ಸೌರವ್ ಗಂಗೂಲಿ, ಜಯ್ ಶಾ ಅಧಿಕಾರ ವಿಸ್ತರಣೆಯ ಅರ್ಜಿ ಎರಡು ವಾರ ಮುಂದಕ್ಕೆ

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹಾಗೂ ಕಾರ್ಯದರ್ಶಿ ಜಯ್ ಷಾ ಅವರ ಅಧಿಕಾರಾವಧಿ ವಿಸ್ತರಣೆಯ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಎರಡು ವಾರಗಳ ನಂತರ ನಡೆಸಲು ತೀರ್ಮಾನಿಸಿದೆ. ನ್ಯಾಯಮೂರ್ತಿ ಲೋಧಾ ಸಮಿತಿಯ ನಿಯಮದ ಪ್ರಕಾರ ಗಂಗೂಲಿ ಹಾಗೂ ಜಯ್ ಷಾ ಮುಂದಿನ ಮೂರು ವರ್ಷಗಳ ಕಾಲ ತಮ್ಮ ಹುದ್ದೆಗಳಲ್ಲಿ ಮುಂದುವರಿಯುವಂತಿಲ್ಲ.

ಬಿಸಿಸಿಐ ಅಥವಾ ಯಾವುದೇ ರಾಜ್ಯ ಸಂಘದಲ್ಲಿ ಅಧ್ಯಕ್ಷ ಸೇರಿದಂತೆ ಪದಾಧಿಕಾರಿಗಳು ಸತತ ಆರು ವರ್ಷಗಳ ಅಧಿಕಾರ ಅವಧಿ ಪೂರ್ಣಗೊಳಿಸಿದ ನಂತರ ಮೂರು ವರ್ಷಗಳ ಕೂಲಿಂಗ್ ಆಫ್ ನಿಯಮವನ್ನು ಅನುಸರಿಸಬೇಕಾಗುತ್ತದೆ. ಬಿಸಿಸಿಐ ತನ್ನ ಹೊಸ ಸಂವಿಧಾನದಲ್ಲಿ ಈ ನಿಯಮವನ್ನು ಪರಿಷ್ಕರಿಸುವಂತೆ ನ್ಯಾಯಾಲಯವನ್ನು ಕೋರಿದೆ.

ಕೊರೊನಾವೈರಸ್ ಭೀತಿ: ಯೂರೋ ಟಿ20 ಸ್ಲ್ಯಾಮ್ ಮತ್ತೆ ಮುಂದಕ್ಕೆ

ಗಂಗೂಲಿ ಬಿಸಿಸಿಐ ಅಧ್ಯಕ್ಷರಾಗುವುದಕ್ಕೂ ಮುನ್ನ ಬಂಗಾಳ ಕ್ರಿಕೆಟ್ ಸಂಸ್ಥೆ ಕಾರ್ಯದರ್ಶಿ, ಅಧ್ಯಕ್ಷರಾಗಿದ್ದರೆ, ಜಯ್ ಷಾ ಗುಜರಾತ್ ಕ್ರಿಕೆಟ್ ಸಂಸ್ಥೆ ಕಾರ್ಯದರ್ಶಿಯಾಗಿದ್ದರು. ಲೋಧಾ ಸಮಿತಿ ವರದಿ ಶಿಫಾರಸಿನ ಪ್ರಕಾರ, ಗಂಗೂಲಿ ಅವಧಿ ಜುಲೈ 27ಕ್ಕೆ ಅಂತ್ಯಗೊಳ್ಳಲಿದ್ದರೆ, ಜಯ್ ಷಾ ಅವಧಿ ಕಳೆದ ತಿಂಗಳೇ ಮುಕ್ತಾಯಗೊಂಡಿದೆ.

ಮುಖ್ಯ ನ್ಯಾಯಮೂರ್ತಿ ಶರದ್ ಬೊಡ್ಬೆ ಹಾಗೂ ಎಲ್.ನಾಗೇಶ್ವರ್ ರಾವ್ ಒಳಗೊಂಡ ನ್ಯಾಯಪೀಠ ಮುಂದಿನವಾರ ಮರಾಠಾ ಮೀಸಲಾತಿ ಪ್ರಕರಣದ ವಿಚಾರಣೆಯನ್ನು ನಡೆಸಲಿದೆ. ಹೀಗಾಗಿ ಬಿಸಿಸಿಐ ಅರ್ಜಿಯನ್ನು ಎರಡು ವಾರಗಳ ಬಳಿಕ ಕೈಗೆತ್ತಿಕೊಳ್ಳಲಾಗುತ್ತದೆ ಎಂದು ತಿಳಿಸಿದೆ.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Thursday, July 23, 2020, 7:56 [IST]
Other articles published on Jul 23, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X