ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020: ಎಸ್‌ಆರ್‌ಹೆಚ್‌ಗೆ ಆಘಾತ: ತಂಡದ ಪ್ರಮುಖ ಆಟಗಾರ ಟೂರ್ನಿಯಿಂದಲೇ ಔಟ್!

Sunrisers’ Mitchell Marsh Ruled Out Of Ipl 2020 Due To Ankle Injury

ಐಪಿಎಲ್ 2020ಯ ಆರಂಭಿಕ ಪಂದ್ಯದಲ್ಲಿ ಡೇವಿಡ್ ವಾರ್ನರ್ ನೇತೃತ್ವದ ಸನ್‌ರೈಸರ್ಸ್ ಹೈದರಾಬಾದ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಶರಣಾಗಿತ್ತು. ಸೋಲಿನ ಬೆನ್ನಲ್ಲೇ ತಂಡದ ಪಾಲಿಕೆ ಕೆಟ್ಟ ಸುದ್ದಿಯೊಂದು ಬಂದಿದೆ. ತಂಡದ ಪ್ರಮುಖ ಆಟಗಾರ ಈ ಬಾರಿಯ ಟೂರ್ನಿಯಿಂದ ಸಂಪೂರ್ಣವಾಗಿ ಹೊರಬಿದ್ದಿದ್ದಾರೆ.

ಆರ್‌ಸಿಬಿ ವಿರುದ್ಧದ ಮೊದಲ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ಆಲ್‌ರೌಂಡರ್ ಮಿಚೆಲ್ ಮಾರ್ಶ್ ಗಾಯಗೊಂಡಿದ್ದರು. ಇದೇ ಕಾರಣದಿಂದ ಅವರು ಇಡೀ ಟೂರ್ನಿಯಿಂದಲೇ ಹೊರಗುಳಿಯಬೇಕಾದ ಅನಿವಾರ್ಯತೆ ಬಂದಿದೆ. ಈ ಬಗ್ಗೆ ಸ್ವತಃ ಎಸ್‌ಆರ್‌ಹೆಚ್ ತಂಡದ ಮೂಲಗಳು ಖಚಿತಪಡಿಸಿದೆ

ಐಪಿಎಲ್ 2020: ಅಂಪೈರ್ ನಿರ್ಧಾರಕ್ಕೆ ಗರಂ ಆದ ಕೂಲ್ ಕ್ಯಾಪ್ಟನ್ ಧೋನಿಐಪಿಎಲ್ 2020: ಅಂಪೈರ್ ನಿರ್ಧಾರಕ್ಕೆ ಗರಂ ಆದ ಕೂಲ್ ಕ್ಯಾಪ್ಟನ್ ಧೋನಿ

ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಗಾಯ

ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಗಾಯ

ಆರ್‌ಸಿಬಿ ವಿರುದ್ಧದ ಪಂದ್ಯದ ಬೌಲಿಂಗ್ ವೇಳೆ ಮಿಚೆಲ್ ಮಾರ್ಶ್ ಪಾದದ ಗಾಯಕ್ಕೆ ತುತ್ತಾದರು. ಬಳಿಕ ಬೌಲಿಂಗ್ ಮಾಡುವುದು ಮಾರ್ಶ್ ಪಾಲಿಗೆ ಅಸಾಧ್ಯವಾಗಿತ್ತು. ಹೀಗಾಗಿ ಅಂಗಳದಿಂದ ಹೊರಗುಳಿದಿದ್ದರು ಮಿಚೆಲ್ ಮಾರ್ಶ್. ಬಳಿಕ ಬ್ಯಾಟಿಂಗ್‌ಗೆ ಇಳಿದ ಸಂದರ್ಭದಲ್ಲೂ ಮಾರ್ಶ್ ಸಾಕಷ್ಟು ನೋವು ಅನುಭವಿಸುತ್ತಿರುವುದು ವ್ಯಕ್ತವಾಗಿತ್ತು. ಇದೀಗ ಅವರು ಟೂರ್ನಿಯಿಂದಲೇ ಹೊರಗುಳಿಯಲಿದ್ದಾರೆ ಎಂಬುದನ್ನು ಸನ್‌ರೈಸರ್ಸ್ ಹೈದರಾಬಾದ್ ತಂಡ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಸ್ಪಷ್ಟಪಡಿಸಿದೆ.

ಬದಲಿ ಆಟಗಾರನ ಘೋಷಣೆ

ಬದಲಿ ಆಟಗಾರನ ಘೋಷಣೆ

ಇದೇ ಸಂದರ್ಭದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ಮಿಚೆಲ್ ಮಾರ್ಶ್ ಸ್ಥಾನಕ್ಕೆ ಬದಲಿ ಆಟಗಾರನನ್ನು ಕೂಡ ಹೆಸರಿಸಿದೆ. ವೆಸ್ಟ್ ಇಂಡೀಸ್ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ಜೇಸನ್ ಹೋಲ್ಡರ್ ಸನ್ ರೈಸರ್ಸ್ ಮಿಚೆಲ್ ಮಾರ್ಶ್ ಸ್ಥಾನವನ್ನು ತುಂಬಲಿದ್ದಾರೆ. ಐಪಿಎಲ್‌ನಲ್ಲೂ ಈ ಹಿಂದೆ ಆಡಿದ ಅನುಭವ ಹೊಂದಿದ್ದಾರೆ.

ಸಿಪಿಎಲ್‌ನಲ್ಲಿ ಹೋಲ್ಡರ್ ತಂಡವೊಂದರ ಕ್ಯಾಪ್ಟನ್

ಸಿಪಿಎಲ್‌ನಲ್ಲಿ ಹೋಲ್ಡರ್ ತಂಡವೊಂದರ ಕ್ಯಾಪ್ಟನ್

ಜೇಸನ್ ಹೋಲ್ಡರ್ ಕೆರಿಬಿಯನ್ ಪ್ರೀಮಿಯರ್ ಕ್ರಿಕೆಟ್ ಲೀಗ್‌ನಲ್ಲಿ ಇತ್ತೀಚೆಗೆ ಪಾಲ್ಗೊಂಡು ಬಾರ್ಬಡೋಸ್ ಟ್ರಿಡೆಂಟ್ಸ್ ತಂಡವನ್ನು ಮುನ್ನಡೆಸಿದ್ದಾರೆ. ಸನ್ ರೈಸರ್ಸ್ ಹೈದರಾಬಾದ್ ತಂಡದಲ್ಲಿ ಈಗ ಮಿಚೆಲ್ ಮಾರ್ಶ್ ಸ್ಥಾನಕ್ಕೆ ಜೆಸನ್ ಹೋಲ್ಡರ್ ಆಯ್ಕೆಯಾಗಿದ್ದಾರೆ.

ಯಾವಾಗ ತಂಡ ಸೇರಲಿದ್ದಾರೆ ಹೋಲ್ಡರ್?

ಯಾವಾಗ ತಂಡ ಸೇರಲಿದ್ದಾರೆ ಹೋಲ್ಡರ್?

ಸದ್ಯ ತವರಿನಲ್ಲಿರುವ ಹೋಲ್ಡರ್ ಯಾವಾಗ ತಂಡವನ್ನು ಕೂಡಿಕೊಳ್ಳಲಿದ್ದಾರೆ ಎಂಬುದು ಇನ್ನಷ್ಟೇ ಖಚಿತವಾಗಬೇಕಿದೆ. ಯುಎಇಗೆ ತಲುಪಿದ ನಂತರ ಅವರು ಕಡ್ಡಾಯ ಕ್ವಾರಂಟೈನ್ ಅವಧಿಯನ್ನು ಪೂರೈಸಿದ ಬಳಿಕ ಅವರು ತಂಡದ ಬಯೋಬಬಲ್‌ಗೆ ಸೇರ್ಪಡೆಗೊಳ್ಳಬೇಕಿದೆ. ಹೀಗಾಗಿ ಮುಂದಿನ ಕೆಲ ಪಂದ್ಯಗಳಿಗಂತು ಹೋಲ್ಡರ್ ಲಭ್ಯರಾಗುವುದು ಸಾಧ್ಯವಿಲ್ಲ

Story first published: Thursday, September 24, 2020, 10:25 [IST]
Other articles published on Sep 24, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X