಗೊಂಡ ಬಿಸಿಸಿಐ ಆಯ್ಕೆದಾರರ ತಂಡವನ್ನು ಸೇರಿಸಿಕೊಳ್ಳಲಿದ್ದಾರೆ. ದೇವಾಂಗ್, ಸರಣ್‌ದೀಪ್ ಮತ್ತು ಜತಿನ್ ಈ ವರ್ಷದ ಕೊನೆಯಲ್ಲಿ ತಮ್ಮ ಅವಧಿ ಪೂರ್ಣಗೊಳ್ಳುವ ವರೆಗೆ ಆಯ್ಕೆ ಸಮಿತಿಯಲ್ಲಿರಲಿದ್ದಾರೆ. ಆ ಬಳಿಕ ಮತ್ತೊಂದು ಸುತ್ತಿನ ಆಯ್ಕೆ ನಡೆಯಲಿದೆ.

Story first published: Thursday, March 5, 2020, 15:42 [IST]
Other articles published on Mar 5, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X