ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಧೋನಿ ಬೆನ್ನಲ್ಲೇ ಅಂತಾರಾಷ್ಟ್ರೀಯ ನಿವೃತ್ತಿ ಘೋಷಿಸಿದ ಸುರೇಶ್ ರೈನಾ!

Suresh Raina announced his retirement from all-formats in International cricket

ನವದೆಹಲಿ: ಭಾರತೀಯ ಕ್ರಿಕೆಟ್ ಪ್ರೇಮಿಗಳ ಪಾಲಿಗೆ 2020ರ ಆಗಸ್ಟ್ 15 ನಿಜಕ್ಕೂ ಶಾಕಿಂಗ್ ದಿನ ಎನಿಸಿದೆ. ಟೀಮ್ ಇಂಡಿಯಾವನ್ನು ಮುನ್ನಡೆಸಿ ಎರಡು ವಿಶ್ವಕಪ್‌ಗಳನ್ನು ಗೆಲ್ಲಿಸಿಕೊಟ್ಟಿದ್ದ ಮಾಜಿ ನಾಯಕ ಎಂಎಸ್ ಧೋನಿ ಈ ದಿನ ಅಂತಾರಾಷ್ಟ್ರೀಯ ನಿವೃತ್ತಿ ಘೋಷಿಸಿದ್ದಾರೆ. ಅದರ ಬೆನ್ನಲ್ಲೇ ಮತ್ತೋರ್ವ ಭಾರತದ ಅನುಭವಿ ಬ್ಯಾಟ್ಸ್‌ಮನ್ ಸುರೇಶ್ ರೈನಾ ಕೂಡ ಆಟ ನಿಲ್ಲಿಸುವ ನಿರ್ಧಾರ ಪ್ರಕಟಿಸಿದ್ದಾರೆ. ಎಲ್ಲಾ ಮಾದರಿಯ ಕ್ರಿಕೆಟ್‌ಗೆ ರೈನಾ ನಿವೃತ್ತಿ ಘೋಷಿಸಿದ್ದಾರೆ.

ಟಿ20ಐ: ವಿಶ್ವದಾಖಲೆ ಬರೆದ ಭಾರತೀಯೆ ಅನುರಾಧಾ ದೊಡ್ಡಬಳ್ಳಾಪುರ!ಟಿ20ಐ: ವಿಶ್ವದಾಖಲೆ ಬರೆದ ಭಾರತೀಯೆ ಅನುರಾಧಾ ದೊಡ್ಡಬಳ್ಳಾಪುರ!

ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಸೆಪ್ಟೆಂಬರ್ 19ರಿಂದ ಭಾರತದ ಅದ್ದೂರಿ ಕ್ರಿಕೆಟ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಗೊಳ್ಳುವುದರಲ್ಲಿದೆ. ಅದಕ್ಕೂ ಮುನ್ನವೇ ಕ್ರಿಕೆಟ್ ಪ್ರೇಮಿಗಳಿಗೆ ಧೋನಿ ಮತ್ತು ರೈನಾ ಶಾಕ್ ನೀಡಿದ್ದಾರೆ.

ಎಂಎಸ್ ಧೋನಿ ಇನ್‌ಸ್ಟಾಗ್ರಾಮ್‌ನಲ್ಲಿ ನಿವೃತ್ತಿ ನಿರ್ಧಾರ ಪ್ರಕಟಿಸಿದ್ದರು. 'ನನ್ನನ್ನು ಪ್ರೀತಿಸಿದ್ದಕ್ಕಾಗಿ, ಬೆಂಬಲಿಸಿದಕ್ಕಾಗಿ ಅನಂತ ಧನ್ಯವಾದಗಳು. 19:29 (7:29 pm) ಸಮಯದಿಂದ ನಾನು ನಿವೃತ್ತಿಯಾಗಿದ್ದೇನೆಂದು ಪರಿಗಣಿಸಿ,' ಎಂದು ಧೋನಿ ಬರೆದುಕೊಂಡಿದ್ದರು. ಸುರೇಶ್ ರೈನಾ ಕೂಡ ಇನ್‌ಸ್ಟಾಗ್ರಾಮ್‌ನಲ್ಲೇ ನಿವೃತ್ತಿಯ ನಿರ್ಧಾರ ಹೇಳಿಕೊಂಡಿದ್ದಾರೆ.

'ನಿನ್ನೊಂದಿಗೆ ಆಡುವುದಲ್ಲದೆ ಪ್ರೀತಿಸುವ ವಿಚಾರ ಬೇರೇನಿಲ್ಲ ಮಾಹಿ. ನನ್ನ ಹೃದಯ ಹೆಮ್ಮೆಯಿಂದ ತುಂಬಿದೆ. ನಿಮ್ಮ ಪಯಣವನ್ನೇ ಸೇರಿಕೊಳ್ಳಲು ಬಯಸಿದ್ದೇನೆ. ಥ್ಯಾಂಕ್ಯೂ ಇಂಡಿಯಾ. ಜೈ ಹಿಂದ್,' ಎಂದು ರೈನಾ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.

Story first published: Sunday, August 16, 2020, 14:12 [IST]
Other articles published on Aug 16, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X