ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸೂಪರ್ ಗೇಮ್ : ಒಂದು ಕಪ್. ಒಂದು ಗೆಲುವು, ಎರಡು ತಂಡ ಚಾಂಪಿಯನ್ಸ್

ICC World Cup 2019 : ಇಂಗ್ಲೆಂಡ್ ಕಪ್ ಗೆದ್ರು ನ್ಯೂಜಿಲೆಂಡ್ ಸೋಲಲಿಲ್ಲ..? | ENG vs NZ | Oneindia Kannada
Super Over decides stunning Cricket World Cup final One winner Two champion teams

ಲಂಡನ್, ಜುಲೈ 15: ಕ್ರಿಕೆಟ್ ಕಾಶಿ ಎಂದು ಕರೆಸಿಕೊಳ್ಳುವ ಲಾರ್ಡ್ಸ್ ಅಂಗಳದಲ್ಲಿ ನಡೆದ ಕ್ರಿಕೆಟ್ ವಿಶ್ವಕಪ್ 2019 ಅಂತಿಮ ಹಣಾಹಣಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ಇಂಗ್ಲೆಂಡ್ ರೋಚಕ ಜಯ ದಾಖಲಿಸಿದೆ.

ನಿಗದಿತ 50 ಓವರ್ ಗಳ ಪಂದ್ಯ ಟೈ ಆಗಿ ಸೂಪರ್ ಓವರ್ ನಲ್ಲಿ ಆಂಗ್ಲರು ಜಯ ದಾಖಲಿಸಿದರು, ಆದರೆ, ನ್ಯೂಜಿಲೆಂಡ್ ಈ ಪಂದ್ಯದಲ್ಲಿ ಸೋಲು ಕಾಣಲಿಲ್ಲ, ಐಸಿಸಿ ನಿಯಮಗಳ ಪ್ರಕಾರ ಇಂಗ್ಲೆಂಡಿಗೆ ಮೊದಲ ಬಾರಿಗೆ ವಿಶ್ವಕಪ್ ಗೆ ಮುತ್ತಿಟ್ಟುವ ಅವಕಾಶ ಸಿಕ್ಕಿದೆ.

ಸೂಪರ್‌ ಓವರ್‌ನಲ್ಲಿ ವಿಶ್ವಕಪ್‌ ಗೆದ್ದು ಇತಿಹಾಸ ಬರೆದ ಇಂಗ್ಲೆಂಡ್‌ಸೂಪರ್‌ ಓವರ್‌ನಲ್ಲಿ ವಿಶ್ವಕಪ್‌ ಗೆದ್ದು ಇತಿಹಾಸ ಬರೆದ ಇಂಗ್ಲೆಂಡ್‌

ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ತಂಡ ನೀಡಿದ್ದ 242 ರನ್ ಗಳ ಗುರಿ ಬೆನ್ನು ಹತ್ತಿದ ಇಂಗ್ಲೆಂಡ್ ತಂಡಕ್ಕೆ ಕೊನೆ ಓವರ್ ನಲ್ಲಿ 15ರನ್ ಗಳಿಸುವ ಕಠಿಣ ಸವಾಲು ಎದುರಾಯಿತು.

{cricket_1-2019_43691}

ಎರಡು ಸಿಕ್ಸರ್ ಗಳ ಮೂಲಕ ಗೆಲುವಿನ ಸನಿಹಕ್ಕೆ ತಂದ ಸ್ಟೋಕ್ಸ್ ಹಾಗೂ ಇಂಗ್ಲೆಂಡ್ ಗೆ ಲಕ್ ತಿರುಗಿದ್ದು, ನ್ಯೂಜಿಲೆಂಡ್ ಗೆ ಕಪ್ ಕನಸಾಗಿ ಉಳಿಯುವಂತೆ ಮಾಡಿದ್ದು, ಒಂದು ಓವರ್ ಥ್ರೋ. ಮುಂದೆ ನಡೆದಿದೆಲ್ಲವೂ ನಾಟಕೀಯ ತಿರುವು, ಅದೃಷ್ಟದಾಟ, ಐಸಿಸಿ ಸೂಪರ್ ಓವರ್ ನಿಯಮದ ಲಕ್.. ಇಂಗ್ಲೆಂಡ್ ಗೆಲುವಿಗೆ ಕಾರಣವಾದ ಆ ನಿಯಮ ಯಾವುದು ಮುಂದೆ ತಿಳಿಯಿರಿ...

ಓವರ್ ಥ್ರೋನಿಂದ ಬಂದ ಬೌಂಡರಿ ಕಾರಣ

ಓವರ್ ಥ್ರೋನಿಂದ ಬಂದ ಬೌಂಡರಿ ಕಾರಣ

ಎರಡನೇ ರನ್ ಕದಿಯಲು ಯತ್ನಿಸಿದ ಬೆನ್ ಸ್ಟೋಕ್ಸ್ ಡೈವ್ ಮಾಡಿದಾಗ ಬೌಂಡರಿ ಕಡೆಯಿಂದ ಬಂದ ಚೆಂಡು ಸ್ಟೋಕ್ಸ್ ಬ್ಯಾಟಿಗೆ ಬಡಿದು ವಿಕೆಟ್ ಕೀಪರ್ ಹಿಂಬರಿ ಬೌಂಡರಿ ಗೆರೆ ದಾಟಿತು. ಓಡಿದ 2 ರನ್ ಪ್ಲಸ್ 4 ರನ್ ಬೋನಸ್ ಪಡೆದ ಇಂಗ್ಲೆಂಡ್ ಗೆಲ್ಲುವ ಉತ್ಸಾಹದಲ್ಲಿತ್ತು. ಇದೇ ಬೌಂಡರಿ ಮುಂದೆ ಕಪ್ ಗೆಲ್ಲಿಸಬಹುದು ಎಂದು ಯಾರೂ ಆ ಸಮಯದಲ್ಲಿ ಊಹಿಸಿರಲಿಲ್ಲ. ತನ್ನದಲ್ಲದ ತಪ್ಪಿಗೆ ಬೆನ್ ಸ್ಟೋಕ್ಸ್ ಆ ಕ್ಷಣಕ್ಕೆ ಕೇನ್ ವಿಲಿಯಮ್ಸನ್ ಹಾಗೂ ಕಿವೀಸ್ ಮುಂದೆ ಎರಡು ಕೈಯೆತ್ತಿ ಕ್ಷಮೆ ಕೋರಿ, ಕ್ರೀಡಾಸ್ಪೂರ್ತಿ ಮೆರೆದರು. ಆದರೆ, ಈ ಬೌಂಡರಿ ಬಗ್ಗೆ ಕೇನ್ ಗೆ ಅಸಮಾಧಾನ ಎಂದಿಗೂ ಇದ್ದೇ ಇರುತ್ತೆ

ಆದರೆ, ಡ್ರಾಮಾ ಇಲ್ಲಿಗೆ ನಿಲ್ಲಲಿಲ್ಲ

ಆದರೆ, ಡ್ರಾಮಾ ಇಲ್ಲಿಗೆ ನಿಲ್ಲಲಿಲ್ಲ. ಆದಿಲ್ ರಶೀದ್ ಹಾಗೂ ಮಾರ್ಕ್ ವುಡ್ ರನೌಟ್ ಆಗಿ ಬೆನ್ ಸ್ಟೋಕ್ ವಿಕೆಟ್ ಉಳಿಸಿದರು. 98 ಎಸೆತಗಳಲ್ಲಿ 84ರನ್ ಗಳಿಸಿದ್ದ ಸ್ಟೋಕ್ಸ್ ಗೆ ಟ್ರೆಂಟ್ ಬೌಲ್ಟ್ ಓವರ್ ನಲ್ಲಿ ಸಿಂಗಲ್ ಮಾತ್ರ ಗಳಿಸಲು ಸಾಧ್ಯವಾಯಿತು. 241ರನ್ನಿಗೆ ಇಂಗ್ಲೆಂಡ್ ಆಲೌಟ್ ಆಯಿತು. ನ್ಯೂಜಿಲೆಂಡ್ 241/8 ಗಳಿಸಿತ್ತು. ಸೂಪರ್ ಓವರ್ ಆಡಬೇಕಿತ್ತು. ಇಂಗ್ಲೆಂಡ್ ಗೆ ಮತ್ತೆ ಅದೃಷ್ಟ ಒಲಿಯಿತು. ನಿಯಮ 2ರ ಪ್ರಕಾರ ಮೊದಲು ಬ್ಯಾಟಿಂಗ್ ಅವಕಾಶ ಸಿಕ್ಕಿತು.

ಸೂಪರ್ ಓವರ್ ನಲ್ಲಿ ಏನಾಯಿತು?

ಸೂಪರ್ ಓವರ್ : 7 ವಾರ, 49 ಪಂದ್ಯ, 24,050 ಎಸೆತ, 22,410ರನ್, 672 ವಿಕೆಟ್ ಗಳ ಪತನ ನಂತರ ವಿಶ್ವ ಚಾಂಪಿಯನ್ ಯಾರು ಎಂಬುದನ್ನು ನಿರ್ಧರಿಸಲು ಸೂಪರ್ ಓವರ್ ಆಡಬೇಕಾಯಿತು.

ಇಂಗ್ಲೆಂಡ್ ಪರ ಸ್ಟೋಕ್ಸ್ ಹಾಗೂ ಬಟ್ಲರ್ ಕಣಕ್ಕೆ, ಕಿವೀಸ್ ಪರ ಬೌಲ್ಟ್ ಬೌಲಿಂಗ್, ಎರಡು ಬೌಂಡರಿ ನೀಡಿ 15ರನ್ ಚೆಚ್ಚಿಸಿಕೊಂಡ ಬೌಲ್ಟ್. ಗೆಲ್ಲಲು 16ರನ್ ಮಾಡಬೇಕಿದ್ದ ಕಿವೀಸ್ ಪರ ಮಾರ್ಟಿನ್ ಗುಪ್ಟಿಲ್ ಹಾಗೂ ಜಿಮ್ಮಿ ನೀಶಂ ಕಣಕ್ಕೆ, 24ವರ್ಷದ ಯುವ ವೇಗಿ ಜೋಫ್ರಾ ಆರ್ಚರ್ ಬೌಲರ್. ಅನುಭವಿಗಳ ಬದಲಿಗೆ ಆರ್ಚರ್ ಕೈಗೆ ಬಾಲಿತ್ತ ನಾಯಕ ಮಾರ್ಗನ್, ಇನ್ನೊಂದೆಡೆ ಜಿಮ್ಮಿ ನೀಶಂ ಆಡಲು ಕಳಿಸಿ ಅಚ್ಚರಿ ಮೂಡಿಸಿದ ಕೇನ್ ವಿಲಿಯಮ್ಸನ್.

6 ಎಸೆತಗಳಲ್ಲಿ ಎಲ್ಲವೂ ನಿರ್ಧಾರವಾಯಿತು

*ಮೊದಲ ಎಸೆತವೇ ವೈಡ್ ಬಾಲ್
* ಎರಡನೇ ಎಸೆತದಲ್ಲಿ 2ರನ್,
* ಮೂರನೇ ಎಸೆತ ನೀಶಂ ಬಾರಿಸಿದ ಸಿಕ್ಸರ್
* 4ನೇ ಎಸೆತದಲ್ಲಿ 2ರನ್(3ಎಸೆತಗಳಲ್ಲಿ 5ರನ್ ಬೇಕು)
* 5ನೇ ಎಸೆತದಲ್ಲಿ 2ರನ್ (2ಎಸೆತಗಳಲ್ಲಿ 3ರನ್)
* 6ನೇ ಎಸೆತದಲ್ಲಿ 1 ಎಸೆತದಲ್ಲಿ 2ರನ್ ಬೇಕಿದ್ದಾಗ 1ರನ್ ಮಾತ್ರ ಗಳಿಸಿದ ಕಿವೀಸ್, ಎರಡನೇ ಗಳಿಸುವ ಯತ್ನದಲ್ಲಿ ಮಾರ್ಟಿನ್ ರನೌಟ್. ಮತ್ತೆ ಸ್ಕೋರ್ ಸಮ. ಆದರೂ ಇಂಗ್ಲೆಂಡಿಗೆ ಕಪ್ ದಕ್ಕಿತು.

ಇಂಗ್ಲೆಂಡ್ ಕಪ್ ಗೆಲ್ಲಲು ಸೂಪರ್ ಓವರ್ ನಿಯಮ 6 ನೆರವು

ಇಂಗ್ಲೆಂಡ್ ಕಪ್ ಗೆಲ್ಲಲು ಸೂಪರ್ ಓವರ್ ನಿಯಮ 6 ನೆರವಾಯಿತು.
1. ಆಡುವ ಹನ್ನೊಂದರ ಬಳಗದಿಂದ 3 ಬ್ಯಾಟ್ಸ್ ಮನ್ ಹಾಗೂ 1 ಬೌಲರ್ ನಾಮಾಂಕಿತ ಮಾಡಬೇಕು.
2. ರನ್ ಚೇಸ್ ಮಾಡಿ ಟೈಮಾಡಿಕೊಂಡ ತಂಡಕ್ಕೆ(ಇಲ್ಲಿ ಇಂಗ್ಲೆಂಡ್) ಗೆ ಸೂಪರ್ ಓವರ್ ನಲ್ಲಿ ಮೊದಲು ಬ್ಯಾಟಿಂಗ್ ಅವಕಾಶ.
3. ಯಾವ ಕಡೆಯಿಂದ ಬೌಲಿಂಗ್ ಮಾಡಬೇಕು ಎಂಬುದನ್ನು ಫೀಲ್ಡಿಂಗ್ ತಂಡ ಆಯ್ಕೆ ಮಾಡಿಕೊಳ್ಳಬಹುದು.
4. ಸೂಪರ್ ಓವರ್ ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ತಂಡವನ್ನು ವಿಜಯಿ ಎಂದು ಘೋಷಿಸಲಾಗುತ್ತದೆ.
5. ಎರಡು ವಿಕೆಟ್ ಕಳೆದುಕೊಂಡರೆ ಆ ತಂಡದ ಇನ್ನಿಂಗ್ಸ್ ಅಲ್ಲಿಗೆ ಮುಗಿಯಲಿದೆ.
6. ಒಂದು ವೇಳೆ ಸೂಪರ್ ಓವರ್ ನಲ್ಲೂ ಪಂದ್ಯ ಟೈ ಯಾಗಿದ್ದರೆ, ಅತಿ ಹೆಚ್ಚು ಬೌಂಡರಿ(ಇನ್ನಿಂಗ್ಸ್ ಹಾಗೂ ಸೂಪರ್ ಓವರ್ ಸೇರಿಸಿ) ಬಾರಿಸಿದ ತಂಡವನ್ನು ವಿಜೇತರು ಎಂದು ಘೋಷಿಸಲಾಗುತ್ತದೆ.

Story first published: Monday, July 15, 2019, 1:57 [IST]
Other articles published on Jul 15, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X