ವಿರಾಟ್ ಕೊಹ್ಲಿ ಐಸಿಸಿ ಟ್ರೋಫಿ ಗೆಲ್ಲುವ ಬಗ್ಗೆ ಭವಿಷ್ಯ ನುಡಿದ ಸುರೇಶ್ ರೈನಾ

Suresh Raina ಅವರು Virat Kohli ಬಗ್ಗೆ ಈ ರೀತಿ ಭವಿಷ್ಯ ನುಡಿದಿದ್ದಾರೆ | Oneindia Kannada

ಭಾರತೀಯ ಕ್ರಿಕೆಟ್ ತಂಡ ಕಂಡ ಅತ್ಯಂತ ಯಶಸ್ವಿ ನಾಯಕ ಎನಿಸಿಕೊಂಡರೂ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಬಹುದೊಡ್ಡ ಕೊರತೆಯೆಂದರೆ ಐಸಿಸಿ ಟ್ರೋಫಿ. ಟೀಮ್ ಇಂಡಿಯಾ ಹಿರಿಯರ ತಂಡದ ನಾಯಕನಾಗಿರುವ ವಿರಾಟ್ ಕೊಹ್ಲಿ ನಾಯಕನಾಗಿ ಐಸಿಸಿ ಟ್ರೋಫಿಯನ್ನು ತಂಡಕ್ಕೆ ಗೆಲ್ಲಿಸಿಕೊಡುವಲ್ಲಿ ವಿಫಲರಾಗಿದ್ದಾರೆ. ಈ ವಿಚಾರವಾಗಿ ಟೀಮ್ ಇಂಡಿಯಾದ ಮಾಜಿ ಆಟಗಾರ ಸುರೇಶ್ ರೈನಾ ಭವಿಷ್ಯ ನುಡಿದಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಟೀಮ್ ಇಂಡಿಯಾ ಮೂರು ಬಾರಿ ಐಸಿಸಿ ಟ್ರೋಫಿ ಗೆಲ್ಲುವ ಸನಿಹಕ್ಕೆ ತಲುಪಿತ್ತು. 2017 ಹಾಗೂ 2019ರ ವಿಶ್ವಕಪ್ ಸೆಮಿಫೈನಲ್ ಹಾಗೂ 2021ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಹಂತಕ್ಕೆ ವಿರಾಟ್ ಕೊಹ್ಲಿ ನೇತೃತ್ವದಲ್ಲಿ ಟೀಮ್ ಇಂಡಿಯಾ ತಲುಪಿತ್ತು. ಆದರೆ ಪ್ರಶಸ್ತಿಯನ್ನು ಗೆಲ್ಲುವಲ್ಲಿ ವಿಫಲವಾಗಿದೆ.

ಡೆವೊನ್ ಕಾನ್ವೇ, ಸೋಫಿ ಎಕ್ಲೆಸ್ಟೋನ್‌ಗೆ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿಡೆವೊನ್ ಕಾನ್ವೇ, ಸೋಫಿ ಎಕ್ಲೆಸ್ಟೋನ್‌ಗೆ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ

ಟ್ರೋಫಿ ಗೆಲ್ಲಲಿದ್ದಾರೆ ಕೊಹ್ಲಿ

ಟ್ರೋಫಿ ಗೆಲ್ಲಲಿದ್ದಾರೆ ಕೊಹ್ಲಿ

ಆದರೆ ಮುಂದೆ ಮೂರು ವಿಶ್ವಕಪ್‌ಗಳು ಒಂದರ ಹಿಂದೊಂದರಂತೆ ಮೂರು ವಿಶ್ವಕಪ್‌ಗಳು ಬರಲಿದ್ದು ಇದರಲ್ಲಿ ಕನಿಷ್ಟ ಒಂದನ್ನು ವಿರಾಟ್ ಕೊಹ್ಲಿ ಗೆಲ್ಲಲಿದ್ದಾರೆ ಎಂಬ ವಿಶ್ವಾಸವನ್ನು ಸುರೇಶ್ ರೈನಾ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ಬಗ್ಗೆ ಸುರೇಶ್ ರೈನಾ ಮುಕ್ತಕಂಠದಿಂದ ಹೊಗಳಿದ್ದಾರೆ.

ಕೊಹ್ಲಿಗೆ ಸಮಯವನ್ನು ನೀಡಬೇಕು

ಕೊಹ್ಲಿಗೆ ಸಮಯವನ್ನು ನೀಡಬೇಕು

"ನನ್ನ ಪ್ರಕಾರ ಆತ ನಂಬರ್ 1 ನಾಯಕ ಎನಿಸಿಕೊಂಡಿದ್ದಾರೆ. ಆತನ ದಾಖಲೆಗಳು ಆತ ಸಾಕಷ್ಟು ಸಾಧನೆ ಮಾಡಿರುವುದನ್ನು ವ್ಯಕ್ತಪಡಿಸುತ್ತವೆ. ನನ್ನ ಪ್ರಕಾರ ಆತ ವಿಶ್ವದ ನಂಬರ್ 1 ಬ್ಯಾಟ್ಸ್‌ಮನ್. ನೀವು ಐಸಿಸಿ ಟ್ರೋಫಿಯ ಬಗ್ಗೆ ಮಾತನಾಡುತ್ತೀರಿ. ಆದರೆ ಆತ ಐಪಿಎಲ್ ಟ್ರೋಫಿಯನ್ನು ಕೂಡ ಗೆದ್ದಿಲ್ಲ.ನನ್ನ ಪ್ರಕಾರ ಆತನಿಗೆ ಕೆಲ ಸಮಯಗಳನ್ನು ನೀಡಬೇಕಾಗುತ್ತದೆ" ಎಂದು ಸುರೇಶ್ ರೈನಾ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

WTC ಸೋಲಿಗೆ ಬ್ಯಾಟಿಂಗ್ ವೈಫಲ್ಯ ಕಾರಣ

WTC ಸೋಲಿಗೆ ಬ್ಯಾಟಿಂಗ್ ವೈಫಲ್ಯ ಕಾರಣ

ಇನ್ನು ಇದೇ ಸಂದರ್ಭದಲ್ಲಿ ಸುರೇಶ್ ರೈನಾ ಟೀಮ್ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದ ಸೋಲಿನ ಬಗ್ಗೆಯೂ ಮಾತನಾಡಿದ್ದಾರೆ. "ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯ ಒಂದು ಉತ್ತಮ ಉದಾಹರಣೆಯಾಗಿದೆ. ಜನರು ಹೇಳುತ್ತಾರೆ ಇಂಗ್ಲೆಂಡ್ ಪರಿಸ್ಥಿತಿಯ ಕಾರಣದಿಂದಾಗಿ ತಂಡ ಸೋಲು ಕಂಡಿತು ಎಂಬುದಾಗಿ. ಆದರೆ ನನಗೆ ಬ್ಯಾಟಿಂಗ್‌ನಲ್ಲಿ ಏನೋ ಕೊರತೆ ಕಾಣಿಸುತ್ತದೆ. ದೊಡ್ಡ ಆಟಗಾರರು ಜವಾಬ್ಧಾರಿಯನ್ನು ತೆಗೆದುಕೊಂಡು ಜೊತೆಯಾಟವನ್ನು ನೀಡಬೇಕಾಗಿತ್ತು" ಎಂದು ರೈನಾ ಅಭಿಪ್ರಾಯಪಟ್ಟಿದ್ದಾರೆ.

ಟೀಮ್ ಇಂಡಿಯಾ ಚೋಕರ್ಸ್ ಅಲ್ಲ

ಟೀಮ್ ಇಂಡಿಯಾ ಚೋಕರ್ಸ್ ಅಲ್ಲ

ಭಾರತ ತಂಡ ಟ್ರೋಫಿ ಗೆಲ್ಲಲು ಸಾಧ್ಯವಾಗದ ಕಾರಣಕ್ಕೆ ಚೋಕರ್ಸ್ ಹಣೆಪಟ್ಟಿಯನ್ನು ಭಾರತ ತಂಡಕ್ಕೆ ಕಟ್ಟುವ ಪ್ರಯತ್ನವಾಗುತ್ತಿದೆ. ಇದಕ್ಕೆ ಕೂಡ ಸುರೇಶ್ ರೈನಾ ನೇರವಾಗಿ ಉತ್ತರವನ್ನು ನೀಡಿದ್ದಾರೆ. "ನಾವು ಚೋಕರ್ಸ್ ಅಲ್ಲ. ಯಾಕೆಂದರೆ ನಮ್ಮಲ್ಲಿ ಈಗಾಗಲೇ 1983ರ ವಿಶ್ವಕಪ್, 2007ರ ಟಿ20 ವಿಶ್ವಕಪ್ ಹಾಗೂ 2011ರ ಏಕದಿನ ವಿಶ್ವಕಪ್ ಟ್ರೋಫಿಯಿದೆ. ಆಟಗಾರರು ಅತ್ಯಂತ ಕಠಿಣ ಪರಿಶ್ರಮವನ್ನು ಪಡುತ್ತಿದ್ದಾರೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಮೂರು ವಿಶ್ವಕಪ್‌ಗಳು ಆಗಮಿಸುತ್ತಿರುವುದರಿಮದ ಯಾರು ಕೂಡ ಚೀಕರ್ಸ್ ಎಮದು ಕರೆಯಲಾರರು. ಅವರಿಗೆ ನಾವು ಸ್ವಲ್ಪ ಹೆಚ್ಚಿನ ಸಮಯವನ್ನು ನೀಡಬೇಕಾಗುತ್ತದೆ. ಅವರು ಉತ್ತಮ ಪ್ರದರ್ಶನವನ್ನು ನೀಡುತ್ತಿದ್ದಾರೆ ಹಾಗೂ ವಿರಾಟ್ ಕೊಹ್ಲಿ ಆಟವನ್ನೇ ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಈ ತಂಡದ ಹೊಸ ಶೈಲಿಯನ್ನು ನಾವು ಗೌರವಿಸಬೇಕಿದೆ. ಆದರೆ ನನ್ನ ಅನಿಸಿಕೆಯ ಪ್ರಕಾರ ಮುಂದಿನ 12ರಿಂದ 16 ತಿಂಗಳಲ್ಲಿ ಭಾರತ ಐಸಿಸಿ ಟ್ರೋಫಿಯನ್ನು ಭಾರತಕ್ಕೆ ತರಲಿದೆ" ಎಂಬ ಅಭಿಪ್ರಾಯವನ್ನು ರೈನಾ ವ್ಯಕ್ತಪಡಿಸಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Monday, July 12, 2021, 21:29 [IST]
Other articles published on Jul 12, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X